ರಾಷ್ಟ್ರೀಯ ವರಮಾನ
ವರಮಾನದ ಲೆಕ್ಕಾಚಾರ ವಿಧಾನಗಳುಯಾವುದೇ ರಾಷ್ಟ್ರದ ಜನತೆಯ ಕಲ್ಯಾಣವು ಆ ರಾಷ್ಟ್ರವು ಉತ್ಪಾದಿಸುವ ಸರಕು ಸೇವೆಗಳ ಪ್ರಮಾಣ,ಅವುಗಳ ಸಂಯೋಜನ ಮತ್ತು ಅವುಗಳ ಹಂಚಿಕೆಗಳನ್ನು ಅವಲಂಬಿಸಿರುತ್ತದೆ.ಒಂದು ವರ್ಷದಲ್ಲಿ ರಾಷ್ಟ್ರವು ಉತ್ಪಾದಿಸುವ ಸರಕು ಸೇವೆಗಳ ಒಟ್ಟು ಮೌಲ್ಯವೇ ಆ ರಾಷ್ಟ್ರದ ರಾಷ್ಟ್ರೀಯ ವರಮಾನವಾಗಿದೆ.ಇತರ ಸ್ಥಿತಿ-ಗತಿಳೆಲ್ಲವೂ ಸ್ಥಿರವಾಗಿದ್ದು,ರಾಷ್ಟ್ರೀಯ ವರಮಾನವು ಅಧಿಕವಾಗುತ್ತಿದ್ದರೆ,ಜನತೆಯ ಕಲ್ಯಾಣವು ಅಧಿಕವಾಗುತ್ತಿರುತ್ತದೆ.
ರಾಷ್ಟ್ರೀಯ ವರಮಾನದ ಅರ್ಥವಿವರಣೆ
ಬದಲಾಯಿಸಿರಾಷ್ಟ್ರೀಯ ವರಮಾನವನ್ನು ವಿವಿಧ ಅರ್ಥಶಾಸ್ತ್ರಜ್ಞರು ವಿವಿಧ ರೀತಿಯಲ್ಲಿ ನಿರೂಪಿಸಿದ್ದಾರೆ. ರಾಷ್ಟ್ರದಲ್ಲಿ ಒಂದು ವರ್ಷದ ಅವಧಿಯಲ್ಲಿ ಉತ್ಪಾದಿಸಿದ ಎಲ್ಲಾ ಸರಕು ಸೇವೆಗಳ ಹಣದ ಮೌಲ್ಯಕ್ಕೆ ರಾಷ್ಟ್ರೀಯ ವರಮಾನವೆಂದು ಕರೆಯುತ್ತಾರೆ. ಮಾರ್ಷಲ್ ಅವರು ರಾಷ್ಟ್ರೀಯ ವರಮಾನದ ವ್ಯಾಖ್ಯೆಯನ್ನು ಹೀಗೆ ನೀಡಿದ್ದಾರೆ. "ಒಂದು ರಾಷ್ಟ್ರದ ಕಾರ್ಮಿಕರು ಮತ್ತು ಬಂಡವಾಳದಾರರು ಕೂಡಿ ಅಲ್ಲಿನ ನೈಸರ್ಗಿಕ ಸಂಪನ್ಮೂಲಗಳನ್ನು ಉಪಯೋಗಿಸಿ,ಪ್ರತಿವರ್ಷ ಭೌತಿಕ ವಸ್ತುಗಳನ್ನು ಮತ್ತು ಎಲ್ಲಾ ವಿಧವಾದ ಸೇವೆಗಳನ್ನು ಒಂದು ನಿವ್ವಳ ಪ್ರಮಾಣದಲ್ಲಿ ಉತ್ಪಾದಿಸುತ್ತಾರೆ.ಇದೇ ರಾಷ್ಟ್ರದ ನಿಜವಾದ ನಿವ್ವಳ ವಾರ್ಷಿಕ ವರಮಾನವಾಗಿದೆ." ಮಾರ್ಷಲ್ ಅವರು 'ನಿವ್ವಳ' ಶಬ್ದವನ್ನು ಉಪಯೋಗಿಸಿರುವುದು ಮಹತ್ವದಾಗಿದೆ. ಉತ್ಪಾದನೆಯಲ್ಲಿ ಉಪಯೋಸಿದ ಬಂಡವಾಳ ಸರಕುಗಳ ಸವೆತವನ್ನು ಮತ್ತು ದುರಸ್ಥಿಯ ಹಾಗೂ ಬದಲಾವಣೆಗಳ ವೆಚ್ಚವನ್ನು ಒಟ್ಟು ರಾಷ್ಟ್ರೀಯ ವರಮಾನದಿಂದ ಕಳೆದರೆ ನಿವ್ವಳ ರಾಷ್ಟ್ರೀಯ ವರಮಾನ ಬರುತ್ತದೆ.
ಎ.ಸಿ.ಪೀಗೂ ಅವರು ನೀಡಿದ ರಾಷ್ಟ್ರೀಯ ವರಮಾನದ ವ್ಯಾಖ್ಯೆ ಈ ರೀತಿಯಾಗಿದೆ:"ವಿದೇಶಗಳಿಂದ ಬರುವ ಆದಾಯವನ್ನೊಳಗೊಂಡ ಸಮಾಜದ ಭೌತಿಕ ವರಮಾನವನ್ನು ಹಣದ ರೂಪದಲ್ಲಿ ಅಳೆದಾಗ,ದೊರೆಯುವ ಆದಾಯವೇ ರಾಷ್ಟ್ರೀಯ ವರಮಾನ".ಹೀಗೆ ಪೀಗೂ ಮತ್ತು ಮಾರ್ಷಲ್ ಅವರು ರಾಷ್ಟ್ರೀಯ ವರಮಾನವನ್ನು ಉತ್ಪಾದನೆಯ ಮೂಲಕ ವ್ಯಾಖ್ಯಾನಿಸಿದ್ದಾರೆ.ಆದುದರಿಂದ ಅವರ ವ್ಯಾಖ್ಯೆಗಳ ನಡುವೆ ಸ್ವಾಮ್ಯವನ್ನು ಕಾಣಬಹುದು.
ಮೇಲೆ ಕೊಟ್ಟ ಹಲವಾರು ವ್ಯಾಖ್ಯೆಗಳಿಂದ,ರಾಷ್ಟ್ರೀಯ ವರಮಾನವು ಕೆಳಗೆ ಕೊಟ್ಟ ಅಂಶಗಳನ್ನು ಒಳಗೊಂಡಿರುತ್ತದೆ. ಅ)ರಾಷ್ಟ್ರೀಯ ವರಮಾನವು ಒಂದು ದೇಶಕ್ಕೆ ಸಂಬಂಧಿಸಿದ ಹಣದ ರೂಪದ ವರಮಾನವಾಗಿದೆ. ಆ)ಸಾಮಾನ್ಯವಾಗಿ ಅದು ಒಂದು ವರ್ಷದ ಅವಧಿಯಲ್ಲಿ ಉತ್ಪಾದಿಸಿದ ಸರಕು ಮತ್ತು ಸೇವೆಗಳ ಹಣದ ಮೌಲ್ಯಕ್ಕೆ ಸಮವಾಗಿರುತ್ತದೆ. ಇ)ರಾಷ್ಟ್ರೀಯವರಮಾನವನ್ನು ಲೆಕ್ಕ ಮಾಡುವಾಗ ಯಾವುದೇ ವಸ್ತುವನ್ನಾಗಲಿ ಅಥವ ಸರಕನ್ನಾಗಲಿ ಒಂದೇ ಬಾರಿ ಗಣನೆಗೆ ತೆಗೆದುಕೊಳ್ಳಬೇಕು. ಈ)ವಿದೇಶಗಳಿಂದ ಬರಬೇಕಾದ ನಿವ್ವಳ ಆದಾಯವನ್ನು ಅದರಲ್ಲಿ ಸೇರಿಸಬೇಕು ಮತ್ತು ವಿದೇಶಗಳಿಗೆ ಕೊಡಬೇಕಾದ ಸಾಲವನ್ನು ಅದರಲ್ಲಿ ಕಳೆಯಬೇಕು. ಉ)ಉತ್ಪಾದನೆಯಲ್ಲಿ ಉಪಯೋಗಿಸಿದ ಬಂಡವಾಳ ಸರಕುಗಳ ಸವೆತ ಮತ್ತು ದುರಸ್ಥಿ ಹಾಗೂ ಬದಲಾವಣೆಗಳ ವೆಚ್ಚಗಳನ್ನು ಅದರಲ್ಲಿ ಕಳೆಯಬೇಕು.
ರಾಷ್ಟ್ರೀಯ ವರಮಾನವನ್ನು ಅಳೆಯುವ ವಿಧಾನಗಳು
ಬದಲಾಯಿಸಿರಾಷ್ಟ್ರೀಯ ವರಮಾನವನ್ನು ಅಳೆಯಲು ಮೂರು ವಿಧಾನಗಳಿವೆ ಅವು ಯಾವುವೆಂದರೆ:-
೧)ಉತ್ಪನದ ಗಣತಿ ವಿಧಾನ ೨)ವರಮಾನದ ಗಣತಿ ವಿಧಾನ ಮತ್ತು ೩)ವೆಚ್ಚದ ಗಣತಿ ವಿಧಾನ
೧)ಉತ್ಪನದ ಗಣತಿ ವಿಧಾನ(Census of production method):ಈ ವಿಧಾನದ ಪ್ರಕರಾ,ರಾಷ್ಟ್ರದಲ್ಲಿ ಒಂದು ವರ್ಷದ ಅವಧಿಯಲ್ಲಿ ಉತ್ಪಾದಿಸಿದ ಅಂತಿಮ ಬಳಕೆಯ ಅನುಭೋಗಿ ಮತ್ತು ಬಂಡವಾಳ ಸರಕುಗಳ ಮತ್ತು ಎಲ್ಲ ಪ್ರಕಾರದ ಸೇವೆಗಳ ಮಾರುಕಟ್ಟೆಯ ಮೌಲ್ಯವನ್ನು ಕೂಡಿಸುವದರಿಂದ ಮತ್ತು ಅದರಲ್ಲಿ ವಿದೇಶಗಳಿಂದ ಬರುವ ನಿವ್ವಳ ಆದಾಯವನ್ನು ಸೇರಿಸುವುದರಿಂದ,ರಾಷ್ಟ್ರೀಯ ವರಮಾನ ಗೊತ್ತಾಗುತ್ತದೆ.ಇದು ಒಟ್ಟು ರಾಷ್ಟ್ರೀಯ ವರಮಾನವಾಗಿದ್ದರಿಂದ, ಅದರಲ್ಲಿ ಬಂಡವಾಳ ಸರಕುಗಳ ಸವೆತ ಮತ್ತು ದುರಸ್ಥಿ ಹಾಗೊ ಬದಲಾವಣೆಗಳ ವೆಚ್ಚಗಳನ್ನು ಕಳೆದರೆ ರಾಷ್ಟ್ರೀಯ ವರಮಾನ ಗೊತ್ತಾಗುತ್ತದೆ.
ಈ ವಿಧಾನದ ಪ್ರಕಾರ,ರಾಷ್ಟ್ರೀಯ ವರಮಾನವನ್ನು ಕಂಡುಹಿಡಿಯಲು ಅರ್ಥವ್ಯವಸ್ಥೆಯನ್ನು ೧)ಉದ್ದಿಮೆ ವಲಯ ೨)ನೇರ ಸೇವೆಗಳ ವಲಯ ಮತ್ತು ೩)ವಿದೇಶಿ ವ್ಯಾಪಾರ ವಲಯ ಎಂದು ಮೂರು ವಿಧವಾಗಿ ವಿಂಗಡಿಸಲಾಗಿದೆ. ಉದ್ಯಮ ವಲಯದಲ್ಲಿ ಕೃಷಿ,ಕೈಗಾರಿಕೆ.ಗಣಿ,ಉದ್ದಿಮೆ,ಮೀನುಗಾರಿಕೆ,ಅರಣ್ಯ,ವ್ಯಾಪರ,ಸಾರಿಗೆ,ಲೋಕೋಪಯೋಗಿ ಮೊದಲಾದವು ಸೇರಿರುತ್ತವೆ.ನೇರ ಸೇವೆಗಳ ವಲಯದಲ್ಲಿ ಅನುಭೋಗಿಗಳಿಗೆ ನೇರ ಸೇವೆ ಸಲ್ಲಿಸುವ ಗಾಯಕರು,ನಾಟಕಕಾರರು,ಶಿಕ್ಷಕರು,ವಕೀಲರು,ವ್ಯೆದ್ಯರು,ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳ ಸೇವಕರು ಮೊದಲಾದವರ ಸೇವೆಗಳು ಸೇರಿರುತ್ತವೆ.ವಿದೇಶಿ ವ್ಯಾಪರ ವಲಯದಲ್ಲಿ ವಿದೇಶಗಳಿಂದ ಬರುವ ನಿವ್ವಳ ಆದಾಯವನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಈ ವಿಧಾನದಿಂದ ರಾಷ್ಟ್ರೀಯ ವರಮಾನವನ್ನು ಕಂಡುಹಿಡಿಯುವುದು ಬಹಳ ಉಪಯುಕ್ತವಾಗಿದೆ.ಏಕೆಂದರೆ ಇದರಿಂದ ಯಾವ ಯಾವ ವಲಯದಿಂದ ಮತ್ತು ಯಾವ ಉದ್ಯಮಗಳಿಂದ ಎಷ್ಟು ವರಮಾನವು ಬಂದಿತೆಂಬುದು ಮತ್ತು ಯಾವ ವಲಯ ಅಥವಾ ಉದ್ಯಮವು ಹೆಚ್ಚು ಪ್ರಾಧಾನ್ಯವಾಗಿದೆಯೆಂಬುದು ಗೊತ್ತಾಗುತ್ತದೆ.
೨)ವರಮಾನದ ಗಣತಿ ವಿಧಾನ (Income method);ಈ ವಿಧಾನದ ಪ್ರಕಾರ,ರಾಷ್ರ್ಟದಲ್ಲಿನ ಎಲ್ಲ ವ್ಯಕ್ತಿಗಳು ಒಂದು ವರ್ಷದ ಅವಧಿಯಲ್ಲಿ ಉತ್ಪಾದನೆಯಲ್ಲಿ ಭಾಗವಹಿಸುವದರಿಂದ ಪಡೆಯುವ ವರಮಾನಗಳನ್ನು ಕೊಡಿಸುವದರಿಂದ ರಾಷ್ಟ್ರೀಯ ವರಮಾನವು ಗೊತ್ತಾಗುತ್ತದೆ.ಉತ್ಪಾದನೆಯಲ್ಲಿ ಭಾಗವಹಿಸುವವರನ್ನು ಭೊ-ಮಾಲೀಕರು,ಕಾರ್ಮಿಕರು,ಬಂಡವಾಳದಾರರು ಮತ್ತು ಉತ್ಪಾದಕರು ಎಂದು ವರ್ಗೀಕರಿಸಿ,ಅವರು ಪಡೆಯುವ ಗೇಣಿ,ಕೂಲಿ,ಬಡ್ಡಿ ಮತ್ತು ಲಾಭಗಳನ್ನು ಕೂಡಿಸುವದರಿಂದ ರಾಷ್ಟ್ರೀಯ ವರಮಾನ ಗೊತ್ತಾಗುತ್ತದೆ.ಇವುಗಳೊಂದಿಗೆ,ವಿದೇಶಗಳಲ್ಲಿನ ಹೊಟೆಯ ಮೇಲಿನ ಆದಾಯವನ್ನು ಸೇರಿಸಬೇಕಾಗುತ್ತದೆ.
ರಾಷ್ಟ್ರೀಯ ವರಮಾನ=ಗೇಣಿ+ಕೂಲಿ(ವೇತನ)+ಬಡ್ಡಿ+ಲಾಭ+ವಿದೇಶಿ ಹೊಟೆಯ ಮೇಲಿನ ಆದಾಯ.
ಈ ವಿಧಾನದಿಂದ ರಾಷ್ಟ್ರೀಯ ವರಮಾನವು ವಿವಿಧ ಉತ್ಪಾದನಾಂಗಗಳಲ್ಲಿ ಹೇಗೆ ಹಂಚಿ ಹೋಗಿದೆ, ಯಾವ ಉತ್ಪಾದನಾಂಗವು ಹೆಚ್ಚಿನ ಪಾಲನ್ನು ಪಡೆಯುತ್ತಿದೆ ಎಂಬುದು ಗೊತ್ತಾಗುತ್ತದೆ.ಆದರೆ ಈ ವಿಧಾನವನ್ನು ಅನುಸರಿಸುವಾಗ,ನಿರುದ್ಯೋಗ ವೇತನ,ಅನಾರೋಗ್ಯ ವೇತನ,ಮೊದಲಾದ ವರ್ಗಾವಣೆಯ ಕೊಡುಗೆಗಳನ್ನು ಮತ್ತು ಹಣದ ಮೂಲಕ ಅಳೆಯಲಾಗದ ಸರಕು-ಸೇವೆಗಳ ಮೌಲ್ಯವನ್ನು ಲೆಕ್ಕದಲ್ಲಿ ಹಿಡಿಯಬಾರದು.
೩)ವೆಚ್ಚದ ಗಣತಿ ವಿಧಾನ(Expenditure method):ಈ ವಿಧಾನದ ಪ್ರಕಾರ, ರಾಷ್ಟ್ರದಲ್ಲಿನ ಎಲ್ಲ ಜನರು ಒಂದು ವರ್ಷದ ಅವಧಿಯಲ್ಲಿ ಮಾಡಿದ ಒಟ್ಟು ವೆಚ್ಚವನ್ನು ಕೂದಿಸಿದರೆ, ರಾಷ್ಟ್ರೀಯ ವರಮಾನ ಗೊತ್ತಾಗುತ್ತದೆ.ಜನರು ತಮ್ಮ ಆದಯವನ್ನು ಎರಡು ವಿಧವಾಗಿ ಉಪಯೋಗಿಸುತ್ತಾರೆ.೧)ಹೆಚ್ಚಿನ ಭಾಗವನ್ನು ಅನುಭೋಗಿ ಸರಕುಗಳ ಮೇಲೆ ವೆಚ್ಚ ಮಾಡುತ್ತಾರೆ.೨)ಉಳಿದ ಭಾಗವನ್ನು ಉಳಿತಾಯ ಮಾಡುತ್ತಾರೆ.ಉಳಿತಾಯವನ್ನು ಉದ್ಯಮ ಸಂಸ್ಥೆಗಳು ಸಾಲದ ರೂಪದಲ್ಲಿ ಪಡೆದುಕೊಂಡು, ಹೂಟೆಯಾಗಿ ಪರಿವರ್ತಿಸುತ್ತವೆ.ಆದುದರಿಂದ ಜನರ ಅನುಭೋಗದ ವೆಚ್ಚ ಮತ್ತು ಉಳಿತಾಯಗಳನ್ನು ಅಥವಾ ಜನರ ಅನುಭೊಗದ ವೆಚ್ಚ ಮತ್ತು ಹೂಟೆಯ ಮೊತ್ತಗಳನ್ನು ಕೊಡಿಸಿದರೆ ರಾಷ್ಟ್ರೀಯ ವರಮಾನ ಗೊತ್ತಾಗುತ್ತದೆ.
ಈ ವಿಧಾನದ ಮೂಲಕ ರಾಷ್ಟ್ರೀಯ ವರಮಾನವನ್ನು ಕಂಡುಹಿಡಿಯಬೇಕಾದರೆ, ಖಾಸಗಿ ಹಾಗೂ ಸರಕಾರದ ಅನುಭೋಗಿ ಮತ್ತು ಹೂಟೆಯ ವೆಚ್ಚಗಳನ್ನು ಲೆಕ್ಕದಲ್ಲಿ ಹಿಡಿಯಬೇಕಗುತ್ತದೆ.ಮತ್ತು ವಿದೇಶಗಳಲ್ಲಿನ ನಿವ್ವಳ ಹೂಟೆಯ ವೆಚ್ಚವನ್ನೂ ಸೇರಿಸಬೇಕಾಗುತ್ತದೆ.ಆದರೆ ಜನರು ಸಾಮಾನ್ಯವಾಗಿ ತಮ್ಮ ಅನುಭೋಗದ ವೆಚ್ಚದ ಲೆಕ್ಕವನ್ನು ಇಟ್ಟಿರುವದಲ್ಲವಾದ್ದದರಿಂದ ಇದನ್ನು ಅನುಸರಿಸುವುದು ಸುಲಭವಾಗುವುದಿಲ್ಲ.
ರಾಷ್ಟ್ರೀಯ ವರಮಾನವನ್ನು ಅಳೆಯುವಾಗ ಎದುರಿಸಬೇಕಾದ ತೊಂದರೆಗಳು
ಬದಲಾಯಿಸಿರಾಷ್ಟ್ರೀಯ ವರಮಾನವನ್ನು ಸರಿಯಾಗಿ ಸಮರ್ಪಕವಾಗಿ ಅಂದಾಜು ಮಾಡಬೇಕಾದರೆ,ಉತ್ಪಾದನೆಯ ಮತ್ತು ಹಂಚಿಕೆಯ ಬಗೆಗೆ ವಿವರವಾದ, ಸರಿಯಾದ ನಂಬಲರ್ಹವಾದ ಅಂಕಿ-ಅಂಶಗಳು ಲಭ್ಯವಿರಬೇಕಾಗುತ್ತದೆ. ರಾಷ್ಟ್ರೀಯ ವರಮಾನವನ್ನು ಅಳೆಯುವಾಗ ಎದುರಿಸಲ್ಪಡುವ ತೊಂದರೆಗಳನ್ನು ಕೆಳಗೆ ವಿವರಿಸಲಾಗಿದೆ.
- ಅಮೌಲ್ಯೀಕರಣ ವಲಯದ ಅಸ್ತಿತ್ವ: ಕೆಲವೊಂದು ಉತ್ಪಾದನಾ ಚಟುವಟಿಕೆಗಳು ಮತ್ತು ಸೇವೆಗಳು ಹಣದ ವಿನಿಮಯಕ್ಕೆ ಒಳಗಾಗುವುದಿಲ್ಲ.ಇನ್ನು ಕೆಲವು ಸೇವೆಗಳ ಮೌಲ್ಯವನ್ನು ಕಂಡುಹಿಡಿಯುವುದು ತುಂಬಾ ಕಠಿಣ.ಸ್ವಂತಕ್ಕಾಗಿ ಬಳಸಿದ ಇಲ್ಲವೆ ಇತರ ವಸ್ತುಗಳಿಗೆ ವಿನಿಮಯ ಮಾಡಿದ ಸರಕುಗಳ ಮತ್ತು ಉಚಿತವಾಗಿ ಸಲ್ಲಿಸಿದ ಇಲ್ಲವೆ ಹಣದ ಅಳತೆಗೋಲಿನಿಂದ ಅಳೆಯಲು ಬಾರದ ಸೇವೆಗಳ ಮೌಲ್ಯವು ರಾಷ್ಟ್ರೀಯ ವರಮಾನದಲ್ಲಿ ಸೇರುವುದಿಲ್ಲವಾದ್ದರಿಂದ, ಸರಿಯಾದ ರಾಷ್ಟ್ರೀಯ ವರಮಾನವನ್ನು ಕಂದುಕಿದಿಯಲು ಸಾಧ್ಯವಗುವುದಿಲ್ಲ.
- ದ್ವಿ-ಗುಣಿತದ ತೊಂದರೆ: ರಾಷ್ಟ್ರೀಯ ವರಮಾನವನ್ನು ಅಂದಾಜು ಮಾಡುವಾಗ ಒಂದೇ ವಸ್ತುವನ್ನು ಎರಡು ಸಲ ಎಣಿಕೆ ಮಾದುವ ಸಂದರ್ಭವಿರುತ್ತದೆ.ಹಾಗೆ ಮಾಡಿದರೆ, ನಾವು ಅಂದಜು ಮಾಡಿದ ರಾಷ್ಟ್ರೀಯ ವರಮಾನವು ಸರಿಯಾಗುವುದಿಲ್ಲ.
- ಶ್ರಮ ವಿಭಜನೆ ಮತ್ತು ವ್ಯೆಶಿಷ್ಠ್ಯಗಳ ಅಭಾವ: ಒಂದೇ ವ್ಯಕ್ತಿಯು ಹಲವಾರು ಕಸಬುಗಳನ್ನು ಕೈಕೊಂಡು ತನ್ನ ಉಪಜೀವನ ಸಾಗಿಸುವದರಿಂದ ಅವನು ವಿವಿಧ ಕಸಬುಗಳಿಂದ ಪಡೆಯುವ ಆದಾಯವನ್ನು ಲೆಕ್ಕಮಾದುವದು ಕಠಿಣವಾಗುತ್ತದೆ.ಹೀಗೆ ಹಲವಾರು ವ್ಯಕ್ತಿಗಳು ವಿವಿಧ ಮೂಲಗಳಿಂದ ಪಡೆಯುವ ಆದಾಯದ ಲೆಕ್ಕವು ಸಿಗುವದಿಲ್ಲವಾದ್ದರಿಂದ ಸರಿಯಾದ ರಾಷ್ಟ್ರೀಯ ವರಮಾನವನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ.
- ಅಂಕಿ ಆಂಶಗಳ ಅಭಾವ": ಹಿಂದುಳಿದ ರಾಷ್ಟ್ರಗಳಲ್ಲಿ ಎಲ್ಲ ಪ್ರಕಾರದ ಉತ್ಪಾದನೆಯ ಮತ್ತು ಹಂಚಿಕೆಯ ಅಂಕಿ-ಅಂಶಗಳು ದೊರೆಯುವದು ಕಠಿಣ.ಇಂತಹ ಸಂದರ್ಭಗಳಲ್ಲಿ ಕೇವಲ ಅಂದಾಜಿನ ಮೇಲೆ ಅಂಕಿ-ಅಂಶಗಳನ್ನು ಸಂಗ್ರಹಿಸಿ,ರಾಷ್ಟ್ರೀಯ ವರಮಾನವನ್ನು ಎಣಿಕೆ ಮಾಡಬೇಕಾಗುತ್ತದೆ.ಈ ರೀತಿ ತಯಾರಿಸಿದ ರಾಷ್ಟ್ರೀಯ ವರಮಾನದ ಅಂದಾಜುಗಳು ಸಮರ್ಪಕವಾಗಿರುವುದಿಲ್ಲ.
- ಅಂಕಿ ಆಂಶಗಳನ್ನು ಸಂಗ್ರಹಿಸುವ ಸಂಸ್ಥೆಗಳ ಅಭಾವ: ಹಿಂದುಳಿದ ರಾಷ್ಟ್ರಗಳಲ್ಲಿ ಎಲ್ಲ ಪ್ರಕಾರದ ಉತ್ಪಾದನೆಯ ಮತ್ತು ಹಂಚಿಕೆಯ ಅಂಕಿ-ಅಂಶಗಳನ್ನು ಸಂಗ್ರಹಿಸುವ ಸಂಸ್ಥೆಗಳ ಸರಿಯಾದ ವ್ಯವಸ್ಥೆ ಇರುವುದಿಲ್ಲ .ಕೃಷಿ, ಗುಡಿ-ಕೈಗಾರಿಕೆ, ಚಿಕ್ಕ ಉದ್ದಿಮೆ ಮೊದಲಾದ ವಲಯಗಳಲ್ಲಿ ನಿರತರಾದವರ ಮತ್ತು ವಿವಿದ ವೃತ್ತಿಗಳಲ್ಲಿ ತೊಡಗಿದವರ ಆದಯ ಮತ್ತು ವೆಚ್ಚದ ವಿವರಗಳನ್ನು ಹಾಗೂ ಅವರ ಉಳಿತಾಯದ ಸರಿಯಾದ ಅಂಕಿ- ಅಂಶಗಳನ್ನು ಸಂಗ್ರಹಿಸುವುದು ಕಠಿಣವಾದ ಕೆಲಸವಾಗಿದೆ. ಇಂತಹ ಸಂದರ್ಭಗಳಲ್ಲಿ ಊಹೆಗಳ ಮೂಲಕವೇ ಅಂಕಿ- ಅಂಶಗಳನ್ನು ಸಂಗ್ರಹಿಸಬೇಕಾಗುತ್ತದೆ.
ರಾಷ್ಟ್ರೀಯ ವರಮಾನದ ಅಸಮಾನ ಹಂಚಿಕೆ
ಬದಲಾಯಿಸಿಉತ್ಪಾದನೆಯಲ್ಲಿ ತೊಡಗಿದ ವಿವಿಧ ಉತ್ಪಾದನಾಂಗಗಳ ಮಾಲಿಕರಿಗೆ ಅವರು ನಿರ್ವಹಿಸುವ ಕಾರ್ಯಕ್ಕನುಗುಣವಾಗಿ ವಿವಿಧ ಪ್ರಕಾರವಾಗಿ ಪ್ರತಿಫಲವನ್ನು ಕೊಡಲಾಗುತ್ತದೆ.ಇದರಿಂದ ಉತ್ಪಾದನೆಯಿಂದ ಬರುವ ವರಮಾನವು ಸಮಾಜದ ವಿವಿಧ ವರ್ಗಗಳ ಜನರಲ್ಲಿ ಅಸಮಾನವಾಗಿ ಹಂಚಿಹೋಗುತ್ತದೆ.
=ರಾಷ್ಟ್ರೀಯ ವರಮಾನದ ಅಸಮಾನ ಹಂಚಿಕೆಯ ಕಾರಣಗಳು
ಬದಲಾಯಿಸಿ- ಖಾಸಗಿ ಆಸ್ತಿಯ ಹಕ್ಕು: ಈ ಅರ್ಥವ್ಯವಸ್ಥೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಬೇಕಾದಷ್ಟು ಆಸ್ತಿಯನ್ನು ಹೊಂದುವ ಹಕ್ಕಿದ್ದರೂ,ಕೇವಲ ಕೆಲವೇ ಜನರಿಗೆ ಅದನ್ನು ಹೊಂದಲು ಸಾಧ್ಯವಾಗುತ್ತದೆ.ಇಲ್ಲಿ ಬಂಡವಾಳವುಳ್ಳವರು ಅನೇಕ ಮೂಲಗಳಿಂದ ತಮ್ಮ ಆದಾಯ ಮತ್ತು ಆಸ್ತಿ ಅಥವಾ ಸಂಪತ್ತನ್ನು ಹೆಚ್ಚಿಸುತ್ತಾ ಹೋಗುತ್ತಾರೆ.ಅವರು ಸಾಮಾನ್ಯವಾಗಿ ಶ್ರೀಮಂತರು ಗೇಣಿ,ಬಡ್ಡಿ ಮತ್ತು ಲಾಭಗಳ ಮೂಲಕ ಹೆಚ್ಚು ಹೆಚ್ಚು ಶ್ರೀಮಂತರಾಗುತ್ತಾ ಹೋಗುತ್ತಾರೆ.ಆದರೆ ಕೇವಲ ಕೂಲಿ ಮತ್ತು ವೇತನ ಪಡೆಯುವ ಕಾರ್ಮಿಕರಿಗೆ ಇದು ಸಾಧ್ಯವಾಗುವುದಿಲ್ಲ.ಅವರು ಶೋಷಣೆಗೆ ಒಳಗಾಗುತ್ತಾರೆ.
- ಪಿತ್ರಾರ್ಜಿತ ಆಸ್ತಿಯ ಹಕ್ಕು: ಈ ಹಕ್ಕಿನಿಂದ ಸಂಪತ್ತು ಮತ್ತು ವರಮಾನಗಳ ಅಸಮಾನತೆಯು ತಲೆಮಾರಿನಿಂದ ತಲೆಮಾರಿಗೆ ಮುಂದುವರಿಯುತ್ತಾ ಹೋಗುತ್ತದೆ.ಶ್ರೀಮಂತರ ಮಕ್ಕಳು ಶ್ರೀಮಂತರಾಗಿಯೇ ಮುಂದುವರಿಯುತ್ತಾರೆ.ಬಡ ಮಕ್ಕಳು ಬಡವರಾಗಿ ಉಳಿಯುತ್ತಾರೆ.
- ಉದ್ಯೋಗಗಳಲ್ಲಿ ವ್ಯತ್ಯಾಸ: ವಿವಿಧ ಪ್ರಕಾರದ ಉದ್ಯೋಗಗಳಿಗೆ ವಿವಿಧ ಪ್ರಮಾಣದ ವೇತನ ಶ್ರೇಣಿಗಳುಂಟು.ಕೆಲವು ಉದ್ಯೋಗಗಳಿಗೆ ಅವುಗಳ ಹೊಣೆಗಾರಿಕೆ, ಆಡಳಿತ ಸಾಮರ್ಥ್ಯ,ಶಿಕ್ಷಣದ ಅರ್ಹತೆ ಮೊದಲಾದವುಗಳ ಮೂಲಕ ಅತಿ ಹೆಚ್ಚಿನ ಪ್ರಮಾಣದ ವೇತನ ಶ್ರೇಣಿ ಇರುತ್ತದೆ.ಇದರಿಂದ ವೇತನದಲ್ಲಿ ವ್ಯತ್ಯಾಸವುಂಟಾಗುತ್ತದೆ.
- ವೈಯುಕ್ತಿಕ ಸಾಮರ್ಥ್ಯದಲ್ಲಿ ವ್ಯತ್ಯಾಸ: ಪ್ರಪಂಚದಲ್ಲಿ ಹುಟ್ಟಿದ ಎಲ್ಲರೂ ಬೌದ್ಧಿಕ ಮತ್ತು ಶಾರೀರಿಕ ಸಾಮರ್ಥ್ಯದಲ್ಲಿ ಸಮನಾಗಿರುವುದಿಲ್ಲ.ಹೀಗೆ ಬೌದ್ಧಿಕ ಮತ್ತು ದೈಹಿಕ ಸಾಮರ್ಥ್ಯದಲ್ಲಿನ ವ್ಯತ್ಯಾಸದಿಂದ ಜನರು ಗಳಿಸುವ ವರಮಾನದಲ್ಲಿಯೂ ವ್ಯತ್ಯಾಸ ಉಂಟಾಗುತ್ತದೆ.
- ಸೌಲಭ್ಯಗಳ ಅವಕಾಶ: ಸೌಲಭ್ಯಗಳ ಅವಕಾಶ ಎಲ್ಲರಿಗೂ ಒಂದೇ ಪ್ರಮಾಣದಲ್ಲಿ ಲಭಿಸುವುದಿಲ್ಲ. ಸಮಾಜದಲ್ಲಿ ಉನ್ನತ ಸ್ಥಾನವನ್ನು ಹೊಂದಿದವರು,ಅಧಿಕಾರ ಸ್ಥಾನದಲ್ಲಿರುವವರು,ಪ್ರಭಾವಶಾಲಿಗಳು,ಮತ್ತು ಅವರ ನಿಕಟವರ್ತಿಗಳಿಗೆ ಅಧಿಕ ವರಮಾನವನ್ನು ಗಳಿಸುವ ಅವಕಾಶವಿರುತ್ತದೆ.ಸೌಲಭ್ಯಗಳ ಅವಕಾಶಗಳು ದೊರೆಯದೆ ಬಡವರು ಮಧ್ಯಮವರ್ಗದವರು ಪ್ರತಿಭೆ ಮತ್ತು ದಕ್ಷತೆ ಹೊಂದಿದ್ದರೂ ಸಹ ಹಿಂದುಳಿಯುತ್ತಾರೆ ಹೀಗಾಗಿ ಅವರ ವರಮಾನ ಅತ್ಯಂತ ಕಡಿಮೆಯಾಗುತ್ತದೆ.
ವರಮಾನದ ಅಸಮಾನತೆಯ ಪರಿಣಾಮಗಳು
ಬದಲಾಯಿಸಿ- ಅನುಬೋಗದಲ್ಲಿ ಅಪವ್ಯಯ: ವರಮಾನದ ಅಸಮಾನತೆಯಿಂದ ಅನುಬೋಗದಲ್ಲಿ ಅಪಾರ ಅಪವ್ಯಯವಾಗುತ್ತದೆ.ಶ್ರೀಮಂತರು ತಮ್ಮ ವಿಲಾಸೀ ಜೀವನಕ್ಕಾಗಿ ಯಥೇಚ್ಚ ವೆಚ್ಚ ಮಾಡುತ್ತಾರೆ.ಅದೇವೇಳೆಗೆ ಅತ್ಯಧಿಕ ಜನರು ಬಡತನದಿಂದ ಬಳಲುತ್ತಿದ್ದು, ಅವರಿಗೆ ಸಾಕಷ್ಟು ಉಡಿಗೆ-ತೊಡಿಗೆ.ಔಷಧೋಪಚಾರ,ವಸತಿ ಸೌಕರ್ಯಗಳು ಲಭ್ಯವಾಗದ್ದರಿಂದ, ರೋಗ-ರುಜಿನಾದಿಗಳು,ದುಶ್ಚಟಗಳು,ದುಷ್ಕರ್ಮಗಳು ಅಧಿಕವಾಗುತ್ತವೆ ಹೀಗಾಗಿ ಅನುಬೋಗದಲ್ಲಿ ಅಪವ್ಯಯ ಉಂಟಾಗುತ್ತದೆ.
- ಸಂಪನ್ಮೂಲಗಳ ಅಸಮರ್ಪಕ ವಿತರಣೆ: ಶ್ರೀಮಂತರ ಕೊಳ್ಳುವ ಸಾಮರ್ಥ್ಯ ಅಧಿಕವಾಗಿರುವುದರಿಂದ ಮಿತವಾಗಿ ಲಭ್ಯವಿರುವ ಸಂಪನ್ಮೂಲಗಳು ಹೆಚ್ಚಾಗಿ ಶ್ರೀಮಂತ ವರ್ಗದವರ ಅವಶ್ಯಕತೆಗಳನ್ನು ಪೊರೈಸಲು ಬಳಸಲ್ಪಡುವುದರಿಂದ,ದೇಶದಲ್ಲಿ ಅವುಗಳ ಹಂಚಿಕೆಯು ಅಸಮರ್ಪಕವಾಗುತ್ತದೆ.
- ರಾಜಕೀಯ ಮತ್ತು ಸಾಮಜಿಕ ಪರಿಣಾಮಗಳು: ಅರ್ಥಿಕವಾಗಿ ಶಕ್ತಿಯುಳ್ಳವರು ರಾಜಕೀಯವಾಗಿ ಮತ್ತು ಸಾಮಜಿಕವಾಗಿ ಬಲಾಢ್ಯರಾದರೆ,ಬಡವರು ದುರ್ಬಲರಾಗುತ್ತಾರೆ.
- ಆರ್ಥಿಕ ಮತ್ತು ರಾಜಕೀಯ ಶಕ್ತಿಗಳ ಕೇಂದ್ರೀಕರಣ: ವರಮಾನ ಮತ್ತು ಸಂಪತ್ತಿನ ಅಸಮಾನತೆಯಿಂದ ಶ್ರೀಮಂತ-ಬಡವರಲ್ಲಿನ ಅಂತರವು ಅಧಿಕವಾಗುತ್ತಾ ಹೋಗುತ್ತದೆ.ಅರ್ಥಿಕ ಮತ್ತು ರಾಜಕೀಯ ಶಕ್ತಿಗಳು ಶ್ರೀಮಂತರಲ್ಲಿ ಕೇಂದ್ರೀಕೃತವಾಗುತ್ತವೆ.
ವರಮಾನದ ಅಸಮಾನತೆಯ ನಿವಾರಣೋಪಾಯಗಳು
ಬದಲಾಯಿಸಿಅನೇಕ ಸ್ವಾತಂತ್ರ್ಯ ಪ್ರೀಯ ರಾಷ್ಟ್ರಗಳು ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡಲು ಕ್ರಮಗಳನ್ನು ಕೈಕೊಂಡಿವೆ ಈ ಕೆಳಗಿನವುಗಳು ಮುಖ್ಯ ವಿಧಾನಗಳಾಗಿವೆ:
- ಶ್ರೀಮಂತರ ವರಮಾನ ಮತ್ತು ಸಂಪತ್ತನ್ನು ಕಡಿಮೆ ಮಾಡುವುದು.
- ಬಡವರ ವರಮಾನವನ್ನು ಹೆಚ್ಚಿಸುವುದು.ಮತ್ತು
- ಸಮಾಜವಾದಿ ಪದ್ಧತಿಯನ್ನು ಅನುಸರಿಸುವುದು
ಶ್ರೀಮಂತರ ವರಮಾನ ಮತ್ತು ಸಂಪತ್ತನ್ನು ಕಡಿಮೆ ಮಾಡುವುದು.
ಬದಲಾಯಿಸಿಅಧಿಕ ವರಮಾನವುಳ್ಳ ಶ್ರೀಮಂತರ ವರಮಾನ ಮತ್ತು ಸಂಪತ್ತನ್ನು ಕಡಿಮೆ ಮಾಡುಲು ಕೆಳಗಿನ ಕ್ರಮಗಳನ್ನು ಸೂಚಿಸಲಾಗಿದೆ.
- ಅತ್ಯಂತ ಪ್ರಗತಿಪರವಾದ ವರಮಾನ ತೆರಿಗೆಯನ್ನು ಹೇರುವುದು
- ಪಿತ್ರಾರ್ಜಿತ ಆಸ್ತಿಯ ಮೇಲೆ ಆಸ್ತಿ ತೆರಿಗೆಯನ್ನು ವಿಧಿಸಬೇಕು.
- ಏಕಸ್ವಾಮ್ಯಗಳನ್ನು ನಿಯಂತ್ರಿಸುವುದು
- ಇತರ ಪ್ರತ್ಯಕ್ಷ ತೆರಿಗೆಗಳು
- ವಿಲಾಸೀ ವಸ್ತುಗಳ ಮೇಲೆ ಅಧಿಕ ತೆರಿಗೆ
ಬಡವರ ವರಮಾನವನ್ನು ಹೆಚ್ಚಿಸುವುದು
ಬದಲಾಯಿಸಿಕಡಿಮೆ ವರಮಾನದವರ ಮತ್ತು ಬಡವರ ವರಮಾನವನ್ನು ಹೆಚ್ಚಿಸಲು ಮತ್ತು ಅವರ ಜೀವನ ಮಟ್ಟ ಸುಧಾರಿಸಲು,ಈ ಕೆಳಗಿನ ಕ್ರಮಗಳನ್ನು ಸೂಚಿಸಲಾಗಿದೆ.
- ಕೃಷಿ,ಉದ್ದಿಮೆ,ಸಾರಿಗೆ,ವ್ಯಾಪಾರ ವಾಣಿಜ್ಯಮೊದಲಾದ ಕ್ಷೇತ್ರಗಳಲ್ಲಿ ದುಡಿಯುವ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ನಿಗದಿಮಾಡುವುದು.
- ಸರಕಾರವು ಕಾರ್ಮಿಕ ಸಂಘಗಳ ಸ್ಥಾಪನೆಗೆ ಮತ್ತು ಅವುಗಳ ಬೆಳವಣಿಗೆಗೆ ಉತ್ತೇಜನ ನೀಡುವುದು.
- ಜನಸಂಖ್ಯಾ ಸ್ಪೋಟವನ್ನು ನಿಯಂತ್ರಿಸಲು ಕ್ರಮ ಕೈಕೊಳ್ಳುವುದು.
- ಶ್ರೀಮಂತರಿಂದ ಸಂಗ್ರಹಿಸಿದ ತೆರಿಗೆಗಳ್ಳನ್ನು ಬಡವರ ಹಿತಕ್ಕಾಗಿ ಬಳಸುವುದು.
- ಸಾಮಾಜಿಕ ವಿಮೆ ಮತ್ತು ನೆರವಿನ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದು.
ಸಮಾಜವಾದಿ ಅರ್ಥವ್ಯವಸ್ಥೆಯನ್ನು ಅನುಸರಿಸುವುದು
ಬದಲಾಯಿಸಿಬಂಡವಾಳ ಪ್ರಭುತ್ವ ಅರ್ಥವ್ಯವಸ್ಥೆಯನ್ನು ಸಾವಾಕಾಶವಾಗಿ ಸಮಾಜವಾದಿ ಅರ್ಥವ್ಯವಸ್ಥೆಗೆ ಪರಿವರ್ತಿಸಲು ಸರಕಾರವು ನಿರ್ಧಾರ ಕೈಕೊಳ್ಳುವುದು.ಸರಕಾರವು ಪ್ರತಿಯೊಬ್ಬ ವ್ಯಕ್ತಿಗೂ ಅವನ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಸಂಪೂರ್ಣ ಅವಕಾಶ ಮಾಡಿಕೊಡುವುದು.
ಹೊರಗಿನ ಕೊಂಡಿಗಳು
ಬದಲಾಯಿಸಿಆಧುನಿಕ ಅರ್ಥಶಾಸ್ತ್ರ-ಕೆ.ಡಿ.ಬಸವ
ರಾಷ್ಟ್ರೀಯ ವರಮಾನ Archived 2015-02-08 ವೇಬ್ಯಾಕ್ ಮೆಷಿನ್ ನಲ್ಲಿ.