ಲಕ್ಷ್ಮೀಬಾರಮ್ಮ-2 ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿ ಆಗಿದೆ. 13 ಮಾರ್ಚ್ 2023 ರಿಂದ ಆರಂಭವಾದ ಈ ಧಾರಾವಾಹಿಯು ಸೋಮವಾರದಿಂದ ಶನಿವಾರದವರೆಗೆ ರಾತ್ರಿ ೭:೩೦ ಗಂಟೆಗೆ ಪ್ರಸಾರವಾಗುತ್ತಿದೆ. ಹಲವಾರು ಯಶಸ್ವಿ ಧಾರಾವಾಹಿಗಳನ್ನು ನಿರ್ಮಾಣ ಮಾಡಿರುವ ಜೈ ಮಾತಾ ಕಂಬೈನ್ಸ್ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ.


ಲಕ್ಶ್ಮೀ ಬಾರಮ್ಮ 2
ನಿರ್ದೇಶಕರುಯಶವಂತು ಪಾಂಡು[೧]
ದೇಶಭಾರತ
ಭಾಷೆ(ಗಳು)ಕನ್ನಡ
ನಿರ್ಮಾಣ
ಕ್ಯಾಮೆರಾ ಏರ್ಪಾಡುಮಲ್ಟೀಕ್ಯಾಮೆರಾ
ಸಮಯ22 ನಿಮಿಷಗಳು
ನಿರ್ಮಾಣ ಸಂಸ್ಥೆ(ಗಳು)ಜೈ ಮಾತಾ ಕಂಬೈನ್ಸ್
ಪ್ರಸಾರಣೆ
ಮೂಲ ವಾಹಿನಿಕಲರ್ಸ್ ಕನ್ನಡ
ಮೂಲ ಪ್ರಸಾರಣಾ ಸಮಯ13 ಮಾರ್ಚ್ 2023 – ಪ್ರಸ್ತುತ
ಕಾಲಕ್ರಮ
ಸಂಬಂಧಿತ ಪ್ರದರ್ಶನಗಳುಭಾಗ್ಯಲಕ್ಷ್ಮೀ

ಕಥೆ ಬದಲಾಯಿಸಿ

ಲಕ್ಷ್ಮೀಬಾರಮ್ಮ-2 ಕಥೆ ಭಾಗ್ಯಳ ತಂಗಿ ಲಕ್ಷ್ಮೀ ಮತ್ತು ಭಾಗ್ಯಳ ಗಂಡ ತಾಂಡವ್ ಚಿಕ್ಕಮ್ಮನ ಮಗ ವೈಷ್ಣವ್‌ಗೆ ಸಂಬಂಧಿಸಿದೆ. ಈ ಧಾರಾವಾಹಿಯು ಭಾಗ್ಯಲಕ್ಷ್ಮೀ ಧಾರಾವಾಹಿಯ ಮುಂದುವರಿದ ಭಾಗವಾಗಿದೆ (Sequel). ಕಥೆಯು ಲಕ್ಷ್ಮೀ-ವೈಷ್ಣವ್ ಮದುವೆಯ ನಂತರದ ಜೀವನದ ಮೇಲೆ ಕೇಂದ್ರಿಕೃತವಾಗಿದೆ. ವೈಷ್ಣವ್ ತಾಯಿಯ ಕುತಂತ್ರ, ವೈಷ್ಣವ್ ಮಾಜಿ ಪ್ರೇಯಸಿ ಕೀರ್ತಿಯ ಹುಚ್ಚಾಟ ಮತ್ತು ವೈಷ್ಣವ್ ಮನೆಯವರಿಗೆ ಲಕ್ಷ್ಮೀ ಬಗ್ಗೆ ಇರುವ ಅಸಮಾಧಾನವೇ, ಇವಲ್ಲದರ ನಡುವೆ ಹೆಚ್ಚುತ್ತಿರುವ ಲಕ್ಷ್ಮೀ ವೈಷ್ಣವ್ ಒಡನಾಟವೇ ಈ ಕಥೆಯ ಹಂದರವಾಗಿದೆ.

ಪಾತ್ರವರ್ಗ ಬದಲಾಯಿಸಿ

ಮುಖ್ಯ ಪಾತ್ರಗಳು ಬದಲಾಯಿಸಿ

  • ಭೂಮಿಕಾ‌ ರಮೇಶ್:[೨] ಲಕ್ಷ್ಮೀ ಆಗಿ; ಭಾಗ್ಯಳ ತಂಗಿ, ವೈಷ್ಣವ್ ಹೆಂಡತಿ.
  • ಶಮಂತ್‌ ಗೌಡ ಆಲಿಯಾಸ ಬ್ರೋ ಗೌಡ:[೩] ವೈಷ್ಣವ್ ಆಗಿ; ಕಾವೇರಿಯ ಮಗ, ತಾಂಡವ್ ತಮ್ಮ, ಲಕ್ಷ್ಮಿಯ ಗಂಡ.
  • ತನ್ವಿ ರಾವ್:[೪] ಕೀರ್ತಿಯಾಗಿ; ವೈಷ್ಣವ್ ಮಾಜಿ ಪ್ರೇಯಸಿ.
  • ಸುಷ್ಮಾ ನಾಣಯ್ಯ: ಕಾವೇರಿ ಆಗಿ; ವೈಷ್ಣವ್ ತಾಯಿ‌, ಕುಸುಮಾಳ ತಂಗಿ.

ಇತರೆ ಬದಲಾಯಿಸಿ

  • ಸುರೇಶ್ ರೈ: ಕೃಷ್ಣಕಾಂತ್ ಆಗಿ; ವೈಷ್ಣವ್ ತಂದೆ,‌ ಕಾವೇರಿಯ ಗಂಡ.
  • ಆಶಾ ಅಯ್ಯನರ್: ಪೂಜಾ ಆಗಿ; ಭಾಗ್ಯಳ ಸ್ವಂತ ತಂಗಿ.
  • ರಜನಿ ಪ್ರವೀಣ್: ಸುಪ್ರೀತಾ ಆಗಿ; ವೈಷ್ಣವ್ ಸೋದರ ಅತ್ತೆ.
  • ಸುನೀತಾ ಶೆಟ್ಟಿ: ಸುನಂದಾ ಆಗಿ; ಭಾಗ್ಯಳ ತಾಯಿ.
  • ಲಾವಣ್ಯ ಹಿರೇಮಠ್ : ವಿಧಿ ಆಗಿ; ವೈಷ್ಣವ್ ತಂಗಿ.
  • ಹರ್ಷಿತಾ: ಗಂಗಾ ಪಾತ್ರದಲ್ಲಿ. ಕಾವೇರಿ ಮನೆಯಲ್ಲಿ ಕೆಲಸ ಮಾಡುವವಳು.

ವಿಸ್ತಾರವಾದ ಪಾತ್ರವರ್ಗ ಬದಲಾಯಿಸಿ

ಭಾಗ್ಯಲಕ್ಷ್ಮೀ ಧಾರಾವಾಹಿಯಿಂದ

  • ಸುಷ್ಮಾ ಕೆ. ರಾವ್ : ಭಾಗ್ಯ ಆಗಿ; ತಾಂಡವ್ ಹೆಂಡತಿ.
  • ಪದ್ಮಜಾ ರಾವ್‌':[೫] ಕುಸುಮ ಆಗಿ; ತಾಂಡವ್ ತಾಯಿ, ಭಾಗ್ಯಳ ಅತ್ತೆ, ಕಾವೇರಿಯ ಅಕ್ಕ.
  • ಸುದರ್ಶನ್‌ ರಂಗಪ್ರಸಾದ್‌:[೬] [೭] ತಾಂಡವ್ ಆಗಿ; ಕುಸುಮಾಳ ಮಗ, ಭಾಗ್ಯಳ ಗಂಡ.
  • ಗೌತಮಿ ಗೌಡ: ಶ್ರೇಷ್ಠ ಆಗಿ; ಭಾಗ್ಯಳ ಗಂಡ. ತಾಂಡವ್ ಪ್ರೇಯಸಿ.
    • ಕಾವ್ಯ ಗೌಡ ಪಾತ್ರ ಬದಲವಾಣೆಯ ನಂತರ.
  • ಅಮೃತ ಗೌಡ: ತನ್ವಿ ಆಗಿ; ಭಾಗ್ಯ ಮತ್ತು ತಾಂಡವ್ ಮಗಳು.
  • ನಿಹಾರ್‌ ಗೌಡ: ತನ್ಮಯ್ ಆಗಿ; ಭಾಗ್ಯ ಮತ್ತು ತಾಂಡವ್‌ ಮಗ.

ಉಲ್ಲೇಖಗಳು ಬದಲಾಯಿಸಿ

  1. "ಭಾಗ್ಯಲಕ್ಷ್ಮೀ ೨ ನಿರ್ದೇಶನವನ್ನು ಮಾಡುತ್ತಿದ್ದಾರೆ ಕನ್ನಡತಿ ನಿರ್ದೇಶಕ". ವಿಜಯ ಕರ್ನಾಟಕ. Retrieved 16 April 2023.
  2. "ಮೆಡಿಕಲ್ ಓದ್ಬೇಕಿದ್ದ ಭಾಗ್ಯಲಕ್ಷ್ಮಿ ನಟಿ ಭೂಮಿಕಾ ನಟನಾ ಜಗತ್ತಿಗೆ ಎಂಟ್ರಿ ಕೊಟ್ಟಿದ್ದು ಹೇಗೆ?". Retrieved Jan 5, 2023.
  3. "ಭಾಗ್ಯಲಕ್ಷ್ಮೀ ಧಾರಾವಾಹಿ: ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ಬಿಗ್‌ಬಾಸ್ ಖ್ಯಾತಿಯ ಬ್ರೋ ಗೌಡ ಶಮಂತ್". Retrieved October 4, 2022.[ಶಾಶ್ವತವಾಗಿ ಮಡಿದ ಕೊಂಡಿ]
  4. "ಭಾಗ್ಯಲಕ್ಷ್ಮಿ ಧಾರಾವಾಹಿ ಕೀರ್ತಿ ಬಗ್ಗೆ ನಿಮಗೆ ಗೊತ್ತಾ? ತನ್ವಿ ರಾವ್ ಅವರ ರಿಯಲ್ ಸ್ಟೋರಿ". Retrieved March 1, 2023.
  5. "ನನ್ನದು ಗಟ್ಟಿಗಿತ್ತಿ ಅತ್ತೆಯ ಪಾತ್ರ". Retrieved October 4, 2022.[ಶಾಶ್ವತವಾಗಿ ಮಡಿದ ಕೊಂಡಿ]
  6. "ಭಾಗ್ಯಲಕ್ಷ್ಮಿ ಧಾರಾವಾಹಿಯ ತಾಂಡವ್‍ನ ನಿಜವಾದ ಪತ್ನಿ ಯಾರು". Retrieved November 4, 2022.
  7. "ಮಹೇಶನ ಕೈಯಲ್ಲಿ ಚಿತ್ರಾನ್ನ ಆಯ್ತು ತಾಂಡವ್ ಲೈಫು!". ಸುವರ್ಣ ನ್ಯೂಸ್. Retrieved 24 August 2023.