ಲಾಗ
ಲಾಗ (ಪಲ್ಟಿ) ಒಂದು ದೊಂಬರಾಟದಂತಹ ವ್ಯಾಯಾಮ. ಇದರಲ್ಲಿ ಒಬ್ಬ ವ್ಯಕ್ತಿಯ ಶರೀರವು ಒಂದು ಸಮತಲ ಅಕ್ಷದ ಸುತ್ತ 360° ತಿರುಗುತ್ತದೆ ಮತ್ತು ಪಾದಗಳು ತಲೆಯ ಮೇಲೆ ಸಾಗುತ್ತವೆ.[೧] ಲಾಗವನ್ನು ಮುಂದಕ್ಕೆ, ಹಿಂದಕ್ಕೆ, ಅಥವಾ ಒಂದು ಪಕ್ಕಕ್ಕೆ ಹಾಕಬಹುದು ಮತ್ತು ಗಾಳಿಯಲ್ಲಿ ಅಥವಾ ನೆಲದ ಮೇಲೆ ಹಾಕಬಹುದು. ನೆಲದ ಮೇಲೆ ಹಾಕಿದಾಗ ಇದನ್ನು ಸಾಮಾನ್ಯವಾಗಿ ಉರುಳಾಟ ಎಂದು ಕರೆಯಲಾಗುತ್ತದೆ.
ಪ್ರಕಾರಗಳು
ಬದಲಾಯಿಸಿಮುಂಬದಿ ಮತ್ತು ಹಿಂಬದಿ ಲಾಗಗಳ ಅನೇಕ ರೂಪಾಂತರಗಳಿವೆ. ಲಾಗಗಳನ್ನು ಅಪವರ್ತ್ಯಗಳಲ್ಲಿ, ಅಥವಾ ಚತುರ್ಥಾಂಶದಲ್ಲಿ ಅಳೆಯಲಾದ ಶರೀರ ಆವರ್ತದ ಅಪವರ್ತ್ಯಗಳಲ್ಲಿ ಹಾಕಬಹುದು, ಕೆಲವೊಮ್ಮೆ ಹೆಚ್ಚುವರಿ ತಿರುಚು ಸುತ್ತುವಿಕೆಗಳು ಅಥವಾ ಶರೀರ ಭೂಸ್ಪರ್ಶಗಳೊಂದಿಗೆ. ಇದರಿಮ್ದ ಅನೇಕ ರೂಪಾಂತರಗಳ ಸೃಷ್ಟಿಯಾಗುತ್ತದೆ, ಉದಾಹರಣೆಗೆ:
- ಕ್ರ್ಯಾಶ್ ಡೈವ್ (¾ ಮುಂಭಾಗದ ಲಾಗ, ಹಿಂಭಾಗದ ಭೂಸ್ಪರ್ಶ)
- ಲೇಜ಼ಿ ಬ್ಯಾಕ್ (¾ ಮುಂಭಾಗದ ಲಾಗ, ಮುಂಭಾಗದ ಭೂಸ್ಪರ್ಶ)
- ಬಾಲ್ಔಟ್ (ಹಿಂಭಾಗದ ಭೂಸ್ಪರ್ಶದಿಂದ ಪಾದಗಳಿಗೆ 1¼ ಮುಂಭಾಗದ ಲಾಗ)
- ಕೋಡಿ (ಮುಂಭಾಗದ ಭೂಸ್ಪರ್ಶದಿಂದ ಪಾದಗಳಿಗೆ 1¼ ಹಿಂಭಾಗದ ಲಾಗ)
ಉಲ್ಲೇಖಗಳು
ಬದಲಾಯಿಸಿ- ↑ "Gymnastics 101: Glossary of Terms". USA Gymnastics. Archived from the original on 16 ಜನವರಿ 2021. Retrieved 9 September 2015.