ಮುಪ್ಪವರಾಪು ವೆಂಕಯ್ಯ ನಾಯ್ಡು (ಜುಲೈ ೧, ೧೯೪೯ ರಂದು ಜನನ) ಒಬ್ಬ ಭಾರತೀಯ ರಾಜಕಾರಣಿಯಾಗಿದ್ದು, ಭಾರತದ ಪ್ರಸಕ್ತ ಉಪಾಧ್ಯಕ್ಷರಾಗಿದ್ದಾರೆ, ಅವರು ೧೧ ಆಗಸ್ಟ್ ೨೦೧೭ ರಿಂದ ಅಧಿಕಾರದಲ್ಲಿರುತ್ತಾರೆ. ಹಿಂದೆ ಅವರು ಮೋದಿ ಕ್ಯಾಬಿನೆಟ್ ನಲ್ಲಿ ವಸತಿ ಮತ್ತು ನಗರ ಬಡತನ ನಿರ್ಮೂಲನೆ, ನಗರ ಅಭಿವೃದ್ಧಿ ಮತ್ತು ಮಾಹಿತಿ ಮತ್ತು ಪ್ರಸಾರದ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು ೨೦೦೨ ರಿಂದ ೨೦೦೪ ರವರೆಗೆ ತಮ್ಮ ರಾಷ್ಟ್ರೀಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಹಿಂದೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಕೇಂದ್ರ ಸಚಿವರಾಗಿದ್ದರು.

ವೆಂಕಯ್ಯ ನಾಯ್ಡು
ವೆಂಕಯ್ಯ ನಾಯ್ಡು

ಪ್ರಸಕ್ತ
ಅಧಿಕಾರ ಪ್ರಾರಂಭ 
೧೧ ಆಗಷ್ಟ್ ೨೦೧೭
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್
ಪೂರ್ವಾಧಿಕಾರಿ ಮೊಹ್ಮದ್ ಹಮೀದ್ ಹನ್ಸಾರಿ
ಪೂರ್ವಾಧಿಕಾರಿ ಅರುಣ್ ಜೆಟ್ಲಿ
ಉತ್ತರಾಧಿಕಾರಿ ಸ್ಮೃತಿ ಇರಾನಿ
ಅಧಿಕಾರದ ಅವಧಿ
೨೬ ಮೇ ೨೦೧೪ – ೧೭ ಜುಲೈ ೨೦೧೭
ಪೂರ್ವಾಧಿಕಾರಿ ಕಮಲ್ ನಾಥ್ (Urban Development)

ಗಿರಿಜ ವ್ಯಾಸ್ (Housing and Urban Poverty Alleviation)

ಉತ್ತರಾಧಿಕಾರಿ Narendra Singh Tomar
ಅಧಿಕಾರದ ಅವಧಿ
26 May 2014 – 5 July 2016
ಪೂರ್ವಾಧಿಕಾರಿ Kamal Nath
ಉತ್ತರಾಧಿಕಾರಿ Ananth Kumar
ಅಧಿಕಾರದ ಅವಧಿ
1 July 2002 – 5 October 2004
ಪೂರ್ವಾಧಿಕಾರಿ Jana Krishnamurthi
ಉತ್ತರಾಧಿಕಾರಿ L. K. Advani

ಜನನ ೧ ಜುಲೈ ೧೯೪೯ (ವಯಸ್ಸು ೬೮)
ಚವತಪಲೆಮ್, ಆಂಧ್ರಪ್ರದೇಶ
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ
ಜೀವನಸಂಗಾತಿ

M. Usha (Married:14 April 1971)

ಹಸ್ತಾಕ್ಷರ ಚಿತ್ರ:Signature of Venkaiah Naidu.svg

ರಾಜಕೀಯ ವೃತ್ತಿ ಜೀವನ

ಬದಲಾಯಿಸಿ

ವಿದ್ಯಾರ್ಥಿಗಳ ನಾಯಕನಾಗಿ ಮತ್ತು ರಾಜಕೀಯ ವ್ಯಕ್ತಿಯಾಗಿ, ನಾಯ್ಡು ಒಂದು ಅದ್ಭುತ ವಾಗ್ಮಿಯಾಗಿ ಪ್ರಾಮುಖ್ಯತೆಯನ್ನು ಪಡೆದರು, ಅವರು ಹುರುಪಿನಿಂದ ರೈತರು ಮತ್ತು ಹಿಂದುಳಿದ ಪ್ರದೇಶಗಳ ಬೆಳವಣಿಗೆಗೆ ಕಾರಣರಾದರು. ಅವರ ಭಾಷಣ ಕೌಶಲಗಳು ಮತ್ತು ರಾಜಕೀಯ ಚಟುವಟಿಕೆಗಳು ಅವರ ರಾಜಕೀಯ ವೃತ್ತಿಜೀವನವನ್ನು ಉನ್ನತಿಗೊಳೀಸಿತು ಮತ್ತು ೧೯೭೮ ಮತ್ತು ೧೯೮೩ ರಲ್ಲಿ ನೆಲ್ಲೂರು ಜಿಲ್ಲೆಯ ಉದಯಗಿರಿ ಕ್ಷೇತ್ರದಿಂದ ಎರಡು ಬಾರಿ ಆಂಧ್ರಪ್ರದೇಶ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾದರು. ಅವರು ಆಂಧ್ರದಲ್ಲಿ ಬಿಜೆಪಿಯ ಅತ್ಯಂತ ಜನಪ್ರಿಯ ನಾಯಕರಲ್ಲಿ ಒಬ್ಬರಾದರು.

ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯ ವಿವಿಧ ಸಾಂಸ್ಥಿಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ನಂತರ ೧೯೯೮ ರಲ್ಲಿ ರಾಜ್ಯಸಭೆಯ ಸದಸ್ಯರಾಗಿ ಕರ್ನಾಟಕದಲ್ಲಿ ಆಯ್ಕೆಯಾದರು. ೨೦೦೪ ರಿಂದ ೨೦೧೦ ರವರೆಗೆ ಅವರು ಕರ್ನಾಟಕದಿಂದ ಎರಡು ಬಾರಿ ಆಯ್ಕೆಯಾದರು. ಅವರು ೧೯೯೬ ರಿಂದ ೨೦೦೦ ರವರೆಗೂ ಪಕ್ಷದ ವಕ್ತಾರರಾಗಿ ಸೇವೆ ಸಲ್ಲಿಸಿದರು.

ಉಲ್ಲೇಖಗಳು

ಬದಲಾಯಿಸಿ