ರಮೇಶ್ ಚಂದ್ರ (ಗಾಯಕ)

ರಮೇಶ್ ಚಂದ್ರ (English: Ramesh Chandra) ಒಬ್ಬ ಭಾರತೀಯ ಹಿನ್ನೆಲೆ ಗಾಯಕ. ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕೆಲಸ ಮಾಡುತ್ತಿದ್ದಾರೆ. [೧] [೨] [೩] ಅವರು ಎರಡು ಬಾರಿ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕರಿಗಿರುವ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ .

ರಮೇಶ್ ಚಂದ್ರ
ರಮೇಶ್ ಚಂದ್ರ ಮತ್ತು ಎಸ್. ಪಿ. ಬಾಲಸುಬ್ರಮಣ್ಯಮ್
ಹಿನ್ನೆಲೆ ಮಾಹಿತಿ
ಜನ್ಮನಾಮಕೆ. ರಮೇಶ್
ಜನನ1963 (ವಯಸ್ಸು 60–61)
ಮಂಗಳೂರು, ದಕ್ಷಿಣ ಕನ್ನಡ, ಭಾರತ
ವೃತ್ತಿ
  • ಹಾಡುಗಾರ
ಸಕ್ರಿಯ ವರ್ಷಗಳು1995 – ಇಲ್ಲಿಯವರೆಗೆ
Musical career
ಸಂಗೀತ ಶೈಲಿ
ವಾದ್ಯಗಳುಸ್ವರ

ವೈಯಕ್ತಿಕ ಜೀವನ ಬದಲಾಯಿಸಿ

ಮಂಗಳೂರಿನಲ್ಲಿ ಹುಟ್ಟಿದ ರಮೇಶ್ ಚಂದ್ರರವ ಮೂಲ ಹೆಸರು ಕೆ. ರಮೇಶ್. ಅವರು ಕಾಸರಗೋಡಿನಲ್ಲಿ ಬೆಳೆದರು. ರೇಡಿಯೋದಲ್ಲಿ ಕೆ.ಜೆ.ಯೇಸುದಾಸ್ ಅವರ ಹಾಡುಗಳನ್ನು ಕೇಳುತ್ತಾ ಬೆಳೆದವರು. ಅವರು ಆ ಸಮಯದಲ್ಲಿ ಕಾಸರಗೋಡಿನ ಏಕೈಕ ಕರ್ನಾಟಕ ಸಂಗೀತಗಾರರಾಗಿದ್ದ ಕಲ್ಮಾಡಿ ಸದಾಶಿವ ಆಚಾರ್ ಅವರ ಬಳಿ ಸಂಗೀತ ತರಗತಿಗಳಿಗೆ ಹೋಗಿದ್ದರು.[೪]

ರಮೇಶ್ ಚಂದ್ರ ಜ್ಯೋತಿ ಅವರನ್ನು ವಿವಾಹವಾದರು. ಅವರಿಗೆ ಒಬ್ಬ ಮಗನಿದ್ದಾನೆ.[೪]

ವೃತ್ತಿ ಬದಲಾಯಿಸಿ

ರಮೇಶ್ ಅವರ ಸಂಗೀತದ ಬಗೆಗಿನ ಆಸಕ್ತಿಯು ಅವರನ್ನು ಬೆಂಗಳೂರಿಗೆ ಕರೆತಂದಿತು ಮತ್ತು ಅವರು ಜಿವಿ ಅತ್ರಿ ಅವರು ಪ್ರಾಚಾರ್ಯರಾಗಿದ್ದ ಸಾಧನಾ ಸಂಗೀತ ಶಾಲೆಯಲ್ಲಿ ಕೆಲಸಗಾರರಾಗಿ ಸೇರಿದರು. ರಮೇಶ್ ಸಾರ್ವಜನಿಕ ಪ್ರದರ್ಶನ ನೀಡಲು ಪ್ರಾರಂಭಿಸಿದರು ಮತ್ತು ಡಾ. ರಾಜಕುಮಾರ್, ಎಸ್ಪಿ ಬಾಲಸುಬ್ರಹ್ಮಣ್ಯಂ ಮತ್ತು ಕೆಜೆ ಯೇಸುದಾಸ್ ಅವರ ಹಿನ್ನೆಲೆ ಗಾಯನದ ಹಾಡಿನ ಮಾದರಿ (ರ್ಟ್ರ್ಯಾಕ್ ಸಿಂಗರ್) ಹಾಡುವ ಗಾಯಕರಾದರು. ಸಂಗೀತ ಸಂಯೋಜಕ ವಿ. ಮನೋಹರ್ರವರು ರಮೇಶ ಚಂದ್ರ ಅವರ ಹಿನ್ನೆಲೆ ಗಾಯನದ ಹಾಡಿನ ಮಾದರಿ ಹಾಡುಗಳಲ್ಲಿ ಒಂದಾದ "ಓ ಮಲ್ಲಿಗೆ ನಿನ್ನೊಂದಿಗೇ" (೧೯೯೫ ರ ಅನುರಾಗ ಸಂಗಮ) ಹಾಡನ್ನು ಚಿತ್ರದಲ್ಲಿ ಉಳಿಸಿಕೊಂಡರು ಮತ್ತು ಇದು ಅವರ ಮೊದಲ ಚಲನಚಿತ್ರ ಗೀತೆಯಾಗಿದೆ. ಅದೇ ಹಾಡಿಗೆ ಅವರು ತಮ್ಮ ಮೊದಲ ರಾಜ್ಯ ಪ್ರಶಸ್ತಿಯನ್ನು ಪಡೆದರು. ಉಲ್ಲೇಖ ದೋಷ: Closing </ref> missing for <ref> tag

  • ಇತರೆ ಪ್ರಶಸ್ತಿಗಳು
  1. 2013 – ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾಶ್ರೀ ಪ್ರಶಸ್ತಿ [೫]

ಗಮನಾರ್ಹ ಹಾಡುಗಳು ಬದಲಾಯಿಸಿ

ರಮೇಶ್ ಚಂದ್ರ ಕನ್ನಡದಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳಿಗೆ ಹಾಡಿದ್ದಾರೆ. [೬] ಅವರ ಕೆಲವು ಹಾಡುಗಳು:

  • "ಓ ಮಲ್ಲಿಗೆ ನಿನ್ನೊಂದಿಗೇ" (ಅನುರಾಗ ಸಂಗಮ)
  • "ಮಲಗು ಮಲಗು ಚಾರುಲತೆ" (ಓ ಮಲ್ಲಿಗೆ)
  • "ಬುಲ್ ಬುಲ್ಲಾ ಹೇ" (ಚಂದ್ರೋದಯ)
  • "ಏನಿತೋ ಅಂತರಾಳಗೆ" (ಕೌರವ)
  • "ಹೂವಂತ ಹೆಣ್ಣೆ" (ಪ್ರೇಮಾಚಾರಿ)
  • "ಬಾನಾಡಿ ಹಾಡಲಿ ತಂಗಾಳಿ ಬೀಸಲಿ" (ಮೇಘ ಬಂತು ಮೇಘ)
  • "ಹೇಗಿದೆ ನಮ್ ದೇಶ" (ಅಮೇರಿಕಾ ಅಮೇರಿಕಾ)
  • "ಪದೇ ಪದೇ ನೆನಪಿದೆ" (ರಾಮ ಶಾಮ ಭಾಮ)

ಬಾಹ್ಯ ಕೊಂಡಿಗಳು ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. "Singer Ramesh Chandra". filmibeat.com. Retrieved 22 Sep 2020.
  2. "Playback singer Ramesh Chandra". Moviebuff.com. Retrieved 22 Sep 2020.
  3. Dr. Chinmaya Rao (29 Feb 2012). "ಗಾಯಕ ರಮೇಶ್ ಚಂದ್ರ ನಮ್ಮ ನಿರ್ದೇಶಕರಿಗೆ ಮರೆತುಹೋದ್ರಾ?" [Our directors have forgotten singer Ramesh Chandra?]. Kannadatimes.com (in Kannada). Retrieved 22 Sep 2020.{{cite web}}: CS1 maint: unrecognized language (link)
  4. ೪.೦ ೪.೧ Vandana Mohandas (3 Sep 2017). "Living the dream". Deccan Chronicle. Retrieved 22 Sep 2020. ಉಲ್ಲೇಖ ದೋಷ: Invalid <ref> tag; name "Dream" defined multiple times with different content
  5. Ranjani Govind (27 Aug 2014). "36 chosen for Kalashree awards for two years". The Hindu. Retrieved 22 Sep 2020.
  6. "Filmography: Ramesh Chandra". Chiloka.com. Retrieved 22 Sep 2020.