ರಾಜ್ಯ ವಿಜ್ಞಾನ ಸಂಸ್ಥೆ ಮತ್ತು ತಂತ್ರಜ್ಞಾನ
ಈ ಪುಟವನ್ನು ಇನ್ನೂ ಸೃಷ್ಟಿಸಲಾಗುತ್ತಿದೆ ಈ ಹೊಸ ವಿಕಿಪೀಡಿಯ ಪುಟವನ್ನು ಎಸ್.ಡಿ.ಎಂ. ಉಜಿರೆ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ಅಭಿವೃದ್ದಿ ಪಡಿಸಲಾಗುತ್ತಿದೆ.ಸ್ವಲ್ಪ ಸಮಯದವರೆಗೆ ಈ ಪುಟವನ್ನು ಅವಶ್ಯಕತೆ ಇಲ್ಲದೆ ಸಂಪಾದಿಸದಂತೆ, ಅಥವಾ ಅಳಿಸುವಿಕೆಗೆ ಹಾಕದಂತೆ ಲೇಖನದ ಸಂಪಾದನೆಯ ಸಮಯದಲ್ಲಿ ಸಂಪಾದಕರು ಕೇಳಿಕೊಳ್ಳುತ್ತಾರೆ. |
ರಾಜ್ಯ ವಿಜ್ಞಾನ ಸಂಸ್ಥೆ ಮತ್ತು ತಂತ್ರಜ್ಞಾನ
ಬದಲಾಯಿಸಿರಾಜ್ಯ ವಿಜ್ಞಾನ ಸಂಸ್ಥೆ : ವಿಜ್ಞಾನ ಮತ್ತು ಗಣಿತ ವಿಷಯಗಳ ಬೋಧನಾ ಮಟ್ಟವನ್ನು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಹಂತಗಳಲ್ಲಿ ಉತ್ತಮಪಡಿಸಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿ, ಆಸಕ್ತಿ ಮೂಡಿಸಿ ಕುಶಲತೆಗಳನ್ನು ಹೆಚ್ಚಿಸುವುದು ಮತ್ತು ನಿತ್ಯ ಜೀವನದಲ್ಲಿ ವೈಜ್ಞಾನಿಕ ಮನೋಭಾವವನ್ನು ಅಳವಡಿಸಿಕೊಳ್ಳುವಂತೆ ಮಾಡುವುದು ಈ ಸಂಸ್ಥೆಯ ಮುಖ್ಯ ಧ್ಯೇಯ. ಇದಕ್ಕೆ ಪೂರಕವಾಗಿರುವಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಚಾರ ಗೋಷ್ಠಿ : ಈ ಗೋಷ್ಠಿಯನ್ನು ತಾಲ್ಲೂಕು, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ವಿ.ಐ.ಟಿ.ಎಂ.ನ ಸಹಯೋಗದೊಂದಿಗೆ 2012-13 ನೇ ಸಾಲಿನಲ್ಲಿ ನಡೆಸಲಾಗಿದೆ. ಗೋಷ್ಠಿಯ ವಿಷಯ "ಭಾರತದಲ್ಲಿ ಗಣಿತ- ಭೂತ, ವರ್ತಮಾನ, ಭವಿಷ್ಯ" ಜಿಲ್ಲಾ ಮಟ್ಟದಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರು ರಾಜ್ಯ ಮಟ್ಟದಲ್ಲಿ ಭಾಗವಹಿಸಲು ಅರ್ಹತೆ ಪಡೆಯುವಂತೆ ಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕಾಗಿ ರೂ. 7.12 ಲಕ್ಷಗಳನ್ನು ವೆಚ್ಚ ಮಾಡಲಾಗಿದೆ. ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಮೈಸೂರಿನಲ್ಲಿ ದಿನಾಂಕ 09.11.2012 ರಂದು ನಡೆಸಲಾಯಿತು. 34 ಶೈಕ್ಷಣಿಕ ಜಿಲ್ಲೆಗಳಿಂದ 34 ವಿದ್ಯಾರ್ಥಿಗಳು ರಾಜ್ಯ ಮಟ್ಟದ ಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ವಿಜ್ಞಾನ ವಿಚಾರ ಗೋಷ್ಠಿ : ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ವಿಜ್ಞಾನ ಗೋಷ್ಠಿಯನ್ನು ನಡೆಸಲಾಗಿದೆ. ಈ ಕಾರ್ಯಕ್ರಮಕ್ಕೆ ರೂ.6.74 ಲಕ್ಷ ವೆಚ್ಚವಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ "ಶಾಲೆಗಳಲ್ಲಿ ಗಣಿತ ಕಲಿಕೆಯಲ್ಲಿ ಸಂತಸ" ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ "ಭಾರತದ ಬಾಹ್ಯಾಕಾಶ ಕಾರ್ಯಕ್ರಮ- ಆಶಯ ಮತ್ತು ಚಿಂತನೆಗಳು" ಎಂಬ ವಿಷಯಗಳ ಮೇಲೆ ವಿಜ್ಞಾನ ವಿಚಾರ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ.
ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ರಸ ಪ್ರಶ್ನೆ ಕಾರ್ಯಕ್ರಮ : ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಹಯೋಗದೊಂದಿಗೆ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಗ್ರಾಮೀಣ ಮತ್ತು ಶಹರ ಎಂದು ಪ್ರತ್ಯೇಕ ಎಂದು ನಡೆಸಲಾಗುವುದು. ಇದಕ್ಕೆ ಡಿ.ಎಸ್.ಇ.ಆರ್.ಟಿ. ವತಿಯಿಂದ ರೂ. 2.62 ಲಕ್ಷಗಳ ಅನುದಾನವನ್ನು ಕ.ರಾ.ವಿ.ಪ.ಗೆ ನೀಡಲಾಗಿದೆ. ರಾಜ್ಯ ಮಟ್ಟದ ಸ್ಪರ್ಧೆಯು 2012ರ ಫೆಬ್ರುವರಿ ಮಾಹೆಯಲ್ಲಿ ಬೆಂಗಳೂರಿನಲ್ಲಿ ಆಯೋಜನೆಯಾಗಿದೆ.
ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ವಸ್ತು ಪ್ರದರ್ಶನ : ವಿಜ್ಞಾನದ ಸದುಪಯೋಗದ ಬಗ್ಗೆ ತಿಳುವಳಿಕೆ ಮೂಡಿಸಲು ಸದರಿ ಕಾರ್ಯಕ್ರಮವನ್ನು ತಾಲ್ಲೂಕು, ಜಿಲ್ಲಾ, ರಾಜ್ಯ, ವಿಭಾಗ ಮತ್ತು ರಾಷ್ಟ ಮಟ್ಟದಲ್ಲಿ ನಡೆಸಲಾಗುತ್ತದೆ. ಇದಕ್ಕಾಗಿ ರೂ. 43.1 ಲಕ್ಷಗಳನ್ನು ನಿಗದಿಪಡಿಸಿದೆ. ಈ ಕಾರ್ಯಕ್ರಮವನ್ನು ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದ (ವಿ.ಐ.ಟಿ.ಎಂ.) ಸಹಯೋಗದೊಂದಿದೆ ನಡೆಸಲಾಗಿದೆ. ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಡಿಸೆಂಬರ್ 2012 ರಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಆಯೋಜಿಸಲಾಗಿದೆ. ರಾಜ್ಯ ಮಟ್ಟದಲ್ಲಿ ಎಲ್ಲಾ ಜಿಲ್ಲೆಗಳಿಂದ 408 ವಿದ್ಯಾರ್ಥಿಗಳು ಮತ್ತು 34 ಶಿಕ್ಷಕರು ಭಾಗವಹಿಸಿರುತ್ತಾರೆ. ಈ ಸಾಲಿನಲ್ಲಿ ದಕ್ಷಿಣ ವಲಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನವನ್ನು ಡಿ.ಎಸ್.ಇ.ಆರ್.ಟಿ. ವತಿಯಿಂದ ಜನವರಿ 2013ರ ಮಾಹೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದು, ದಕ್ಷಿಣ ಭಾರತದ 5 ರಾಜ್ಯಗಳ 500 ಪ್ರೌಢ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದರಲ್ಲಿ ಭಾಗವಹಿಸಿದ್ದಾರೆ.
ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ನಾಟಕ ಸ್ಪರ್ಧೆ : ಈ ನಾಟಕ ಸ್ಪರ್ಧೆಯನ್ನು ತಾಲ್ಲೂಕು, ಜಿಲ್ಲಾ, ವಿಭಾಗ, ರಾಜ್ಯ, ವಲಯ, ರಾಷ್ಟ್ರ ಮಟ್ಟದಲ್ಲಿ ವಿ.ಐ.ಟಿ.ಎಂ.ನ ಸಹಯೋಗದೊಂದಿಗೆ ನಡೆಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದ 8 ವಿದ್ಯಾರ್ಥಿಗಳು ಮತ್ತು ಒಬ್ಬ ಮಾರ್ಗದರ್ಶಿ ಶಿಕ್ಷಕರ ಒಂದು ತಂಡವು ವಿಭಾಗ ಮಟ್ಟದಲ್ಲಿ ಭಾಗವಹಿಸಿ, ಅಲ್ಲಿ ಪ್ರಥಮ ಸ್ಥಾನ ಪಡೆದ ತಂಡ ರಾಜ್ಯ ಮಟ್ಟ, ವಲಯ ಮಟ್ಟ, ಹೀಗೆ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿದೆ. ತಲುಪುತ್ತದೆ. ಇದಕ್ಕಾಗಿ ರೂ.12.58 ಲಕ್ಷಗಳ ಅನುದಾನ ಬಳಕೆಯಾಗಿದೆ.
ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪುನಶ್ಚೇತನ ತರಬೇತಿ : ಡಯಟ್ ಕುಮಟಾ ವತಿಯಿಂದ ಉತ್ತರ ಕನ್ನಡ ಮತ್ತು ಸಿರ್ಸಿ ಜಿಲ್ಲೆಗಳ ಆಯ್ದ 100 ಹಿರಿಯ ಪಾಥಮಿಕ ಶಾಲಾ ಶಿಕ್ಷಕರಿಗೆ 5 ದಿನಗಳ ವಿಜ್ಞಾನ ವಿಷಯ ಪುನಶ್ಚೇತನ ತರಬೇತಿ ಆಯೋಜಿಸಿದೆ. ಈ ತರಬೇತಿಗಾಗಿ ಒಟ್ಟು ರೂ. 1.00 ಲಕ್ಷ ಖರ್ಚು ಮಾಡಲಾಗಿದೆ.
ವಿಜ್ಞಾನ ಕೇಂದ್ರಗಳ ನಿರ್ವಹಣೆ : 224 ವಿಧಾನ ಸಭಾ ಕ್ಷೇತ್ರಗಳಿಗೆ ತಲಾ ಒಂದರಂತೆ ರಾಜ್ಯದಲ್ಲಿ 224 ವಿಜ್ಞಾನ ಕೇಂದ್ರಗಳಿದ್ದು, ಅವುಗಳ ಕಾರ್ಯ ನಿರ್ವಹಣೆಗಾಗಿ ಪ್ರತಿ ಶಾಲೆಗೆ ರೂ.5000/-ಗಳನ್ನು ನೀಡಲಾಗಿದ್ದು, ಸದರಿ ಮೊತ್ತವನ್ನು 6 ಸಿ.ಟಿಇ.ಗಳ ಮೂಲಕ ಮತ್ತು 5 ಡಯಟ್ ಗಳ ಮೂಲಕ ನೀಡಲಾಗಿದೆ. ಇದರ ವೆಚ್ಚ ರೂ. 1.12 ಲಕ್ಷಗಳಾಗಿರುತ್ತದೆ.
ಡಿ.ಇಡಿ ಪ್ರಶಿಕ್ಷಕರು ಮತ್ತು ಶಿಕ್ಷಣಾಗಳಿಗೆ ವಿಜ್ಞಾನ ಕಾರ್ಯಕ್ರಮಗಳು : ರಾಜ್ಯದ 30 ಡಯಟ್ ಗಳ ಮುಖಾಂತರ ಕಾರ್ಯಕ್ರಮ ಆಯೋಜನೆಯಾಗಿದೆ. ಒಟ್ಟು ವೆಚ್ಚ 3.6 ಲಕ್ಷಗಳು.
ವಿಜ್ಞಾನ ಪಾರ್ಕ್ ಸ್ಥಾಪನೆ : ಸಿ.ಟಿ.ಇ. ಮೈಸೂರು ಇಲ್ಲಿನ ಆವರಣದಲ್ಲಿ ರೂ. 8.82 ಲಕ್ಷ ವೆಚ್ಚದಲ್ಲಿ ವಿಜ್ಞಾನ ಪಾರ್ಕ್ ಸ್ಥಾಪಿಸಲಾಗಿದೆ.