ರಂಗಾಯಣ

ರಂಗ ಚಟುವಟಿಕಾ ಕೇಂದ್ರ, ಮೈಸೂರು

ರಂಗಾಯಣ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕಾರ್ಯ ನಿರ್ವಹಿಸುವ ಸಂಸ್ಥೆಗಳು. ಕರ್ನಾಟಕದಲ್ಲಿ ಒಟ್ಟು ಆರು ರಂಗಾಯಣಗಳು ಕಾರ್ಯನಿರ್ವಹಿಸುತ್ತಿವೆ.

ರಂಗಾಯಣ ಅನೇಕ ಪ್ರದರ್ಶನಗಳನ್ನು ನೀಡುವ ಜಾಗವಾದ ಮೈಸೂರಿನ ಕಲಾಮಂದಿರ

ಮೈಸೂರು, ಶಿವಮೊಗ್ಗ, ಧಾರವಾಡ, ಕಲಬುರಗಿ ಮತ್ತು ದಾವಣಗೆರೆ ರಂಗಾಯಣ ,ಕಾರ್ಕಳ ರಂಗಾಯಣಗಳು


ರಂಗಸಮಾಜದ ಧ್ಯೇಯೋದ್ದೇಶಗಳು:

ರಂಗಾಯಣದ ರೀತಿಯಲ್ಲೇ ಗುರಿ ಹೊಂದಿದ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಂಸ್ಥೆಗಳ ಮಟ್ಟಕ್ಕೆ ರಂಗಾಯಣವನ್ನು ಕೊಂಡೊಯ್ಯುವುದು.

ರಂಗಾಯಣವನ್ನು  ಕರ್ನಾಟಕದ ಪ್ರಾತಿನಿಧಿಕ ರೆಪರ್ಟರಿಯನ್ನಾಗಿ ರೂಪಿಸುವುದು.

ರಂಗಭೂಮಿತಜ್ಞರು, ಸಂಶೋಧಕರು, ನಾಟಕಕಾರರು, ನಿರ್ದೇಶಕರು, ಕಲಾವಿದರು, ಹಾಗೂ ರಂಗತಂಡಗಳನ್ನು ಆಹ್ವಾನಿಸುವುದು; ರಂಗಶಿಬಿರಗಳು, ನಾಟಕರಚನೆ, ಮತ್ತು ನಿರ್ದೇಶನವನ್ನೇರ್ಪಡಿಸುವುದು; ವಿಚಾರ ಸಂಕಿರಣಗಳು, ಸಮ್ಮೇಳನಗಳು, ನಾಟಕೋತ್ಸವ, ಮತ್ತು ಪ್ರದರ್ಶನಗಳನ್ನು ಏರ್ಪಡಿಸುವುದು.

ರಂಗಭೂಮಿಯಲ್ಲಿ ಆಸಕ್ತಿ ಇರುವವರನ್ನೆಲ್ಲ ಒಟ್ಟುಗೂಡಿಸಿ ತರಬೇತಿಯ ಮೂಲಕ ಅವರನ್ನು ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡುವುದು.

ರಂಗಭೂಮಿಗೆ  ಸಂಬಂಧಿಸಿದ ಪರಿಕರಗಳ ಸಂಗ್ರಹಣೆ; ಲೇಖನಗಳು, ಪುಸ್ತಕಗಳು, ಹಾಗೂ ಪತ್ರಿಕೆಗಳಿಂದ ಸಂಶೋಧನೆಯನ್ನು ನಡೆಸುವುದು.

ಹೊಸ ನಾಟಕಗಳನ್ನು ಪ್ರಕಟಿಸುವುದು; ಇತರ ಭಾಷೆಗಳಿಂದ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸುವುದು.

ರಂಗಮಾಹಿತಿ ಕೇಂದ್ರ ಮತ್ತು ಗ್ರಂಥ ಭಂಡಾರವನ್ನು ಸ್ಥಾಪಿಸುವುದು.

ಇದೇ ರೀತಿ  ಆಸಕ್ತಿ ಹೊಂದಿರುವ ವ್ಯಕ್ತಿಗಳು ಹಾಗೂ ಸಂಘಟನೆಗಳೊಂದಿಗೆ ಸಂಪರ್ಕ ಸಾಧಿಸಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಬಂಧವನ್ನುಕುದುರಿಸುವುದು.

ಮೈಸೂರು ರಂಗಾಯಣ,ಯಕ್ಷ ರಂಗಾಯಣ, ಮಲೆನಾಡು ರಂಗಾಯಣ, ಹೈದರಾಬಾದ್–ಕರ್ನಾಟಕರಂಗಾಯಣ, ವೃತ್ತಿರಂಗಭೂಮಿ ರಂಗಾಯಣಗಳನ್ನು ಸ್ಥಾಪಿಸುವ ಮೂಲಕ ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿಯ ಸೊಗಡನ್ನು ಜೀವಂತವಾಗಿಡುವ ಪ್ರಯತ್ನಇದಾಗಿದೆ. ಮೈಸೂರು, ಶಿವಮೊಗ್ಗ, ಧಾರವಾಡ, ಕಲಬುರಗಿ ಮತ್ತು ದಾವಣಗೆರೆ ರಂಗಾಯಣ ,ಕಾರ್ಕಳ ರಂಗಾಯಣಗಳು ಈಗಾಗಲೇ ಕಾರ್ಯಾರಂಭ ಮಾಡಿವೆ.

ಮೈಸೂರಿನಿಂದ ಕಾರ್ಯ ನಡೆಸುವ ಒಂದು ರಂಗಕಲಾ ಸಂಸ್ಥೆ. ಈ ಸಂಸ್ಥೆಯು ಒಂದು ಜೌದ್ಯೋಗಿಕ ರಂಗ ತಂಡವನ್ನೂ, ಒಂದು ರಂಗಕಲೆ ತರಬೇತು ಕೇಂದ್ರವನ್ನೂ ಹಾಗು ಒಂದು ರಂಗಕಲೆ ಸಂಶೋಧನ ಕೇಂದ್ರವನ್ನೂ ನಡೆಸುತ್ತದೆ.

"https://kn.wikipedia.org/w/index.php?title=ರಂಗಾಯಣ&oldid=1299179" ಇಂದ ಪಡೆಯಲ್ಪಟ್ಟಿದೆ