ರಾಗಿಣಿ ಶಂಕರ್

ಭಾರತೀಯ ಪಿಟೀಲು ವಾದಕರು

ರಾಗಿಣಿ ಶಂಕರ್ ರವರು ಭಾರತೀಯ ಹಿಂದೂಸ್ತಾನಿ ವಯೋಲಿನ್ ವಾದಕಿಯಾಗಿದ್ದಾರೆ. ಇವರು ಡಾ. ಸಂಗೀತ ಶಂಕರ್ ರವರ ಪುತ್ರಿ ಮತ್ತು ಪದ್ಮಭೂಷಣ ಡಾ. ಎನ್ ರಾಜಂರ ಮೊಮ್ಮಗಳು.[]

ರಾಗಿಣಿ ಶಂಕರ್
Born
ವಾರಣಾಸಿ, ಭಾರತ
Occupationಪಿಟೀಲು ವಾದಕಿ
Parentಡಾ. ಸಂಗೀತ ಶಂಕರ್

ಆರಂಭಿಕ ಜೀವನ

ಬದಲಾಯಿಸಿ

ಇವರು ತಮ್ಮ ನಾಲ್ಕನೇ ವಯಸ್ಸಿನಲ್ಲಿ ಸಂಗೀತಾಭ್ಯಾಸವನ್ನು ಆರಂಭಿಸಿದರು ಹಾಗೂ ತಮ್ಮ ೧೧ನೇ ವಯಸ್ಸಿಗೆ ವಯೋಲಿನ್ ಕಛೇರಿಯನ್ನು ನೀಡಿದರು.

ವಿದ್ಯಾಭ್ಯಾಸ

ಬದಲಾಯಿಸಿ

ಇವರು ಮೇಕಾನಿಕಲ್ ಎಂಜಿನಿಯರಿಂಗ್ ಪದವಿದರೆಯಾಗಿದ್ದಾರೆ. ಜೊತೆಗೆ ಸಂಗೀತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

ವೃತ್ತಿ ಜೀವನ

ಬದಲಾಯಿಸಿ

ರಾಗಿಣಿಯವರು ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸವಾಯಿ ಗಂಧರ್ವ ಭೀಮಸೇನ ಉತ್ಸವ[], ಸಪ್ತಕ ಸಂಗೀತ ಉತ್ಸವ, ಯುರೋಪಾಲಿಯಾ, ಡೋವರ್ ಲೇನ್ ಸಂಗೀತ ಸಮ್ಮೇಳನ, ಮಿಲಾಪ್ ಉತ್ಸವ, ಯಕ್ಷ ಉತ್ಸವ, ಆರೋಹಿ ಪಂಚಮ ನಿಶಾದ, ಎಮ್ಇಆರ್‌‌‍ಯು, ಹೇಮಾ ಮಾಲಿನಿಯವರು ಸಂಯೋಜಿಸಿದ ಸ್ಮತಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.ಇವರು ಟೇಂಪಲ್ ಆಫ್ ಫೈನ್ ಆರ್ಟ್ಸ[], ಅಸೋಸಿಯೇಶನ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಆಫ್ ಇಂಡಿಯಾ, ಟಿ. ಎನ್. ಕೃಷ್ಣನ್ ಫೌಂಡೇಶನ್, ಬೇಂಗಾಲಿ ಮ್ಯುಸಿಕ್ ಗಳಲ್ಲಿ ವಯೋಲಿನ್ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ರಾಗಿಣಿಯವರು ಭಾರತವಲ್ಲದೆ, ಯುಎಸ್‍ಎ, ಕೆನಡಾ, ಯುಕೆ, ಜರ್ಮನಿ, ನೆದರ್ಲ್ಯಾಂಡ್, ಸಿಂಗಾಪುರ, ದುಬೈ, ಮಲೇಶಿಯಾ, ಫ್ರಾನ್ಸ್, ಬೆಲ್ಜಿಯಂ ದೇಶಗಳಲ್ಲೂ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರು ಉಪನ್ಯಾಸ ಮತ್ತು ತರಬೇತಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಮುಂಬೈನಲ್ಲಿರುವ ವೆಸ್ಟ್ ಲಿಂಗ್ ವುಡ್ಸ್ ಅಂತರರಾಷ್ಟ್ರೀಯ ಸಂಗೀತ ಶಾಲೆಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ.

ಪ್ರಶಸ್ತಿಗಳು

ಬದಲಾಯಿಸಿ
  1. ಜಯ ಸ್ಮತಿ ಪ್ರಶಸ್ತಿಯನ್ನು ಚಲನಚಿತ್ರ ನಟಿ ಹೇಮ ಮಾಲಿನಿಯವರಿಂದ ಪಡೆದಿದ್ದಾರೆ.
  2. ೨೦೧೮ರಲ್ಲಿ ಭಾರತದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುರವರಿಂದ ಜಶ್ನ್ - ಇ - ಯಂಗಿಸ್ಟ್ ಪ್ರಶಸ್ತಿ ಪಡೆದಿದ್ದಾರೆ.[]
  1. ರಾಗಿಣಿ ಶಂಕರ್

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2020-02-23. Retrieved 2020-02-23.
  2. https://www.mid-day.com/articles/performance-by-3-generations-of-family-steals-show-on-final-day/145660
  3. http://www.radioandmusic.com/content/editorial/news/thyagaraja-tansen-music-festival-kick-start-9-feb
  4. https://m.dailyhunt.in/news/india/english/news24online-epaper-newsonline/jashn+e+youngistan+2018+honoured+violinsts+ragini+shankar+and+nandini+shankar-newsid-102297839