ಲಖುಡಿಯಾರ್ ಗುಹೆಗಳು
ಲಖುಡಿಯಾರ್ ಗುಹೆಗಳು ಉತ್ತರಾಖಂಡ ರಾಜ್ಯದ ಅಲ್ಮೋರಾ ಜಿಲ್ಲೆಯ ಸುಯಾಲ್ ನದಿಯ ದಡದಲ್ಲಿರುವ ಬರೇಛೀನಾ ಗ್ರಾಮದಲ್ಲಿ ಸ್ಥಿತವಾಗಿವೆ. ಗುಹೆಗಳ ಗೋಡೆಗಳ ಮೇಲೆ ಪ್ರಾಣಿಗಳು, ಮಾನವರು ಮತ್ತು ಟೆಕ್ಟಿಫಾರ್ಮ್‌ಗಳನ್ನು ಚಿತ್ರಿಸುವ ವರ್ಣಚಿತ್ರಗಳಿವೆ. ಇವುಗಳನ್ನು ಕಪ್ಪು, ಕೆಂಪು ಮತ್ತು ಬಿಳಿ ಬಣ್ಣಗಳಲ್ಲಿ ಬೆರಳುಗಳಿಂದ ರಚಿಸಲಾಗಿದೆ. ಗುಹೆಗಳು ಐತಿಹಾಸಿಕವಾಗಿ ಮಹತ್ವದ ತಾಣವಾಗಿವೆ.
ಲಖುಡಿಯಾರ್ ಒಂದು ಬಂಡೆ ಆಶ್ರಯವಾಗಿದ್ದು ಉಗ್ರ ಹವಾಮಾನದಿಂದ ಆರಂಭಿಕ ಮನುಷ್ಯನನ್ನು ರಕ್ಷಿಸುವ ಒಂದು ಪಾರುಮಾಡುವ ತಾಣವಾಗಿತ್ತು. ಲಖುಡಿಯಾರ್ ಎಂದರೆ 'ಒಂದು ಲಕ್ಷ ಗುಹೆಗಳು'. ಈ ಗೋಡೆಗಳು ಆರಂಭಿಕ ಮನುಷ್ಯನ ಜೀವನ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಚಿತ್ರಿಸುತ್ತವೆ.[೧]
ವರ್ಣಚಿತ್ರಗಳು ಹೆಚ್ಚಾಗಿ ಜನರು, ಪ್ರಾಣಿಗಳು ಮತ್ತು ಆರಂಭಿಕ ಮನುಷ್ಯ ಬಳಸುತ್ತಿದ್ದ ಆಯುಧಗಳ ರೇಖಾಚಿತ್ರಗಳಾಗಿವೆ. ಗೋಡೆಯ ಒಂದು ಬದಿಯಲ್ಲಿ ಒಂದು ಕಡೆ 34 ಜನರ ಗುಂಪಿನಲ್ಲಿ ಸಾಮೂಹಿಕ ನೃತ್ಯವನ್ನು ಪ್ರದರ್ಶಿಸುತ್ತಿರುವ ಜನರು ಮತ್ತು ಇನ್ನೊಂದು ಕಡೆ 28 ಜನರಿರುವ ವರ್ಣಚಿತ್ರವಿದೆ. ಈ ಚಿತ್ರವು ಬಟ್ಟೆ ಮತ್ತು ಸಾಕು ಪ್ರಾಣಿಗಳನ್ನು ಸಹ ಚಿತ್ರಿಸಿದೆ ಮತ್ತು ಪ್ರಾಗೈತಿಹಾಸಿಕ ಹಳ್ಳಿಯಲ್ಲಿನ ಜೀವನವನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗಿದೆ. ಎರಡು ಚಿತ್ರಿಸಲ್ಪಟ್ಟ ಬಂಡೆ ಸೂರುಗಳು ಪ್ರಾಣಿಗಳು ಮತ್ತು ಮನುಷ್ಯರ ವರ್ಣಚಿತ್ರಗಳನ್ನು ಬಹಿರಂಗಪಡಿಸುತ್ತವೆ. ಇವನ್ನು ಕಪ್ಪು, ಕೆಂಪು ಮತ್ತು ಬಿಳಿ ಬಣ್ಣಗಳಲ್ಲಿ ಬೆರಳಿನಿಂದ ಚಿತ್ರಿಸಲಾಗಿದೆ.
ಉಲ್ಲೇಖಗಳು
ಬದಲಾಯಿಸಿ- ↑ "Lakhudiyar paintings in Almora Uttarakhand - Review of Pre-Historic Painted Rock Shelter, Almora, India". TripAdvisor (in ಇಂಗ್ಲಿಷ್).