ರಾಜೇಶ್ ಕುಮಾರ್ (ಏರ್ ಮಾರ್ಷಲ್)
ಏರ್ ಮಾರ್ಷಲ್ ರಾಜೇಶ್ ಕುಮಾರ್ ಅವರು ಭಾರತೀಯ ವಾಯುಪಡೆಯ ಮಾಜಿ ಅಧಿಕಾರಿಯಾಗಿದ್ದಾರೆ. ಅವರು ಕೊನೆಯದಾಗಿ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್‌ನ ಕಮಾಂಡರ್-ಇನ್-ಚೀಫ್ ಆಗಿ ಸೇವೆ ಸಲ್ಲಿಸಿದರು. ಏರ್ ಮಾರ್ಷಲ್ ನವಕರಣಜಿತ್ ಸಿಂಗ್ ಧಿಲ್ಲಾನ್ ಅವರ ನಿವೃತ್ತಿಯ ನಂತರ ೨೦೨೧ ರ ಜನವರಿ ೩೧ ರಂದು ಅವರು ಅಧಿಕಾರ ವಹಿಸಿಕೊಂಡರು.[೨] ಈ ಹಿಂದೆ ಅವರು ಸೆಂಟ್ರಲ್ ಏರ್ ಕಮಾಂಡ್ ಎಒಸಿ-ಇನ್-ಸಿ ಮತ್ತು ಈಸ್ಟರ್ನ್ ಏರ್ ಕಮಾಂಡ್ ನಲ್ಲಿ ಎಸ್ಎಎಸ್ಒ ಆಗಿ ಸೇವೆ ಸಲ್ಲಿಸಿದ್ದರು. ಅವರು ೩೧ ಆಗಸ್ಟ್ ೨೦೨೧ ರಂದು ನಿವೃತ್ತರಾದರು. [೩][೪][೫]
ಏರ್ ಮಾರ್ಷಲ್ ರಾಜೇಶ್ ಕುಮಾರ್ ಪರಮ ವಿಶಿಷ್ಥ ಸೇವಾ ಪದಕ, ಅತಿ ವಿಶಿಷ್ಥ ಸೇವಾ ಪದಕ, ವಾಯು ಸೇನಾ ಪದಕ, ಏಯಡೆ - ಡೆ - ಕ್ಯಾಂಪ್ | |
---|---|
ಸೇವಾವಧಿ | ೪ ಜೂನ್ ೧೯೮೨ – ೩೧ Aಆಗಸ್ಥ್ ೨೦೨೧ |
ಶ್ರೇಣಿ(ದರ್ಜೆ) | ಏರ್ ಮಾರ್ಷಲ್ |
ಸೇವಾ ಸಂಖ್ಯೆ | 16770[೧] |
ಅಧೀನ ಕಮಾಂಡ್ | ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ ಸೆಂಟ್ರಲ್ ಏರ್ ಕಮಾಂಡ್ |
ಪ್ರಶಸ್ತಿ(ಗಳು) | ಪರಮ ವಿಶಿಷ್ಥ ಸೇವಾ ಪದಕ ಅತಿ ವಿಶಿಷ್ಥ ಸೇವಾ ಪದಕ ವಾಯು ಸೇನಾ ಪದಕ ಏಯಡೆ - ಡೆ - ಕ್ಯಾಂಪ್ |
ಸಂಗಾತಿ | ಜಯ ಕುಮಾರ್ |
ಆರಂಭಿಕ ಜೀವನ ಮತ್ತು ಶಿಕ್ಷಣ
ಬದಲಾಯಿಸಿಕುಮಾರ್ ಅವರು ಅಜಮೇರ್‌ನ ಮಾಯೊ ಕಾಲೇಜು ಮತ್ತು ರಾಷ್ಟ್ರೀಯ ರಕ್ಷಣಾ ಅಕಾಡೆಮಿ, ಖಡಕವಸ್ಲ- ಇದರ ಹಳೆವಿದ್ಯಾರ್ಥಿ. ವಾಯು ಕಮಾಂಡ್ ಮತ್ತು ಸ್ಥಾಫ್ ಕಾಲೇಜು, ಮೋಂಟ್ಗೋಮೇರಿ, ಅಲಬಾಮ -ಇಲ್ಲಿನ ಪದವೀಧರರು. ಸಿಕಂದರಾಬಾದ್‌ನಲ್ಲಿರುವ ರಕ್ಷಣಾ ನಿರ್ವಹಣಾ ಕಾಲೇಜಿನಿಂದ ಉನ್ನತ ರಕ್ಷಣಾ ನಿರ್ವಹಣಾ ತರಬೇತಿಯನ್ನೂ ಪಡೆದಿರುವರು.[೬][೭]
ವೃತ್ತಿಜೀವನ
ಬದಲಾಯಿಸಿಕುಮಾರ್ ಅವರನ್ನು ೧೯೮೨ ರ ಜೂನ್ ೪ ರಂದು ಭಾರತೀಯ ವಾಯುಪಡೆಯ ಫೈಟರ್ ಸ್ಟ್ರೀಮ್‌ಗೆ ನಿಯೋಜಿಸಲಾಯಿತು. ಅವರು ಫೈಟರ್ ಏರ್ಕ್ರಾಫ್ಟ್ ಸ್ಕ್ವಾಡ್ರನ್ ಮತ್ತು ಫ್ರಂಟ್-ಲೈನ್ ವಾಯುನೆಲೆಯನ್ನು ಮುನ್ನಡೆಸಿದ್ದಾರೆ. ಅವರು ಎ ವರ್ಗದ ಫ್ಲೈಯಿಂಗ್ ಬೋಧಕ, ಇನ್ಸ್ಟ್ರುಮೆಂಟ್ ರೇಟಿಂಗ್ ಬೋಧಕ ಮತ್ತು ಏರ್ ಕ್ರೂ ಮೇಲ್ವಿಚಾರಕರಾಗಿದ್ದಾರೆ.[೬][೭] ಅವರು ಇಸ್ರೇಲ್‌ನ ಎಡಬ್ಲ್ಯೂಎಸಿಎಸ್ ಯೋಜನೆಯ ಮೇಲ್ವಿಚಾರಣಾ ತಂಡದ ನಾಯಕರಾಗಿ, ಬೆಂಗಳೂರಿನ ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ ಭಾರತೀಯ ವಾಯುಪಡೆಯ ಯೋಜನಾ ನಿರ್ವಹಣಾ ತಂಡದ ನಿರ್ದೇಶಕರಾಗಿ ಮತ್ತು ಶಿಲ್ಲಾಂಗ್‌ನ ಪೂರ್ವ ವಾಯು ಕಮಾಂಡ್‌ನ ಹಿರಿಯ ವಾಯು ಸಿಬ್ಬಂದಿ ಅಧಿಕಾರಿಯಾಗಿ ನೇಮಕರಾಗಿದ್ದಾರೆ.[೮][೯]
ತಮ್ಮ ೩೬ ವರ್ಷಗಳ ವೃತ್ತಿಜೀವನದಲ್ಲಿ, ಕುಮಾರ್ ಅವರಿಗೆ ೨೦೨೧ ರಲ್ಲಿ ಪರಮ್ ವಿಶಿಷ್ಟ ಸೇವಾ ಪದಕ, ೨೦೧೯ ರಲ್ಲಿ ಅತಿ ವಿಶಿಷ್ಟ ಸೇವಾ ಪದಕ ಮತ್ತು ಆಪರೇಷನ್ ಪರಾಕ್ರಮ ಶೌರ್ಯಕ್ಕಾಗಿ ವಾಯು ಸೇನಾ ಪದಕ ನೀಡಲಾಗಿದೆ.[೧೦][೧೧][೧೨]
ಪರಮ ವಿಶಿಷ್ಟ ಸೇವಾ ಪದಕ | ಅತಿ ವಿಶಿಷ್ಟ ಸೇವಾ ಪದಕ | ವಾಯು ಸೇನಾ ಪದಕ |
ರಾಜೇಶ್ ಕುಮಾರ್ ಅವರು ಜಯಾ ಕುಮಾರ್ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಇಬ್ಬರು ಪುತ್ರರಿದ್ದಾರೆ .[೧೦]
ಉಲ್ಲೇಖಗಳು
ಬದಲಾಯಿಸಿ- ↑ "411 Republic Day Gallantry and Other Defence Decorations Announced". pib.nic.in. Press Information Bureau, Government of India. Archived from the original on 27 ಮಾರ್ಚ್ 2019. Retrieved 3 ಮಾರ್ಚ್ 2019.
- ↑ "Air Marshal Rajesh Kumar to take over as new chief of Strategic Forces Command". 31 ಜನವರಿ 2021.
- ↑ "Rapid Turnover in IAF Brass". Bharat Shakti. 29 ಮೇ 2021.
- ↑ "Air Marshal SBP Sinha will retire on December 31". 29 ಡಿಸೆಂಬರ್ 2018. Retrieved 20 ಫೆಬ್ರವರಿ 2019.
- ↑ "Air Marshal Rajesh Kumar takes charge as AOC-in-C". 2 ಜನವರಿ 2019. Archived from the original on 6 ಮಾರ್ಚ್ 2019. Retrieved 21 ಫೆಬ್ರವರಿ 2019.
- ↑ ೬.೦ ೬.೧ "IAF's key interface with Industry is new Central Commander". SP's MAI. Archived from the original on 6 ಮಾರ್ಚ್ 2019. Retrieved 20 ಫೆಬ್ರವರಿ 2019.
- ↑ ೭.೦ ೭.೧ "Air Marshal Rajesh Kumar is the new Air Officer Commanding-in-Chief Central Air Command". 1 ಜನವರಿ 2019. Archived from the original on 22 ಜನವರಿ 2019. Retrieved 3 ಮಾರ್ಚ್ 2019.
- ↑ "Raksha Mantri Visits Forward Army & Airforce Bases in Assam & Arunachal Pradesh". Press Information Bureau, Government of India. 5 ನವೆಂಬರ್ 2017. Retrieved 3 ಮಾರ್ಚ್ 2019.
- ↑ "Air Marshal Rajesh taken over as the Senior Air Staff Officer at HQ EAC". SP News Agency. Archived from the original on 1 ಜನವರಿ 2018. Retrieved 3 ಮಾರ್ಚ್ 2019.
- ↑ ೧೦.೦ ೧೦.೧ "Air Marshal Rajesh taken over as the Senior Air Staff Officer at HQ EAC". SP News Agency. Archived from the original on 1 ಜನವರಿ 2018. Retrieved 3 ಮಾರ್ಚ್ 2019."Air Marshal Rajesh taken over as the Senior Air Staff Officer at HQ EAC".
- ↑ "Distinguished Service and Gallantry Awards to IAF Personnel on Republic Day 2019". pib.nic.in. Press Information Bureau, Government of India.
- ↑ "President Shri Ram Nath Kovind approves 455 Gallantry & other defence decorations to Armed Forces personnel on Republic Day". PIB. 25 ಜನವರಿ 2021.