ರಾಧಾನಾಟ ಎಂದರೆ ಸಣ್ಣಾಟದ ಒಂದು ಪ್ರಕಾರ.ಇದು ಒಬ್ಬನ ಸೃಷ್ಟಿಯಾಗಿರದೆ ಹಲವಾರು ಜನರ ಸಮೂಹಸೃಷ್ಟಿ ಎಂದು ಹೇಳಬಹುದು.

ಹಿನ್ನಲೆ

ಬದಲಾಯಿಸಿ

ದಾಸರಾಟಗಳು ಮಾಯವಗುತ್ತಿದ್ದ ಕಾಲಕ್ಕೆ ಸಣ್ಣಾಟದಲ್ಲಿಯೆ ರಾಧಾನಾಟ ಎಂಬ ಹೊಸ ಪ್ರಕಾರ ಹುಟ್ಟಿಕೊಂಡಿತು.ಮಹರಾಷ್ಟ್ರದ ತಮಾಶಾದ ಪ್ರಭಾವದಿಂದ ಪ್ರೇರಣೆಗೊಂಡು ಹುಟ್ಟಿಕೊಂಡಿತು.ರಾಧಾನಾಟವನ್ನು ಮೊದಲು ರಚಿಸಿದವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಸರಗಿ ಗ್ರಾಮದ ಕುಂಬಾರರು ಎಂದು ತಿಳಿದು ಬರುತ್ತದೆ.ಚಿಕ್ಕೋಡಿ ತಾಲೂಕಿನಲ್ಲಿ ಮರಾಠಿ ಭಾಷೆಯ ಜನರು ಅಲ್ಲಲ್ಲಿ ಜಾಸ್ತಿ ಕಾಣಸಿಗುತ್ತಾರೆ.ಅಲ್ಲಿ ತಮಾಶಾ ಪ್ರದರ್ಶನವಾಗುತ್ತಿದ್ದು ಅದನ್ನು ನೋಡಿ ಈತ ಅವುಗಳನ್ನು ಅನುಕರಣೆ ಮಾಡಿರುವ ಸಾಧ್ಯತೆ ಇದೆ.ಇವನು ರಚಿಸಿದ ಆಟಕ್ಕೆ 'ಬಸರಗಿ ಕುಂಬಾರನ ಆಟವೆಂದೇ ಹೇಳುತ್ತಿದ್ದರು.ಇವನಿಗೆ ತುಳಸಿ ರಾಮಸಿಂಗನೆಂಬ ಗುರುವಿದ್ದನೆಂದು ತಿಳಿದು ಬರುತ್ತದೆ.ಕುಂಬಾರನ ಅನಂತರ ಅನೇಕ ಕವಿಗಳು ರಾಧಾನಾಟ ರಚಿಸಿದ್ದಾರೆ.ಕೆಲವರು ರಾಧಾನಾಟಕ್ಕೆ ಹಾಡುಗಳನ್ನು ಮಾತ್ರ ರಚಿಸಿದ್ದಾರೆ.ಅವರುಗಳಲ್ಲಿ ಪಾಶ್ಚಾಪುರದ ಸುಬ್ಬರಾವ್,ನರೇವಾಡ ತಮ್ಮಣ್ಣ, ಶಮನೇವಾಡಿ ಅಪ್ಪಣ್ಣ ಮುಂತಾದವರು ಪ್ರಮುಖರು.

ಪಾತ್ರಗಳು

ಬದಲಾಯಿಸಿ

ತಮಾಶಾದ ಚುಮಣಾ,ಗಲ್ಪೋಜಿ,ಮತ್ತು ಸಖಾರಾಮ ತಾತ್ಯಾ ಇವು ರಾಧಾನಾಟಕ್ಕೆ ಆಮದಾಗಿರುವ ಪಾತ್ರಗಳು.ದಾಸರಾಟದ ನಾಯಕ ಗೊಡ್ಡಿ ಭೀಮನ ಹೆಸರನ್ನೆ ಬದಲಾಯಿಸಿ ರಾಧಾನಾಟಕ್ಕೆ ಗಲ್ಪೋಜಿ ಎಂದು ಬಳಸಿಕೊಳ್ಳಲಾಗಿದೆ ಎಂಬ ಅಭಿಪ್ರಾಯಗಳಿದೆ..ದಾಸರಾಟ ಹಾಗೂ ತಮಾಶಾವನ್ನು ನೋಡಿದ ಕವಿ ,ಎರಡೂ ಆಟಗಳನ್ನು ತುಲನಾತ್ಮಕವಾಗಿ ಗಮನಿಸಿ ರಾಧಾನಾಟವನ್ನು ರಚಿಸಿರುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವೂ ಇದೆ

ಆರಂಭದಲ್ಲಿ ಚುಮಣಾ ಗಲ್ಪೋಜಿಯ ವಶವಾಗುವುದು ಮತ್ತು ಚುಮಣಾ ಗಲ್ಪೋಜಿಯ ಸಾಮರಸ್ಯದೊಂದಿಗೆ ಕಥೆ ಮುಗಿಯುತಿತ್ತು.ಇದು ರಸಿಕರಿಗೆ ಹಿಡಿಸಲ್ಲಿಲ್ಲ ರಂಗಭೂಮಿಯ ಮೇಲೆ ಬರೆ ಹೆಣ್ಣು ಪಾತ್ರವನ್ನು ತಂದು ಹೆಣ್ಣು ಗಂಡಿನ ಸಾಮರಸ್ಯದೊಂದಿಗೆ ಆಟ ಮುಕ್ತಾಯ ಮಾಡಿದರೆ ಜನಪ್ರಿಯವಾಗುವುದಿಲ್ಲ ಅದರ ಬದಲಾಗಿ ಹೆಣ್ಣಿನ ಗಂಡಿನ ನಡುವೆ ವಾಗ್ವಾದ ಬರುವ ಹಾಗೆ ಕಥೆ ಮಾರ್ಪಡಿಸಿಕೊಂಡರೆ ಹೇಗೆ ಎಂಬ ಕಲ್ಪನೆಯೋಂದಿಗೆ ಬದಲಾಯಿಸಿ ರಾಧಾನಾಟವು ಪರಿವರ್ತನೆ ಹೊಂದಿ ಹರದೇಸಿ-ನಾಗೇಶಿ ಸಂಪ್ರದಾಯಕ್ಕೆ ಜೋತು ಬಿದ್ದಿರುವುದು ಕುತೂಹಲಕಾರಿ.ಚುಮಣಾಳನ್ನು ಪತಿವ್ರತೆಯಾನ್ನಾಗಿಸಿದರು.ಅವಳ ಮೇಲೆ ಪ್ರೀತಿ ಇಟ್ಟಿರುವ ಗಲ್ಪೋಜಿಗೆ ಅವಳಿಂದಲೆ ವೇದಾಂತ ಉಪದೇಶ ಮಾಡಿಸುತ್ತಾರೆ.ಇಬ್ಬರ ನಡುವೆ ವಾದ -ವಿವಾದಗಳನ್ನು ಸೃಷ್ಟಿ ಮಾಡುತ್ತಾರೆ.ಕೊನೆಗೆ ಪತಿವ್ರತೆಯ ಉಪದೇಶವೆ ಗೆಲ್ಲುವಂತೆ ಮಾಡುತ್ತಾರೆ.ಹೀಗೆ ಹೊಸದಾಗಿ ಬದಲಾವಣೆ ಮಾಡಿದಂತಹ ರಾಧಾನಾಟ ಬಹುಬೇಗನೆ ಜನಪ್ರೀಯವಾಗುತ್ತದೆ.

ಪ್ರದರ್ಶನ

ಬದಲಾಯಿಸಿ

ರಾಧಾನಾಟದಲ್ಲಿ ಪ್ರದರ್ಶನದ ಮೊದಲಿಗೆ ಗಣಪತಿ ಸ್ತುತಿ ಇರುತ್ತದೆ.ಬಾಲಗಣಪತಿ ರಂಗದಲ್ಲಿ ಬರುತ್ತಾನೆ ಪೂಜೆ ನಡೆಯುತ್ತದೆ ಆ ನಂತರ ಕಥೆ ಆರಂಭವಾಗುತ್ತದೆ.ಗೊಲ್ಲತಿ ಬರುತ್ತಾಳೆ ದೂತಿ ನೀನು ಯಾರೆಂದು ಪ್ರಶ್ನೆಮಾಡುತ್ತಾಳೆ.ನಾನು ಗೊಲ್ಲತಿ ಹಾಲು ಮೊಸರು ಮಾರಲು ಬಂದಿರುವೆನೆಂದು ಹೇಳುತ್ತಾಳೆ.ತಾನು ತಂದ ಹಾಲು ,ಮೊಸರು ಬಹಳ ರುಚಿಯುಕ್ತವಾದುದು ಎಂದು ವರ್ಣಿಸಲು ಸುರುಮಾಡುತ್ತಾಳೆ ದೂತಿ ಹಾಗು ಗೊಲ್ಲತಿ ನಡುವೆ ಹಾಸ್ಯದ ಹೊನಲು ಹರಿಯುತ್ತದೆ.ನೀನು ವ್ಯಾಪಾರಕ್ಕೆ ಗೋಕುಲಕ್ಕೆ ಹೋಗೆಂದು ದೂತಿ ಗೊಲ್ಲತಿಗೆ ಹೇಳುತ್ತಾಳೆ.ಅದರಂತೆ ಗೊಲ್ಲತಿ ಗೋಕುಲಕ್ಕೆ ಬರುತ್ತಾಳೆ ಬಂದಾಗ ಗೋಪಾಲಕೃಷ್ಣ ಅವಳನ್ನು ತಡೆದು ಸುಂಕ ಕೊಡೆಂದು ಪೀಡಿಸುತ್ತಾನೆ,ಇಬ್ಬರ ನಾಡುವೆ ವಾದ -ವಿವಾದ ನಡೆಯುತ್ತದೆ ಕಡೆಗೆ ಗೊಲ್ಲತಿ ತಾನು ಮುಂದಿನ ಜನ್ಮದಲ್ಲಿ ಚುಮಣಾಳಾಗಿ ಬರುತ್ತೇನೆ ನೀನು ಗಲ್ಪೋಜಿಯಾಗಿ ಬಾ,ದೂತಿ ಸುಖಾರಾಮ ತಾತ್ಯಾ ಆಗಿ ಬರುತ್ತಾನೆ.ಆಗ ನಾನು ನಿನ್ನ ಕೈವಶಳಾಗಿ ಸುಂಕ ಕೊಡುತ್ತೇನೆಂದು ಹೇಳುತ್ತ್ತಾಳೆ.ಇಲ್ಲಿಗೆ ಮೊದಲನೆ ಭಾಗ ಮುಕ್ತಾಯವಾಗುತ್ತದೆ.ದಾಸರಾಟದ ಪೂರ್ವಾರ್ಧ ಭಾಗವನ್ನೆ ಇಲ್ಲಿ ಮಾರ್ಪಡಿಸಿ ತೆಗೆದುಕೊಂಡಿರುವಂತೆ ಕಾಣುತ್ತದೆ. ಎರಡನೆಯ ಭಾಗದಲ್ಲಿ ಗಲ್ಪೋಜಿ ,ಸುಖರಾಮ,ತಾತ್ಯಾರು ಸ್ನೇಹದಿಂದಿರುತ್ತಾರೆ.ಚುಮಣಾ ಓಣಿಯಲ್ಲಿ ಹಾದು ಹೋಗುತ್ತಿರುತ್ತಾಳೆ ಅವಳನ್ನು ಕಂಡು ಗಲ್ಪೋಜಿ ಮೋಹಪರವಶನಾಗುತ್ತಾನೆ.ಸುಖರಾಮ ಅವಳನ್ನು ಒಪ್ಪಿಸಲು ತಾತ್ಯನನ್ನು ಕಳುಹಿಸುತ್ತಾನೆ.ಅವಳು ಒಪ್ಪುದಿಲ್ಲ ಸ್ವತಃ ಗಲ್ಪೋಜಿಯೆ ಅವಳನ್ನು ಒಪ್ಪಿಸಲು ಹೋಗುತ್ತಾನೆ.ಇಬ್ಬರ ನಡುವೆ ವಾದಗಳಾಗುತ್ತದೆ.ಪರಿಪರಿಯಾಗಿ ಕೇಳಿಕೊಂಡರು ಚುಮಣಾ ಒಪ್ಪೊದಿಲ್ಲ.ಕೊನೆಗೆ ಅವಳಿಗಾಗಿ ಎಲ್ಲ ಕಳೆದು ಕೊಂಡು ನಿರ್ಗತಿಕನಾಗಿ ದೇಶ ಸಂಚಾರಕ್ಕೆ ಹೋಗುತ್ತಾನೆ ಆನಂತರದ ದಿನಗಳಲ್ಲಿ ಚುಮಣಾಳ ಮನಪರಿವರ್ತನೆಯಾಗಿ ಅವನನ್ನು ಹುಡುಕಲು ಸುರು ಮಾಡುತ್ತಾಳೆ.ಅಷ್ಟರಲ್ಲಿ ಗಲ್ಪೋಜಿ ಸನ್ಯಾಸಿಯಾಗಿರುತ್ತಾನೆ ನನ್ನ ತಪ್ಪನ್ನು ಕ್ಷಮಿಸು ಎಂದು ಚುಮಣಾ ಬೇಡಿಕೊಳ್ಳುತ್ತಾಳೆ ಗಲ್ಪೋಜಿ ಒಪ್ಪೊದಿಲ್ಲ.ಇವರೊಳಗೆ ವಾದ ವಿವಾದ ನಡೆಯುತ್ತದೆ ಕಡೆಗೆ ಹೇಗಾದರೂ ಗಲ್ಪೋಜಿಯನ್ನು ಒಪ್ಪುವಂತೆ ಮಾಡುತ್ತಾಳೆ.ಇಬ್ಬರೂ ಒಂದಾಗುತ್ತಾರೆ

ವೇಷ ಭೂಷಣ

ಬದಲಾಯಿಸಿ

ರಾಧಾನಾಟದ ವೇಷಭೂಷಣವು ಸಣ್ಣಾಟದ ವೇಷಭೂಷಣದ ಸ್ವರೂಪವನ್ನೆ ಹೋಲುತ್ತದೆ .ರಂಗ ಸಜ್ಜಿಕೆ,ಹಾಡುಗಾರಿಕೆ,ಸಂಭಾಷಣೆ,ಕುಣಿತ ಎಲ್ಲವೂ ಸಣ್ಣಾಟದ ಅಂಶವನ್ನೆ ಹೋಲುತ್ತದೆ.ಇಂದು ಕೂಡಾ ಅಲ್ಲಲ್ಲಿ ರಾಧಾನಾಟದ ಮೇಳಗಳು ಕಂಡು ಬರುತ್ತದೆ.ಕೇವಲ ಮಹಿಳೆಯರನ್ನು ಒಳಗೊಂಡ ಮೇಳಗಳು ಕೂಡಾ ಇವೆ.

ಉಲ್ಲೇಖ

ಬದಲಾಯಿಸಿ
"https://kn.wikipedia.org/w/index.php?title=ರಾಧಾನಾಟ&oldid=1160713" ಇಂದ ಪಡೆಯಲ್ಪಟ್ಟಿದೆ