ರೋಮಿಯೋ ಜೂಲಿಯೆಟ್

ವಿಲಿಯಂ ಷೇಕ್ಸ್ಪೀರಿನ ದುರಂತ ನಾಟಕ

ರೋಮಿಯೊ ಜೂಲಿಯೆಟ್ ಷೇಕ್ಸ್ ಪಿಯರ್ ಮಹಾಕವಿಯ ಅತಿ ಮಹತ್ವದ ನಾಟಕಗಳಲ್ಲಿ ಒಂದು. ಹೆಸರೇ ಸೂಚಿಸುವಂತೆ ಶೋಕಶಪ್ತ ದುರಂತ ನಾಟಕ. ನಿತ್ಯ ನೂತನವಾದ, ಬದುಕಿನ ಅಂತಃಸತ್ವವಾದ ಪ್ರೀತಿಯೇ ಇಲ್ಲಿ ಸಾರ್ವಭೌಮ. ಷೇಕ್ಸ್ ಪಿಯರ್ ಇಲ್ಲಿ ರೋಮಿಯೊ ಜೂಲಿಯೆಟ್ಟರ ಮೂಲಕ ಪವಿತ್ರ ಪ್ರೇಮವನ್ನೇ ನಿರೂಪಿಸಿದ್ದಾನೆ. ರೋಮಿಯೊ ಜೂಲಿಯೆಟ್ಟರ ಪ್ರೇಮವನ್ನು ರಮ್ಯಪ್ರೇಮ, ಆದರ್ಶಪ್ರೇಮ, ಉದಾತ್ತ ಉಜ್ವಲ ಪ್ರೇಮ ಎಂದೆಲ್ಲ ವರ್ಣಿಸಲಾಗುತ್ತದೆ. ರೋಮಿಯೊ ಜೂಲಿಯೆಟ್ಟರ ಪ್ರೇಮ ಆದರ್ಶ, ರಮ್ಯ, ಉಜ್ವಲ ಈ ಎಲ್ಲ ವಿಶೇಷಣ ಗಳಿಗಿಂತ ಮಿಗಿಲಾಗುದು. ಇದೆಲ್ಲವನ್ನೂ ಮೀರಿದ ಪ್ರೇಮ; ಚೆಲುವು, ಶ್ರೀಮಂತಿಕೆಗಳಿಂದ ಅಭಿವ್ಯಕ್ತಿ ಪಡೆಯುವ ಪ್ರೇಮ. ಅದು ರೋಮಿಯೊ ಜೂಲಿಯೆಟ್ಟರ ಛಾಪಿನ ನಿರ್ಮಲ ಪ್ರೇಮ. ಎಂದೇ ಈ ಎಳೆಯರ ಪ್ರೇಮಕ್ಕೆ ಮೋಹದ ಸೆಳವಿಗೆ ಮೀರಿದ ಸಾಂಕೇತಿಕ ಮಹತ್ವವಿದೆ. ರೋಮಿಯೊ ಜೂಲಿಯೆಟ್ಟರು ಚಿರನೂತನವಾದ ಅಚಲ ಪ್ರೇಮದ ಸಂಕೇತಗಳಾಗಿದ್ದಾರೆ.

An 1870 oil painting by Ford Madox Brown depicting the play's famous balcony scene

ಛಾಯಾಂಕಣಸಂಪಾದಿಸಿ

ಬಾಹ್ಯ ಸಂಪರ್ಕಗಳುಸಂಪಾದಿಸಿ