ರಬೀಉಲ್ ಅವ್ವಲ್
ರಬೀಉಲ್ ಅವ್ವಲ್ (ಅರಬ್ಬಿ: ربيع الأول) — ಹಿಜರಿ ಕ್ಯಾಲೆಂಡರ್‌ನ ತೃತೀಯ ತಿಂಗಳು. ಈ ತಿಂಗಳಿಗೆ ಇಸ್ಲಾಮೀ ಧರ್ಮಶಾಸ್ತ್ರದಲ್ಲಿ ಯಾವುದೇ ವಿಶೇಷ ಮಹತ್ವವಿಲ್ಲದಿದ್ದರೂ ಈ ತಿಂಗಳಲ್ಲಿ ಮುಹಮ್ಮದ್ ಪೈಗಂಬರರು ಜನಿಸಿದ ಕಾರಣ ಈ ತಿಂಗಳಿಗೆ ಮಹತ್ವ ಕಲ್ಪಿಸಲಾಗುತ್ತದೆ.
ಅರ್ಥ
ಬದಲಾಯಿಸಿಅರಬ್ಬಿ ಭಾಷೆಯಲ್ಲಿ ರಬೀಅ್ (ಅರಬ್ಬಿ: ربيع) ಎಂದರೆ ವಸಂತ.[೧] ಅವ್ವಲ್ (ಅರಬ್ಬಿ: الأول) ಎಂದರೆ ಪ್ರಥಮ.[೨] ರಬೀಉಲ್ ಅವ್ವಲ್ ಎಂದರೆ "ವಸಂತ ಕಾಲದ ಪ್ರಥಮ ತಿಂಗಳು". ಇದನ್ನು ಪ್ರಥಮ ತಿಂಗಳು ಎಂದು ಕರೆದಿರುವುದು ಏಕೆಂದರೆ ಇದರ ನಂತರ ರಬೀಉಲ್ ಆಖಿರ್ (ಅರಬ್ಬಿ: ربيع الآخر) "ವಸಂತ ಕಾಲದ ದ್ವಿತೀಯ ತಿಂಗಳು" ಬರುತ್ತದೆ.[೩] ಈ ತಿಂಗಳ ನಿಜವಾದ ಹೆಸರು ಶಹ್ರು ರಬೀಇನಿಲ್ ಅವ್ವಲು (ಅರಬ್ಬಿ: شهر ربيع الأول) ಎಂದು ಭಾಷಾಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ಆದರೆ ಸಾಮಾನ್ಯವಾಗಿ ಇದನ್ನು ರಬೀಉಲ್ ಅವ್ವಲ್ ಎಂದು ಕರೆಯಲಾಗುತ್ತದೆ.[೪]
ಬಳಕೆ
ಬದಲಾಯಿಸಿಅರಬ್ಬರು ಸಾಮಾನ್ಯವಾಗಿ ಮೂರು ತಿಂಗಳುಗಳಿಗೆ ಮಾತ್ರ ಶಹ್ರ್ (ಅರೇಬಿಕ್ شهر) ಎಂಬ ಪೂರ್ವ ಪ್ರತ್ಯಯವನ್ನು (prefix) ಸೇರಿಸುತ್ತಾರೆ. ರಮದಾನ್, ರಬೀಉಲ್ ಅವ್ವಲ್ ಮತ್ತು ರಬೀಉಲ್ ಆಖಿರ್. ಇತರ ತಿಂಗಳುಗಳಿಗೆ ಅವರು ಶಹ್ರ್ ಸೇರಿಸುವುದಿಲ್ಲ. ಈ ತಿಂಗಳಿಗೆ ಮೊತ್ತಮೊದಲು ನಾಮಕರಣ ಮಾಡುವಾಗ ಅದು ವಸಂತ ಕಾಲವಾಗಿದ್ದರಿಂದ ಇದಕ್ಕೆ ರಬೀಅ್ (ವಸಂತ) ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ.[೪]
ಇದನ್ನೂ ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ Wehr, Hans (1976). Cowan, J. Milton (ed.). A Dictionary of Modern Written Arabic (3rd ed.). Spoken Languages Services, Inc. p. 323. ISBN 0879500018.
- ↑ Wehr, Hans (1976). Cowan, J. Milton (ed.). A Dictionary of Modern Written Arabic (3rd ed.). Spoken Languages Services, Inc. p. 35. ISBN 0879500018.
- ↑ The Encyclopedia of Islam. Brill. 1993. p. 350. ISBN 9004094199.
- ↑ ೪.೦ ೪.೧ Lane, Edward William (1863). Arabic-English Lexicon. Williams and Norgate. p. 1018.