ರಾಕ್ಷಸ (ಅಮಾತ್ಯ)
ಪ್ರಾಚೀನ ಭಾರತದ ಸಂಸ್ಕೃತ ಭಾಷೆಯ ನಾಟಕ ಮುದ್ರಾರಾಕ್ಷಸದಲ್ಲಿ ಅಮಾತ್ಯರಾಕ್ಷಸ ಎಂಬುದು ಒಂದು ಪಾತ್ರವಾಗಿದೆ. ನಾಟಕದಲ್ಲಿ, ಅವನು ಮಗಧ ಸಾಮ್ರಾಜ್ಯದ ನಂದರು ಮತ್ತು ಮೌರ್ಯರ ಆಸ್ಥಾನಗಳಲ್ಲಿ ಅಮಾತ್ಯ (ಪ್ರಧಾನಿ) ಹುದ್ದೆಯನ್ನು ಹೊಂದಿದ್ದಾನೆ. ಮೂಲತಃ ನಂದ ರಾಜನ ಮಂತ್ರಿಯಾಗಿದ್ದ ಅಮಾತ್ಯ ರಾಕ್ಷಸನು, ಚಂದ್ರಗುಪ್ತ ಮೌರ್ಯನು ನಂದ ಸಾಮ್ರಾಜ್ಯವನ್ನು ಜಯಿಸಿದ ಸಮಯದಲ್ಲಿ ಅವನು ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ. ನಂತರ ಅವನು ಚಂದ್ರಗುಪ್ತನನ್ನು ಕೊಲ್ಲಲು ಹಲವಾರು ಪ್ರಯತ್ನಗಳನ್ನು ಮಾಡುತ್ತಾನೆ. ಆದರೆ ಪ್ರತಿ ಬಾರಿಯೂ ಅವನು ಚಂದ್ರಗುಪ್ತನ ಗುರು ಚಾಣಕ್ಯನಿಂದ ಸೋಲಿಸಲ್ಪಡುತ್ತಾನೆ . ಅಂತಿಮವಾಗಿ, ಅವನು ತನ್ನ ಪ್ರತಿರೋಧವನ್ನು ತ್ಯಜಿಸಲು ಒಪ್ಪುತ್ತಾನೆ. ನಂತರ ಮೌರ್ಯರ ಆಸ್ಥಾನದಲ್ಲಿ ಅಮಾತ್ಯ ಹುದ್ದೆಯನ್ನು ಸ್ವೀಕರಿಸುತ್ತಾನೆ. [೧] [೨]
ರಾಕ್ಷಸ | |
---|---|
ಕರ್ತೃ | ವಿಶಾಖದತ್ತ |
Information | |
ವೃತ್ತಿ | ಪ್ರಧಾನ ಮಂತ್ರಿ |
Title | ಅಮಾತ್ಯ |
ಮುದ್ರಾರಾಕ್ಷಸ ಜೀವನ ಚರಿತ್ರೆ
ಬದಲಾಯಿಸಿವಿಶಾಖದತ್ತನ ಮುದ್ರಾರಾಕ್ಷಸ ನಾಟಕದಲ್ಲಿ ರಾಕ್ಷಸನು ಕಾಣಿಸಿಕೊಳ್ಳುತ್ತಾನೆ.
ಮುದ್ರಾರಾಕ್ಷಸ ಕೃತಿಯಲ್ಲಿ, ಚಾಣಕ್ಯನು ಚಂದ್ರಗುಪ್ತ ಮತ್ತು ಪರ್ವತೇಶ್ವರ (ಅಥವಾ ಪರ್ವತ) ರಾಜನ ಸಹಾಯದಿಂದ ನಂದ ರಾಜನನ್ನು ಉರುಳಿಸುತ್ತಾನೆ. [೩] ಆಗ ನಂದರ ಪ್ರಧಾನ ಮಂತ್ರಿ ಅಮಾತ್ಯ ರಾಕ್ಷಸನು ರಾಜಧಾನಿ ಪಾಟಲಿಪುತ್ರದಿಂದ ತಪ್ಪಿಸಿಕೊಳ್ಳುತ್ತಾನೆ. ಚಂದ್ರಗುಪ್ತನನ್ನು ಕೊಲ್ಲಲು ಹಲವಾರು ಪ್ರಯತ್ನಗಳನ್ನು ಮಾಡುತ್ತಾನೆ. ಅವನು ಚಂದ್ರಗುಪ್ತನನ್ನು ಹತ್ಯೆ ಮಾಡಲು ವಿಷಕನ್ಯೆಯನ್ನು (ವಿಷ ಹುಡುಗಿ) ಕಳುಹಿಸುತ್ತಾನೆ. ಚಾಣಕ್ಯ ಈ ಹುಡುಗಿಯು ಪರ್ವತವನ್ನು ಹತ್ಯೆ ಮಾಡುವಂತೆ ಮಾಡುತ್ತಾನೆ. ಈ ಆಪಾದನೆಯು ರಾಕ್ಷಸನ ಮೇಲೆ ಹೋಗುತ್ತದೆ. ಪರ್ವತ ರಾಜನ ಮಗ ಮಲಯಕೇತು ತನ್ನ ತಂದೆಯ ಸಾವಿನ ಬಗ್ಗೆ ಸತ್ಯವನ್ನು ತಿಳಿದುಕೊಳ್ಳುತ್ತಾನೆ. ಅವನು ರಾಕ್ಷಸನೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಾನೆ. [೪]
ಮಗಧದಿಂದ ಪಲಾಯನ
ಬದಲಾಯಿಸಿಚಂದ್ರಗುಪ್ತ ಮೌರ್ಯನನ್ನು ಕೊಲ್ಲುವುದಕ್ಕಾಗಿ ಅಮಾತ್ಯ ರಾಕ್ಷಸನು ಚಂದ್ರಗುಪ್ತನ ಕೆಲವು ಶತ್ರುಗಳೊಂದಿಗೆ ಮೈತ್ರಿ ಮಾಡಿಕೊಂಡನು.
ಚಂದ್ರಗುಪ್ತನನ್ನು ಕೊಲ್ಲುವ ತನ್ನ ಯೋಜನೆಯಲ್ಲಿ ಅಮಾತ್ಯ ರಾಕ್ಷಸನು ಹಲವಾರು ಬಾರಿ ವಿಫಲನಾದನು. ಮೌರ್ಯರ ರಾಜಧಾನಿ ಪಾಟಲಿಪುತ್ರದ ಮೇಲೆ ಕೆಲವು ರಾಜರು ದಾಳಿ ಮಾಡಲು ಪ್ರಯತ್ನಿಸಿದರು. ಆದರೆ ಚಾಣಕ್ಯನ ತಂತ್ರಗಳಿಂದ ಯೋಜನೆ ವಿಫಲವಾಯಿತು.
ಅಮಾತ್ಯ ರಾಕ್ಷಸನಂತಹ ರಾಜನ ಮೇಲೆ ದ್ವೇಷ ಸಾಧಿಸುವುದು ಅಪಾಯಕಾರಿ ಎಂದು ಚಾಣಕ್ಯನಿಗೆ ತಿಳಿದಿತ್ತು.[೫] ಚಾಣಕ್ಯ ಅಮಾತ್ಯ ರಾಕ್ಷಸನನ್ನು ಮಗಧಕ್ಕೆ ಹಿಂದಿರುಗುವಂತೆ ಯೋಜನೆಗಳನ್ನು ರೂಪಿಸಿದನು. ಚಾಣಕ್ಯನು ಅಮಾತ್ಯ ರಾಕ್ಷಸನ ಸಹಚರರಲ್ಲಿ ಒಬ್ಬನನ್ನು ಬಂಧಿಸಿದನು ಎಂಬ ವದಂತಿಗಳನ್ನು ಮಗಧ ರಾಜ್ಯದಲ್ಲಿ ಹರಡಿದನು. ಅಮಾತ್ಯ ರಾಕ್ಷಸನು ತನ್ನ ಸಹಚರನನ್ನು ಹುಡುಕಲು ಬರುತ್ತಾನೆ ಮತ್ತು ಅವನನ್ನು ಬಿಡಿಸಲು ಪ್ರಯತ್ನಿಸುತ್ತಾನೆ ಎಂದು ಚಾಣಕ್ಯನಿಗೆ ತಿಳಿದಿತ್ತು.
ಮೌರ್ಯ ಸಾಮ್ರಾಜ್ಯದ ಅಮಾತ್ಯನಾಗುತ್ತಾನೆ
ಬದಲಾಯಿಸಿಚಾಣಕ್ಯನ ಯೋಜನೆಯಂತೆ ಅಂತಿಮವಾಗಿ ರಾಕ್ಷಸನು ಪತ್ತೆಹಚ್ಚಲ್ಪಟ್ಟನು ಮತ್ತು ಸೆರೆಹಿಡಿಯಲ್ಪಟ್ಟನು. ಚಾಣಕ್ಯನು ರಾಕ್ಷಸನನ್ನು ಮೌರ್ಯ ಸಾಮ್ರಾಜ್ಯದ ಪ್ರಧಾನ ಅಮಾತ್ಯ (ಮಹಾ ಅಮಾತ್ಯ) ಆಗಲು ಮತ್ತು ನಂದ ಆಳ್ವಿಕೆಯಲ್ಲಿ ತೋರಿಸಿದ ಅದೇ ಶ್ರದ್ಧೆ ಮತ್ತು ನಿಷ್ಠೆಯಿಂದ ರಾಜ್ಯದ ಸೇವೆ ಮಾಡಲು ಕೇಳಿಕೊಂಡನು.[೬] ಅಮಾತ್ಯ ರಾಕ್ಷಸನು ಚಾಣಕ್ಯನ ಘನತೆಯನ್ನು ಅರಿತು ಅವನೊಂದಿಗಿನ ದ್ವೇಷವನ್ನು ನಿವಾರಿಸಿಕೊಂಡನು.
ಚಲನಚಿತ್ರ ಮತ್ತು ದೂರದರ್ಶನ
ಬದಲಾಯಿಸಿ- ೧೯೯೧ ರ ಟಿವಿ ಧಾರಾವಾಹಿ ಚಾಣಕ್ಯ ಮುದ್ರಾರಾಕ್ಷಸ ನಾಟಕವನ್ನು ಆಧರಿಸಿ ಚಾಣಕ್ಯನ ಜೀವನದಲ್ಲಿ ಅಮಾತ್ಯ ರಾಕ್ಷಸ ಪಾತ್ರವನ್ನು ಸುರೇಂದ್ರ ಪಾಲ್ ನಿರ್ವಹಿಸಿದ್ದಾರೆ.
- ೨೦೧೧ ರಲ್ಲಿ ಸಾಗರ್ ಆರ್ಟ್ಸ್ ನಿರ್ಮಿಸಿದ ಎನ್‌ಡಿಟಿವಿ ಇಮ್ಯಾಜಿನ್‌ನಲ್ಲಿ ಟಿವಿ ಧಾರಾವಾಹಿಯಾದ ಚಂದ್ರಗುಪ್ತ ಮೌರ್ಯದಲ್ಲಿ ಅಮಾತ್ಯ ರಾಕ್ಷಸನ ಪಾತ್ರವನ್ನು ನಟ ತೇಜ್ ಸಪ್ರು ನಿರ್ವಹಿಸಿದ್ದಾರೆ.
- ೨೦೧೬ ರ ಚಂದ್ರಗುಪ್ತ ಮೌರ್ಯರ ಐತಿಹಾಸಿಕ ನಾಟಕ ದೂರದರ್ಶನ ಧಾರಾವಾಹಿ ಚಂದ್ರ ನಂದಿನಿ.[೭][೮]
- ೨೦೧೫ ರ ಕಲರ್ಸ್ ಟಿವಿಯ ಚಕ್ರವರ್ತಿ ಅಶೋಕ ಸಾಮ್ರಾಟ್ ಎಂಬ ನಾಟಕದಲ್ಲಿ ರಾಕ್ಷಸನ ಪಾತ್ರವನ್ನು ಅಮಿತ್ ಬೆಹ್ಲ್ ನಿರ್ವಹಿಸಿದ್ದಾರೆ.
- ೨೦೧೭ ಮತ್ತು ೨೦೧೮ ರ ಐತಿಹಾಸಿಕ ದೂರದರ್ಶನ ಧಾರಾವಾಹಿ ಪೋರಸ್‌ನಲ್ಲಿ ನಿಮಾಯ್ ಬಾಲಿ ಅಮಾತ್ಯ ರಾಕ್ಷಸ ಪಾತ್ರವನ್ನು ನಿರ್ವಹಿಸಿದ್ದಾರೆ.
- ೨೦೧೮ ರ ಚಂದ್ರಗುಪ್ತ ಮೌರ್ಯರ ಜೀವನವನ್ನು ಆಧರಿಸಿದ ಚಂದ್ರಗುಪ್ತ ಮೌರ್ಯ ಎಂಬ ದೂರದರ್ಶನ ಕಾರ್ಯಕ್ರಮದಲ್ಲಿ ಅಮಾತ್ಯ ರಾಕ್ಷಸನ ಪಾತ್ರವನ್ನು ನಟ ನಿಮಾಯ್ ಬಾಲಿ ನಿರ್ವಹಿಸಿದರು.[೯]
ಸಹ ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ Varadpande 2005, pp. 227–231.
- ↑ Trautmann 1971, pp. 37–40.
- ↑ Trautmann 1971, pp. 36–37.
- ↑ Trautmann 1971, p. 37.
- ↑ Prasad, Jaishankar (2008). Prasad Ke Sampoorn Natak Evam Ekanki. p. 64. ISBN 9788180313455.
- ↑ https://www.amarujala.com/spirituality/metaphysical-parasychology/after-altered-changed-the-scene-itself-hindi
- ↑ "Chandra Nandini 10 July 2017 Written Update of Full Episode: Chanakya Asks Chandra Not To Kill Amatya Rakshas". india.com. July 10, 2017.
- ↑ "Chandra Nandini 14 July 2017, Written Update of Full Episode: Amatya Rakshasa tells Nandini that Malayketu wants to murder Bindusara". bollywoodlife.com. July 14, 2017.
- ↑ "Nimai Bali and other 65 crew members of Sony TV's Chandragupta Maurya go BALD! Here's why..." tellychakkar.com. November 26, 2018.