ಲಜ಼ಾನ್ಯಾ

(ಲಝಾನ್ಯಾ ಇಂದ ಪುನರ್ನಿರ್ದೇಶಿತ)

ಲಜ಼ಾನ್ಯಾ ಅಗಲವಾದ, ಚಪ್ಪಟೆಯಾಕಾರದ ಪಾಸ್ತಾ, ಮತ್ತು ಬಹುಶಃ ಪಾಸ್ತಾದ ಅತ್ಯಂತ ಹಳೆಯ ಪ್ರಕಾರಗಳಲ್ಲಿ ಒಂದು. ಲಜ಼ಾನ್ಯಾ ಏಕವಚನ ಪದ, ಇದರ ಬಹುವಚನ ಲಜ಼ಾನ್ಯೆ, ಮತ್ತು ಇದು ನಡುವೆ ಸಾಸ್‍ಗಳು ಹಾಗೂ ವಿವಿಧ ಇತರ ಪದಾರ್ಥಗಳ ಜೊತೆಗೆ ಲಜ಼ಾನ್ಯೆ ಹಾಳೆಗಳ ಹಲವು ಪದರಗಳಿಂದ ತಯಾರಿಸಲಾದ ಒಂದು ತಿನಿಸನ್ನೂ ನಿರ್ದೇಶಿಸಬಹುದು. ಸಾಂಪ್ರದಾಯಿಕ ಲಜ಼ಾನ್ಯೆಯನ್ನು ಪಾಸ್ತಾದ ಪದರಗಳ ನಡುವೆ ರಗು, ಬೇಶಮೆಲ್, ಹಾಗೂ ಪಾರ್ಮೆಸಾನ್ ಚೀಸ್‍ನಿಂದ ತಯಾರಿಸಲಾದ ಸಾಸ್‍ನ ಪದರನ್ನು ಒಳಸೇರಿಸಿ ತಯಾರಿಸಲಾಗುತ್ತದೆ. ಇತರ ಪ್ರದೇಶಗಳಲ್ಲಿ ಮತ್ತು ಇಟಲಿಯ ಹೊರಗೆ ರೀಕಾಟಾ ಅಥವಾ ಮೋಟ್ಸರೆಲ್ಲಾ ಗಿಣ್ಣು, ಟೊಮೇಟೊ ಸಾಸ್, ವಿವಿಧ ಮಾಂಸಗಳು (ಉದಾ. ರುಬ್ಬಿದ ಗೋಮಾಂಸ, ಹಂದಿಮಾಂಸ ಅಥವಾ ಕೋಳಿಮಾಂಸ), ಸಮ್ಮಿಶ್ರ ತರಕಾರಿಗಳಿಂದ (ಉದಾ. ಪಾಲಕ್, ಜ಼ುಕೀನಿ, ಅಣಬೆಗಳು) ತಯಾರಿಸಲಾದ ಮತ್ತು ವಿಶಿಷ್ಟವಾಗಿ ವೈನ್, ಬೆಳ್ಳುಳ್ಳಿ, ಈರುಳ್ಳಿ ಹಾಗೂ ಒರೆಗನೊದಿಂದ ಪರಿಮಳಯುಕ್ತವಾಗಿಸಿದ ಲಜ಼ಾನ್ಯೆ ಕಾಣಸಿಗುವುದು ಸಾಮಾನ್ಯವಾಗಿದೆ. ಎಲ್ಲ ಸಂದರ್ಭಗಳಲ್ಲಿಯೂ ಲಜ಼ಾನ್ಯೆಯನ್ನು ಅವನ್‍ನಲ್ಲಿ ಬೇಕ್ ಮಾಡಲಾಗುತ್ತದೆ.