ರೂಪಾ ಮಂಜರಿ
ರೂಪಾ ಮಂಜರಿ ಇವರು ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ಇವರ ಮಾತೃಭಾಷೆ ತಮಿಳು.[೨] ನಾನ್ (೨೦೧೨) ಮತ್ತು ಯಾಮಿರುಕ್ಕ ಬಾಯಾಮೆ (೨೦೧೪) ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ಮೊದಲು, ನಂದಿನಿ ಅವರ ಚಿತ್ರವಾದ ತಿರು ತಿರು ತುರು ತುರು (೨೦೦೯) ದಲ್ಲಿ ಪಾದಾರ್ಪಣೆ ಮಾಡಿದರು.[೩]
ರೂಪಾ ಮಂಜರಿ | |
---|---|
Born | ಶ್ರೀ ರೂಪಾ ಮಂಜರಿ |
Nationality | ಭಾರತೀಯ |
Occupation(s) | ಚಲನಚಿತ್ರ ನಟಿ, ರೂಪದರ್ಶಿ |
Years active | ೨೦೦೯–೨೦೧೫ |
Height | ೧.೫೮ |
ವೃತ್ತಿಜೀವನ
ಬದಲಾಯಿಸಿರೂಪಾ ಮಂಜರಿಯವರಿಗೆ ತಿರು ತಿರು ತುರು ತುರು ಚಿತ್ರದ ಆಡಿಷನ್‌ನಲ್ಲಿ ನಂದಿನಿಯವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು ಮತ್ತು ಆ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಯು ದೊರೆಯಿತು. ಆಡಿಷನ್‌ಗೆ ಬಂದ ಇತರ ೩೦ ಕ್ಕೂ ಹೆಚ್ಚು ಹುಡುಗಿಯರಲ್ಲಿ ರೂಪಾ ಮಂಜರಿಯವರನ್ನು ಆಯ್ಕೆ ಮಾಡಲು ನಾಲ್ಕು ತಿಂಗಳು ಬೇಕಾಯಿತು.[೪] ರೊಮ್ಯಾಂಟಿಕ್ ಹಾಗೂ ಹಾಸ್ಯಮಯವಾದ ಈ ಚಿತ್ರದಲ್ಲಿ ಅವರಿಗೆ ಅಜ್ಮಲ್‌ರವರೊಂದಿಗೆ ಕಳೆದುಹೋದ ಮಗುವನ್ನು ಹುಡುಕುತ್ತಿರುವ ಪಾತ್ರ ದೊರೆಯಿತು. ರೂಪಾ ಅವರು ಅಭಿನಯದಲ್ಲಿ ಅತ್ಯುತ್ತಮ ನಟಿಗಾಗಿ ವಿಜಯ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು. ವಿಮರ್ಶಕರು ಅವರ ಅರ್ಚನಾ ಪಾತ್ರವನ್ನು- "ಕೋಪ, ಹಾಸ್ಯ, ಕೋಮಲತೆ ಮತ್ತು ಮೃದು ಪ್ರಣಯದ ಎಲ್ಲಾ ಸೂಕ್ಷ್ಮತೆಗಳೊಂದಿಗೆ ಜೀವಂತಗೊಳಿಸುತ್ತಾರೆ" ಎಂದು ಬಣ್ಣಿಸಿದರು.[೫]
ತದನಂತರ, ಅವರು ಲಾಲ್‌ರವರು ನಿರ್ದೇಶಿಸಿ ನಿರ್ಮಿಸಿದ ೨೦೧೦ ರ ಮಲಯಾಳಂ ಚಿತ್ರ ಟೂರ್ನಮೆಂಟ್‌ನಲ್ಲಿ ಕಾಣಿಸಿಕೊಂಡರು. ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾದ ಪುರುಷರ ಗುಂಪನ್ನು ಭೇಟಿಯಾಗುವ ವನ್ಯಜೀವಿ ಛಾಯಾಗ್ರಾಹಕನ ಪಾತ್ರವನ್ನು ನಿರ್ವಹಿಸಿದರು.[೬] ಈ ಚಿತ್ರವು ನಕಾರಾತ್ಮಕ ವಿಮರ್ಶೆಗಳಿಗೆ ತೆರೆದುಕೊಂಡಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಕಳಪೆ ಪ್ರದರ್ಶನ ನೀಡಿತು.[೭] ಅವರು ದೀರ್ಘಕಾಲದಿಂದ ವಿಳಂಬವಾದ ವಿಜಯ್ ಆಂಟೋನಿಯವರ ಅಭಿನಯದ ನಾನ್ ಚಿತ್ರದಲ್ಲಿ ನೀಲಾ ನೀಲಾ ಹಾಡಲ್ಲಿ ಅಭಿನಯಿಸಿದರು ಮತ್ತು ಆನ್‌ಲೈನ್‌ನಲ್ಲಿ ಯಶಸ್ವಿಯಾಗಿ ಬಿಡುಗಡೆಯಾದ "ಮಕ್ಕಯಾಲ ಮಕ್ಕಯಾಲ" ಎಂಬ ಹಾಡಿನ ವೀಡಿಯೊದಲ್ಲಿ ಭಾಗಿಯಾಗಿದ್ದರು. ಈ ಚಿತ್ರವು ೨೦೧೦ ರ ಆರಂಭದಲ್ಲಿ, ನಿರ್ಮಾಣವನ್ನು ಪ್ರಾರಂಭಿಸಿತು ಮತ್ತು ೨೦೧೨ ರಂದು ಆನ್‌ಲೈನ್‌ನಲ್ಲಿ ಬಿಡುಗಡೆಯಾಯಿತು.[೮][೯][೧೦] ಈ ಚಿತ್ರವು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ೨೦೧೨ ರಲ್ಲಿ, ಬಿಡುಗಡೆಯಾದ ಎರಡು ಮಲಯಾಳಂ ಚಿತ್ರಗಳಲ್ಲಿ ಮಲ್ಲು ಸಿಂಗ್‌ನಲ್ಲಿ ಕಾಣಿಸಿಕೊಂಡರು ಹಾಗೂ ಮಲಯಾಳಂ ಚಿತ್ರವಾದ ಐ ಲವ್ ಮಿಯಲ್ಲಿ ಸಣ್ಣ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ೨೦೧೪ ರಲ್ಲಿ, ಅವರ ಮೊದಲ ಹಾಸ್ಯ-ಥ್ರಿಲ್ಲರ್ ಚಲನಚಿತ್ರವಾದ, ಯಾಮಿರುಕ್ಕ ಬಾಯಾಮೆ ವಾಣಿಜ್ಯಿಕವಾಗಿ ಯಶಸ್ವಿಯಾಯಿತು.
ರೂಪಾ ಮಂಜರಿಯವರು ತಮಿಳಿನ ಸಿವಪ್ಪು ಚಿತ್ರದಲ್ಲಿ ನಿರ್ಮಾಣ ಕಾರ್ಮಿಕನ ಪಾತ್ರವನ್ನು ನಿರ್ವಹಿಸಿದ್ದಾರೆ.[೧೧]
ಚಲನಚಿತ್ರಗಳು
ಬದಲಾಯಿಸಿವರ್ಷ | ಚಲನಚಿತ್ರ | ಪಾತ್ರ | ಭಾಷೆ | ಟಿಪ್ಪಣಿಗಳು |
---|---|---|---|---|
೨೦೦೯ | ತಿರು ತಿರು ತುರು ತುರು | ಅರ್ಚನಾ | ತಮಿಳು ಭಾಷೆ | ಅತ್ಯುತ್ತಮ ಚೊಚ್ಚಲ ನಟಿಗಾಗಿ ವಿಕಟನ್ ಪ್ರಶಸ್ತಿಯನ್ನು ಗೆದ್ದಿದ್ದಾರೆ ಹಾಗೂ ಅತ್ಯುತ್ತಮ ಚೊಚ್ಚಲ ನಟಿಗಾಗಿ ವಿಜಯ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. |
೨೦೧೦ | ಮಾಸ್ಕೋವಿನ್ ಕಾವೇರಿ | ತಮಿಳು | "ಗ್ರಾಮಂ ಥೆಡಿ ವಾಡಾ" ಹಾಡಿನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. | |
ಟೂರ್ನಮೆಂಟ್ - ಪ್ಲೇ & ರೀಪ್ಲೇ | ಅಶ್ವಥಿ ಅಲೆಕ್ಸ್ | ಮಲಯಾಳಂ | ||
೨೦೧೨ | ಮಲ್ಲು ಸಿಂಗ್ | ಪೂಜಾ | ಮಲಯಾಳಂ | |
ನಾನ್ | ರೂಪಾ | ತಮಿಳು | ||
ಐ ಲವ್ ಮಿ | ಸಮೀರ | ಮಲಯಾಳಂ | ||
೨೦೧೪ | ಯಾಮಿರುಕ್ಕ ಬಯಾಮೆ | ಸ್ಮಿತಾ | ತಮಿಳು | |
೨೦೧೫ | ಸಿವಪ್ಪು | ಪಾರ್ವತಿ | ತಮಿಳು |
ಉಲ್ಲೇಖಗಳು
ಬದಲಾಯಿಸಿ- ↑ "A breezy entertainer: Rupa Manjari". Sify. 23 September 2009. Archived from the original on 21 August 2012. Retrieved 23 August 2012.
- ↑ "I still prefer Kollywood: Rupa Manjari". The Times of India. Archived from the original on 3 December 2013.
- ↑ "Actress Rupa Manjari – Tamil Movie Actress Interview – Thiru Thiru Thuru Thuru Rupa Manjari". Videos.behindwoods.com. Retrieved 23 August 2012.
- ↑ SINDHU VIJAYAKUMAR (5 October 2009). "Acting was my dream: Rupa". The Times of India. Archived from the original on 7 July 2012. Retrieved 23 August 2012.
- ↑ "Movie Review:Thiru Thiru Thuru Thuru". Sify. Archived from the original on 9 May 2014. Retrieved 23 August 2012.
- ↑ "Rupa Manjari goes to Malluwood". Sify. Archived from the original on 28 October 2010. Retrieved 9 August 2022.
- ↑ P Sangeetha (27 October 2010). "Rupa Manjari is game for a tournament!". The Times of India. Archived from the original on 3 December 2013. Retrieved 23 August 2012.
- ↑ Shankaran Malini. "No time for lyrics, but my music is from the heart: Vijay Antony". The Times of India. Archived from the original on 3 December 2013. Retrieved 23 August 2012.
- ↑ "Cinema Plus / Columns : ITSY-BITSY". The Hindu. Chennai, India. 20 March 2011. Archived from the original on 23 March 2011. Retrieved 23 August 2012.
- ↑ Shankaran Malini (17 December 2011). "Rupa Manjari has no regrets". The Times of India. Archived from the original on 2 December 2013. Retrieved 23 August 2012.
- ↑ "Rupa Manjari to play labourer in Tamil movie". Archived from the original on 28 November 2013.
ಬಾಹ್ಯ ಕೊಂಡಿ
ಬದಲಾಯಿಸಿ- Rupa Manjari ಐ ಎಮ್ ಡಿ ಬಿನಲ್ಲಿ