ರಂಗ್ದುಮ್
ರಂಗ್ದುಮ್ ಉತ್ತರ ಭಾರತದ ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿನ ಸುರೂ ಕಣಿವೆಯಲ್ಲಿರುವ ಒಂದು ಹಳ್ಳಿ. ಒಂದು ಬದಿಯಲ್ಲಿ ವರ್ಣರಂಜಿತ ಬೆಟ್ಟಗಳು ಮತ್ತು ಇನ್ನೊಂದು ಬದಿಯಲ್ಲಿ ಬಂಡೆಗಳುಳ್ಳ ಪರ್ವತಗಳು ಮತ್ತು ಹಿಮನದಿಗಳು (ಮುಖ್ಯವಾಗಿ ಡ್ರಾಂಗ್-ಡ್ರಂಗ್) ಇವೆ.
"ರಂಗ್ದುಮ್ ಸುರೂ ಕಣಿವೆಯಲ್ಲಿನ ಕೊನೆಯ ಜನವಸತಿಯುಳ್ಳ ಪ್ರದೇಶವಾಗಿದೆ. ಇದಲ್ಲದೆ ಇದು ಬಕರ್‌ವಾಲ್‍ಗಳೆಂಬ ಅಲೆಮಾರಿ ಹಿಂಡುಜನರ ಗಮ್ಯಸ್ಥಳವಾಗಿದೆ. ಇವರು ಪ್ರತಿ ವರ್ಷ ಜಮ್ಮು ಬಳಿಯ ಹಿಮಾಲಯದ ತಪ್ಪಲು ಪ್ರದೇಶದಿಂದ ಚಾರಣ ಮಾಡಿ ಬೇಸಿಗೆಯ ಸಮೃದ್ಧ ಹುಲ್ಲನ್ನು ಮೇಯಿಸಲು ತಮ್ಮ ಜೊತೆ ಕುರಿ ಮತ್ತು ಮೇಕೆಗಳ ಹಿಂಡುಗಳನ್ನು ತರುತ್ತಾರೆ.
ರಂಗ್ದುಮ್ ಮಠದ ಸುತ್ತಮುತ್ತಲಿನ ಪ್ರದೇಶವು ತುಂಬಾ ಬರಡಾಗಿದೆ ಮತ್ತು ಸಂಕ್ಷಿಪ್ತ ಬೇಸಿಗೆಯಲ್ಲಿ ಕೆಲವೊಮ್ಮೆ ಬೆಳೆಗಳು ಪಕ್ವವಾಗುವುದಿಲ್ಲ. ಸ್ಥಳೀಯರು ತಮ್ಮ ಹಿಂಡುಗಳು ಮತ್ತು ಸುರು ಕಣಿವೆಯ ಕೆಳಭಾಗದ ಸರಬರಾಜಿನ ಮೇಲೆ ಅವಲಂಬಿಸುತ್ತಾರೆ.[೧]
ಪರ್ಕಾಚಿಕ್‍ವರೆಗೆ ಸುರೂ ಕಣಿವೆಯ ಜನರು ಎಲ್ಲರೂ ಮುಸ್ಲಿಮರು. ಪರ್ಕಾಚಿಕ್ ನಂತರ ಈ ಅದ್ಭುತವಾದ ಸುಂದರ ಕಣಿವೆ ಒಂದೆರಡು ಸಣ್ಣ ವಸಾಹತುಗಳನ್ನು ಹೊರತುಪಡಿಸಿ ಬಹುಮಟ್ಟಿಗೆ ನಿರ್ಜನವಾಗಿದೆ. ಕಣಿವೆಯ ತುದಿಯಲ್ಲಿರುವ ಯುಲ್ಡೋ ಮತ್ತು ಜುಲಿಡೋಕ್ ಎಂಬ ಸಣ್ಣ ಹಳ್ಳಿಗಳು ಸಂಪೂರ್ಣವಾಗಿ ಬೌದ್ಧ ಧರ್ಮವನ್ನು ಹೊಂದಿವೆ. ಜನರು ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ನೆರೆಯ ಜ಼ನ್‍ಸ್ಕಾರ್‌ನ ಭಾಗವಾಗಿದ್ದಾರೆ ಮತ್ತು ಟಿಬೆಟಿಯನ್ ಬೌದ್ಧ ಧರ್ಮದ ಗೆಲುಗ್ಪಾ ಪಂಥಕ್ಕೆ ಸೇರಿದ 18 ನೇ ಶತಮಾನದ ರಂಗ್‍ದುಮ್ ಮಠವನ್ನು ಬೆಂಬಲಿಸುತ್ತಾರೆ.[೨][೩]
ರಂಗ್‌ದುಮ್‌ನಲ್ಲಿ ಪ್ರವಾಸಿ ಬಂಗಲೆ, ಮೂರು ಟೀಹೌಸ್‌ಗಳು ಇವೆ. ಹಳ್ಳಿಯಿಂದ ಸುಮಾರು 2 ಕಿ.ಮಿ. ದೂರದಲ್ಲಿ ಹಾಸಿಗೆಯುಳ್ಳ ಡೇರೆಗಳಲ್ಲಿ ಪ್ರವಾಸಿಗರಿಗೆ ವಸತಿ ಕಲ್ಪಿಸುವ ಬೇಸಿಗೆ ಮಾತ್ರದ ಶಿಬಿರವಿದೆ.[೪]
ಅಡಿಟಿಪ್ಪಣಿಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- Janet Rizvi. (1996). Ladakh: Crossroads of High Asia. Second Edition. Oxford University Press, Delhi. ISBN 0-19-564546-4.
- Schettler, Margaret & Rolf (1981). Kashmir, Ladakh & Zanskar. Lonely Planet Publications. South Yarra, Victoria, Australia. ISBN 0-908086-21-0.