ಮೇಜರ್ ರೋಹಿತ್ ಶುಕ್ಲಾ ಅವರು ಭಾರತೀಯ ಸೈನ್ಯದ ೪೪ ರಾಷ್ಟ್ರೀಯ ರೈಫಲ್ಸ್‌ನ ಅಧಿಕಾರಿಯಾಗಿದ್ದಾರೆ. ಮಾರ್ಚ್ ೨೭, ೨೦೧೮ ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಒಂದನೇ ರಕ್ಷಣಾ ಹೂಡಿಕೆ ಸಮಾರಂಭದಲ್ಲಿ, ಅವರು ಭಾರತದ ರಾಷ್ಟ್ರಪತಿಯಾಗಿದ್ದ ರಾಮನಾಥ ಕೋವಿಂದ್ ಅವರಿಂದ ಮೂರನೇ ಅತ್ಯುನ್ನತ ಶಾಂತಿಕಾಲದ ಮಿಲಿಟರಿ ಪ್ರಶಸ್ತಿಯಾದ ಶೌರ್ಯ ಚಕ್ರವನ್ನು ಪಡೆದಿದ್ದಾರೆ. ಮೇಜರ್ ಶುಕ್ಲಾ ಅವರಿಗೆ ೨೬ ಜನವರಿ ೨೦೧೮ ರಂದು ಸೇನಾ ಪದಕ ನೀಡಲಾಯಿತು.[೧][೨][೩][೪][೫]

ಮೇಜರ್

ರೋಹಿತ್ ಶುಕ್ಲಾ

ಶೌರ್ಯ ಚಕ್ರ, ಸೇನಾ ಪದಕ
ಜನನಡೆಹ್ರಾಡೂನ್, ಉತ್ತರಾಖಂಡ, ಭಾರತ
ವ್ಯಾಪ್ತಿಪ್ರದೇಶ ಭಾರತ
ಶಾಖೆಭಾರತೀಯ ಸೇನೆ
ಶ್ರೇಣಿ(ದರ್ಜೆ) ಮೇಜರ್
ಘಟಕ೪೪ ರಾಷ್ಟ್ರೀಯ ರೈಫಲ್ಸ್
ಪ್ರಶಸ್ತಿ(ಗಳು)ಶೌರ್ಯ ಚಕ್ರ
ಸೇನಾ ಪದಕ

ಆರಂಭಿಕ ಜೀವನ ಮತ್ತು ಶಿಕ್ಷಣ ಬದಲಾಯಿಸಿ

ಶುಕ್ಲಾ ಅವರು ಸೇಂಟ್ ಜೋಸೆಫ್ ಅಕಾಡೆಮಿಯಲ್ಲಿ ಶಿಕ್ಷಣ ಪಡೆದಿದ್ದಾರೆ. ಅವರು  ನ್ಯಾಷನಲ್ ಡಿಫೆನ್ಸ್ ಆಕಾಡೆಮಿ (ಎನ್.ಡಿ.ಎ) ಪರೀಕ್ಷೆಯಲ್ಲಿ ಆಯ್ಕೆಯಾಗುವ ಮೂಲಕ ಭಾರತೀಯ ಸೇನೆಗೆ ಸೇರಿದರು.[೬]

ಮಿಲಿಟರಿ ವೃತ್ತಿ ಜೀವನ ಬದಲಾಯಿಸಿ

ಮೇಜರ್ ರೋಹಿತ್ ಶುಕ್ಲಾ ಅವರು ಭಯೋತ್ಪಾದನೆ ಮತ್ತು ಉಗ್ರರ ವಿರುದ್ಧ ಭಾರತೀಯ ಸೇನೆಯು ನಡೆಸಿದ ೫೨ ಕ್ಕೂ ಹೆಚ್ಚು ಕಾರ್ಯಾಚರಣೆಗಳ ನೇತೃತ್ವ ವಹಿಸಿದ್ದಾರೆ.[೭] ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಭಾರತೀಯ ಸೇನೆ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಗಳ ಜಂಟಿ ಕಾರ್ಯಾಚರಣೆಯಲ್ಲಿ ೩೦ ಏಪ್ರಿಲ್ ೨೦೧೮ ರಂದು, ಮೇಜರ್ ಶುಕ್ಲಾ ಅವರು ಹಿಜ್ಬುಲ್ ಮುಜಾಹಿದ್ದೀನ್‌ನ ಮುಖ್ಯ ಉಗ್ರನಾದ ಸಮೀರ್ ಟೈಗರ್ ಮೇಲೆ ದಾಳಿ ಮಾಡಿ ಸದೆ ಬಡೆದರು.[೮] ಆ ಎನ್‌ಕೌಂಟರ್‌ಗೆ ಒಂದು ದಿನ ಮೊದಲು, ಉಗ್ರ ಸಮೀರ ಟೈಗರ್ ಭಾರತೀಯ ಸೇನೆಗೆ ಅದರಲ್ಲೂ ವಿಶೇಷವಾಗಿ ಮೇಜರ್ ಶುಕ್ಲಾ ಅವರಿಗೆ ವಿಡಿಯೋ ಮೂಲಕ ಬೆದರಿಕೆ ಹಾಕಿದ್ದ. ಆ ವಿಡಿಯೋ ಬಹಳ ವೈರಲ್ ಆಗಿತ್ತು.[೯][೧೦][೧೧]

ಆ ಕಾರ್ಯಾಚರಣೆಯಲ್ಲಿ ಮೇಜರ್ ಶುಕ್ಲಾ ಅವರು ಎದೆಯ ಮೇಲೆ ಉಗ್ರರ ಗುಂಡಿನ ಗಾಯದಿಂದ ಗಂಭೀರವಾಗಿ ಗಾಯಗೊಂಡರು. ಅವರು ಚಿಕಿತ್ಸೆ ಪಡೆದು ಕೆಲ ಸಮಯದ ನಂತರ ಗುಣಮುಖರಾಗಿ ಸೇವೆಗೆ ಹಾಜರಾದರು.[೧೨] ಆದರೆ, ಉಗ್ರ ಸಮೀರ್ ಟೈಗರ್‌ನನ್ನು ಕೊಂದಿದ್ದಕ್ಕಾಗಿ, ಪ್ರತೀಕಾರದ ರೂಪದಲ್ಲಿ ಭಯೋತ್ಪಾದಕರು ಆ ಕಾರ್ಯಾಚರಣೆಯಲ್ಲಿ ಮೇಜರ್ ಶುಕ್ಲಾ ಜೊತೆಗಿದ್ದು, ಸೇವೆ ಸಲ್ಲಿಸಿದ್ದ ಔರಂಗಜೇಬ್ ಎಂಬ ರೈಫಲ್‌ಮ್ಯಾನ್‌ನನ್ನು ಅಪಹರಿಸಿದರು.ನಂತರ ಆ ಜೌರಂಗಜೇಬ್‌ನನ್ನು ಚಿತ್ರಹಿಂಸೆ ನೀಡಿ ಮತ್ತು ಕೊಂದರು. ಆ ಹಿಂಸೆ ನೀಡಿದ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು.

ಉಲ್ಲೇಖಗಳು ಬದಲಾಯಿಸಿ

  1. "Major martyred in J&K gets gallantry award". Daily Excelsior. March 28, 2018.
  2. "Kirti Chakra & Shaurya Chakra". Press Information Bureau. Ministry of Defence. January 25, 2018.
  3. "The man behind Tiger's hunt: Major Rohit Shukla". eenaduindia. May 1, 2018. Archived from the original on ಸೆಪ್ಟೆಂಬರ್ 2, 2018. Retrieved ಏಪ್ರಿಲ್ 13, 2024.
  4. "411 Republic Day Gallantry and Other Defence Decorations Announced". Press Information Bureau. January 26, 2019.
  5. "इस जांबाज ने चुनौती देने वाले आतंकी को उतारा था मौत के घाट, सेना मेडल से सम्मानित" (in Hindi). Dainik Jagaran. January 28, 2019.{{cite news}}: CS1 maint: unrecognized language (link)
  6. "Family proud of Maj Shukla's heroics". Tribune India. May 4, 2018.
  7. "How Army Major Rohit Shukla killed Hizbul Mujahideen terrorist 'Tiger' in J&K's Pulwama". Zee News. Apr 30, 2018.
  8. Hassan, Ishfaq-ul- (May 2, 2018). "J&K gun battle: Sameer Tiger had dared Major Rohit Shukla 24 hours before death". DNA India.
  9. Hussain, Khalid (Apr 30, 2018). "Army Major who killed Hizbul terrorist Sameer Tiger currently battling for life". DNA India.
  10. "Family proud of Maj Shukla's heroics". Tribune India. 4 May 2018. Retrieved 15 September 2018.
  11. "Army Major who killed Hizbul terrorist Sameer Tiger currently battling for life". www.dnaindia.com. Retrieved 2021-07-15.
  12. Goel, Pallavi (May 3, 2018). "You'll Be Proud To Know What This Indian Army Officer Has Done For The Country!". Topyaps.com.