ರಸಗುಲ್ಲ ಒಂದು ಭಾರತೀಯ ಸಿಹಿ ಡಿಜ಼ರ್ಟ್. ಇದು ಭಾರತೀಯ ಉಪಖಂಡ ಮತ್ತು ದಕ್ಷಿಣ ಏಷ್ಯಾದ ವಲಸೆ ಹೋದ ಜನರಿರುವ ಪ್ರದೇಶಗಳಲ್ಲಿ ಜನಪ್ರಿಯವಾಗಿದೆ. ಇದನ್ನು ಛೇನಾ ಮತ್ತು ರವೆ ಕಣಕದ ಚೆಂಡಿನ ಆಕಾರದ ಉಂಡೆಗಳನ್ನು ಸಕ್ಕರೆಯ ತಿಳಿಯಾದ ಪಾಕದಲ್ಲಿ ಬೇಯಿಸಿ ತಯಾರಿಸಲಾಗುತ್ತದೆ. ಪಾಕವು ಉಂಡೆಗಳ ಒಳಗೆ ಹೋಗುವವರೆಗೆ ಹೀಗೆ ಮಾಡಲಾಗುತ್ತದೆ.[]

ಒಡಿಶಾದ ರಸಗುಲ್ಲ (ಎಡಭಾಗದಲ್ಲಿ) ಮತ್ತು ಪಶ್ಚಿಮ ಬಂಗಾಳದ ರಸಗುಲ್ಲ (ಬಲಭಾಗದಲ್ಲಿ)
ರಾಸ್‌ಗುಲ್ಲಾ ಮತ್ತು ಗುಲಾಬ್ ಜಮುನ್

ಈ ಖಾದ್ಯವು ಪೂರ್ವ ಭಾರತದಲ್ಲಿ ಹುಟ್ಟಿಕೊಂಡಿತು; ಇಂದಿನ ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ತಾವು ಇದರ ಜನ್ಮಸ್ಥಳವೆಂದು ನಾನಾ ಬಗೆಯಲ್ಲಿ ಹಕ್ಕು ಸಾಧಿಸಿವೆ. ೨೦೧೫ರಲ್ಲಿ, ಒಡಿಶಾ ಸರ್ಕಾರವು ರಚಿಸಿದ ಒಂದು ಸಮಿತಿಯು ಜಗನ್ನಾಥ ದೇವಾಲಯದಲ್ಲಿ ಅರ್ಪಿಸಲಾಗುವ ಈ ಸಿಹಿತಿಂಡಿಯು ಒಡಿಶಾದಲ್ಲಿ ಹುಟ್ಟಿಕೊಂಡಿತು ಎಂದು ವಾದಿಸಿತು.

ಇಂದು, ಡಬ್ಬಿಯಲ್ಲಿ ತುಂಬಿದ ರಸಗುಲ್ಲಗಳು ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಾದ್ಯಂತ, ಜೊತೆಗೆ ಉಪಖಂಡದ ಹೊರಗಿನ ದಕ್ಷಿಣ ಏಷ್ಯಾದ ಕಿರಾಣಿ ಅಂಗಡಿಗಳಲ್ಲಿ ಲಭ್ಯವಿವೆ. ನೇಪಾಳದಲ್ಲಿ, ರಸಗುಲ್ಲ ರಸ್‍ಬರಿ ಎಂಬ ಹೆಸರಿನಡಿಯಲ್ಲಿ ಜನಪ್ರಿಯವಾಯಿತು.

ಉಲ್ಲೇಖಗಳು

ಬದಲಾಯಿಸಿ
  1. Sonali Pattnaik (18 July 2013). "How to make…Rasagolla". The Hindu.
"https://kn.wikipedia.org/w/index.php?title=ರಸಗುಲ್ಲ&oldid=1011593" ಇಂದ ಪಡೆಯಲ್ಪಟ್ಟಿದೆ