ಶ್ರೀಮತಿ ರಾಧಮ್ಮ ವೆಂಕಟೇಶ್, ಪ್ರಸಕ್ತ ಬೆಂಗಳೂರು ಮಹಾನಗರ ಪಾಲಿಕೆ[] ಯ ಹೊರಮಾವು ವಾರ್ಡ್ (ನಂ. ೨೫)ನ ಪುರಪಿತೃವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.[]

ಶಾಸಕ ಬಿ.ಎ._ಬಸವರಾಜ ವ್ಯಾಪ್ತಿಯ ಕೆ ಆರ್ ಪುರಂ ಕ್ಷೇತ್ರದ ಅಡಿಯಲ್ಲಿ ಹೊರಮಾವು ವಾರ್ಡ್ ಬರುತ್ತದೆ. ರಾಧಕ್ಕ ಎಂದೇ ತಮ್ಮ ವಾರ್ಡ್ ನಲ್ಲಿ ಜನಜನಿತರಾದ ರಾಧಮ್ಮ, ಸಮಾಜಸೇವಕರಾದ ಸಿ. ವೆಂಕಟೇಶರ ಧರ್ಮಪತ್ನಿ. ಯರಪನಹಳ್ಳಿ ಎಂಬ ಗ್ರಾಮದಲ್ಲಿ, ನಾರಾಯಣಪ್ಪ ಮತ್ತ್ತು ಮುನಿಯಮ್ಮ ಕೃಷಿಕ ದಂಪತಿಗಳಿಗೆ ಮೂರನೆಯ ಮಗುವಾಗಿ ಜನಿಸಿದ ರಾಧಮ್ಮ, ಕಡುಬಡತನದಲ್ಲಿಯೇ ತಮ್ಮ ಬಾಲ್ಯವನ್ನು ಕಳೆದರು. ವಿವಿ ಪುರಂ ಕಾಲೇಜಿನಲ್ಲಿ ಕೆಲಕಾಲ ಅಧ್ಯಯನ ನಡೆಸಿದ ರಾಧಮ್ಮ, ತಮ್ಮ ಸೋದರಮಾವ ಸಿ ವೆಂಕಟೇಶರನ್ನು ವರಿಸಿದ ರಾಧಮ್ಮ , ಅಮರೇಂದ್ರ ಮತ್ತು ಚಂದ್ರಶೇಖರರಿಗೆ ಜನ್ಮ ನೀಡಿದರು.

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ಸಿ ವೆಂಕಟೇಶರ ಪತ್ನಿ ರಾಧಮ್ಮರಿಗೆ, ೨೦೧೫ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಯ ಹೊರಮಾವು ವಾರ್ಡ್ನಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಯಿತು. ೮೬೦೦೦ ಮತದಾರರೂ, ೧೮ ಚದರ ಕಿ,ಮೀ ವಿಸ್ತೀರ್ಣದ ವಿಶಾಲವಾದ ಹೊರಮಾವು ವಾರ್ಡ್, ಪಾಲಿಕೆಯ ಅತಿ ದೊಡ್ಡ ವಾರ್ಡ್ ಆಗಿದೆ. []

೧೦೦೦೦ ಮತಗಳ ಬೃಹತ್ ಮುನ್ನಡೆಯಿಂದ ಪಾಲಿಕೆಗೆ ಆಯ್ಕೆಯಾದ ರಾಧಮ್ಮ, ಅತಿ ಹೆಚ್ಚು ಮುನ್ನಡೆ ಪಡೆದ ಅಭ್ಯರ್ಥಿ ಎಂಬ ಹೆಗ್ಗಳಿಕೆ ಪಾತ್ರರಾದರು. ೨೮ ಕೋಟಿ ವೆಚ್ಚದಲ್ಲಿ ಚೇಳಿಕೆರೆ-ಗೆದ್ದಲಹಳ್ಳಿ ರಾಜಕಾಲುವೆಯ ಪುನಃಶ್ಚೇತನ,[] ಹೊರಮಾವು ರೈಲ್ವೇ ಅಂಡರ್ ಪಾಸ್ ನಿರ್ಮಾಣ, ಗ್ರಾಮರಸ್ತೆಗಳಿಗೆ ಸಿಮೆಂಟ್ ರಸ್ತೆ, ಬೇರೆಡೆ ಡಾಂಬರ್ ರಸ್ತೆ, ೧೦೦ಕ್ಕೂ ಹೆಚ್ಚಿನ ಕೊಳವೆಬಾವಿಗಳ ನಿರ್ಮಾಣ, ಶುದ್ಧ ನೀರು ಘಟಕ ಸ್ಥಾಪನೆ,[] ಬೆಂಗಳೂರು ಒನ್ ಕೇಂದ್ರದ ಸ್ಥಾಪನೆ, … ಹೀಗೆ ರಾಧಮ್ಮನವರ ಅವಧಿಯಲ್ಲಿ, ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ.

ಉಲ್ಲೇಖಗಳು

ಬದಲಾಯಿಸಿ
  1. bbmp.gov.in/
  2. http://bbmp.gov.in/wardwisecouncliesdetails?p_p_id=councillors_WAR_councillorsportlet&p_p_lifecycle=0&p_p_state=normal&p_p_mode=view&p_p_col_id=column-1&p_p_col_count=2&_councillors_WAR_councillorsportlet_delta=20&_councillors_WAR_councillorsportlet_keywords=&_councillors_WAR_councillorsportlet_advancedSearch=false&_councillors_WAR_councillorsportlet_andOperator=true&_councillors_WAR_councillorsportlet_resetCur=false&cur=2
  3. https://www.youtube.com/watch?v=jjoiZH4zZnU
  4. "ಆರ್ಕೈವ್ ನಕಲು". Archived from the original on 2018-05-22. Retrieved 2017-11-09.
  5. https://bangalore.explocity.com/the_event/save-horamavu-agara-lake-walkathon/



ರಾಧಮ್ಮ_ವೆಂಕಟೇಶ್