ಯೋಚಿಸಿ-ಜೊತೆಯಾಗಿ-ವಿನಿಮಯಿಸಿ

ಯೋಚಿಸಿ-ಜೊತೆಯಾಗಿ-ವಿನಿಮಯಿಸಿ ಇದು ಒಂದು ಸಹಕಾರಿ ಕಲಿಕೆ, ಇಲ್ಲಿ ವಿದ್ಯಾರ್ಥಿಗಳ ಗುಂಪಿಗೆ ಸಹಯೋಗದಿಂದ ಕಲಿಸುವ ತಂತ್ರ. ಈ ವಿಧಾನದಲ್ಲಿ ಒಂದು ಗುಂಪು ಒಂದು ವಿಷಯನ್ನು ತೆಗೆದುಕೊಂಡು, ಪ್ರಟ್ಯೇಕವಾಗಿ ಆಲೋಚಿಸಿ, ಜೊತೆಜೊತೆಯಾಗಿ ಚರ್ಚಿಸಿ, ತಮ್ಮ ಗುಂಪಿನಲ್ಲಿ ಇರುವ ಇತರರೊಂದಿಗೆ ಹಂಚಿಕೊಂಡು ತಮ್ಮ ವೈಯುಕ್ತಿಕವಾದ ವಿಚಾರಗಳನ್ನು ರೂಪಿಸಿಕೊಳ್ಳುವ ಪದ್ದತಿ.

ಯಾವುದೇ ಒಂದು ವಿಷಯದ ಪರಿಕಲ್ಪನೆಯನ್ನು ಕಲಿಸುವ ಅಥವಾ ಓದುವ ಮುಂಚೆ ಈ ಪದ್ದತಿಯನ್ನು ಉಪಯೊಗಿಸಬೆಕು. ಇದನ್ನು ಚಿಕ್ಕ ಚಿಕ್ಕ ಗುಂಪುಗಲ್ಲಿ ಮಾಡಿದರೆ ಒಳ್ಳೆಯದು.

ಉಪಯೋಗಿಸುವ ವಿಧಾನ

ಬದಲಾಯಿಸಿ

ಶಿಕ್ಷಕರು ಈ ಪದ್ದತಿಯನ್ನು ಉಪಯೋಗಿಸಲು ಅನುಕೂಲವಾಗುವುದಕ್ಕೆ ಬೇಕಾದ ಎಲ್ಲ ಕ್ರಿಯೆಗನ್ನು ವಿದ್ಯಾರ್ಥಿಗಳು ಅನುಸರಿಸಲು ಅನುಕೂಲ ಮಾಡಿಕೊಡುತ್ತಾರೆ.

ಮೊದಲನೆಯದಾಗಿ, ವಿಷಯವನ್ನು ವಿದ್ಯಾರ್ಥಿಗಳ ಗುಂಪಿಗೆ ಒಂದು ಪ್ರಶ್ನೆಯ ಅಥವಾ ಒಂದು ಸಮಸ್ಯೆಯ ರೂಪದಲ್ಲಿ ಕೊಡುತ್ತಾರೆ. ವಿದ್ಯಾರ್ಥಿಗಳು ಈ ಪ್ರಶ್ನೆ ಅಥವಾ ಸಮಸ್ಯೆಯ ಬಗ್ಗೆ ಆಲೋಚಿಸಲು ಸಾಕಷ್ಟು ಸಮಯನ್ನು ಕೊಡುತ್ತಾರೆ.ಬಳಿಕ ವಿದ್ಯಾರ್ಥಿಗಳನ್ನು ಇಬ್ಬಿಬ್ಬರಾಗಿ ಕುಳಿತುಕೊಳ್ಳಲು ಹೇಳಿ ಇಬ್ಬರೂ ಈ ವಿಷಯದ ಬಗ್ಗೆ ತಮ್ಮ ತಮ್ಮ ಅಲ್ಲೋಚನೆಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತಾರೆ.

ಈ ರೀತಿಯ ವಿನಿಮಯ ವಿದ್ಯಾರ್ಥಿಗಳ ನಡುವೆ ನಡೆಯತ್ತಿದ್ದಂತೆ, ಒಂದು ವಿಷಯದ ಬಗ್ಗೆ ಇನ್ನೂಂದು ರೀತಿಯಲ್ಲಿ ಆಲೋಚಿಸುವ ಮತ್ತು ಮತ್ತೊಂದು ದೃಷ್ಟಿಕೋನದಲ್ಲಿ ನೋಡುವ ಅವಕಾಶ ವಿದ್ಯಾರ್ಥಿಗಳಿಗೆ ಸಿಗುತ್ತದೆ. ಒಂದು ವಿಷಯದ ಬಗ್ಗೆ ತಮ್ಮ ಸರಿಸಮಾನರಲ್ಲಿ ವಿವಿಡ ರೀತಿಯಲ್ಲಿ ಆಲೋಚಿಸುವ ಸಾಧ್ಯತೆ ಇದೆಯೆಂಬ ಅರಿವು ಅವರಲ್ಲಿ ಮೂಡುತ್ತದೆ. ಒಂದು ವಿಷಯವನ್ನು ಎಲ್ಲ ರೀತಿಯಿಂದ ಪರಿಶೀಲಿಸಿ ಅದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಮಕ್ಕಳು ವಿಷಯವನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುವುದು ಮಾತ್ರವಲ್ಲದೆ ಮತ್ತೊಬ್ಬ್ಬ ವಿದ್ಯಾರ್ಥಿಗೆ ತಮ್ಮ ಆಲೋಚನೆಗಳನ್ನು ಸಂಪರ್ಕಿಸಲು ಕಲಿತುಕೊಳ್ಳುತ್ತಾರೆ.

ಹೆಚ್ಚು ಸಮಯವಿದ್ದಲ್ಲಿ, ವಿದ್ಯಾರ್ಥಿಗಳು ಮತ್ತೊಬ್ಬರೊಂದಿಗೆ ಕುಳಿತು ತಮ್ಮ ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಲಬಹುದು ಅಥವಾ ಇಡೀ ವರ್ಗದವರೊಂದಿಗೆ ತಮ್ಮ ಆಲೋಚನೆಗಳನ್ನು ಹೇಳಿಕೊಳ್ಳಬಹುದು.[]

ಅನುಕೂಲಗಳು

ಬದಲಾಯಿಸಿ
  • ಒಂದು ವಿಷಯದ ಬಗ್ಗೆ ಸರಿಯಾದ ಪರಿಕಲ್ಪನೆಯ ಅರ್ಥವನ್ನು ಮಾಡಿಕೊಳ್ಳಲುಸಹಾಯ ಮಾಡುತ್ತದೆ.
  • ತನ್ನ ಹತ್ತಿರ ಇರುವ ಮಾಹಿತಿಯನ್ನು ಸರಿಯಾಗಿ ಶೋಧಿಸಿ ಒಂದು ವಿಚಾರವನ್ನು ರೂಪಿಸುವ ಮತ್ತು ಅದರ ಬಗ್ಗೆ ಒಂದು ತೀರ್ಮಾನಕ್ಕೆ ಬರುವ ಸಾಮರ್ಥ್ಯವನ್ನು ಕೊಡುತ್ತದೆ
  • ಎಲ್ಲಕಿಂತ ಹೆಚ್ಚಾಗಿ ಒಬ್ಬ ವಿದ್ಯಾರ್ಥಿ ಇತರರ ದೃಷ್ಟಿಕೋನಗಳನ್ನು ಗಣನೆಗೆ ತಂದುಕೊಂಡುಅದನ್ನು ಗೌರವಿಸುವ ಸಾಮರ್ಥ್ಯವನ್ನು ಹೊಂದುತ್ತಾನೆ.
  • ಇದಕ್ಕೆ ತಯಾರಿ ಮಾಡಲು ಮತ್ತು ತರಗತಿಯಲ್ಲಿ ಇದನ್ನು ನಿರ್ವಹಿಸಲು ಸ್ವಲ್ಪವೇ ಸಮಯ ಬೇಕಾಗುತ್ತದೆ.
  • ವಿದ್ಯಾರ್ಥಿಗಳು ತಮ್ಮ ಸರಿಸಮಾನರಲ್ಲಿ ಪರಸ್ಪರ ವೈಯುಕ್ತಿಕವಾಗಿ ಬೆರೆಯುವಿಕೆಯಿಂದ ಈ ವಿಷಯದ ಬಗ್ಗೆ ಅಷ್ಟಾಗಿಆಸಕ್ತಿ ಇಲ್ಲದವರನ್ನೂ ಪ್ರೇರೇಪಿಸುತ್ತದೆ.
  • ವಿವಿಧವಾದ ಮತ್ತು ಕೆಳಮಟ್ಟದಿಂದ ಮೇಲ್ಮಟ್ಟದ ಪ್ರಶ್ನೆಗಳನ್ನೂ ವಿದ್ಯಾರ್ಥಿಗಳು ಕೇಳಲು ಅನುಕೂಲವಾದ ಪರಿಸರವನ್ನು ಉಂಟು ಮಾಡುತ್ತದೆ.
  • ಜೊತೆ ಜೊತೆಯಾಗಿ ಕುಳಿತ ವಿದ್ಯಾರ್ಥಿಗಳು ವಿನಿಮಯಮಾಡಿಕೊಳ್ಳುವ ವಿಚಾರಗಳನ್ನು ಕೇಳಿದಾಗ ಮತ್ತು ಅವರು ಪ್ರತ್ಯೇಕವಾಗಿ ತಮ್ಮೆ ವಿಚಾರಗಳನ್ನು ಹೇಳುವಾಗ ವಿದ್ಯಾರ್ಥಿಗಳವಿಚಾರ ಸರಣಿಯನ್ನು ಅರ್ಥಮಾಡಿಕೊಳ್ಳಲು ಶಿಕ್ಷಕರಿಗೆ ತುಂಬಾ ಸಹಾಯವಾಗುತ್ತದೆ[]

ಟಿಪ್ಪಣಿಗಳು

ಬದಲಾಯಿಸಿ
  1. "Think-Pair-Share". Reading Rockets.
  2. "Think-Pair-Share". Interactive Lectures.