ರುಬೆಲ್ಲಾ ಅಥವಾ ‘ಮೂರು ದಿನದ ಮೀಸಲ್ಸ್

ಬದಲಾಯಿಸಿ
 
ರುಬೆಲ್ಲ ವೈರಸ್ಟ್ರಾ-ನ್ಸ್ಮಿಶನ್ ಎಲೆಕ್ಟ್ರಾನ್ ಸೂಕ್ಷ್ಮದರ್ಶಕದಲ್ಲಿ
  • ರುಬೆಲ್ಲಾ ಇದಕ್ಕೆ ‘ಜರ್ಮನ್ ಮೀಸಲ್ಸ್’ ಅಥವಾ ‘ಮೂರು ದಿನದ ಮೀಸಲ್ಸ್/ದಡಾರ’ ಎಂದೂ ಕರೆಯುತ್ತಾರೆ. ಇದು ಮಕ್ಕಳಲ್ಲಿ ಸಾಮಾನ್ಯವಾಗಿ ಹೆಚ್ಚು ತೊಂದರೆಯನ್ನು ಉಂಟುಮಾಡುವುದಿಲ್ಲ. ಆದರೆ ವಯಸ್ಕರಲ್ಲಿ ತೊಂದರೆಗಳನ್ನು ಉಂಟುಮಾಡುವುದು. ರುಬೆಲ್ಲಾ ವೈರಾಣುವು ಮನುಷ್ಯನಲ್ಲಿ ಮಾತ್ರ ಜೀವಿಸಬಲ್ಲದು.
  • ರುಬೆಲ್ಲಾ ಲಸಿಕೆ ಕಂಡು ಹಿಡಿಯುವ ಮೊದಲು ರುಬೆಲ್ಲಾ ಬೇನೆಯಿಂದ ಸಾಕಷ್ಟು ಸಾವು–ನೋವುಗಳಾಗುತ್ತಿದ್ದವು. 1969ರಲ್ಲಿ ರುಬೆಲ್ಲಾ ಲಸಿಕೆಯನ್ನು ಕಂಡುಹಿಡಿಯಲಾಯಿತು. ಇದಾದ ಮೇಲೆ ರುಬೆಲ್ಲಾ ಪ್ರಕರಣಗಳು ಕಡಿಮೆ ಆಗುತ್ತಹೋದವು. ಲಸಿಕೆ ನೀಡುವ ಪ್ರಕರಣಗಳು ಹೆಚ್ಚುತ್ತಾ ಹೋದಂತೆ ರುಬೆಲ್ಲಾ ಲಸಿಕೆಯನ್ನು ಎರಡು ಡೋಸ್‌ಗಳಲ್ಲಿ ನೀಡಲು ನಿರ್ಧರಿಸಲಾಯಿತು. ಆದರೆ ನಮ್ಮ ಭಾರತ ದೇಶದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರದ ವತಿಯಿಂದ ರುಬೆಲ್ಲಾ ಲಸಿಕೆಯನ್ನು ದಡಾರ ಲಸಿಕೆಯೊಂದಿಗೆ ಸೇರಿಸಿ MR ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ

ರುಬೆಲ್ಲಾ ಎಂಬ ದಡಾರದ ಲಕ್ಷಣ

ಬದಲಾಯಿಸಿ
 
ಬೆನ್ನಿನಲ್ಲಿ ರುಬೆಲ್ಲ ರಾಶ್ (crop)
  • ರುಬೆಲ್ಲಾ ವೈರಾಣುವಿನ ಸಂಪರ್ಕಕ್ಕೆ ಬಂದ 14ರಿಂದ 21 ದಿನಗಳಲ್ಲಿ ವ್ಯಕ್ತಿಗೆ ಜ್ವರ, ಗಂಟಲು ಕೆರೆತ, ಕಣ್ಣುಗಳು ಕೆಂಪಾಗಿ ಕಾಣುವುದು, ತಲೆನೋವು, ಮೈ ಕೈ ನೋವು, ಹಸಿವು ಕಡಿಮೆ ಆಗುವುದು, ದುಗ್ಧರಸಗ್ರಂಥಿಗಳಲ್ಲಿ ಊತ ಕಾಣಿಸಿಕೊಳ್ಳುವುದು. ಮೈ ಮೇಲೆ ಸಣ್ಣ ಸಣ್ಣ ಕೆಂಪು ಬಣ್ಣದ ಬೊಕ್ಕೆಗಳು ಮೊದಲು ಮುಖ ಹಾಗೂ ಕುತ್ತಿಗೆ ನಂತರ ಕೈ ಕಾಲುಗಳಲ್ಲಿ ಕಂಡು ಬರುವುದು. ಅದೇ ಸಮಯದಲ್ಲಿ ಬಾಯಿಯಲ್ಲಿಯೂ ಕೂಡ ಗುಲಾಬಿಬಣ್ಣದ ಸಣ್ಣ ಸಣ್ಣ ಬೊಕ್ಕೆಗಳು ಕಾಣುತ್ತವೆ. ಸಾಮಾನ್ಯವಾಗಿ ಈ ಬೊಕ್ಕೆಗಳು ಮೂರು ದಿನಗಳಲ್ಲಿ ಮಾಯವಾಗುತ್ತವೆ. ಶೇ. 25-40ರಷ್ಟು ಮಕ್ಕಳಲ್ಲಿ ಬೊಕ್ಕೆಗಳು ಇರುವುದಿಲ್ಲ.
 
Young boy displaying the characteristic maculopapular rash of rubella[]
  • ರುಬೆಲ್ಲಾ ಜ್ವರ ಫ್ಲೂವನ್ನು ಹೋಲುತ್ತದೆಮತ್ತು ಅದರ ಲಕ್ಷಣಗಳನ್ನು ಹೊಂದಿದೆ. ಆದಾಗ್ಯೂ, ರುಬೆಲ್ಲ ವೈರಸ್ ಸೋಂಕು ಪ್ರಾಥಮಿಕ ಲಕ್ಷಣದ ಮೂರು ದಿನಗಳ ನಂತರ ಕಡಿಮೆಯಾಗುವಿಕೆಗಳಂಥ ಲಕ್ಷಣ; (ಅದಕ್ಕಾಗಿ ಇದನ್ನು ಮೂರು ದಿನಗಳ ದಡಾರ ಎಂದು ಕರೆಯಲಾಗುತ್ತದೆ ) ದೇಹದ ಕೆಳಭಾಗಕ್ಕೆ ಬೆನ್ನು ಮತ್ತು ಇತರೆ ಅಂಗಗಳಿಗೆ ವ್ಯಾಪಿಸುತ್ತದೆ ಮತ್ತು ಮೊದಲು ಸಾಮಾನ್ಯವಾಗಿ ಮುಖದ ಮೇಲೆ ದದ್ದು /ದಡಸಲು/ ರಾಶ್ (exanthem) ಕಂಡುಬರುತ್ತದೆ. ಕೇಳ ಅಂಗಗಳಿಗೆ ಹರಡಿದಮೇಲೆ ಮುಖದ ದದ್ದು ಕಡಿಮೆಯಾಗುವುದು.[]
  • ತಲೆಯ ಹಿಂದಿನ, ಕಿವಿಯ ಹಿಂದಿನ ಹಾಗು ಕುತ್ತಿಗೆಯ ಮುಂಭಾಗದಲ್ಲಿನ ದುಗ್ಧರಸಗ್ರಂಥಿಗಳು ಮುಖ್ಯವಾಗಿ ಊದುಕೊಂಡಿರುತ್ತವೆ. ಶೇ. 90ರಷ್ಟು ಗರ್ಭಿಣಿಯ ಭ್ರೂಣಕ್ಕೆ ಇದು ಹಾನಿಯನ್ನು ಉಂಟುಮಾಡುತ್ತದೆ. ಈ ರೋಗವು ಸಾಮಾನ್ಯವಾಗಿ ದಡಾರ ರೋಗಲಕ್ಷಣಗಳಿಗೆ ಹೋಲುವುದುಂಟು. ಆದರೆ ಇದರಲ್ಲಿ Kopik Spots ಇರುವುದಿಲ್ಲ. ಅಲ್ಲದೆ ದಡಾರನಲ್ಲಿದ್ದ ಹಾಗೆ ಪ್ರಾರಂಭಿಕ ರೋಗಲಕ್ಷಣಗಳು ಇರುವುದಿಲ್ಲ; ಮತ್ತು ರುಬೆಲ್ಲಾದ ಲಕ್ಷಣಗಳು ಬೇಗ ಮಾಯಾವಾಗುತ್ತವೆ.[೪][]

ತಡೆಗಟ್ಟಲು ದಡಾರ–ರುಬೆಲ್ಲಾ ಲಸಿಕಾ ಅಭಿಯಾನ

ಬದಲಾಯಿಸಿ
  • ನಿಯತವಾಗಿ ಲಸಿಕೆ ನೀಡಿದರೂ ಸಹ ರೋಗದ ಪ್ರಕರಣಗಳು ಹೆಚ್ಚಾಗುತ್ತಿದನ್ನು ಮನಗಂಡು ಭಾರತ ಸರ್ಕಾರವು ಈ ವರ್ಷ ಫೆಬ್ರುವರಿ 7ರಿಂದ 28ರ ವರೆಗೆ ದಡಾರ–ರುಬೆಲ್ಲಾ ಲಸಿಕಾ ಅಭಿಯಾನವನ್ನು ಕೈಗೊಂಡಿದೆ.
  • ದಡಾರ–ರುಬೆಲ್ಲಾ ಲಸಿಕೆಯು ದಡಾರ ಮತ್ತು ರುಬೆಲ್ಲಾ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ. MR ಲಸಿಕೆಯನ್ನು ವಿಶೇಷ ಅಭಿಯಾನದ ಮೂಲಕ ರಾಜ್ಯದ ಒಂಬತ್ತು ತಿಂಗಳಿಂದ 15 ವರ್ಷದೊಳಗಿನ ಎಲ್ಲ ಮಕ್ಕಳಿಗೂ ನೀಡಲಾಗುತ್ತದೆ. ಈ ಅಭಿಯಾನವು ರಾಜ್ಯದ ಎಲ್ಲಾ ಶಾಲೆಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ಮತ್ತು ಎಲ್ಲ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಈ ಹಿಂದೆ ಲಸಿಕೆ ಪಡೆದಿದ್ದರೂ ಅಭಿಯಾನದ ಸಂದರ್ಭದಲ್ಲಿ MR ಲಸಿಕೆಯನ್ನು ನೀಡಬೇಕಾಗುತ್ತದೆ. ಸಾರ್ವಜನಿಕರು ತಮ್ಮ ಪ್ರದೇಶದಲ್ಲಿರುವ ಒಂಬತ್ತು ತಿಂಗಳಿಂದ 15 ವರ್ಷದ ಮಕ್ಕಳನ್ನು ಸಮೀಪದ ಲಸಿಕಾ ಕೇಂದ್ರಗಳಿಗೆ ಕರೆದುಕೊಂಡು ಹೋಗಬೇಕು. ಶಾಲೆಗೆ ಹೋಗುವ ತಮ್ಮ ಮಕ್ಕಳಿಗೆ ಶಾಲೆಯಲ್ಲಿ ದಡಾರ–ರುಬೆಲ್ಲಾ ಲಸಿಕೆಯನ್ನು ಪಡೆಯಲು ಅನುಮತಿಯನ್ನೂ ನೀಡಬೇಕು.
  • ಯಾವುದೇ ಅಡ್ಡಿ ಪರಿಣಾಮ ಕಂಡು ಬಂದಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ಇನ್ನಿತರ ಪಾಲಕರಿಗೂ ಸಹ ತಮ್ಮ ಮಕ್ಕಳಿಗೆ ಲಸಿಕೆ ಪಡೆಯಲು ಉತ್ತೇಜನ ನೀಡಿ, ಲಸಿಕಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಿಳಿಸಬೇಕು.

ಲಕ್ಷಣ ಮತ್ತು ಪರಿಣಾಮಗಳು

ಬದಲಾಯಿಸಿ

ರುಬೆಲ್ಲಾ ಯಾವುದೇ ವಯಸ್ಸಿನ ಯಾರಿಗಾದರೂ ಬರಬಹುದು. ಬೇನೆಯ ಸಾಮಾನ್ಯವಾಗಿ ಕಡಿಮೆ ತೀವ್ರತೆಯದು. ಶಿಶುಗಳಲ್ಲಿ ಅಪರೂಪದ ಅಥವಾ 40 ರ ಮೇಲಿನವರಿಗೆ ಸೋಂಕು ಕಡಿಮೆ. ಹೆಚ್ಚು ವಯಸ್ಸಿನ ೬೦ ವರ್ಷಕ್ಕೆ ಮೇಲ್ಪಟ್ಟವರಿಗೆ ಹೆಚ್ಚು ತೀವ್ರವಾಗಿರುತ್ತದೆ. ವ್ಯಕ್ತಿ ಲಕ್ಷಣಗಳು ಸಂಭವವಿದೆ ಮಾಡಬಹುದು. 60% ರಷ್ಟು ಹುಡುಗಿಯರು ಮತ್ತು ವೃದ್ಧ ಮಹಿಳೆಯರು ಕೀಲು ನೋವು ಅಥವಾ ರುಬೆಲ್ಲ ಜೊತೆ ಸಂಧಿವಾತದ ರೀತಿಯ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ . []

 
Generalized rash on the abdomen due to rubella
  • ಮಕ್ಕಳಲ್ಲಿ ರುಬೆಲ್ಲ ಸಾಮಾನ್ಯವಾಗಿ ಎರಡು ದಿನಗಳ ಕಾಲ ಇರುವುದು ಮತ್ತು ಇತರೆ ಲಕ್ಷಣಗಳು-ಚಿಹ್ನೆಗಳು ಸೇರಿದಂತೆ ಆರಂಭದಲ್ಲಿ ಇದು ಮುಖದ ಮೇಲೆ ದದ್ದುಗಳು/ರಾಶ್ ಆರಂಭವಾಗಿ ದೇಹದ ಉಳಿದಭಾಗಕ್ಕೆ ವ್ಯಾಪಿಸುತ್ತದೆ.
  • ಜ್ವರ 38.3 ° ಸಿ (101 ° F) ಗಿಂತ ಕಡಿಮೆ .
  • ಗರ್ಭಕಂಠದ ಲಿಂಫಡಿನೋಪತಿ ಹಿಂಭಾಗದ.
  • ದೊಡ್ಡ ಮಕ್ಕಳು ಮತ್ತು ವಯಸ್ಕರಲ್ಲಿ ಹೆಚ್ಚುವರಿ ಲಕ್ಷಣಗಳು ಇರಬಹುದು:
  • ಊದಿಕೊಂಡ ಗ್ರಂಥಿಗಳು
  • ಶೀತ (ಶೀತ ರೀತಿಯ ಲಕ್ಷಣಗಳು)
  • ಕೀಲುಗಳ ನೋವು (ವಿಶೇಷವಾಗಿ ಯುವ ಮಹಿಳೆಯರಲ್ಲಿ)
  • ಕೆಳಗೆ ಹೇಳಿದಂತೆ ಗಂಭೀರ ಸಮಸ್ಯೆಗಳನ್ನುಸಂಭವಿಸಬಹುದು:
  • ಮೆದುಳಿನ ಸೋಂಕುಗಳು
  • ರಕ್ತಸ್ರಾವದ ಸಮಸ್ಯೆ.
  • ಜನನ ದೋಷಗಳು (ಜನನಾಂಗಜಾತ)
  • ಕಣ್ಣಿನ ಪೊರೆಗಳು
  • ಗ್ಲುಕೋಮಾ
  • ಹೃದಯ ದೋಷಗಳು
  • ಕಿವುಡುತನ
  • ರುಬೆಲ್ಲಾ ದಲ್ಲಿ ಶೀತವು, ವೈರಲ್ ನ್ಯುಮೋನಿಯ ಅಥವಾ ಮಾಧ್ಯಮಿಕ ಬ್ಯಾಕ್ಟೀರಿಯಾದ ನ್ಯುಮೋನಿಯಾ ಆಗಿ ಪರಿವರ್ತಿತವಾಗಬಹುದು, ಮತ್ತು ಬ್ರಾಂಕೈಟಿಸ್ (ವೈರಲ್ ಬ್ರಾಂಕೈಟಿಸ್ ಅಥವಾ ದ್ವಿತೀಯಕ ಬ್ಯಾಕ್ಟೀರಿಯಾದ ಬ್ರಾಂಕೈಟಿಸ್ ಎರಡೂ ಆಗಬಹುದು.[]

ಗರ್ಭಿಣಿಯರಿಗೆ

ಬದಲಾಯಿಸಿ

ರುಬೆಲ್ಲಾ’ ವೈರಸ್‌ನಿಂದ ಉಂಟಾಗುವ ಸಾಂಕ್ರಾಮಿಕ ಸೋಂಕು; ಇದರಿಂದ ಜ್ವರ, ಗುಳ್ಳೆಗಳು, ಗಂಟಲ ಒಣಗುವಿಕೆ ಮತ್ತು ಗ್ರಂಥಿಗಳ ಊದುವಿಕೆಗಳು ಉಂಟಾಗುತ್ತವೆ. ಭಾರತದಲ್ಲಿ ರುಬೆಲ್ಲಾ ಸಾಮಾನ್ಯ ರೋಗನಿರೋಧಕ ಯೋಜನೆಯ ಅಂಗವಾಗಿರುವುದರಿಂದ ಇದು ಬಹಳ ವಿರಳವಾಗಿದೆ. ಆದರೆ ಗರ್ಭಾವಸ್ಥೆಯ ಮೊದಲ ಭಾಗದಲ್ಲಿ ಪ್ರಾಥಮಿಕ ರುಬೆಲ್ಲಾ ಉಂಟಾದರೆ, ಮಗುವಿಗೆ, ದೃಷ್ಟಿಹೀನತೆ ಮತ್ತು ಬುದ್ಧಿಮಾಂದ್ಯತೆ ಸೇರಿದಂತೆ ಗಂಭೀರವಾದ ಸಮಸ್ಯೆಗಳು ಎದುರಾಗಬಹುದು. ಗರ್ಭಾವಸ್ಥೆಯ ಕೊನೆಯ ಭಾಗದಲ್ಲಾದರೆ, ಇದರಿಂದ ಅವಧಿಪೂರ್ವ ಹೆರಿಗೆಯಾಗಬಹುದು.[]

ತಡೆಗಟ್ಟುವ ದಾರಿ

ಬದಲಾಯಿಸಿ
  • ರೋಗ ತಡೆಗಟ್ಟುವಿಕೆಗೆ ಮುಂದಾಗಿ ಲಚಿಕೆ ಕೊಡಿಸುವುದು ಒಂದೇ ದಾರಿ. ಆದ್ದರಿಂದ ಸೂಕ್ತಸಮಯದಲ್ಲಿ ಮಕ್ಕಳಿಗೆ ಲಸಿಕೆ ಚುಚ್ಚುಮದ್ದು ಕೊಡಿಸಬೇಕು. ಈಗ ಭಾರತ ಸರ್ಕಾರ ದಡಾರದ ಲಸಿಕೆಯೊಂದಿಗೆ ರುಬೆಲ್ಲಾ ತಡೆಗಟ್ಟುವ ಲಸಿಕೆಯನ್ನೂಕೊಡುತ್ತಿದೆ.
  • ಈ ಮೊದಲು ಮೀಸಲ್ಸ್‌ನ ಮೊದಲನೆಯ ಡೋಸ್ ಅನ್ನು 9–12 ತಿಂಗಳಲ್ಲಿ ನೀಡಬೇಕೆಂದು ನಮ್ಮ ರಾಷ್ಟ್ರೀಯ ಲಸಿಕಾ ವೇಳಾಪಟ್ಟಿಯಲ್ಲಿ ಇತ್ತು. ಆದರೆ ದಡಾರ ಪ್ರಕರಣಗಳು ಹೆಚ್ಚು ಕಂಡು ಬಂದ ಹಿನ್ನಲೆಯಲ್ಲಿ ಸರ್ಕಾರವು ಎರಡನೆಯ ಡೋಸ್‌ ದಡಾರ/ರುಬೆಲ್ಲಾ ಲಸಿಕೆಯನ್ನು 16–18 ವಾರದಲ್ಲಿ ನೀಡಲು ಪ್ರಾರಂಭಿಸಿತ್ತು. ರುಬೆಲ್ಲಾ ಬೇನೆ ಕಾಣಿಸಿಕೊಂಡ ನಂತರ ವೈದ್ಯರ ಮೇಲ್ವಿಚಾರಣೆಯಲ್ಲಿ ತೀವ್ರತೆ ಕಡಿಮೆ ಮಾಡಬಹುದು.

ಶಿವಮೊಗ್ಗದಲ್ಲಿ ಅಭಿಯಾನ

ಬದಲಾಯಿಸಿ
  • ದಡಾರ ಮತ್ತು ರುಬೆಲ್ಲಾ ಕಾಯಿಲೆ ಮಕ್ಕಳು ಮತ್ತು ಗರ್ಭಿಣಿಯರಿಗೆ ಹರಡುತ್ತದೆ ಎಂದು ಈಗಾಗಲೇ ಲಸಿಕೆ ಹಾಕಲಾಗಿದೆ. ಯುವಜನರಿಗೂ ಕಾಯಿಲೆ ಹರಡುವ ಸಾಧ್ಯತೆ ಇದೆ. ಹಾಗಾಗಿ, ಪಿಯು ವಿದ್ಯಾರ್ಥಿಗಳಿಗೂ ಲಸಿಕೆ ವಿಸ್ತರಣೆ ಮಾಡುವುದು ಸೂಕ್ತ ಎಂದು ಹೇಳಿದರು. ಪಿಯು ವಿದ್ಯಾರ್ಥಿಗಳಿಗೂ ರೋಗ ನಿರೋಧಕ ಲಸಿಕೆ ಹಾಕಲು ಅವಕಾಶ ನೀಡುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆಯಬೇಕು ಎಂದು ಜಿಲ್ಲಾಧಿಕಾರಿ ಎಂ.ಲೋಕೇಶ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚಿನೆ ನೀಡಿದ್ದಾರೆ.[]

ಉಲ್ಲೇಖ

ಬದಲಾಯಿಸಿ
  1. http://phil.cdc.gov/phil/details.asp%7Cwebsite=Center[permanent dead link] for Disease Control and Prevention|accessdate=24 May 2015|date=1966}}
  2. Edlich RF, Winters KL, Long WB, Gubler KD (2005). "Rubella and congenital rubella (German measles)". J Long Term Eff Med Implants. 15 (3): 319–28.
  3. Rubella (German Measles, Three-Day Measles)
  4. Robert R. Jarrett. "Numbered Diseases of Childhood: THIRD Disease – Rubella". Pediatric House Calls. Retrieved April 30, 2015.
  5. Rubella — commonly known as German measles
  6. "ಗರ್ಭಾವಸ್ಥೆ: ಸಂತಸದ ಸಮಯ ಎಚ್ಚರಿಕೆ ಸಮಯ". Archived from the original on 2017-02-10. Retrieved 2017-02-11.
  7. ಪಿಯು ವಿದ್ಯಾರ್ಥಿಗಳಿಗೂ ರುಬೆಲ್ಲಾ, ದಡಾರ ಲಸಿಕೆ;ಪ್ರಜಾವಾಣಿ ವಾರ್ತೆ;22 Mar, 2017