ರೂಪಂಗಢ ಕೋಟೆ
ರೂಪಂಗಢ ಕೋಟೆಯು ಭಾರತದ ರಾಜಸ್ಥಾನದ ರೂಪಂಗರ್ ಪಟ್ಟಣದಲ್ಲಿರುವ ಹಿಂದಿನ ಕಾಲದ ಕೋಟೆ ಮತ್ತು ಅರಮನೆಯಾಗಿದೆ. ಅದು ಇಂದು ಹೋಟೆಲ್ ಆಗಿದೆ. ಈ ಕೋಟೆಯನ್ನು ೧೬೪೮ ರಲ್ಲಿ ಕಿಶನ್‌ಗಢದ ಮಹಾರಾಜ ರೂಪ್ ಸಿಂಗ್ ನಿರ್ಮಿಸಿದರು. ಸಂಭಾರ್ ಸಾಲ್ಟ್ ಲೇಕ್‌ಗೆ ಪ್ರಮುಖ ವ್ಯಾಪಾರ ಮಾರ್ಗವನ್ನು ನಿಯಂತ್ರಿಸುವ ಕಿಶನ್‌ಗಢವು ಉತ್ತರದ ಬೆಟ್ಟದ ಮೇಲೆ ಆಯಕಟ್ಟಿಯ ಹಂತದಲ್ಲಿದೆ. ಕೋಟೆಯ ಸುತ್ತಲೂ ಗಣನೀಯವಾದ ಪಟ್ಟಣವು ಬೆಳೆದು ಅದು ಕುಶಲಕರ್ಮಿಗಳು ಮತ್ತು ತಯಾರಕರ ಕೇಂದ್ರವಾಯಿತು. ಒಂದು ಶತಮಾನದವರೆಗೆ ಕಿಶನ್‌ಗಢವು ಮಹಾರಾಜರ ಪ್ರಾಥಮಿಕ ನಿವಾಸವಾಗಿ ಮತ್ತು ರಾಜ್ಯದ ರಾಜಧಾನಿಯಾಗಿಯೂ ಕಾರ್ಯನಿರ್ವಹಿಸಿತು. ಕೋಟೆಯ ಪಕ್ಕದಲ್ಲಿ ಅಲಂಕೃತವಾದ ಅರಮನೆಯನ್ನು ನಿರ್ಮಿಸಲಾಯಿತು.
೧೯೯೯ ರಲ್ಲಿ ಮಹಾರಾಜರು ಕೋಟೆಯನ್ನು ಹೋಟೆಲ್ ಆಗಿ ಪರಿವರ್ತಿಸಿದರು. ಆದರೆ ಅದರ ಒಳಾಂಗಣ ಮತ್ತು ಹೊರಭಾಗದಲ್ಲಿ ಅರಮನೆಯ ಶೈಲಿಯನ್ನೇ ಇಟ್ಟು ಸ್ವಲ್ಪವೇ ಬದಲಾಯಿಸಿದರು. ಇದು ೨೦ ಕೊಠಡಿಗಳನ್ನು ಹೊಂದಿದೆ. ಅವುಗಳಲ್ಲಿ ಕೆಲವು ವಿಶಾಲವಾದ ಹಿಂದಿನ ರಾಜಮನೆತನದ ಕೋಣೆಗಳಾಗಿವೆ.
ಉಲ್ಲೇಖಗಳು
ಬದಲಾಯಿಸಿ- ರಾಜಸ್ಥಾನ, ದೆಹಲಿ ಮತ್ತು ಆಗ್ರಾ. ಲಿಂಡ್ಸೆ ಬ್ರೌನ್ ಮತ್ತು ಅಮೆಲಿಯಾ ಥಾಮಸ್. ಲೋನ್ಲಿ ಪ್ಲಾನೆಟ್,೨೦೦೮
ಬಾಹ್ಯ ಕೊಂಡಿಗಳು
ಬದಲಾಯಿಸಿ- ಅಧಿಕೃತ ಸೈಟ್ Archived 2009-09-09 ವೇಬ್ಯಾಕ್ ಮೆಷಿನ್ ನಲ್ಲಿ.