ಲಾರ್ಸೆನ್ ಎನ್ಡ್ ಟ್ಯುಬ್ರೊ ಲಿಮಿಟೆಡ್

ಲಾರ್ಸೆನ್ ಎನ್ಡ್ ಟ್ಯುಬ್ರೊ ಲಾರ್ಸೆನ್ ಎನ್ಡ್ ಟ್ಯುಬ್ರೊ ಲಿಮಿಟೆಡ್, ಅಥವಾ ಎಲ್ ಎನ್ಡ್ ಟಿ ಒಂದು ಭಾರತಿಯ ಬಹುರಾಷ್ಟ್ರಿಯ ಸಂಘಟಿತ ವ್ಯಾಪಾರಿ ಕಂಪನಿ. ಇದರ ಕೇಂದ್ರ ಕಚೇರಿ ಮುಂಬಯಿ, ಮಹಾರಾಷ್ಟ್ರ, ಇಂಡಿಯ[೪] ದಲ್ಲಿ ಇದೆ. ಇದನ್ನು ಭಾರತದಲ್ಲಿ ಆಶ್ರಯ ಪಡೆದಿದ್ದ ಡ್ಯಾನಿಶ್ ಎಂಜಿನಿಯರ್ಗಳು ಒಂದು ಭಾರತೀಯ ವ್ಯಕ್ತಿಯ ಸಹಾಯದೊಂದಿಗೆ ಸ್ಥಾಪಿಸಿದರು. ಈ ಕಂಪನಿಯ ವ್ಯಾಪಾರ ಆಸಕ್ತಿಗಳು ಎಂಜಿನಿಯರಿಂಗ್, ಕಟ್ಟಡ ನಿರ್ಮಾಣ, ಸರಕುಗಳ ತಯಾರಿಕೆ, ಮಾಹಿತಿ ತಂತ್ರಜ್ಞಾನ ಮತ್ತು ಆರ್ಥಿಕ ಸೇವೆಗಳು. ಇದರ ಕಚೇರಿ ಮಧ್ಯಪೂರ್ವ ಮತ್ತು ಏಷ್ಯಾದ ಹಲವಾರು ಭಾಗಗಳಲ್ಲಿ ಇದ್ದೆ. ಎಲ್ ಎನ್ಡ್ ಟಿ ಭಾರತದ್ದ ಅತಿ ದೊಡ್ಡ ಎಂಜಿನಿಯರಿಂಗ್ ಮತ್ತು ಕಟ್ಟಡ ನಿರ್ಮಾಣ ಕಂಪನಿ[೫].

ಲಾರ್ಸೆನ್ ಎನ್ಡ್ ಟ್ಯುಬ್ರೊ ಲಿಮಿಟೆಡ್
ಸಂಸ್ಥೆಯ ಪ್ರಕಾರಸಾರ್ವಜನಿಕ ಕಂಪನಿ
ಸ್ಥಾಪನೆಮುಂಬಯ್
ಉದ್ಯಮಸಂಘಟಿತ ವ್ಯಾಪಾರಿ
ಆದಾಯ೧,೦೨,೬೩೧.೬೯ ಕೋಟಿ (ಯುಎಸ್$೨೨.೭೮ ಶತಕೋಟಿ) (2016)[೧]
ನಿವ್ವಳ ಆದಾಯ೫,೫೩೭.೯೯ ಕೋಟಿ (ಯುಎಸ್$೧.೨೩ ಶತಕೋಟಿ) (2016)[೨]
ಒಟ್ಟು ಆಸ್ತಿ೨,೨೭,೫೨೪.೭೨ ಕೋಟಿ (ಯುಎಸ್$೫೦.೫೧ ಶತಕೋಟಿ) (2016)[೨]
ಉದ್ಯೋಗಿಗಳು೮೪,೦೨೭(ಮಾರ್ಚ್ ೨೦೧೪)[೩]

ಇತಿಹಾಸ ಬದಲಾಯಿಸಿ

೧೯೩೮ರಲ್ಲಿ ಹೆನ್ನಿಗ್ ಹಾಲ್ಕ್ ಲಾರ್ಸೆನ್ ಮತ್ತು ಸೊರೇನ್ ಕ್ರಿಸ್ಟಿಯನ್ ಟ್ಯುಬ್ರೊ ಎಂಬ ಎರಡು ಡ್ಯಾನಿಶ್ ಎಂಜಿನಿಯರ್ಗಳು ಬಾಂಬೆಯಲ್ಲಿ ಕಂಪನಿಯನ್ನು ಸ್ಥಾಪಿಸಿದರು. ಇವರು ಮೊದಲು ಡೈರಿ ಉಪಕರಣ ತಯಾರಿಸುತಿದ್ದ ಡ್ಯಾನಿಶ್ ಕಂಪನಿಯ ಪ್ರತಿನಿಧಿಗಳಾಗಿದ್ದರು. ಎರಡನೇ ವಿಶ್ವ ಯುದ್ದ ತೊಡಗೆದ ಕಾರಣ ಆಮದು ತರುವದರ ಮೇಲೆ ನಿರ್ಬಂಧನೆ ಉಂಟಾಯಿತು, ಇದರ ಕಾರಣ ಪಾಲುದಾರರು ಒಂದು ಚಿಕ್ಕ ಕಾರ್ಖಾನೆ ಪ್ರಾರಂಭಿಸಿದರು. ೧೯೪೦ರಲ್ಲಿ ಹಡಗುಗಳನ್ನು ಸರಿಪಡಿಸುವ ಹಿಲ್ಡ ಲಿಮಿಟೆಡ್ ಎಂಬ ಕಂಪನಿಯನ್ನು ಸ್ಥಾಪಿಸಿದರು. ಎಲ್ ಎನ್ಡ್ ಟಿ ಸಹ ಹಡಗುಗಳನ್ನು ಸರಿಪಡಿಸುವ ಮತ್ತು ನಿರ್ಮಿಸುವುದನ್ನು ಪ್ರಾರಂಭಿಸಿದರು. ೧೯೪೪, ಇಸಿಸಿ ಎಂಬ ಕಟ್ಟಡ ನಿರ್ಮಾಣ ಕಂಪನಿಯನ್ನು ಪಾಲುದಾರರು ಸಂಘಟಿತ ಮಾಡಿದರು. ೭ ಫೆಬ್ರವರಿ ೧೯೪೬ರಲ್ಲಿ ಲಾರ್ಸೆನ್ ಎನ್ಡ್ ಟ್ಯುಬ್ರೊ ಪ್ರೈವೇಟ್ ಲಿಮಿಟೆಡ್ ಸಂಘಟಿತವಾಯಿತು. ಭಾರತ ಸ್ವಾತಂತ್ರ ಹೊಂದಿದ ನಂತರ ಕೋಲ್ಕತಾ, ಚೆನೈ ಮತ್ತು ನ್ಯು ದೆಹಲಿಯಲ್ಲಿ ಕಚೇರಿಗಳನ್ನು ಸ್ಥಾಪಿಸಿದರು. ಡಿಸೆಂಬರ್ ೧೯೫೦ರಲ್ಲಿ, ಎಲ್ ಎನ್ಡ್ ಟಿ ಪಬ್ಲಿಕ್ ಕಂಪನಿಯಾಯಿತು.

ಆಪರೇಟಿಂಗ್ ಡಿವಿಶೆನ್ಸ್ ಬದಲಾಯಿಸಿ

ಎಲ್ ಎನ್ಡ್ ಟಿ ಕಂಪನಿಯ ಕೆಳಗೆ ಅನೇಕ ಅಂಗಸಂಸ್ಥೆಗಳುಂಟು, ಇವು ಕಂಪನಿಯ ವಿವಿಧ ಆಪರೇಷನ್ ಗಳ ಕಾರ್ಯನಡೆಸುತ್ತದೆ.

ಎಲ್ ಎನ್ಡ್ ಟಿ ರಿಯಾಲ್ಟಿ ಬದಲಾಯಿಸಿ

ಎಲ್ ಎನ್ಡ್ ಟಿ ರಿಯಾಲ್ಟಿ ಲಾರ್ಸೆನ್ ಎನ್ಡ್ ಟ್ಯುಬ್ರೊ ಕಂಪನಿಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಇಲಾಖೆ. ಪಶ್ಚಿಮ ಮತ್ತು ದಕ್ಷಿಣ ಭಾರತದಲ್ಲಿ ಇವರು ತಮ್ಮ ಕಾರ್ಯನಡೆಸುತ್ತಾರೆ. ಇವರು ವಸತಿ, ಕಾರ್ಪೊರೇಟ್ ಕಚೇರಿಗಳು, ವಿರಾಮ ಮತ್ತು ಮನರಂಜನೆ ಆಸ್ತಿಗಳನ್ನು ನಿರ್ಮಾನ ಮಾಡುತ್ತಾರೆ.

ಎಲ್ ಎನ್ಡ್ ಟಿ ತಂತ್ರಜ್ಞಾನ ಸೇವೆಗಳು ಬದಲಾಯಿಸಿ

ಎಲ್ ಎನ್ಡ್ ಟಿ ತಂತ್ರಜ್ಞಾನ ಸೇವೆಗಳು, ಲಾರ್ಸೆನ್ ಎನ್ಡ್ ಟ್ಯುಬ್ರೊ ಕಂಪನಿಯ ಅಂಗಸಂಸ್ಥೆ. ಇದು ವಿಶ್ವವ್ಯಾಪಕ ಎಂಜಿನಿಯರಿಂಗ್, ರೆಸೆರ್ಚ್ ಆಂಡ್ ಡೆವಲೇಪ್ಮೆಂಟ್ ಸ್ಥಳದಲ್ಲಿ ಕಾರ್ಯನಡೆಸುವ ಕಂಪನಿ. ಇವರು ಕೊಡುವ ಸೇವೆಗಳು ಕೈಗಾರಿಕಾ ಉತ್ಪನ್ನಗಳು, ವೈದ್ಯಕೀಯ ಸಾಧನಗಳು, ಸಾರಿಗೆ, ಅಂತರಿಕ್ಷಯಾನ, ಟೆಲಿಕಾಂ ಮತ್ತು ಪ್ರಕ್ರಿಯೆ ಕೈಗಾರಿಕೆಗಳ ಡಿಸೈನ್, ಡೆವಲೇಪ್ಮೆಂಟ್ ಮತ್ತು ಸಂಶೋಧನೆ ಸೇವೆಗಳನ್ನು ನೀಡುತ್ತದೆ

ಎಲ್ ಎನ್ಡ್ ಟಿ ಸೌರ ಬದಲಾಯಿಸಿ

ಎಲ್ ಎನ್ಡ್ ಟಿ ನಿರ್ಮಾಣ , ಎಲ್ ಎನ್ಡ್ ಟಿಯ ಒಂದು ಅಂಗಸಂಸ್ಥೆ ಸೌರ ಶಕ್ತಿ ಯೋಜನೆಯನ್ನು ನಿರ್ವಹಿಸುತ್ತದ್ದೆ. ಈ ಸಂಸ್ಥೆ ಏಪ್ರಿಲ್ ೨೦೧೨ರಂದು ಜೈಸಲ್ಮೇರ್ ನಲ್ಲಿ ಇರುವ ರಿಲಯನ್ಸ್ ಪವರ್ ಭಾರತದ ಅತ್ತಿ ದೊಡ್ಡ ಸೊಲಾರ್ ಫೊಟೊವೊಲ್ ಟಿಕ ವಿದ್ಯುತ್ ಸ್ಥಾವರನನ್ನು ಸಮಿತಿ ಮಾಡಿದ್ದೆ, ಅದು ಕೇವಲ ೧೨೯ ದಿನದಲ್ಲಿ. ೨೦೧೧ನಲ್ಲಿ ಈ.ಪಿ.ಸಿ ಗೋಸ್ಕರ ಷಾರಪ ಜೊತೆಗೆ ಪಾಲುಗಾರಿಕ್ಕೆ ಒಪ್ಪಿಗೊಂಡಿತ್ತು.

ವಿದ್ಯುತ್ ಮತ್ತು ಯಾಂತ್ರೀಕೃತಗೊಂಡ ಬದಲಾಯಿಸಿ

ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳು ಮತ್ತು ವ್ಯವಸ್ಥೆಗಳಿಗೆ ಎಲ್ ಎನ್ಡ್ ಟಿ ಅಂತಾರಾಷ್ಟ್ರೀಯ ತಯಾರಿಕೆಯಾಗಿದ್ದೆ. ಇದರ ಜೊತೆಗೆ ಎಲ್ ಎನ್ಡ್ ಟಿ ಕೈಗಾರಿಕಾ ವಲಯದಲ್ಲಿ ಕಸ್ಟಮ್ ವಿನ್ಯಾಸ ಸ್ವಿಚ್ ಗಳನ್ನು ತಯಾರಿಕೆ ಮಾಡುತ್ತಿದ್ದರು. ಎಲೆಕ್ಟ್ರಾನಿಕ್ ದಿಭಾಗದಲ್ಲಿ ಎಲ್ ಎನ್ಡ್ ಟಿ ಅನೇಕ ವಿಧವಾದ ಮಿಟರ್ ಗಳು ಮತ್ತು ಕೈಗಾರಿಕೆಗಳಿಗೆ ನಿಯಂತ್ರಣ ಮತ್ತು ಯಾಂತ್ರೀಕೃತಗೊಂಡ ವ್ಯವಸ್ಥೆಗಳನ್ನು ದೊರಕುತ್ತದ್ದೆ.

ಉಲ್ಲೇಖಗಳು ಬದಲಾಯಿಸಿ

  1. "Larsen and Toubro Balance Sheet, Larsen and Toubro Financial Statement & Accounts".
  2. ೨.೦ ೨.೧ "Larsen and Toubro Quarterly Results". EarningsIndia. Archived from the original on 2016-08-14. Retrieved 2016-09-15.
  3. "Annual Report 2012-13" (PDF). L&T. Retrieved 3 December 2013.
  4. "ಆರ್ಕೈವ್ ನಕಲು" (PDF). Archived from the original (PDF) on 2015-09-23. Retrieved 2021-08-19.
  5. "ಆರ್ಕೈವ್ ನಕಲು". Archived from the original on 2013-12-03. Retrieved 2017-02-19.