ರಾವ್ ಬೈಲ್
ಪ್ರಭಾಕರ ರಾವ್ ಬೈಲ್ (೧೯೩೭-೨೦೧೮) ಅಂತರರಾಷ್ಟ್ರೀಯ ಮಟ್ಟದ ಕಲಾವಿದರು. ಸುಪ್ರಸಿದ್ಧ ವ್ಯಂಗ್ಯ ಚಿತ್ರಕಾರರು , ವಿಶಿಷ್ಟ ಡಿಸೈನರ್, ವಿನ್ಯಾಸಗಾರ, ಪೇಂಟರ್, ಮಿಮಿಕ್ರಿ ಪಟು. ಬೈಲಂಗಡಿ ಪ್ರಭಾಕರ್ ರಾವ್ ಇವರ ಪೂರ್ಣ ಹೆಸರು .[೧]
ಬದುಕು
ಬದಲಾಯಿಸಿರಾವ್ ಬೈಲ್‌ಹುಟ್ಟಿದ್ದು ಕಾಸರಗೋಡಿನಲ್ಲಿ. ಓದಿದ್ದು ಕುಂದಾಪುರ, ಉಡುಪಿ ಹಾಗೂ ಬೆಂಗಳೂರಿನಲ್ಲಿ. ಮುಂಬೈಯ ಜೆ.ಜೆ. ಸ್ಕೂಲ್‌ನಲ್ಲಿ ಕಲಾ ಶಿಕ್ಷಣ ಪಡೆದರು . ಉದ್ಯೋಗ ಮುಂಬೈಯಲ್ಲಿ. ಹೆಂಡತಿಯ ಊರು ಧಾರವಾಡ. ನಿವೃತ್ತಿ ಬದುಕು ಬೆಂಗಳೂರಿನಲ್ಲಿ. ಇವರು ಹೃದಯಾಘಾತದಿಂದ ೨೦೧೮ರ ಎಪ್ರಿಲ್ ೪ರಂದು ತಮ್ಮ ೮೧ ನೇ ವಯಸ್ಸಿನಲ್ಲಿ ನಿಧನರಾದರು.[೨][೩]
ಸಾಧನೆ
ಬದಲಾಯಿಸಿಇವರ ಚಿತ್ರವು ಅಬು ಅಬ್ರಹಾಂ ಸಂಗ್ರಹಿಸಿದ ‘ದಿ ಪೆಂಗ್ವಿನ್ ಬುಕ್ ಆಫ್ ಇಂಡಿಯನ್ ಕಾರ್ಟೂನ್ಸ್’ನಲ್ಲಿ ಸ್ಥಾನ ಗಳಿಸಿಕೊಂಡಿತ್ತು. ಇವರ ಏಕ ವ್ಯಕ್ತಿ ಪ್ರದರ್ಶನ ಗ್ರೀಸ್, ಸ್ವಿಟ್ಜರ್ಲೆಂಡ್ ಹಾಗೂ ಕೆನಡಾದಲ್ಲಿ ಜರುಗಿತ್ತು. ಜಯಂತ್ ಕಾಯ್ಕಿಣಿ ಅವರು ಹೇಳುವ ಪ್ರಕಾರ ಪಂಚ್ ಹಾಗೂ ನ್ಯೂಯಾರ್ಕ್ ಪತ್ರಿಕೆಯ ಸಂಪಾದಕರೂ ಅವರ ರೇಖಾ ವೈಶಿಷ್ಟ್ಯವನ್ನು ಮೆಚ್ಚಿಕೊಂಡಿದ್ದಾರೆ.[೪][೫]
ಉಲ್ಲೇಖಗಳು
ಬದಲಾಯಿಸಿ- ↑ "Prabhakar Raobail". Indian Institute of Cartoonists. Archived from the original on 2015-06-11. Retrieved 2018-04-16.
- ↑ "A Man of Letters (and Envelopes)". Freedom first (248–259). Indian Committee for Cultural Freedom, Democratic Research Service (Bombay, India). 1973.
- ↑ Shenoy, Megha (17 Oct 2008). "Between the Lines". Deccan Herald. Archived from the original on 1 ಜುಲೈ 2012. Retrieved 16 ಏಪ್ರಿಲ್ 2018.
- ↑ Jamkhandi, Gururaj (May 8, 2009). "Dual honour for cartoonist, wife". The Times of India. Archived from the original on 2012-07-09. Retrieved 2018-04-16.
- ↑ Uncommon Man Raobail no more The Times of India : Apr6,2018