ರಾಷ್ಟ್ರೀಯ ಮಕ್ಕಳ ಪುರಸ್ಕಾರ
(ರಾಷ್ಟ್ರೀಯ ಮಕ್ಕಳ ಪ್ರಶಸ್ತಿ 2014 ಇಂದ ಪುನರ್ನಿರ್ದೇಶಿತ)
ಕರ್ನಾಟಕಕ್ಕೆ-ರಾಷ್ಟ್ರೀಯ ಮಕ್ಕಳ ಪ್ರಶಸ್ತಿ 2014
ಬದಲಾಯಿಸಿ- ನೆಹರೂ ಅವರ 125ನೇ ಜಯಂತಿ
- ಮಕ್ಕಳ ದಿನಾಚರಣೆ
- ಶುಕ್ರವಾರ14-11-2014, ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಂದ , ಕರ್ನಾಟಕದ ಐವರೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ 20 ಮಕ್ಕಳು,ಮಕ್ಕಳ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಮಕ್ಕಳ ಪ್ರಶಸ್ತಿ ಸ್ವೀಕರಿಸಿದರು.
- ಇದಲ್ಲದೆ ಮಕ್ಕಳ ದಿನಾಚರಣೆ ಅಂಗವಾಗಿ ಅಭಿವೃದ್ಧಿ ರಾಷ್ಟ್ರೀಯ ಪ್ರಶಸ್ತಿಗಳನ್ನೂ ಪ್ರದಾನ ಮಾಡಲಾಯಿತು
- ಮಕ್ಕಳ ದಿನಾಚರಣೆ ಅಂಗವಾಗಿ ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಕರ್ನಾಟಕದ ಅಂಜಿನಯ್ಯ, ಶರಧಿ ಶೆಟ್ಟಿ, ಸಾತ್ವಿಕ್ ನಾಯಕ್ ಸಿ, ಅನಿಲ್ ಕುಮಾರ್ ವಿ, ಸಯೀದಾ ಸುಮೈಯ ಮಕ್ಕಳ ವಿಭಾಗ¬ದಲ್ಲಿ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದರು.
; ಬೆಂಗಳೂರಿನ ಮಾಸ್ಟರ್ ಎಲ್.ಆಂಜಿನಯ್ಯ
- ಅಂಗವೈಕಲ್ಯವಿದ್ದರೂ ಅಸಾಧಾರಣ ಸಾಧನೆ ತೋರಿದ ಬೆಂಗಳೂರಿನ ಮಾಸ್ಟರ್ ಎಲ್.ಆಂಜಿನಯ್ಯ 2014ನೇ ಸಾಲಿನ 'ರಾಷ್ಟ್ರೀಯ ಮಕ್ಕಳ ಪ್ರಶಸ್ತಿ' ಪಡೆದಿದ್ದಾರೆ.
- ಮಕ್ಕಳ ದಿನಾಚರಣೆ ಅಂಗವಾಗಿ ನವದೆಹಲಿಯ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಮಾ.ಆಂಜಿನಯ್ಯ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪ್ರಶಸ್ತಿ ಪಡೆದಿದ್ದಾರೆ. ಪ್ರಶಸ್ತಿಯು 10,000 ನಗದು ಹಾಗೂ ಬೆಳ್ಳಿ ಪದಕವನ್ನೊಳಗೊಂಡಿದೆ.
- ಸಮರ್ಥನಂ ಟ್ರಸ್ಟ್ ಫಾರ್ ಡಿಸೇಬಲ್ಡ್‌ಗೆ ಸೇರಿದ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿರುವ ಮಾ.ಆಂಜಿನಯ್ಯ (12) ಅವರು ಕೈ, ಕಾಲು ಸಹಜವಾಗಿ ಬೆಳೆದಿಲ್ಲ, ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ಹಂಪಸಾಗರ ಮೂಲದವರಾದ ಇವರು ಬಡವ ಕುಟುಂಬಕ್ಕೆ ಸೇರಿದ್ದಾರೆ.
- ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದಾರೆ. ಕುಟುಂಬದ ಜವಾಬ್ದಾರಿ ಹೊತ್ತಿರುವ ತಾಯಿ, ಮಗನ ವಿದ್ಯಾಭ್ಯಾಸಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಕೈ ಇಲ್ಲದ ಆಂಜಿನಯ್ಯ ಕಾಲಿನಿಂದಲೇ ಬರೆಯುತ್ತಾರೆ. ಚಿತ್ರವನ್ನು ಬಿಡುತ್ತಾರೆ.
- ಈತನ ಚಿತ್ರಗಳು ವೃತ್ತಿಪರ ಕಲಾವಿದರಷ್ಟೇ ಉತ್ತಮವಾಗಿದೆ ಎಂಬ ಖ್ಯಾತಿಗೆ ಒಳಗಾಗಿದ್ದು, ರಾಜ್ಯಮಟ್ಟದ ಹಲವು ಸ್ಪರ್ಧೆಗಳಲ್ಲಿಯೂ ಬಹುಮಾನಗಳು ಬಂದಿವೆ."
( kannadaprabha:15 Nov 2014 -
- ಕರ್ನಾಟಕಕ್ಕೆ
- 1.ಅಂಜಿನಯ್ಯ-ಅಂಗವಿಕಲ ಶಾಲೆಯಲ್ಲಿ ಕಲಿಯುತ್ತಿರುವ 12 ವರ್ಷದ ಈ ಬಾಲಕನಿಗೆ ಚಿತ್ರಕಲೆ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ.
- ಕಡು ಬಡತನದಲ್ಲಿ ಹುಟ್ಟಿರುವ ಅಂಜಿನಯ್ಯನ ಎರಡೂ ಕೈಗಳಲ್ಲೂ ಸ್ವಾಧೀನವಿಲ್ಲದಿದ್ದರೂ ಪ್ರತಿಭೆಗೇನೂ ಕೊರತೆಯಿಲ್ಲ. ಕಾಲಲ್ಲೇ ಬರೆಯುವ ತಾಕತ್ತು ಅವನಿಗಿದೆ. ಸೊಗಸಾಗಿ ಚಿತ್ರ ಬಿಡಿಸುವ ಕಲೆಯೂ ಸಿದ್ಧಿಸಿದೆ. ಕೂಲಿ ಮಾಡುವ ವಿಧವೆ ತಾಯಿಯ ಮಗನಾದ ಅಂಜಿನಯ್ಯನ ಕಾಲಲ್ಲಿ ಜೀವ ಪಡೆಯುವ ಕಲಾಕೃತಿಗಳು ವೃತ್ತಿಪರ ಕಲಾವಿದರ ಕಲಾಕೃತಿಗಳಿಗೆ ಸರಿಸಮನಾಗಿ ನಿಲ್ಲುತ್ತವೆ.
- 2.ಅನಿಲ್ ಕುಮಾರ್-ಕುಣಿಗಲ್ ತಾಲ್ಲೂಕಿನ ಕಿಚ್ಚವಾಡಿಯ ಅನಿಲ್‌ಕುಮಾರ್ (13 ವರ್ಷ) ಕಲಾವಿಭಾಗದ ಪ್ರಶಸ್ತಿಗೆ ಪಾತ್ರನಾದ.(ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ನನ್ನ ಬೆನ್ನು ತಟ್ಟಿ ಗುಡ್ ಎಂದರು.)
- ಕಿಚ್ಚವಾಡಿಯ ಬಡ ಕುಟುಂಬದ ಅನಿಲ್‌ಕುಮಾರ್ ಬೆಂಗ¬ಳೂರಿನ ಉತ್ತರಹಳ್ಳಿಯ ಸುಬ್ರಹ್ಮಣ್ಯಪುರದ ವೈಎಎಸ್ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ. ಪ್ರತಿಭಾವಂತ ಬಾಲ ಕಲಾವಿದ. ರಂಗನಿರ್ದೇಶಕ ಸಿ. ಲಕ್ಷ್ಮಣ್ ಅವರ ‘ರಂಗ ಕಹಳೆ’ ತಂಡದ ಕಲಾವಿದ. ಇದುವರೆಗೆ 20 ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾನೆ. 40 ಚಿತ್ರಗಳಿಗೆ ಧ್ವನಿ ನೀಡಿದ್ದಾನೆ. 18 ನಾಟಕ 142 ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾನೆ.‘ನನ್ನ ಗೋಪಾಲ’ ಮತ್ತು ‘ಕಾರಣಿಕದ ಶಿಶು’ ಚಿತ್ರದ ನಟನೆಗೆ ರಾಜ್ಯ ಸರ್ಕಾರದ ಅತ್ಯುತ್ತಮ ಬಾಲನಟ ಪ್ರಶಸ್ತಿ ಪಡೆದಿದ್ದಾನೆ.
- 3.ಶರಧಿ ಶೆಟ್ಟಿ-ಕುಮಾರಿ ಶರಧಿ ಶೆಟ್ಟಿ ಕಾರ್ಕಳದ ಮೊರಾರ್ಜಿ ದೇಸಾಯಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಶರಧಿ ಶೆಟ್ಟಿ ಮಳೆಗಾಲ¬ದಲ್ಲೂ ಬಟ್ಟೆ ಒಣಗಿಸುವ ವೈಜ್ಞಾನಿಕ ಸೆನ್ಸರ್ ಮಾದರಿ ಅಭಿವೃದ್ಧಿಪಡಿಸಿದ್ದಾಳೆ. ಈಕೆ ಮಾಡಿರುವ ಸಾಧನೆಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ..
- ಶರಧಿ ಶೆಟ್ಟಿ:ಇವನು ವಿನ್ಯಾಸಗೊಳಿಸಿರುವ ವಿಜ್ಞಾನ ಮಾದರಿಗೆ ಕಳೆದ ವರ್ಷ ಅಖಿಲ ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲೂ ಚಿನ್ನದ ಪದಕ ಸಿಕ್ಕಿತ್ತು. 800 ಶಾಲಾ ಮಕ್ಕಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
- 4.ಸಯೀದಾ ಸುಮೈಯ-ಕುಮಾರಿ ಸಯೀದಾ ಸುಮೈಯ ಕ್ರೀಡಾ ಕ್ಷೇತ್ರದಲ್ಲಿ ಮಾಡಿ¬ರುವ ಸಾಧನೆಗಾಗಿ ರಾಷ್ಟ್ರ ಪ್ರಶಸ್ತಿ ದೊರೆತಿದೆ.
- ಚಿತ್ರದುರ್ಗದ ಖಾಜಿ ಮೊಹಲ್ಲಾದ ಸಯೀದಾ, ಡಾನ್ ಬಾಸ್ಕೊ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ. ಕರಾಟೆ, ಟೇಕ್ವಾಂಡೊ ಮತ್ತು ಅಥ್ಲೆಟಿಕ್ಸ್‌ನಲ್ಲಿ ಉತ್ತಮ ಸಾಧನೆ ತೋರುತ್ತಿದ್ದಾಳೆ. 2009ರಲ್ಲಿ ಶ್ರೀಲಂಕಾದಲ್ಲಿ ನಡೆದ ಎಸ್‌ಕೆಎ ಕರಾಟೆ ಚಾಂಪಿಯನ್¬ಶಿಪ್‌ನಲ್ಲಿ 9 ವರ್ಷದೊಳಗಿನವರ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದಿದ್ದಾಳೆ. ಹಲವು ರಾಜ್ಯ ಮತ್ತು ರಾಷ್ಟ್ರಮಟ್ಟದ ಕರಾಟೆ ಪಂದ್ಯಗಳಲ್ಲಿ ಸಯೀದಾ ಪ್ರಶಸ್ತಿ ಗೆದ್ದಿದ್ದಾಳೆ.
- 5.ಸಾತ್ವಿಕ್ ನಾಯಕ್-ಇವನು ಐದು ವರ್ಷದ ಪುಟ್ಟ ಬಾಲಕ ಸಾತ್ವಿಕ್ ನಾಯಕ್ ಸಮಾಜಕ್ಕೆ ವಯಸ್ಸಿಗೆ ಮೀರಿದ ಕೊಡುಗೆ ನೀಡುತ್ತಿದ್ದಾನೆ. ಜಾದೂ ಕಲೆಯ ಮೂಲಕಬುದ್ಧಿಮಾಂದ್ಯ ಮಕ್ಕಳಿಗೆ ಜಾಗೃತಿ ಮೂಡಿಸುವ ಕೆಲಸಕ್ಕಾಗಿ ರಾಷ್ಟ್ರ ಪ್ರಶಸ್ತಿ ದೊರೆತಿದೆ.
- ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಬಿ.ಎಸ್ ಟೆಂಪಲ್ ರಸ್ತೆ ನಿವಾಸಿ ಉಮೇಶ್ ನಾಯಕ್ ಅವರ ಪುತ್ರ ಸಾತ್ವಿಕ್, ಜಾದೂ ಕಲೆಯ ಮೂಲಕಬುದ್ಧಿಮಾಂದ್ಯ ಮಕ್ಕಳಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾನೆ. ಬೆತನಿ ಶಾಲೆಯಲ್ಲಿ ಯುಕೆಜಿ ಓದುತ್ತಿರುವ ಸಾತ್ವಿಕ್ 2014ರಲ್ಲಿ ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ ಮತ್ತು ‘ಏಷ್ಯಾ ಬುಕ್ ಆಫ್ ರೆಕಾರ್ಡ್’ನಲ್ಲಿ ತನ್ನ ಹೆಸರನ್ನು ದಾಖಲಿಸಿದ್ದಾನೆ. ಕಳೆದ ಒಂದು ವರ್ಷದಲ್ಲಿ ನೂರಕ್ಕೂ ಹೆಚ್ಚು ಜಾದು ಪ್ರದರ್ಶನಗಳನ್ನು ನೀಡಿ ಸಮಾಜದ ಗಮನ ಸೆಳೆದಿದ್ದಾನೆ. ಸಾತ್ವಿಕ್ ರಾಷ್ಟ್ರ ಪ್ರಶಸ್ತಿ ಪಡೆದು, ‘ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಎನ್ನುವ ಮಾತಿಗೆ ಸಾಕ್ಷಿಯಾಗಿದ್ದಾನೆ.
ಅಭಿವೃದ್ಧಿ ರಾಷ್ಟ್ರೀಯ ಪ್ರಶಸ್ತಿ
ಬದಲಾಯಿಸಿ- ಅಂಗವಿಕಲ ಮಕ್ಕಳ ಶ್ರೇಯೋ¬ಭಿ¬ವೃದ್ಧಿಗೆ ದುಡಿಯುತ್ತಿರುವ ಬೆಂಗಳೂರಿನ ಸಮರ್ಥನಂ ಟ್ರಸ್ಟ್ ‘ಮಕ್ಕಳ ಅಭಿವೃದ್ಧಿ ರಾಷ್ಟ್ರೀಯ ಪ್ರಶಸ್ತಿ’ಗೆ ಪಾತ್ರವಾಗಿದೆ. ಟ್ರಸ್ಟ್ ಸ್ಥಾಪಕ ಹಾಗೂ ವ್ಯವಸ್ಥಾಪಕ ಟ್ರಸ್ಟಿ ಜಿ.ಕೆ. ಮಹಾಂತೇಶ್ ಅವರಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.
- ಕರ್ನಾಟಕಕ್ಕೆ
- ವೈಯಕ್ತಿಕ ವಿಭಾಗದಲ್ಲಿ ಮಂಗಳೂರಿನ ಮಹೇಶ್ ಕುಮಾರ್ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸ್ಕೇಟಿಂಗ್ ತರಬೇತುದಾರ ಮಹೇಶ್ ಅವರು ೧೯೯೧ರಿಂದಲೂ ಮಕ್ಕಳಿಗೆ ರೋಲರ್ ಸ್ಕೇಟಿಂಗ್ ತರಬೇತಿ ನೀಡುತ್ತಿದ್ದಾರೆ.
- ರಾಜೀವ್ ಗಾಂಧಿ ಮಾನವ ಸೇವಾ ಪ್ರಶಸ್ತಿ
- ‘ಸ್ವಸ್ಥ’ ಸಂಸ್ಥೆಯ ನಿರ್ದೇಶಕಿ ಕೊಡಗಿನ ಗಂಗಾ ಚಂಗಪ್ಪ ಅವರು ರಾಜೀವ್ ಗಾಂಧಿ ಮಾನವ ಸೇವಾ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಈ ಸಂಸ್ಥೆಯು ಅಂಗವಿಕಲ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ.
ರಾಷ್ಟ್ರೀಯ ಮಕ್ಕಳ ಪುರಸ್ಕಾರ 2016
ಬದಲಾಯಿಸಿ- 15 Nov, 2016
- ದಾವಣಗೆರೆಯ ಪ್ಯಾರಾಲಿಂಪಿಯನ್ ಈಜುಪಟು ರೇವತಿ ಎಂ. ನಾಯಕ, ಪ್ಯಾರಾಲಿಂಪಿಯನ್‌ನಲ್ಲಿ ತೋರಿದ ಅಸಾಧಾರಣ ಸಾಧನೆಗಾಗಿ ಸೋಮವಾರ ದೆಹಲಿಯಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಂದ ರಾಷ್ಟ್ರೀಯ ಮಕ್ಕಳ ಪುರಸ್ಕಾರ ಹಾಗೂ ಚಿನ್ನದ ಪದಕ ಪಡೆದರು. ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದನೆ ತಿಳಿಸಿದ್ದಾರೆ.
ಕ್ರೀಡಾಪಟುವಾಗಿ ರೇವತಿ ಬೆಳೆದ ಬಗೆ
ಬದಲಾಯಿಸಿ- ರೇವತಿ ದಾವಣಗೆರೆಯ ಸಿದ್ಧಗಂಗಾ ಪಿಯು ಕಾಲೇಜು ವಿದ್ಯಾರ್ಥಿನಿ. ತಂದೆ ಹುಚ್ಚವ್ವನಹಳ್ಳಿ ಮಂಜುನಾಥ ಅವರು ಕರ್ನಾಟಕ ರಾಜ್ಯ ರೈತ ಸಂಘ–ಹಸಿರುಸೇನೆ ಬಣದ ಅಧ್ಯಕ್ಷ. ತಾಯಿ ಸುನಂದಾ ಗೃಹಿಣಿ. ರೇವತಿ ಸೇರಿ ಮೂವರೂ ಮಕ್ಕಳು ಕ್ರೀಡಾಪಟುಗಳು ಎನ್ನುವುದು ವಿಶೇಷ.
- ರೇವತಿ ಈಜು ಕಲಿತಿದ್ದು ಎಂಟನೇ ವಯಸ್ಸಿನಲ್ಲಿ. ಜಗಳೂರು ತಾಲ್ಲೂಕಿನ ಹುಚ್ಚವ್ವನಹಳ್ಳಿಯ ಗ್ರಾಮದ ಕಾಲುವೆಯೊಂದರಲ್ಲಿ. ಮಗಳಿಗೆ ಉತ್ತಮ ಕ್ರೀಡಾ ಸೌಲಭ್ಯ ಒದಗಿಸಲು ವ್ಯಾಸಂಗವನ್ನು ಹಳ್ಳಿಯಿಂದ ದಾವಣಗೆರೆ ನಗರಕ್ಕೆ ಬದಲಾಯಿಸಿದರು. ತಂದೆಯ ಶ್ರಮ ವ್ಯರ್ಥವಾಗಲಿಲ್ಲ. ಈಜಿನಲ್ಲಿ ಉತ್ತಮ ಪ್ರದರ್ಶನವನ್ನೂ ನೀಡತೊಡಗಿದಳು.
- ಎರಡು ವರ್ಷಗಳಿಂದ ಪ್ಯಾರಾಲಿಂಪಿಯನ್ ಸ್ಪರ್ಧಿಗಳಿಗಾಗಿ ನಡೆಯುವ ಐವಾಸ್ ಈಜು ಕೂಟದಲ್ಲಿ ರೇವತಿ ಪದಕಗಳ ಸಾಧನೆ ದಾಖಲಿಸಿದಳು. ಕಳೆದ ವರ್ಷ ನೆದರ್‌ಲೆಂಡ್‌ನಲ್ಲಿ ಪದಕ. ಕಳೆದ ಜೂನ್– ಜುಲೈನಲ್ಲಿ ಚೆಕ್ ಗಣರಾಜ್ಯದ ಪ್ರಾಗ್‌ನಲ್ಲಿ ನಡೆದ ಐವಾಸ್ ಕೂಟದಲ್ಲಿ (ಎಸ್‌ಬಿ–9 ವಿಭಾಗ) ಈಕೆಗೆ ಒಂದು ಬೆಳ್ಳಿ, ಒಂದು ಕಂಚಿನ ಪದಕ. ಅಮೆರಿಕದ ಪಸಡೇನಾದ ರೋಸ್‌ಬೌಲ್‌ನಲ್ಲಿ 2014ರಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ಈಜು ಕೂಟದಲ್ಲಿ ಆರನೇ ಸ್ಥಾನವನ್ನೂ ಪಡೆದಿದ್ದಳು.
- 16 ವರ್ಷದ ರೇವತಿಗೆ ಕಾಲುಗಳ ಉದ್ದ ಒಂದೇ ಸಮನಾಗಿಲ್ಲ. ಆದರೆ ಅದನ್ನು ಈಕೆ ಒಂದು ಸಮಸ್ಯೆ ಎಂದು ಭಾವಿಸಿಯೂ ಇಲ್ಲ. ‘ನನಗೆ ಮುಂದೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಬೇಕೆಂಬ ಗುರಿಯಿದೆ’ ಎನ್ನುವ ಮೂಲಕ ದೊಡ್ಡ ಕನಸನ್ನೂ ಹೊಂದಿದ್ದಾಳೆ.[೨]
ಆಧಾರ
ಬದಲಾಯಿಸಿಸುದ್ದಿ:Sat,(15/ 11/2014 - prajavani) ;(kannadaprabha:15 Nov 2014)
ನೋಡಿ
ಬದಲಾಯಿಸಿಉಲ್ಲೇಖ
ಬದಲಾಯಿಸಿ- ↑ ಸುದ್ದಿ:Sat,(15/ 11/2014 - prajavani) ;(kannadaprabha:15 Nov 2014)
- ↑ ರಾಷ್ಟ್ರೀಯ ಮಕ್ಕಳ ಪುರಸ್ಕಾರ ಪಡೆದ ರೇವತಿ