ರಾಜನಹಳ್ಳಿ ಹನುಮಂತಪ್ಪ


ರಾಜನಹಳ್ಳಿ ಹನುಮಂತಪ್ಪನವರು(ಆರ್. ಹೆಚ್) ದಾವಣಗೆರೆಯಲ್ಲಿ ಕಾಟನ್ ಮಿಲ್ ಪ್ರಾರಂಭಿಸಿದವರಲ್ಲಿ ಮೊದಲಿಗರು. ಹತ್ತಿ ಗಿರಣಿಗಳಿಗೆ ಪ್ರಸಿದ್ಧವಾಗಿದ್ದ ದಾವಣಗೆರೆಯನ್ನು ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಕರೆಯುತ್ತಿದ್ದರು. ರಾಜನಹಳ್ಳಿ ಹನುಮಂತಪ್ಪನವರು ೧೯೨೫ ರಲ್ಲಿ 'ದಿ ದಾವಣಗೆರೆ ಕಾಟನ್ ಮಿಲ್' ಹೆಸರಿನಲ್ಲಿ ಹತ್ತಿ ಗಿರಣಿ ಸ್ಥಾಪಿಸಿದರು. (ಈಗ ಕಾಟನ್ ಮಿಲ್ ಇದ್ದ ಜಾಗ ಡಿಸಿಎಂ ಟೌನ್ ಶಿಪ್ ಆಗಿದೆ)

ಹನುಮಂತಪ್ಪನವರು ಗಿರಣಿ ಸ್ಥಾಪಿಸುವ ಕಾಲವು ಎರಡನೇ ಮಹಾಯುದ್ಧ ಉತ್ತುಂಗಕ್ಕೆ ಏರಿದ ಸಮಯ. ಜವಳಿ ಉದ್ಯಮಕ್ಕೆ ಬೇಕಾಗಿದ್ದ ಯಂತ್ರೋಪಕರಣಗಳು ವಿದೇಶಗಳಿಂದ ಬರಬೇಕಾಗಿತ್ತು. ಆಗಿನ ಕಾಲಕ್ಕೆ ಸುಮಾರು ೮ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾದ ಕಾರ್ಖಾನೆ ೧೯೩೯ ರಲ್ಲಿ ಉತ್ಪಾದನೆ ಆರಂಭಿಸಿತು. ಆರಂಭದಲ್ಲಿ ಮುನ್ನೂರು ಕಾರ್ಮಿಕರಿದ್ದ ಡಿ. ಸಿ. ಎಂ. ನಲ್ಲಿ ನಂತರ ನಾಲ್ಕು ಸಾವಿರ ಕಾರ್ಮಿಕರವರೆಗೆ ವಿಸ್ತರಿಸಿಕೊಂಡಿತು. ಮಿಲ್ಲಿನ ಸಹಸಂಸ್ಥೆಗಳಾದ ಚಂದ್ರೋದಯ ಹಾಗೂ ರವಿ ಮಿಲ್‌ಗಳು ಸೇರಿದಂತೆ ಈ ಸಂಸ್ಥೆಯ ಕಾರ್ಮಿಕರ ಸಂಖ್ಯೆ ೬ ಸಾವಿರ ದಾಟಿತು. ಕಾಟನ್ ಮಿಲ್ ಇಡೀ ರಾಷ್ಟ್ರದಲ್ಲೇ ಪ್ರಸಿದ್ಧಿ ಪಡೆಯಿತು.