ರೀನಿಯಮ್
(ರ್ಹೇನಿಯಮ್ ಇಂದ ಪುನರ್ನಿರ್ದೇಶಿತ)
ರ್ಹೇನಿಯಮ್ ಒಂದು ಸಂಕ್ರಮಣ ಲೋಹ ಮೂಲಧಾತು. ೧೯೨೫ರಲ್ಲಿ ಮೊದಲು ಪರಿಶೋಧಿಸಲಾದ ಈ ಧಾತು ನೈಸರ್ಗಿಕವಾಗಿ ದೊರೆಯುವ ಮೂಲಧಾತುಗಳಲ್ಲಿ ಕೊನೆಯದಾಗಿ ಪತ್ತೆ ಹಚ್ಚಲ್ಪಟ್ಟದ್ದು. ಜರ್ಮನಿಯಲ್ಲಿ ಇದು ಮೊದಲು ದೊರೆತರಿಂದ ರ್ಹೈನ್ ನದಿಯಿಂದ ಇದು ತನ್ನ ಹೆಸರನ್ನು ಪಡೆಯಿತು. ಇದನ್ನು ಪ್ರಮುಖವಾಗಿ ರಾಸಯನಿಕ ವೇಗವರ್ಧಕಗಳಲ್ಲಿ, ಮಿಶ್ರಲೋಹಗಳಲ್ಲಿ ಉಪಯೋಗಿಸಲಾಗುತ್ತದೆ.