ರುಸ್ಸಿ ಲಾಲಾ
ಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು ವಿಕಿ ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. ಈ ಲೇಖನವನ್ನು ಈ ಕಾರಣಗಳಿಂದಾಗಿ ನಕಲು ಸಂಪಾದನೆಗೆ ಒಳಪಡಿಸಬೇಕಿದೆ {{{ವ್ಯಾಕರಣ, ಶೈಲಿ, ಒಗ್ಗಟ್ಟು, ಸಂಯೋಜನೆ ಧ್ವನಿ ಅಥವಾ ಕಾಗುಣಿತ}}}. (ಏಪ್ರಿಲ್ ೧೯, ೨೦೧೫) |
(೨೨, ಆಗಸ್ಟ್ ೧೯೨೮- ೧೯, ಅಕ್ಟೋಬರ್, ೨೦೧೨)–
ರುಸ್ಸಿ ಲಾಲಾ [೧]೧೯೪೮ ರಲ್ಲಿ ತಮ್ಮ ೧೯ ನೆಯ ವಯಸ್ಸಿನಲ್ಲಿಯೇ ಪತ್ರಿಕೋದ್ಯಮವನ್ನು ಪ್ರಾರಂಭಿಸಿದರು. ಪುಸ್ತಕ ಪ್ರಕಾಶನಾಲಯದ ಮ್ಯಾನೇಜರ್ ಆಗಿ ಕೆಲಸಮಾಡಿದರು. ೧೯೫೯ರಲ್ಲಿ, ಲಂಡನ್‍ನಲ್ಲಿ ಪ್ರಥಮ ಭಾರತೀಯ ಪುಸ್ತಕ ಪ್ರಕಟನಾಲಯದ ಕಾರ್ಯ ನಿರ್ವಾಹಕರಾದರು. ೧೯೬೪ರಲ್ಲಿ ಶ್ರೀ ರಾಜ್ ಮೋಹನ್ ಗಾಂಧಿಯವರ ಜೊತೆಗೂಡಿ, ಹಿಮ್ಮತ್ ಎಂಬ ವಾರಪತ್ರಿಕೆಯನ್ನು ಸಮರ್ಥವಾಗಿ, ಸುಮಾರು ೧೦ ವರ್ಷಗಳವರೆಗೆ ನಡೆಸಿಕೊಂಡುಬಂದರು. 'ರುಸ್ಸಿ ಲಾಲಾ'ರವರ ಪ್ರಥಮ ಪುಸ್ತಕ ಪ್ರಕಟಣೆ 'The creation of Wealth' : 'A Tata story to critical and Commercial acclaim -1981'
ರುಸ್ಸಿ ಲಾಲಾರವರ ಪುಸ್ತಕ ಪ್ರಕಟಣೆಗಳು
ಬದಲಾಯಿಸಿ- 'Creation of Weath'- 'A Tata story'-೧೯೮೧
- 'Encounters with the eminent'-೧೯೮೧
- 'The Heartbeat of a Trust'-೧೯೮೪
- 'In Search of Leadership'-೧೯೮೬
- 'A Book of JRD Tata's Speeches', edited with 'shrI. S. A. Sabavala'.
- 'Keynote Address'-೧೯೮೬
- 'Beyond The Last Blue Mountain'-'A Life of JRD Tata'-(೧೯೦೪-೧೯೯೩)
ರುಸ್ಸಿ ಲಾಲಾರವರು ಕ್ಯಾನ್ಸರ್ ರೋಗಪೀಡಿತರು
ಬದಲಾಯಿಸಿಲೇಖಕ ರುಸ್ಸಿ ಲಾಲಾರವರು ಅತ್ಯಂತ ಆಸಕ್ತಿ ಮತ್ತು ನಿಷ್ಠೆಯಿಂದ ಟಾಟ ಪರಿವಾರದ ಹಲವು ಮುಖಗಳನ್ನು ಸೊಗಸಾಗಿ ಚಿತ್ರಿಸಿದ್ದಾರೆ. ಹಲವಾರು ಪ್ರಮುಖ ಭಾರತೀಯ ಪಾರ್ಸಿಗಳ ರಾಷ್ಟ್ರಹಿತ ಕಾರ್ಯಗಳನ್ನು ಸಮಯವರಿತು ವಿವರಿಸಿದ್ದಾರೆ. ಒಳ್ಳೆಯ ಭಾಷೆ, ಉತ್ತಮ ವಿವರಣೆ ಹಾಗೂ ಸಮರ್ಥ ಸಂಶೋಧನೆಗಳಿಂದ ಹೆಣೆದಿರುವ ವ್ಯಕ್ತಿ ಚಿತ್ರಗಳು ಬಹಳ ಮಾಹಿತಿಪೂರ್ಣವಾಗಿವೆ. ರುಸ್ಸಿ ಲಾಲಾರವರು ಕ್ಯಾನ್ಸರ್ ರೋಗಪೀಡಿತರು. ಆದರೆ ಅವರ ಜೀವನೋತ್ಸಾಹ ಎಲ್ಲರಿಗೂ ಮಾದರಿಯಾಗಿದೆ. ರುಸ್ಸಿ ಲಾಲಾರವರು, ಜೆ.ಆರ್.ಡಿಯವರ ಬಗ್ಗೆ , ಖ್ಯಾತಪತ್ರಿಕಾಕರ್ತ, ಶ್ರೀ.ಎಮ್. ವಿ. ಕಾಮತ್ ರವರು ಹೇಳಿದ ಮಾತುಗಳನ್ನು ದಾಖಲಿಸಿದ್ದಾರೆ. ಅದು ಇಲ್ಲಿ ಪ್ರಸ್ತುತ. "ಜೆ.ಆರ್.ಡಿಯವರು, ತಮ್ಮ ಜೀವಮಾನದಲ್ಲಿ ಮಾಡಿದ ಕಾರ್ಯಗಳು ಯಾವ ಯಾತ್ರಿಕನಿಗೂ ಕಡಿಮೆಯಿಲ್ಲ. ಕೊನೆಯ ನೀಲಪರ್ವತದ ಹಿಂದೆ ಅಡಗಿರುವ ಸತ್ಯವನ್ನು ಅರಿಯುವ ಕುತೂಹಲ ಅವರಿಗೆ ಸದಾಇರುತ್ತಿತ್ತು. ಇನ್ನೂ ಮುಂದಿನ ಪಯಣನ್ನು ಅವರು ಅರಸಿಕೊಂಡು ಮುನ್ನುಗ್ಗಲು ತವಕಿಸುತ್ತಿದ್ದರು".
ರುಸ್ಸಿ ಲಾಲಾರವರ ವೃತ್ತಿಜೀವನ
ಬದಲಾಯಿಸಿ೮೧ ವರ್ಷದ, ಆರ್. ಎಮ್. ಲಾಲ ರವರ, [೨]ಇತ್ತೀಚಿನ ಕಾದಂಬರಿ, The Thread of God in my life ಪ್ರಕಟವಾಗಿದೆ. ಲಾಲಾರವರು, ಸುಮಾರು ೧೮ ವರ್ಷಗಳ ಕಾಲ. ಸರ್ ದೊರಾಬ್ಜಿ ಟಾಟ ಟ್ರಸ್ಟ್ನ ಅಧ್ಯಕ್ಷರಾಗಿದ್ದರು, ೧೯೮೭-೯೧ ರ ಸಮಯದಲ್ಲಿ ಅವರು 'ಜೆ. ಆರ್. ಡಿ ರವರ ಆತ್ಮ ಕಥೆ' ಯನ್ನು ಹೆಣೆಯುತ್ತಿದ್ದ ಕಾಲ. ದಿನದ ಹೆಚ್ಚು ಸಮಯವನ್ನು 'ಜೆ'ರವರ ಛೇಂಬರ್ ನಲ್ಲಿ ಕಳೆಯುತ್ತಿದ್ದರು. ಬಿಯಾಂಡ್ ದ ಲಾಸ್ಟ್ ಬ್ಲೂ ಮೌಂಟೈನ್ ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮ ಸಂಗತಿಗಳನ್ನೊಳಗೊಂಡ ಸುಂದರ ಪುಸ್ತಕವೆಂದು ಎಲ್ಲರೂ ಶ್ಲಾಘಿಸಿದ್ದಾರೆ.
ನಿಧನ
ಬದಲಾಯಿಸಿರುಸ್ಸಿಯವರು,[೩] ೨೦೧೨ ರ, ಅಕ್ಟೋಬರ್, ೧೯ ರಂದು ಹೃದಯಾಘಾತದಿಂದ ನಿಧನರಾದರು. [೪]
- ↑ http://www.business-standard.com/article/companies/q-a-russi-m-lala-tata-group-insider-chronicler-111112400113_1.html
- ↑ "ಆರ್ಕೈವ್ ನಕಲು". Archived from the original on 2005-01-25. Retrieved 2014-05-04.
- ↑ http://www.bombaysamachar.com/epaper%5Ce25-11-2012%5CWeekly-25-11-2012-08.pdf
- ↑ "ರುಸ್ಸಿ ಲಾಲಾ, ಹೃದಯಾಘಾತದಿಂದ ನಿಧನರಾದರು". Archived from the original on 2016-03-04. Retrieved 2014-05-04.