ಪಾರ್ಮಜ಼ಾನ್ ಚೀಸ್
(ಪಾರ್ಮೆಸಾನ್ ಚೀಸ್ ಇಂದ ಪುನರ್ನಿರ್ದೇಶಿತ)
ಪಾರ್ಮಜ಼ಾನ್ ಚೀಸ್ (ಪಾರ್ಮಿಜಾನೊ-ರೆಜ್ಜಾನೊ) ಒಂದು ಗಟ್ಟಿ, ಕಾಳುಕಾಳಾಗಿರುವ ಗಿಣ್ಣು. ಅದನ್ನು ಉತ್ಪಾದಿಸುವ ಪ್ರದೇಶಗಳಿಂದ ಹೆಸರಿಸಲಾಗಿದೆ, ಇದರಲ್ಲಿ ಪಾರ್ಮಾ, ರೆಜಾ ಎಮೀಲಿಯಾ, ಬಲೋನ್ಯಾ, ಮೊಡೆನಾ, ಮ್ಯಾಂಚುವಾ ಪ್ರಾಂತ್ಯಗಳು ಒಳಗೊಂಡಿವೆ. ಅದು "ಗಿಣ್ಣುಗಳ ರಾಜ" ಎಂದು ಪರಿಚಿತವಾಗಿದೆ. ಪಾರ್ಮಜ಼ಾನ್ ಚೀಸ್ಅನ್ನು ಪಾಶ್ಚೀಕರಿಸದ ಹಸುವಿನ ಹಾಲಿನಿಂದ ತಯಾರಿಸಲಾಗುತ್ತದೆ. ಪುರಾಣದ ಪ್ರಕಾರ, ಪಾರ್ಮಿಜಾನೊ-ರೆಜ್ಜಾನೊ ಗಿಣ್ಣು ಎಮಿಲಿಯಾ ಪ್ರಾಂತ್ಯದಲ್ಲಿ ಬಿಬ್ಬಿಯಾನೊ ಸಮಯದ ಮಧ್ಯಯುಗದಲ್ಲಿ ಇದನ್ನು ಕಂಡುಹಿಡಿಯಲಾಯಿತು. ಅದರ ನಿರ್ಮಾಣ ಶೀಘ್ರದಲ್ಲೇ ಪಾರ್ಮಾ ಹಾಗೂ ಮೊಡೆನಾ ಕ್ಷೇತ್ರಗಳಿಗೆ ಇದು ಹರಡಿತು. ಐತಿಹಾಸಿಕ ದಾಖಲೆಗಳ ಪ್ರಕಾರ ೧೩ ಮತ್ತು ೧೪ ನೇ ಶತಮಾನಗಳಲ್ಲಿ ಇಂದಿನಂತೆ ಹೋಲುತ್ತಿತ್ತು, ಅದಕ್ಕೆ ಪಾರ್ಮಿಜಾನೊ ಗಿಣ್ಣಿನ ಮೂಲವನ್ನು ಆ ಕಾಲಕ್ಕಿಂತ ಬಹಳ ಹಿಂದೆನೆ ಪತ್ತೆಹಚ್ಚಲಾಗಿತ್ತು ಎಂದು ಸೂಚಿಸಲಾಗಿದೆ.