ರಕ್ತದ ಗುಂಪನ್ನು ಕಂಡುಹಿಡಿಯುವ ವಿಧಾನ

ರಕ್ತದ ಗುಂಪನ್ನು ಕಂಡುಹಿಡಿಯುವ ವಿಧಾನ:

ಈ ಸರಳ ಪ್ರಯೋಗದಿಂದ ನಾವು ನಮ್ಮ ರಕ್ತದ ಗುಂಪನ್ಶು ತಿಳಿದುಕೊಳ್ಳಬಹುದು.

ಬೇಕಾಗುವ ಸಾಧನಗಳು: ಹೈಪೋಡರ್ಮಿಕ್ ಸೂಜಿಗಳು, 70% ಎಥನಾಲ್,ರಕ್ತದ ಎರಡು ಹನಿಗಳು, ಗಾಜಿನ ಸ್ಲೈಡ್ಗಳು,ಗಾಜಿನ ರಾಡ್, ಆಂಟಿಸೇರಾ ಎ ಮತ್ತು ಆಂಟಿಸೇರಾ ಬಿ.

ವಿಧಾನ:

1. ಪೆನ್ಸಿಲ್ ಬಳಸಿ ಗಾಜಿನ ಸ್ಲೈಡನ್ನು ಎರಡು ಭಾಗಕ್ಕೆ ವಿಂಗಡಿಸಿ.

2. ಒಂದು ಭಾಗದಲ್ಲಿ ಎ ಹಾಗೂ ಇನ್ನೊಂದು ಭಾಗದಲ್ಲಿ ಬಿ ಎಂದು ಬರೆಯಿರಿ.

3.ಈಗ ಕೈಯನ್ನು ಎಥನಾಲ್ನಿಂದ ಒರೆಸಿ ಹೈಪೋಡರ್ಮಿಕ್ ಸೂಜಿ ಬಳಸಿ ಎರಡು ಹನಿ ರಕ್ತ ತೆಗೆದು ಗಾಜಿನ ಸ್ಲೈಡಿನ ಎರಡು ಭಾಗದಲ್ಲೂ ಒಂದೊಂದು ಹನಿ ಹಾಕಿ.

4.ಒಂದು ಭಾಗಕ್ಕೆ ಆಂಟಿಸೇರಾ ಎ ಮತ್ತು ಇನ್ನೊಂದು ಭಾಗಕ್ಕೆ ಆಂಟಿಸೇರಾ ಬಿ ಹಾಕಿ ಗಾಜಿನ ರಾಡ್ ಉಪಯೋಗಿಸಿ ಅದನ್ನು ಮಿಕ್ಸ್ ಮಾಡಿ.

ಫಲಿತಾಂಶ: ಎ ಭಾಗ ಹಾಗೇ ಇದ್ದು ಬಿ ಭಾಗ ಗಟ್ಟಿಯಾದರೆ ರಕ್ತದ ಗುಂಪು "ಬಿ". ಎ ಭಾಗ ಗಟ್ಟಿಯಾಗಿ ಬಿ ಭಾಗ ಹಾಗೇ ಇದ್ದಲ್ಲಿ ರಕ್ತದ ಗುಂಪು "ಎ". ಎ ಹಾಗೂ ಬಿ ಎರಡೂ ಭಾಗಗಳೂ ಗಟ್ಟಿಯಾದಲ್ಲಿ ರಕ್ತದ ಗುಂಪು "ಎ.ಬಿ". ಎರಡೂ ಭಾಗಗಳು ಗಟ್ಟಿಯಾಗದಿದ್ದರೆ ರಕ್ತದ ಗುಂಪು "ಒ".