ರಾಮೇಶ್ವರಿ ನೆಹರು

ಭಾರತದ ಸಾಮಾಜಿಕ ಕಾರ್ಯಕರ್ತ

ರಾಮೇಶ್ವರಿ ನೆಹರು (೧೦ ಡಿಸೆಂಬರ್ ೧೮೮೬-೮ ನವೆಂಬರ್ ೧೯೬೬) ಭಾರತದ ಸಾಮಾಜಿಕ ಕಾರ್ಯಕರ್ತರಾಗಿದ್ದರು. ಅವರು ಬಡ ವರ್ಗಗಳ ಮತ್ತು ಮಹಿಳೆಯರ ಉನ್ನತಿಗಾಗಿ ಕೆಲಸ ಮಾಡಿದ್ದರು. ೧೯೦೨ ರಲ್ಲಿ, ಅವರು ಮೋತಿಲಾಲ್ ನೆಹರು ಅವರ ಸೋದರಳಿಯ ಮತ್ತು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಸೋದರಸಂಬಂಧಿ ಬ್ರಿಜ್ಲಾಲ್ ನೆಹರು ಅವರನ್ನು ವಿವಾಹವಾದರು. ಇವರ ಮಗ ಬ್ರಜ್ ಕುಮಾರ್ ನೆಹರು ಭಾರತೀಯ ನಾಗರಿಕ ಸೇವಕರಾಗಿದ್ದರು ಮತ್ತು ಹಲವಾರು ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು.

ರಾಮೇಶ್ವರಿ ನೆಹರು
೧೯೮೭ ರ ಅಂಚೆಚೀಟಿಯಲ್ಲಿ ರಾಮೇಶ್ವರಿ ನೆಹರು
ಜನನ
ರಾಮೇಶ್ವರಿ ರೈನಾ

(೧೮೮೬-೧೨-೧೦)೧೦ ಡಿಸೆಂಬರ್ ೧೮೮೬
ಮರಣ8 November 1966(1966-11-08) (aged 79)
ರಾಷ್ಟ್ರೀಯತೆಭಾರತೀಯರು
ವೃತ್ತಿಸಮಾಜ ಸೇವಕಿ
ಸಂಗಾತಿಬ್ರಿಜ್ಲಾಲ್ ನೆಹರು
ಮಕ್ಕಳುಬ್ರಜ್ ಕುಮಾರ್ ನೆಹರು
ಪ್ರಶಸ್ತಿಗಳುಲೆನಿನ್ ಪೀಸ್ ಪ್ರೈಸ್

ಅವರು ೧೯೦೯ ರಿಂದ ೧೯೨೪ ರವರೆಗೆ ಮಹಿಳೆಯರಿಗಾಗಿ ಹಿಂದಿ ಮಾಸಿಕವಾದ ಸ್ತ್ರೀ ದರ್ಪಣ್ ಅನ್ನು ಸಂಪಾದಿಸಿದರು. ಅವರು ಅಖಿಲ ಭಾರತ ಮಹಿಳಾ ಸಮ್ಮೇಳನದ (ಎಐಡಬ್ಲ್ಯೂಸಿ) ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು ಮತ್ತು ೧೯೪೨ ರಲ್ಲಿ ಅದರ ಅಧ್ಯಕ್ಷರಾಗಿ ಆಯ್ಕೆಯಾದರು.[][] ಅವರು ಕೋಪನ್ ಹ್ಯಾಗನ್ ನಲ್ಲಿ ನಡೆದ ವಿಶ್ವ ಮಹಿಳಾ ಕಾಂಗ್ರೆಸ್ ಮತ್ತು ಕೈರೋದಲ್ಲಿ ನಡೆದ ಮೊದಲ ಆಫ್ರೋ-ಏಷ್ಯನ್ ಮಹಿಳಾ ಸಮ್ಮೇಳನದ (೧೯೬೧) ನಿಯೋಗಗಳನ್ನು ಮುನ್ನಡೆಸಿದರು .[]

ರಾಮೇಶ್ವರಿ ನೆಹರು ಅವರ ಸಾಮಾಜಿಕ ಕಾರ್ಯಕ್ಕಾಗಿ ಭಾರತ ಸರ್ಕಾರ ಅವರಿಗೆ ೧೯೫೫ ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿತು. ಇವರು ೧೯೬೧ ರಲ್ಲಿ ಲೆನಿನ್ ಶಾಂತಿ ಪ್ರಶಸ್ತಿ ಗೆದ್ದುಕೊಂಡರು.[]

ವಿಶ್ವ ಸಂವಿಧಾನವನ್ನು ರಚಿಸುವುದಕ್ಕಾಗಿ ಸಮಾವೇಶವನ್ನು ಕರೆಯುವ ಒಪ್ಪಂದಕ್ಕೆ ಸಹಿ ಹಾಕಿದವರಲ್ಲಿ ಇವರೂ ಒಬ್ಬರಾಗಿದ್ದರು.[][] ಇದರ ಪರಿಣಾಮವಾಗಿ ಮಾನವ ಇತಿಹಾಸದಲ್ಲಿ ಮೊದಲ ಬಾರಿಗೆ ವಿಶ್ವ ಸಂವಿಧಾನ ಸಭೆಯು ಒಕ್ಕೂಟದ ಸಂವಿಧಾನವನ್ನು ರಚಿಸಲು ಮತ್ತು ಅಂಗೀಕರಿಸಲು ಸಭೆ ಸೇರಿತು.[]

ಉಲ್ಲೇಖಗಳು

ಬದಲಾಯಿಸಿ
  1. Sonia Gandhi, ed. (2004). Two Alone, Two Together: Letters Between Indira Gandhi and Jawaharlal Nehru 1922–1964. p. xxii. ISBN 9780143032458.
  2. "Past Presidents". AIWC: All India Women's Conference. Archived from the original on 19 March 2014. Retrieved 19 March 2014.
  3. Sharma, d n (1969). Afro-asian Group In The U.n.
  4. "Padma Awards Directory (1954–2013)" (PDF). Ministry of Home Affairs. Archived from the original (PDF) on 2017-11-17.
  5. "Letters from Thane Read asking Helen Keller to sign the World Constitution for world peace. 1961". Helen Keller Archive. American Foundation for the Blind. Retrieved 2023-07-01.
  6. "Letter from World Constitution Coordinating Committee to Helen, enclosing current materials". Helen Keller Archive. American Foundation for the Blind. Retrieved 2023-07-03.
  7. "Preparing earth constitution | Global Strategies & Solutions | The Encyclopedia of World Problems". The Encyclopedia of World Problems | Union of International Associations (UIA). Archived from the original on 2023-07-19. Retrieved 2023-07-15.

ಮುಂದೆ ಓದಿ

ಬದಲಾಯಿಸಿ