ರಾಜಸ್ಥಾನದ ಮಹಿಳೆಯರ ಉಡುಗೆ-ತೊಡುಗೆಗಳು ಮತ್ತು ಆಭರಣಗಳು

ರಾಜಸ್ಥಾನವು ಭಾರತದ ಸಾಂಸ್ಕೃತಿಕ ರಾಜಧಾನಿಗಳಲ್ಲಿ ಒಂದಾಗಿದೆ. ಇದು ತನ್ನ ಸಮೃದ್ಧ, ರೋಮಾಂಚಕ, ವರ್ಣರಂಜಿತ ಹಾಗೂ ವಿಭಿನ್ನ ಶೈಲಿಯ ಸಂಗೀತದಿಂದ ವಿದೇಶದಿಂದಲೂ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಅಷ್ಟೇ ಅಲ್ಲದೆ ರಾಜಸ್ಥಾನಿ ಸಂಸ್ಕೃತಿಗೆ ಇನ್ನಷ್ಟು ಹಿರಿಮೆಯನ್ನು ತಂದುಕೊಟ್ಟಿರುವುದು ಇಲ್ಲಿನ ಉಡುಗೆ ತೊಡುಗೆ ಹಾಗೂ ಆಭರಣ ಶೈಲಿಗಳಾಗಿವೆ.[] ರಾಜಸ್ಥಾನವು ಮರುಭೂಮಿ ಪ್ರದೇಶವಾಗಿದ್ದರೂ ತನ್ನದೇ ಆದ ಸಂಸ್ಕೃತಿಯಿಂದಾಗಿ ಫಲವತ್ತತೆ ಹೊಂದಿದೆ.

ರಾಜಸ್ಥಾನದ ಮಹಿಳೆಯರ ಉಡುಗೆ-ತೊಡುಗೆಗಳು

ಬದಲಾಯಿಸಿ

ಇಲ್ಲಿನ ಉಡುಗೆ-ತೊಡುಗೆಗಳು ಈ ಕೆಳಗಿನಂತಿವೆ:-

ರಾಜಸ್ಥಾನದ ಮಹಿಳೆಯರು ಘಾಗ್ರ ಎಂದು ಕರೆಯುವ ಉದ್ದವಾದ ಲಂಗ, ಚೋಲಿ ಹಾಗೂ ಕುರ್ತಾವನ್ನು ಧರಿಸುತ್ತಾರೆ. ಮಂಡಿಯ ವರೆಗಿನ ಘಾಗ್ರ ಹಾಗೂ ಪಾದದವರೆಗಿನಷ್ಟು ಉದ್ದವಿರುವ ಘಾಗ್ರಗಳನ್ನು ಕಾಣಬಹುದು. ಇದರ ಆಕಾರ ಸೊಂಟದಿಂದ ಕಾಲತ್ತ ಅಗಲವಾಗುತ್ತಾ ಬಂದಿದ್ದು ಛತ್ರಿಯನ್ನು ಹೋಲುತ್ತದೆ.[] ಇದರಲ್ಲಿ ವಿಭಿನ್ನವಾದ ಬಗೆಗಳು, ವಿವಿಧ ವಿನ್ಯಾಸಗಳನ್ನು ಕಾಣಬಹುದು. ಹಲವಾರು ಬಣ್ಣಗಳಲ್ಲಿ ಲಭ್ಯವಿರುವ ಘಾಗ್ರ ಹೆಚ್ಚಾಗಿ ಬಳಕೆ ಹಾಗೂ ಬೇಡಿಕೆಯಲ್ಲಿರುವುದು ಗುಲಾಬಿ, ಗಿಳಿಹಸಿರು, ಆಕಾಶ ನೀಲಿ ಹಾಗೂ ಕೆಂಪು ಬಣ್ಣಗಳಲ್ಲಿ. ರಾಜಸ್ಥಾನದ ವಾತಾವರಣ ಬಿರು ಬಿಸಿಲಿನದಾಗಿದ್ದು ಹೆಚ್ಚಾಗಿ ಇಲ್ಲಿಯ ಮಹಿಳೆಯರು ಹತ್ತಿಯ ಘಾಗ್ರಗಳನ್ನು ಬಳಸುತ್ತಾರೆ. ಅದರಲ್ಲೂ ಮೋತ್ರಾ ಹಾಗೂ ಲಹರಿಯಾ ಛಾಪನ್ನು ಹೊಂದಿರುವ ಹತ್ತಿಯ ಘಾಗ್ರಾಗಳು ಇಲ್ಲಿ ಅತಿ ಹೆಚ್ಚು ಚಾಲ್ತಿಯಲ್ಲಿದೆ.[]

ಓಢನಿ, ಹೆಣ್ಣುಮಕ್ಕಳು ಚೂಡಿದಾರಕ್ಕೆ ಹೊದ್ದುಕೊಳ್ಳುವ ಶಾಲನ್ನೆ ಹೋಲುತ್ತದೆ. ಓಢನಿಯ ಒಂದಡೆಯ ಕೊನೆಯನ್ನು ಲಂಗದೊಳಗೆ ಸರಿಯಾಗಿ  ಸಿಕ್ಕಿಸಿ ಮತ್ತೊಂದೆಡೆಯನ್ನು ಬಲ ಭುಜದ ಮೇಲೆ ಅಥವಾ ತಲೆಯ ಮೇಲೆ ಹೊದ್ದುಕೊಳ್ಳುತ್ತಾರೆ. ದೈನಂದಿಕವಾಗಿ ಸಾಧಾರಣ ವಿನ್ಯಾಸವುಳ್ಳ ಓಢನಿಗಳನ್ನು ಬಳಸಿದರೆ ಸಮಾರಂಭಗಳಲ್ಲಿ ಭಾರಿ ವಿನ್ಯಾಸದ ರಂಗು-ರಂಗಿನ ಓಢನಿಗಳನ್ನು ಹೊದಿಯುತ್ತಾ ಇಲ್ಲಿ ಮುಸಲ್ಮಾನರು ಹಾಗೂ ಹಿಂದೂಗಳೂ ಇಬ್ಬರೂ ಈ ಉಡುಪನ್ನು ಬಳಸುತ್ತಾರೆ. ಓಢನಿ ವಿಭಿನ್ನ ಬಣ್ಣ ಹಾಗೂ ವಿನ್ಯಾಸಗಳಲ್ಲಿ ಲಭ್ಯವಿದ್ದು ಲಂಗದ ಬಣ್ಣಕ್ಕೆ ಹೋಲುವ ಬಣ್ಣವನ್ನು ಬಳಸುತ್ತಾರೆ. []

ಲೆಹಂಗ ಚೋಲಿ

ಬದಲಾಯಿಸಿ

ರಾಜಸ್ಥಾನಿ ವಿವಾಹದಲ್ಲಿ ಲೆಹಂಗ ಚೋಲಿ ಅತ್ಯಂತ ಪ್ರಸಿದ್ಧವಾದ ಮತ್ತು ಆದ್ಯತೆಯ ವಿವಾಹದ ಉಡುಪಿನಲ್ಲಿ ಒಂದಾಗಿದೆ. ಇದರ ಮೂಲವನ್ನು ರಾಜಸ್ಥಾನ ಮತ್ತು ಗುಜರಾತ ಎಂದು ಗುರುತಿಸಲಾಗಿದೆ. ಇದು ವಧುಗೆ ಸ್ತ್ರೀವಾದಿ ಕವಚವಾಗಿದ್ದು ರಾಜಕಸೂತಿ ಹಾಗೂ ಆಕರ್ಷಕ ಮೊಘಲ್ ವಿನ್ಯಾಸಗಳಿಂದ ಕಂಗೊಳಿಸುತ್ತದೆ.  ನೇರವಾದ ಲೆಹಂಗ ಚೋಲಿ ದೇಹಕ್ಕೆ ಸರಿಕಟ್ಟಾಗಿ ಕುಳಿತು ಆಕರ್ಷಕವಾಗಿ ಕಾಣುವುದರಿಂದ ಇದನ್ನು ಹೆಚ್ಚಾಗಿ ಬಳಸುತ್ತಾರೆ.[]

ಪ್ಯಾಲೆಂಡ್ ಲೆಹಂಗಾ ಚೋಲಿ

ಬದಲಾಯಿಸಿ

ಲೆಹಂಗ ಚೋಲಿಯು ನೂತನ ಶೈಲಿಯದಾಗಿದ್ದು ವಧುವಿಗೆ ಬುಗಿಲೆದ್ದು ಕಾಣುತ್ತದೆ. ಪ್ಯಾನ್‍ಗಳನ್ನು ಲೆಹಂಗದಾ ವಿವಿಧ ಬಣ್ಣದೊಂದಿಗೆ ಒಟ್ಟಿಗೆ ಜೋಡಿಸಲಾಗುತ್ತದೆ. ಮೀನುಬಾಲ ಅಥವಾ ಮರ್ಮೇಯ್ಡ್ ಲೆಹಂಗ ಚೋಲಿ ರಾಜಸ್ಥಾನದ ಯುವತಿಯರಿಗೆ ಹೆಚ್ಚು ಪ್ರಿಯವಾದದ್ದಾದ್ದರಿಂದ ಈ ವರ್ಗದವರು ಇದನ್ನು ಹೆಚ್ಚು ಬಳಸುತ್ತಾರೆ. ಈ ರೀತಿಯ ಲೆಹಂಗಾ ಚೋಲಿಯನ್ನು ಸೊಂಟದ ತುದಿಯಲ್ಲಿ ಅಳವಡಿಸಲಾಗಿರುತ್ತದೆ ಮತ್ತು ಕೆಳಭಾಗದಲ್ಲಿ ಚಿಕ್ಕಾದಾಗಿ ಕತ್ತರಿಸಿರುತ್ತದೆ.

ವಿವಾಹ ಸಂದರ್ಭದಲ್ಲಿ ತೊಡುವ ಆಭರಣಗಳು

ಬದಲಾಯಿಸಿ

ರಾಜಸ್ಥಾನಿ ಮಹಿಳೆಯರು ಧರಿಸುವ ಆಭರಣವು ಅವರ ಸಂಸ್ಕೃತಿಯ ಗುರುತಾಗಿರುತ್ತದೆ.[] ರಾಜಸ್ಥಾನಿ ಆಭರಣಗಳು ವಜ್ರ, ಪಚ್ಚೆ ಮತ್ತು ದುಬಾರಿ ಕಲ್ಲುಗಳಿಂದ ಅಲಂಕೃತಗೊಂಡಿರುತ್ತವೆ. ಮೀನ, ಗಯಾರಿ ಮತ್ತು ಭಿಲ್‍ನಂತಹ ಬುಡಕಟ್ಟು ಜನಾಂಗದವರು ವಿವಿಧ ರೀತಿಯ ಆಭರಣಗಳನ್ನು ಹಾಕುತ್ತಿದ್ದರು. ರೈಕಸ್ ಮತ್ತು ರಬಾರ್ ಗಳ ಹೆಣ್ಣುಮಕ್ಕಳು ಧರಿಸುವ ಬೆಳ್ಳಿ ಆಭರಣಗಳು ಸೂರ್ಯ, ಚಂದ್ರ, ಎಲೆ ಮತ್ತು ಹೂವಿನಂತಹ ನೈಸರ್ಗಿಕ ಅಂಶಗಳಿಗೆ ಸಬಂಧಿಸಿದ ವಿನ್ಯಾಸವನ್ನು ಹೋಲುತ್ತವೆ. ರಜಪೂತ ವಂಶಸ್ಥರ ಆಭರಣಗಳು ಅತಿ ಶ್ರೀಮಂತಿಕೆಯಿಂದ ಕೂಡಿದ್ದು ರಾಜಮನೆತನದ ಹಿರಿಮೆಯನ್ನು ಮೆರೆಯುವಂತಿವೆ.

ರಾಜಸ್ಥಾನಿ ಮಹಿಳೆಯರು ಧರಿಸುವ ಆಭರಣಗಳು ಈ ಕೆಳಗಿನಂತಿವೆ:

ಟಿಕ್ಕಾ

ಬದಲಾಯಿಸಿ

ಹಣೆಯ ಸಿಂಗಾರಕ್ಕೆಂದು ಧರಿಸುವ ಬೈತಲೆ ಬೊಟ್ಟನ್ನು ರಖ್ದಿ, ಶೀಷ್ಪೂಲ್  ಅಥವಾ ರಾಜಸ್ಥಾನದ ಬೋರ್ಲಾ ಮಾಂಗ್ ಟಿಕ್ಕಾ ಎಂದು ಕರೆಯಲಾಗುತ್ತದೆ. ಇದು ಗೋಳಾಕಾರ ಅಥವಾ ಬೆಲ್ ಆಕಾರದಲ್ಲಿದ್ದು ಬೇರೆಲ್ಲಾ ಬೈತಲೆ ಬೊಟ್ಟುಗಳಿಗಿಂತ ಭಿನ್ನವಾಗಿದೆ. ಕೆಲವು ವಧುಗಳು ತಮ್ಮ ಬೊರ್ಲಾಗೆ ಎರಡು ಬದಿಯ ಸರಪಳಿ ಅಥವಾ ಶೀಷ್ಪೂಲ್‍ಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಟಿಕ್ಕಾವು ಚಿನ್ನದೊಂದಿಗೆ ಕುಂದನ್, ಮೀನಾ ಮತ್ತು ಮುತ್ತುಗಳಿಂದ ಕೂಡಿದ್ದು ಬೇರೆಲ್ಲಾ ಆಭರಣಗಳಿಗಿಂತಲೂ ಶ್ರೇಷ್ಠ ಆಭರಣವೆಂದು ಪರಿಗಣಿಸುತ್ತಾರೆ.

ನಥ್ನಿ(ಮೂಗುತ್ತಿ) ಅಥವಾ ಲಾಂಗ್

ಬದಲಾಯಿಸಿ

ನಥ್ನಿ ಸಾಮಾನ್ಯವಾಗಿ ಎಡ ಮೂಗಿನ ಹೊಳ್ಳೆಯಲ್ಲಿ ಸಿಕ್ಕಿಸಿ ಅದರ ಸರಪಳಿಯನ್ನು ಎಡಕಿವಿಯ ಓಲೆಗೆ ಸೇರಿಸಿಕೊಂಡು ಧರಿಸುತ್ತಾರೆ. ಸಣ್ಣ ಕುಂದನ್‍ನೊಂದಿಗಿನ ದೊಡ್ಡದಾದ ಗೋಲ್ಡನ್ ನಥ್ ಪ್ರತಿ ರಾಜಸ್ಥಾನಿ ಸ್ತ್ರೀ ಗೆ ರಾಜವಂಶೀಯ ನೋಟವನ್ನು ಕೊಡುತ್ತದೆ. ಪ್ರಾಚೀನ ಕಾಲದಲ್ಲಿ ಇದು ಸ್ಟಡ್ ಅಥವಾ ನಾಥ್ಪೂಲ್ ಎಂದು ಕರೆಯಲಾಗುತ್ತಿತ್ತು.  ಇದು ಉತ್ತರ ಭಾರತದ ಕೆಲವೆಡೆ ದಿನನಿತ್ಯದಲ್ಲೂ ಬಳಸಲಾಗುತ್ತದೆ.

ಸುರ್ಲಿಯಾ, ಕಾನ್ಬಲಿ, ಝಾಲ್(ಕಿವಿ ಓಲೆ)

ಬದಲಾಯಿಸಿ

ವಿಭಿನ್ನ ರೀತಿಯ ಕಿವಿಯೋಲೆ ವಿನ್ಯಾಸಗಳಿಗೆ ರಾಜಸ್ಥಾನವು ಸಾಕಷ್ಟು ಬೇಡಿಕೆಯಲ್ಲಿದೆ. ಇದರ ಪ್ರಸಿದ್ಧತೆಗೆ ಮುಖ್ಯ ಕಾರಣ ಇದರ ನೋಟ ಹಾಗೂ ಅದರ ಪುರಾತನತೆ. ಇದಕ್ಕೆ ದೇಶ ವಿದೇಶಗಳಲ್ಲೂ ಅತಿ ಹೆಚ್ಚು ಬೇಡಿಕೆಯಿದ್ದು, ರಾಜಸ್ತಾನದಲ್ಲಿ ಇದನ್ನು ಕಾನ್ಬಲಿ/ಸುರ್ಲಿಯಾ ಅಥವಾ  ಝಾಲ್ ಎಂದು ಕರೆಯುತ್ತಾರೆ. ಜನಪ್ರಿಯ ಕುಂದನ್ ಅಥವಾ ಮಿನಾಕರಿ ಕೆಲಸವು ರಾಜಸ್ಥಾನಿ ಆಭರಣಗಳಲ್ಲಿ ಹೆಚ್ಚಿರುವುದನ್ನು ಕಾಣಬಹುದು. ಕಾನ್ಬಲಿಯು ವಿಭಿನ್ನವಾಗಿದ್ದು ಅದರ ಸೊಬಗು ಎಲ್ಲರ ಗಮನವನ್ನು ಸೆಳೆಯುತ್ತದೆ.

ಆಡ್ ಚದರ

ಬದಲಾಯಿಸಿ

ಆಡ್ ಚದರವು ಆಯತಾಕಾರದ್ದಾಗಿದ್ದು, ಇದನ್ನು ಸಾಮಾನ್ಯವಾಗಿ ವಧುವಿನ ಕುಟುಂಬವು ವಧುಗೆ ನೀಡುತ್ತಾರೆ. ಇದು ರಾಜಸ್ಥಾನಿ ರತ್ನವನ್ನು ಹೊಂದಿದ್ದು ಇದನ್ನು ರಜಪೂತ ನೆಕ್ಲೇಸ್ ಎನ್ನುತ್ತಾರೆ. ಇದು ಸಾಮಾನ್ಯವಾಗಿ ಕುಂದನ್ ಮತ್ತು ಇತರ ಅಮೂಲ್ಯವಾದ ಕಲ್ಲುಗಳಿಂದ ತಯಾರಿಸಲ್ಪಟ್ಟಿದೆ. ಇದು ಶ್ರೀಮಂತ ನೋಟ ಹೊಂದಿದ್ದು ವಧುವಿನ ಸೌಂದರ್ಯವನ್ನು ಹೆಚ್ಚಿಸುತ್ತದೆ. ಈ ದಿನಮಾನಗಳಲ್ಲಿ ವಿವಿಧ ರೀತಿಯ ಆಧುನಿಕ ಆಡ್ ವಿನ್ಯಾಸಗಳಿವೆ. ಇದರೊಂದಿಗೆ ವಧು ರಾಣಿಹಾರ್ ಸಹ ವಧುಗಳು ಧರಿಸುತ್ತಾರೆ.

ಭುಜಬಂದ್

ಬದಲಾಯಿಸಿ

ಭುಜಬಂದ್ ಇಲ್ಲದೇ ರಾಜಸ್ಥಾನಿ ವಧುಗಳು ಅಪೂರ್ಣವೆನಿಸುತ್ತಾರೆ. ಇದು ಕೆಂಪು ಮತ್ತು ಹಸಿರು ಬಣ್ಣದಲ್ಲಿದ್ದು ಕಲ್ಲಿನ(ಹರಳು) ಕೆಲಸ ವಿನ್ಯಾಸವಾಗಿರುತ್ತದೆ. ಇದನ್ನು ಸಾಂಪ್ರದಾಯಕವಾಗಿ ತೋಳಿನ ಮೇಲ್ಭಾಗದಲ್ಲಿ ಧರಿಸಲಾಗುತ್ತದೆ. ಈ ರಕ್ಷಾ ಕವಚಗಳು ವಧುವಿನ ತೋಳುಗಳನ್ನು ಅಲಂಕರಿಸಿ ಅಂದವಾಗಿ ಕಾಣಿಸುತ್ತವೆ.

ರಜಪೂತ ವಧುಗಳು ಧರಿಸುವ ವಿಶೇಷ ರೀತಿಯ ಬಳೆಗಳನ್ನು ಬಂಗಡಿ ಎಂದು ಕರೆಯುತ್ತಾರೆ. ಬಂಗಡಿಯು ಕೆಂಪು ಬಣ್ಣದ ಪದರದ ದಪ್ಪ ಸುತ್ತನ್ನು ಹಾಗೂ ಚಿನ್ನದ ಮುಂಭಾಗವನ್ನು ಹೊಂದಿದ ಬಳೆಯಾಗಿದೆ. ಕೊಂಡಿ ರಹಿತವಾದ ಇದು ಖಡ್ಗಕ್ಕಿಂತ ಭಿನ್ನವಾಗಿರುತ್ತದೆ. ಇದನ್ನು ಮದುವೆಯಾದ ರಜಪೂತ ರಾಜಸ್ಥಾನಿ ಮಹಿಳೆಯರು ಧರಿಸುತ್ತಾರೆ.

ಹಾತ್ಪೂಲ್

ಬದಲಾಯಿಸಿ

ಇದು ಅಂಗೈ ಮತ್ತು ಮಣಿಕಟ್ಟಿನ ಹಿಂಭಾಗವನ್ನು ಅಲಂಕರಿಸುವ ಆಭರಣವಾಗಿದೆ. ಇವು ಚಿನ್ನ, ಕುಂದನ್ ಮತ್ತು ಮಿನಕರಿಯಿಂದ ಮಾಡಲ್ಪಟ್ಟಿರುತ್ತವೆ. ಐದು ಬೆರಳುಗಳಿಗೆ ಉಂಗುರ ಹಾಗೂ ಅವುಗಳಿಂದ ಸರಿದು ಬಂದ ಚಿನ್ನದ ಸರಪಳಿಯು ಮಣಿಕಟ್ಟಿನ ಬಳೆಯನ್ನು ಸೇರುತ್ತವೆ.

ಕರ್ಧನ್/ ಟಾಗಡಿ

ಬದಲಾಯಿಸಿ

ಡಾಬನ್ನು ಹೋಲುವ ಹೊಟ್ಟೆ/ ಸೊಂಟದ ಸುತ್ತಾ ಹಾಕುವ ಆಭರಣಕ್ಕೆ ಟಾಗಡಿ ಎನ್ನುತ್ತಾರೆ. ಇದನ್ನು ಚಿನ್ನದ ಪಾಲ್ಕಿ ಮತ್ತು ಕುಂದನ್‍ಗಳಿಂದ ತಯಾರಿಸಲಾಗುತ್ತದೆ.

ಪಾಯಲ್(ಕಾಲ್ಗೆಜ್ಜೆ)

ಬದಲಾಯಿಸಿ

ಹಗುರವಾದ ಅಥವಾ ಅಪಾರವಾದ ಕಾಲಿನ ಆಭರಣವನ್ನು ಪಾಯಲ್ ಎಂದು ಕರೆಯುತ್ತಾರೆ. ಇದು ಹೆಚ್ಚಾಗಿ ಬೆಳ್ಳಿ ಅಥವಾ ಚಿನ್ನದ್ದಾಗಿರುತ್ತದೆ.


ಉಲ್ಲೇಖಗಳು

ಬದಲಾಯಿಸಿ
  1. https://www.udayavani.com/supplements/womens-supplement/gagra-choli-clothing
  2. https://www.udayavani.com/supplements/womens-supplement/gagra-choli-clothing
  3. https://www.udayavani.com/supplements/womens-supplement/gagra-choli-clothing
  4. https://www.udayavani.com/supplements/womens-supplement/gagra-choli-clothing
  5. https://www.udayavani.com/supplements/womens-supplement/gagra-choli-clothing
  6. https://www.udayavani.com/supplements/womens-supplement/gagra-choli-clothing