ಯೇಸುಸಭೆ ಮತ್ತು ಅಂತರ್-ಧರ್ಮೀಯ ಸಂವಾದ
ಪ್ರಾಮುಖ್ಯತೆ
ಬದಲಾಯಿಸಿಬಹುಧರ್ಮೀಯತೆ ಎನ್ನುವುದು ಯಾವಾಗಲೂ ಅಸ್ತಿತ್ವದಲ್ಲಿ ಇದ್ದಂತ ಸಂಗತಿಯೆಂದು ಹಲವು ಇತಿಹಾಸಕಾರರು ಹಾಗು ಬೈಬಲ್ ವಿದ್ವಾಂಸರು ಪ್ರತಿಪಾದಿಸುತ್ತಾರೆ. ಅತ್ತಿತ್ತ ನೋಡಿದರೆ ನಮಗೆ ಕಾಣುವುದು ವಿವಿಧ ಧರ್ಮಗಳಿಗೆ ಸಂಭಂದಗಳಿಗೆ ಸಂಭಂದಪಟ್ಟ ಹಬ್ಬ ಆಚರಣೆಗಳು, ಧಾರ್ಮಿಕ ಸ್ತಳಗಳು ಮತ್ತು ಧಾರ್ಮಿಕ ಕಟ್ಟಡಗಳು! ಹಿಂದಿನ ಕಾಲದಲ್ಲಿ ಇತರ ಧರ್ಮಗಳತ್ತ ಹೆಚ್ಚಿನ ಒಲವು ತೋರಿದವರು ಹಾಗು ಇತರ ಧರ್ಮಗಳ ಬಗ್ಗೆ ಹೆಚ್ಚಿನ ಅರಿವು ಇದ್ದವರು ಬಹು ವಿರಳವೆನ್ನಬಹುದು. ಆದರೆ ಇಂದಿನ ಪರಿಸ್ತಿತಿ ಬದಲಾಗಿದೆ. ಇತರ ಧರ್ಮಗಳನ್ನು ಸಕಾರಾತ್ಮಕವಾಗಿ ಕಾಣುವ ಹಲವು ಪ್ರಯತ್ನಗಳು ಪ್ರತಿಯೊಂದು ಧರ್ಮದಲ್ಲಿ ದಿನೇ ದಿನೇ ನಡೆಯುತ್ತಿರುವುದು ನಿಜಕ್ಕೂ ಸಂತಸದ ವಿಷಯ. ಇಂದು ಕ್ರೈಸ್ಥ ಧರ್ಮವು ಕೂಡ ಇತರ ಧರ್ಮಗಳನ್ನು ದ್ರುಷ್ಟಿಸುವ ರೀತಿಯನ್ನು ಬದಲಾಯಿಸಿಕೊಡಿದೆ. ೨ನೇ ವಾತಿಕನ್ ಮಹಾಸಭೆಯ ಮುಂಚೆ ಪ್ರತಿದ್ವನಿಸುತಿದ್ದ 'ಧರ್ಮಸಭೆಯ ಹೊರಗೆ ರಕ್ಷಣೆಯಿಲ್ಲ' ಎಂಬ ಮಾತಿಗೆ ತೆರೆಬಿದ್ದು ಇಂದು ಇತರ ಧರ್ಮಗಳನ್ನು ಸಕಾರಾತ್ಮಕವಾಗಿ ಕಾಣುವ ಹಲವು ಪ್ರಯತ್ನಗಳು ಸತತವಾಗಿ ನಡೆಯುತ್ತಿದೆ.
ವಿವರಣೆ
ಬದಲಾಯಿಸಿವಿವಿಧ ದರ್ಮಗಳ ಕೆಲವು ಮೂಲತತ್ವಗಳನ್ನು ಬಯಲಿಗೆಳೆದಾಗ ಅಲ್ಲಿ ಕಾಣಿಸುವುದು ಶಾಂತಿ, ಪ್ರೀತಿ, ಸಮಾನತೆಯ ಸಂದೇಶವಾದರು ಇಂದು ಜಗತ್ತಿನಾದ್ಯಂತ ಈ ಧರ್ಮಗಳೇ ಅಶಾಂತಿ ಮತ್ತು ಅನ್ಯಾಯದ ಪ್ರತೀಕಗಳಾಗಿವೆ. ಧರ್ಮಾಂದತೆ ಹಾಗು ಮೂಲಭೂತವಾಗದಿ ಶಕ್ತಿಗಳು ದಿನೇ ದಿನೇ ಅಧಿಕಗೊಳ್ಳುತ್ತಿರುವ ಸಂಧರ್ಬದಲ್ಲಿ ಅಂತರ್ ಧರ್ಮೀಯ ಸಂವಾದಕ್ಕೆ ಹೆಚ್ಚಿನ ಪ್ರಾಮುಕ್ಯತೆಯನ್ನು ನೀಡುವುದು ಅನಿವಾರ್ಯ. ಹೊಸ ಹಾಗು ಕಷ್ಟಕರ ಸವಾಲುಗಳನ್ನು ಎದುರಿಸಲು ಸದಾ ಸಿದ್ದವಿರುವ ಯೇಸು ಸಭೆಯು ಇಂದು ಅಂತರ್ ಧರ್ಮೀಯ ಸಂವಾದವನ್ನು ತನ್ನ ಪ್ರಮುಕ ಕಾಯಕವನ್ನಾಗಿಸಬೇಕಾಗಿದೆ. ಇದಕ್ಕೆ ಸಾಕ್ಶಿಯೆಂಬಂತೆ ಈಗಾಗಲೆ ಜಗತ್ತಿನಾದ್ಯಂತ ಯೇಸು ಸಭೆಯ ಅನೇಕ ಸಧಸ್ಯರು ವಿವಿಧ ರೀತಿಯಲ್ಲಿ ಅಂತರ್ಧರ್ಮೀಯ ಸಂವಾದವನ್ನು ನಡೇಸುತಿದ್ದಾರೆ. ಈ ಪ್ರಯತ್ನವು ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಗಬೇಕಾಗಿದೆ. ಯೇಸುಸಭೆಯ ಸದಸ್ಯರು ಈ ಸಂವಾದದಲ್ಲಿ ಇನ್ನೂ ಹೆಚ್ಚಿನ ಸ್ರಜನಶೀಲತೆಯಿಂದ ಭಾಗವಹಿಸಿ ಧರ್ಮಗಳ ನದುವಿನ ಪೈಪೋಟಿಗೆ ಕೊನೆ ಹಾಕುವುದರಲ್ಲಿ ಸತತವಾಗಿ ದುಡಿಯುವಂತೆ ಭಗವಂತನು ನಮ್ಮನ್ನೆಲ್ಲರನ್ನು ಹರಸಲಿ. ಅಂತರ್ ಧರ್ಮೀಯ ಸಮ್ವಾದದ ಕುರಿತು ಯೇಸುಸಭೆಯು ೩೪ನೇ ಮಹಾಸಭೆಯ ೫ನೇ ಶಾಸನದ ಕೆಲವು ಚಿಂತನೆಗಳು ಇಂತಿವೆ: ಭಹುಧರ್ಮೀಯತೆ ಸಂಧರ್ಭದಲ್ಲಿ ಅಂತರ್ ಧರ್ಮೀಯ ಸಂವಾದವನ್ನು ಪ್ರೋತ್ಸಾಹಿಸಿ ಅದನ್ನು ಮುನ್ನಡೆಸುವುದು ನಮ್ಮೆಲ್ಲರ ಕರ್ತವ್ಯ. ಈ ಮಹತ್ವದ ಕೆಲಸಕ್ಕೆ ಸಂತ ಇಗ್ನಾಸಿಯವರು ವಾಸ್ತವಿಕತೆಯನ್ನು ಕಲ್ಪಿಸಿದ ರೀತಿಯು ನಮಗೆ ಆದ್ಯಾತ್ಮಿಕ ಪ್ರೇರಣೆಯಾಗಿದೆ ಹಾಗು ದೇವರ ರಕ್ಶಣಾಕಾರ್ಯವು ನಾವು ಗ್ರಹಿಸಲಾಗದಂಥಹುದು ಎಂಬ ಅರಿವನ್ನೂ ಸಹ ನಮಗೆ ನೀಡುತ್ತದೆ.
ದೇವರ ಸ್ರಷ್ತಿಯನ್ನು ಕುರಿತು ಧ್ಯಾನಿಸುವಾಗ ವಿವಿಧ ಧರ್ಮಗಳಲ್ಲಿ ಮತ್ತು ಸಂಸ್ಕ್ರತಿಯಲ್ಲಿ ದೈವಾತ್ಮದ ಇರುವಿಕೆಯನ್ನು ನಾವು ಗುರುತಿಬಹುದು. ದೇವರ ಸಾಮ್ರಾಜ್ಯವನ್ನು ಕುರಿತು ಧ್ಯಾನಿಸುದರ ಮೂಲಕ ನಮ್ಮ ಇತಿಹಾಸವೇನಿಧೆಯೊ ಅದು ದೇವರ ಇತಿಹಾಸವಾಗಿದೆ ಎಂಬುದು ನಮಗೆ ಮನದಟ್ಟಾಗುತ್ತದೆ. ದೇವರ ಕರೆಗೆ ಸ್ರಜನಾತ್ಮಕ ರೀತಿಯಲ್ಲಿ ಸ್ಪಂದಿಸುವುದು ಯೇಸುಸಭೆಯ ಸಂಪ್ರದಾಯವಾಗಿರುವಾಗ ಇಂದಿನ ಪರಿಸ್ತಿತಿಯಲ್ಲಿ ಇತರ ಧರ್ಮಗಳಿಗೆ ಸೇರಿದ ಜನರೊಂದಿಗೆ ಬೆರೆಯಲು ಸಹಕಾರಿಯಾಗುವಂತೆ 'ಸಂವಾದ-ಸಂಸ್ಕ್ರತಿ'ಯನ್ನು ರೂಪಿಸಲಾಗಿದೆ. ಈ 'ಸಂವಾದ-ಸಂಸ್ಕ್ರತಿ'ಯು ಯೇಸುಸಭೆಯ ವಿಶಿಷ್ಟ ಲಕ್ಶಣವಾಗಿ ಮೂಡಿಬಂದು ದೇವರ ಮಹಿಮೆಯನ್ನು ಹೆಚ್ಚಿಸುವಂತಾಗಬೇಕು ಹಾಗು ದೇವಜನರ ಅಭ್ಯುದಯಕ್ಕೆ ಸಹಕಾರಿಯಾಗಬೇಕು.
ಉಲ್ಲೇಖ
ಬದಲಾಯಿಸಿ- https://en.wikipedia.org/wiki/Interfaith_dialogue
- http://berkleycenter.georgetown.edu/resources/interreligious-dialogue Archived 2015-12-26 ವೇಬ್ಯಾಕ್ ಮೆಷಿನ್ ನಲ್ಲಿ.
- https://www.google.co.in/search?site=&source=hp&q=interreligious+dialogue&oq=interreli&gs_l=hp.1.0.35i39j0l4j0i10j0l2j0i10j0.973.3205.0.5282.10.10.0.0.0.0.640.2043.4-2j2.4.0....0...1.1.64.hp..6.3.1512.0.BAKNtlh-5fQ