ರಾಜವಾಡಾ
ರಾಜವಾಡಾ ಇಂದೋರ್ ನಗರದಲ್ಲಿರುವ ಒಂದು ಐತಿಹಾಸಿಕ ಅರಮನೆಯಾಗಿದೆ. ಇದನ್ನು ಮರಾಠಾ ಸಾಮ್ರಾಜ್ಯದ ಹೋಳ್ಕರರು ಎರಡು ಶತಮಾನಗಳ ಹಿಂದೆ ನಿರ್ಮಿಸಿದರು. ಏಳು ಮಹಡಿಗಳ ಈ ರಚನೆಯು ಛತ್ರಿಗಳ ಹತ್ತಿರ ಸ್ಥಿತವಾಗಿದೆ. ಇಂದು ಇದು ರಾಜರ ಭವ್ಯತೆ ಮತ್ತು ವಾಸ್ತುಕಲಾ ಕೌಶಲಗಳಿಗೆ ಉತ್ತಮ ಉದಾಹರಣೆಯಾಗಿದೆ.[೧]
ರಚನೆ
ಬದಲಾಯಿಸಿಈ ರಚನೆಯು ಎರಡು ಭಾಗಗಳನ್ನು ಹೊಂದಿದೆ, ಮೊದಲ ಭಾಗವು ನಗರದ ಹೃದಯಭಾಗದಲ್ಲಿ ಸ್ಥಿತವಾಗಿದೆ ಮತ್ತು ಎರಡನೆಯದು ಪಟ್ಟಣದ ಹಳೆಯ ಭಾಗದಲ್ಲಿ ನಿಂತಿದೆ. ರಾಜವಾಡಾ ಅರಮನೆಯು ಮರಾಠಾ ಶೈಲಿಗಳ ಮಿಶ್ರಣವನ್ನು ಪ್ರಕಟಪಡಿಸುತ್ತದೆ. ಈ ವೈಭವಯುತ ರಚನೆಯು ಮಂತ್ರಮುಗ್ಧರನ್ನಾಗಿ ಮಾಡುತ್ತದೆ. ಪ್ರವೇಶದ್ವಾರವೇ ಸುಂದರವಾಗಿದ್ದು ಬಹಳ ಎತ್ತರವಾದ ಕಮಾನು ದಾರಿ ಮತ್ತು ಕಬ್ಬಿಣದ ಗುಬಟುಗಳಿಂದ ಆವರಿಸಲ್ಪಟ್ಟಿರುವ ಕಟ್ಟಿಗೆಯ ಬೃಹತ್ ಬಾಗಿಲನ್ನು ಹೊಂದಿದೆ. ಪ್ರವೇಶದ್ವಾರದ ಮೂಲಕ ಒಳಗೆ ಹೋದ ಮೇಲೆ, ಮರಾಠಾ ಕಮಾನುಗಳುಳ್ಳ ಗಣೇಶನ ಕೋಣೆ, ಅನೇಕ ಬಾಲ್ಕನಿಗಳು, ಕಿಟಕಿಗಳು ಮತ್ತು ಮೊಗಸಾಲೆಗಳು ಇರುವ ಪ್ರಾಂಗಣ ಸಿಗುತ್ತದೆ.
ಚಿತ್ರಗಳು
ಬದಲಾಯಿಸಿ-
ರಾಜವಾಡಾ ಅರಮನೆ ೨೦೧೪ರ ದೀಪಾವಳಿಯಂದು ನೋಡಿದಾಗ
-
ಮುಂಭಾಗದಲ್ಲಿ ಅಹಿಲ್ಯಾಬಾಯಿ ಹೋಳ್ಕರ್ಳ ಪ್ರತಿಮೆ
-
ಮುಖ್ಯ ಹಜಾರಗಳಲ್ಲಿ ಒಂದು
ಉಲ್ಲೇಖಗಳು
ಬದಲಾಯಿಸಿ- ↑ "Rajwada Indore". Tour Travelworld. 2010-03-23. Retrieved 2010-03-23.