ರೋಬಾಟ್ ಶಾಸ್ತ್ರದ ಮೂರು ನಿಯಮಗಳು
ರೋಬಾಟ್ ಶಾಸ್ತ್ರದ ಮೂರು ನಿಯಮಗಳು ಐಸಾಕ್ ಅಸಿಮೋವ್ ರವರು ತಮ್ಮ ಕಾದಂಬರಿಗಳಲ್ಲಿ ಸೂಚಿಸುವ ಕಾಲ್ಪನಿಕ ನಿಯಮಗಳು. ಇಲ್ಲಿ, ರೋಬಾಟ್ ಎಂದರೆ, ರೂಪದಲ್ಲಿ ಮಾನವ ಸದೃಶ ಯಂತ್ರಗಳು.
ಮೂರು ನಿಯಮಗಳು
ಬದಲಾಯಿಸಿ- ಪ್ರಥಮ ನಿಯಮ - ಒಂದು ರೋಬಾಟ್ ಮಾನವನನ್ನು ಘಾಸಿಮಾಡಕೂಡದು ಅಥವಾ ನಿಷ್ಕ್ರಿಯತೆಯಿಂದ ಮಾನವನು ಹಾನಿಗೊಳಗಾಗುವಂತೆ ಮಾಡಬಾರದು
- ದ್ವಿತೀಯ ನಿಯಮ - ಮಾನವನೊಬ್ಬನು ಕೊಟ್ಟ ಆದೇಶಗಳನ್ನು - ಈ ಆದೇಶಗಳು ಪ್ರಥಮ ನಿಯಮ ಪಾಲನೆಯೊಡನೆ ದ್ವಂದ್ವಕ್ಕೊಳಗಾಗದಿದ್ದಲ್ಲಿ - ರೋಬಾಟ್ ಪಾಲಿಸಲೇ ಬೇಕು,
- ತೃತೀಯ ನಿಯಮ - ರೋಬಾಟ್ ತನ್ನ ಅಸ್ತಿತ್ವವನ್ನು ಸಂರಕ್ಷಿಸಲು ಪ್ರಯತ್ನಿಸಲೇ ಬೇಕು - ಆದರೆ ಈ ಕ್ರಿಯೆಯಿಂದ ಪ್ರಥಮ ಅಥವಾ ದ್ವಿತೀಯ ನಿಯಮ ಪಾಲನೆಯು ದ್ವಂದ್ವಕ್ಕೊಳಗಾದಿದ್ದಾಗ ಮಾತ್ರ.
ಶೂನ್ಯ ನಿಯಮ
ಬದಲಾಯಿಸಿರೋಬಾಟ್ ಮಾನವ ಜನಾಂಗವನ್ನು ಹಾನಿಗೀಡುಮಾಡಬಾರದು