ರಾಮ ಉಗ್ರ ಪಾಂಡೆ
ಲ್ಯಾನ್ಸ್ ನಾಯಕ್ ರಾಮ ಉಗ್ರ ಪಾಂಡೆ ಅವರು ೧೯೭೧ ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಹೋರಾಡಿ, ಪ್ರಾಣತೆತ್ತ ಭಾರತೀಯ ಸೈನಿಕ. ಅವರಿಗೆ ಮರಣೋತ್ತರವಾಗಿ ಭಾರತ ಸೈನ್ಯದ ಯುದ್ಧಕಾಲದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಮಹಾವೀರ ಚಕ್ರವನ್ನು ನೀಡಿ ಗೌರವಿಸಲಾಯಿತು. [೧][೨][೩][೪][೫]
ಲ್ಯಾನ್ಸ್ ನಾಯಕ್ ರಾಮ ಉಗ್ರ ಪಾಂಡೆ | |
---|---|
ಜನನ | ಐಮಾ-ಬನ್ಸಿ, ಗಾಜಿಯಾಪುರ, ಉತ್ತರ ಪ್ರದೇಶ, ಭಾರತ | ೧ ಜುಲೈ ೧೯೪೨
ಮರಣ | 23 November 1971 ಭಾರತ-ಬಾಂಗ್ಲಾದೇಶ ಗಡಿಯಾದ ಮೊರ್ಪಾರಾ | (aged 29)
ವ್ಯಾಪ್ತಿಪ್ರದೇಶ | British Raj India |
ಶಾಖೆ | ಭಾರತೀಯ ಭೂಸೇನೆ |
ಸೇವಾವಧಿ | ೧೯೬೨-೧೯೭೧ |
ಶ್ರೇಣಿ(ದರ್ಜೆ) | ಲಾನ್ಸ್ ನಾಯಕ್ |
ಸೇವಾ ಸಂಖ್ಯೆ | ೧೩೬೫೭೦೭೯ಎಲ್ |
ಘಟಕ | ೮ ಗಾರ್ಡ್ |
ಭಾಗವಹಿಸಿದ ಯುದ್ಧ(ಗಳು) | ಇಂಡೋ - ಪಾಕ್ ಯುದ್ಧ - ೧೯೭೧ |
ಪ್ರಶಸ್ತಿ(ಗಳು) | ಮಹಾ ವೀರ ಚಕ್ರ (ಮರಣೋತ್ತರ) |
ಆರಂಭಿಕ ಜೀವನ
ಬದಲಾಯಿಸಿಲ್ಯಾನ್ಸ್ ನಾಯಕ್ ರಾಮ ಉಗ್ರ ಪಾಂಡೆ ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯ ಐಮಾ-ಬನ್ಸಿ ಗ್ರಾಮದಲ್ಲಿ ಜನಿಸಿದರು. ಅವರ ತಂದೆಯ ಹೆಸರು ಶ್ರೀ ಹಾರಖ್ ನಂದನ ಪಾಂಡೆ. ಅವರು ತಮ್ಮ ಹುಟ್ಟೂರಿನಲ್ಲಿ ಶಿಕ್ಷಣ ಪಡೆದರು. ಮೆಟ್ರಿಕ್ಯುಲೇಷನ್ ಉತ್ತೀರ್ಣರಾದ ನಂತರ ಅವರು ೧೯೬೨ ರಲ್ಲಿ ಭಾರತೀಯ ಸೇನೆಯ ೨೦೨ ಮೌಂಟೇನ್ ಬ್ರಿಗೇಡ್‌ನ ೮ ಗಾರ್ಡ್‌ಅನ್ನು ಸೇರಿಕೊಂಡರು.[೬]
ಮರಣ
ಬದಲಾಯಿಸಿಇವರು ೧೯೭೧ ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಮೋರ್ಪಾರಾ ಕಾಳಗದಲ್ಲಿ ಭಾರತೀಯ ಸೇನೆಯ ತುಕುಡಿಯ ನೇತೃತ್ವ ವಹಿಸಿದ್ದರು. ಲ್ಯಾನ್ಸ್ ನಾಯಕ್ ರಾಮ ಉಗ್ರ ಪಾಂಡೆ ಅವರು ಪಾಕ್ ಸೈನ್ಯದ ತಾಣಗಳ ಮೇಲೆ ದಾಳಿ ನಡೆಸಿದರು. ಶತ್ರು ಸೈನ್ಯವನ್ನು ಸದೆಬಡೆಯಲು ಅವರು ಶತ್ರು ಸೈನ್ಯದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡು ನಾಶ ಮಾಡಿದರು. ಶತ್ರು ಪಾಳಯದ ಮೂರು ಸೈನಿಕರನ್ನು ಹೊಡೆದುರುಳಿಸಿದರು. ಈ ಕಾದಾಟದ ಸಂದರ್ಭದಲ್ಲಿ ಅವರಿಗೂ ಕೂಡಾ ಗುಂಡು ತಾಗಿ ಯುದ್ಧಭೂಮಿಯಲ್ಲಿ ವೀರ ಮರಣ ಹೊಂದಿದರು. ಅವರು ತಮ್ಮ ಮಗಳು ಸನೀತಾ ದುಬೆ ಅವರನ್ನು ಅಗಲಿದರು.[೭]
ಮಿಲಿಟರಿ ಮಾನ್ಯತೆ
ಬದಲಾಯಿಸಿರಾಷ್ಟ್ರಕ್ಕಾಗಿ ತಮ್ಮ ಶೌರ್ಯ ಪ್ರದರ್ಶಿಸಿದ್ದಕ್ಕಾಗಿ ಲ್ಯಾನ್ಸ್ ನಾಯಕ್ ರಾಮ ಉಗ್ರ ಪಾಂಡೆ ಅವರಿಗೆ ಮರಣೋತ್ತರವಾಗಿ ಮಹಾವೀರ ಚಕ್ರ ನೀಡಿ ಗೌರವಿಸಲಾಗಿದೆ.[೮]
ಉಲ್ಲೇಖಗಳು
ಬದಲಾಯಿಸಿ- ↑ "The Indo-Pakistan War of 1971- List of Awardees".
- ↑ Chakravorty, B. (1995). Stories of Heroism: PVC & MVC Winners by B. Chakravorty. ISBN 9788170235163.
- ↑ (Retd), Col J. Francis (30 August 2013). Short Stories from the History of the Indian Army Since August 1947 By Col J Francis (Retd). ISBN 9789382652175.
- ↑ "Indian Army MVC Award".
- ↑ "National Military Memorial, MAHA VIR CHAKRA".