ರಾಜತಾಂತ್ರಿಕತೆ
ರಾಜತಾಂತ್ರಿಕತೆಯು (ರಾಯಭಾರ) ದೇಶಗಳ ಪ್ರತಿನಿಧಿಗಳ ನಡುವೆ ಸಂಧಾನಗಳನ್ನು ಮಾಡುವ ಕಲೆ ಮತ್ತು ಅಭ್ಯಾಸ. ಇದು ಸಾಮಾನ್ಯವಾಗಿ ಪ್ರಸ್ತುತ ಸಮಸ್ಯೆಗಳ ಪೂರ್ಣ ವ್ಯಾಪ್ತಿಯ ಸಂಬಂಧವಾಗಿ ವೃತ್ತಿಪರ ರಾಯಭಾರಿಗಳ ಮಧ್ಯಸ್ಥಿಕೆಯ ಮೂಲಕ ಅಂತಾರಾಷ್ಟ್ರೀಯ ಸಂಬಂಧಗಳ ನಿರ್ವಹಣೆಯನ್ನು ಸೂಚಿಸುತ್ತದೆ.[೧] ರಾಜತಾಂತ್ರಿಕತೆಯು ಸಂವಾದ, ಸಂಧಾನ ಮತ್ತು ಇತರ ಅಹಿಂಸಾತ್ಮಕ ವಿಧಾನಗಳ ಮೂಲಕ ವಿದೇಶದ ಸರ್ಕಾರಗಳು ಮತ್ತು ಅಧಿಕಾರಿಗಳ ನಿರ್ಧಾರಗಳು ಮತ್ತು ನಿರ್ವಹಣೆಯ ಮೇಲೆ ಪ್ರಭಾವ ಬೀರುವುದನ್ನು ಒಳಗೊಳ್ಳುತ್ತದೆ.[೨]
ರಾಜತಾಂತ್ರಿಕತೆಯು ವಿದೇಶಾಂಗ ನೀತಿಯ ಮುಖ್ಯ ಸಾಧನವಾಗಿದೆ. ವಿದೇಶಾಂಗ ನೀತಿಯು ಉಳಿದ ವಿಶ್ವದೊಡನೆ ಒಂದು ದೇಶದ ಕ್ರಿಯೆಗಳ ಮೇಲೆ ಮಾರ್ಗದರ್ಶನ ಮಾಡುವ ವಿಶಾಲವಾದ ಗುರಿಗಳು ಮತ್ತು ಕಾರ್ಯತಂತ್ರಗಳನ್ನು ಒಳಗೊಂಡಿರುತ್ತದೆ. ಅಂತರರಾಷ್ಟ್ರೀಯ ಕರಾರುಗಳು, ಒಪ್ಪಂದಗಳು, ಮೈತ್ರಿಕೂಟಗಳು ಮತ್ತು ವಿದೇಶಾಂಗ ನೀತಿಯ ಇತರ ಅಭಿವ್ಯಕ್ತಿಗಳನ್ನು ರಾಷ್ಟ್ರದ ರಾಜಕಾರಣಿಗಳು ಒಪ್ಪಿಕೊಳ್ಳುವ ಮುನ್ನ ಸಾಮಾನ್ಯವಾಗಿ ರಾಯಭಾರಿಗಳು ಸಂಧಾನದ ಮೂಲಕ ತೀರ್ಮಾನಿಸುತ್ತಾರೆ.
ಉಲ್ಲೇಖಗಳು
ಬದಲಾಯಿಸಿ- ↑ Ronald Peter Barston, Modern diplomacy, Pearson Education, 2006, p. 1
- ↑ "diplomacy | Nature, Purpose, History, & Practice". Encyclopedia Britannica (in ಇಂಗ್ಲಿಷ್). Retrieved 2019-07-30.