ಲಾಸ್ಟ್ ಬಸ್ (ಚಲನಚಿತ್ರ)
ಲಾಸ್ಟ್ ಬಸ್ ಕನ್ನಡ ಭಾಶೆಯ ಸಿನಿಮಾ
ಲಾಸ್ಟ್ ಬಸ್ ೨೦೧೬ ರ , ಎಸ್ ಡಿ ಅರವಿಂದ್ ಬರೆದು ಸಹ ನಿರ್ಮಿಸಿ ಮತ್ತು ಸಂಗೀತ ನೀಡಿರುವ ಕನ್ನಡದ ಮನೋವೈಜ್ಞಾನಿಕ ಥ್ರಿಲ್ಲರ್ - ಹಾರರ್ ಚಿತ್ರ. ಚಿತ್ರದ ಮುಖ್ಯ ಪಾತ್ರಗಳಲ್ಲಿ ಅವಿನಾಶ್ ನರಸಿಂಹರಾಜು, ಮೇಘಶ್ರಿ ಭಾಗವತರ್, ಮಾನಸ ಜೋಶಿ ಮತ್ತು ಸಮರ್ಥ್ ನರಸಿಂಹರಾಜು ನಟಿಸಿದ್ದಾರೆ.
ಲಾಸ್ಟ್ ಬಸ್ | |
---|---|
ನಿರ್ದೇಶನ | ಎಸ್.ಡಿ. ಅರವಿಂದ್, ಶೃಂಗೇರಿ |
ನಿರ್ಮಾಪಕ | ಜಿ.ಎನ್ ಸಿ ರೆಡ್ಡಿ ಬಿ ಕೃಷ್ಣಪ್ಪ ಎಸ್.ಡಿ. ಅರವಿಂದ್ ಪ್ರಶಾಂತ್ ಕಲ್ಲೂರ್ ಗುರುರಾಜ್ ಕುಲಕರ್ಣಿ |
ಪಾತ್ರವರ್ಗ | ಅವಿನಾಶ್ ನರಸಿಂಹರಾಜು ಮೇಘಶ್ರಿ ಭಾಗವತರ್ ಸಮರ್ಥ್ ನರಸಿಂಹರಾಜು ಪ್ರಕಾಶ್ ಬೆಳವಾಡಿ |
ಛಾಯಾಗ್ರಹಣ | ಅನಂತ್ ಅರಸು |
ಸಂಕಲನ | ಶ್ರೀ ಕ್ರೇಜಿಮೈಂಡ್ಸ್ |
ಸ್ಟುಡಿಯೋ | ಗೋಲ್ಸ್ ಅಂಡ್ ಡ್ರೀಮ್ಸ್ |
ಬಿಡುಗಡೆಯಾಗಿದ್ದು |
|
ದೇಶ | ಭಾರತ |
ಭಾಷೆ | ಕನ್ನಡ |
ಬಂಡವಾಳ | ೨ ಕೋಟಿ |
ಬಾಕ್ಸ್ ಆಫೀಸ್ | ೫ ಕೋಟಿ |
ಚಿತ್ರದ " ದೂರಿ ದೂರಿ" ಹಾಡು ಬಿಬಿಸಿ ಏಷ್ಯನ್ ನೆಟ್ವರ್ಕ್ ರೇಡಿಯೋ ಕೇಂದ್ರದಲ್ಲಿ ಪ್ರಸಾರವಾಗಿ ನಾರಾಯಣ್ ಕೊಂಡರವರು ಮೆಚುಗೆ ವ್ಯಕ್ತಪಡಿಸಿದರು. ಚಿತ್ರದ ಉತ್ತಮ ಪ್ರತಿಕ್ರಿಯೆಯ ನಂತರ ಫ್ರೆಂಚ್ ಭಾಷೆಗೆ ಡಬ್ ಆಗಿ ಫ್ರಾನ್ಸ್ನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಫ್ರೆಂಚ್ ಭಾಷೆ ಡಬ್ ಆದ ಮೊದಲ ಕನ್ನಡ ಚಿತ್ರ.೨೨.೦೪.೨೦೧೬ ರಂದು ಲಾಸ್ಟ್ ಬಸ್ ಯಶಸ್ವಿಯಾಗಿ ಕೈಲಾಶ್ ಚಿತ್ರಮಂದಿರದಲ್ಲಿ ಮತ್ತು ಇತರ ಕೆಲವು ಚಿತ್ರಮಂದಿರಗಳಲ್ಲಿ ೧೦೦ ದಿನಗಳನ್ನು ಪೂರ್ಣಗೊಳಿಸಿತು.