ಯೂತ್ ಫಾರ್ ಹೆರಿಟೇಜ್ ಫೌಂಡೇಶನ್

ಸಂಸ್ಥೆ

ಯೂತ್ ಹೆರಿಟೇಜ್ ಫೌಂಡೇಶನ್ ಎನ್ನುವುದು ಲಾಭಕ್ಕೋಸ್ಕರ ಕೆಲಸ ಮಾಡದ ಒಂದು ಎನ್.ಜಿ.ಓ. ಇದನ್ನು ೧೮೬೦ರ ಸೊಸೈಟಿ ನೋಂದಣಿ ಕಾಯ್ದೆಯ ಅನ್ವಯ ನೋಂದಣಿ ಮಾಡಲಾಗಿದೆ. ಇದನ್ನು ೨೦೦೯ ರಲ್ಲಿ ಹವ್ಯಾಸಿ ಯೋಜನೆಯಾಗಿ ರೂಪಿಸಲಾಗಿತ್ತು. ಆ ಯೋಜನೆ ಈಗ ಪ್ರಖ್ಯಾತವಾಗಿದೆ.

ಯೂತ್ ಫಾರ್ ಹೆರಿಟೇಜ್ ಫೌಂಡೇಶನ್
Youth for Heritage Foundation.png
ಸಂಕ್ಷಿಪ್ತ ಹೆಸರುYfHF
ಸ್ಥಾಪನೆ26 ಜನವರಿ 2014; 3947 ದಿನ ಗಳ ಹಿಂದೆ (2014-೦೧-26)
ಸ್ಥಾಪಿಸಿದವರುವಿಕ್ರಂಜಿತ್ ಸಿಂಗ್ ರೂಪರಾಜ್
ಶೈಲಿಎನ್.ಜಿ.ಓ
Purposeಪರಂಪರೆಗಳ ಅರಿವು ಮೂಡಿಸುವುದು
ಪ್ರಧಾನ ಕಚೇರಿನವದೆಹಲಿ
ಅಧಿಕೃತ ಜಾಲತಾಣYouth for Heritage Foundation

ಇತಿಹಾಸ

ಬದಲಾಯಿಸಿ

ಅಕ್ಟೋಬರ್ ೨೦೦೯ರಲ್ಲಿ ವಿಕ್ರಂಜಿತ್ ಸಿಂಗ್ ರೂಪರಾಜ್ ಎನ್ನುವ ಮಾಹಿತಿ ತಂತ್ರಜ್ಞ ದೆಹಲಿಯ ಐತಿಹಾಸಿಕ ಕಟ್ಟಡಗಳನ್ನು ನೋಡಲು ಪ್ರವಾಸ ಹೋಗುತ್ತಾರೆ. ಅಲ್ಲಿನ ಹಲವಾರು ತಾಣಗಳ ಬಗೆಗಿನ ಮಾಹಿತಿಗೆ ಅಂತರ್ಜಾಲದಲ್ಲಿ ಉಲ್ಲೇಖಗಳಿಲ್ಲದೇ ಇರುವುದನ್ನು ಅವರು ಗಮನಿಸಿದರು. ಆಗ ಅವರು "ದಿದರ್-ಇ-ದಿಲ್ಲಿ" ಎನ್ನುವ ಹವ್ಯಾಸಿ ಯೋಜನೆಯೊಂದನ್ನು ಪ್ರಾರಂಭಿಸಿದರು. ಈ ಯೋಜನೆಯ ಮೂಲಕ ದೆಹಲಿಯ ಪಾರಂಪರಿಕ ತಾಣಗಳ ಬಗೆಗಿನ ಮಾಹಿತಿಯನ್ನು ಕಲೆಹಾಕಲು ಪ್ರಾರಂಭಿಸಿದರು. ಅವರು ಈ ರೀತಿ ಕಲೆಹಾಕಿದ ಮಾಹಿತಿಯನ್ನು ತಮ್ಮ ವೆಬ್ ಸೈಟ್ monumentsofdelhi.com Archived 2024-03-01 ವೇಬ್ಯಾಕ್ ಮೆಷಿನ್ ನಲ್ಲಿ. [] ನಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿ ದೊರಕುವಂತೆ ಮಾಡಿದರು.

ಅಕ್ಟೋಬರ್ ೨೦೧೦ರಲ್ಲಿ ವಿಕ್ರಂಜಿತ್ "ದೆಹಲಿ ಪಾರಂಪರಿಕ ಜ್ಞಾನ ಕ್ಲಬ್" ಎನ್ನುವ ಅಂತರ್ಜಾಲದ ಗುಂಪನ್ನು ಸೃಷ್ಠಿಸಿದರು. ಈ ಗುಂಪು ಪಾರಂಪರಿಕ ತಾಣಗಳಲ್ಲಿನ ಓಡಾಟದ ಚಟುವಟಿಕೆಗಳನ್ನು ಪ್ರಾರಂಭಿಸಿತು. ಇದರಲ್ಲಿನ ಸದಸ್ಯರ ಸಲಹೆಯ ಮೇರೆಗೆ ಈ ಗುಂಪಿನ ಹೆಸರನ್ನು "ಪಾರಂಪರಿಕ ಫೋಟೋಗ್ರಫಿ ಕ್ಲಬ್" ಎಂದು ಬದಲಾಯಿಸಲಾಯಿತು. ಅದಾದ ಏಳು ವರ್ಷಗಳಲ್ಲಿ ಈ ಫೇಸ್ಬುಕ್ ಗುಂಪಿಗೆ ೨೧,೦೦೦ ಜನರು ಸೇರಿದ್ದರು. ಹಾಗಾಗಿ ಈ ಗುಂಪು ಭಾರತದಲ್ಲಿನ ಪಾರಂಪರಿಕ ತಾಣಗಳ ಫೋಟೋಗ್ರಾಫ್ಗಳ ಒಂದು ದೊಡ್ಡ ಸಂಗ್ರಹವಾಗಿ ಮಾರ್ಪಟ್ಟಿದೆ.

೨೦೧೩ರಲ್ಲಿ ಈ ಕ್ಲಬ್ ಪಾರಂಪರಿಕ ತಾಣಗಳಲ್ಲಿ ಆ ತಾಣಗಳ ಬಗೆಗಿನ ಮಾಹಿತಿ ನೀಡುವ ನಡಿಗೆಗಳನ್ನು ಆಯೋಜಿಸಿತು. ಈ ನಡಿಗೆಗಳನ್ನು ಪಾರಂಪರಿಕ ದರ್ಬಾರ್ ಎಂದು ಕರೆಯಲಾಯಿತು. ಮೊದಮೊದಲು ಈ ದರ್ಬಾರುಗಳನ್ನು ದೆಹಲಿಯಲ್ಲೇ ಆಯೋಜಿಸಲಾಯಿತು. ೨೦೧೪ರಲ್ಲಿ ಈ ಗುಂಪನ್ನು ಸೊಸೈಟಿ ಕಾಯ್ದೆಯಡಿ "ಯೂತ್ ಫಾರ್ ಹೆರಿಟೇಜ್ ಫೌಂಡೇಶನ್" ಎಂದು ನೋಂದಣಿ ಮಾಡಲಾಯಿತು. ರೂಪರಾಯ್ ಅವರು ಇದರ ಮೊದಲ ಚೇರ್ಮನ್ ಆದರು.

ಚಟುವಟಿಕೆಗಳು

ಬದಲಾಯಿಸಿ

ಈ ಸೊಸೈಟಿ ಪಾರಂಪರಿಕ ತಾಣಗಳ ಬಗೆಗಿನ ಅರಿವು ಮೂಡಿಸುವುದು ಮತ್ತು ಪಾರಂಪರಿಕ ತಾಣಗಳನ್ನು ಜನಪ್ರಿಯಗೊಳಿಸುವ ಕೆಲಸವನ್ನು ಮಾಡುತ್ತದೆ. ಈ ಸಲುವಾಗಿ ಇದು ಹಲವಾರು ಸಂಸ್ಥೆಗಳು ಮತ್ತು ವ್ಯಕ್ತಿಗಳ ಜೊತೆಗೆ ಕೆಲಸ ಮಾಡುತ್ತದೆ.

ಹೆರಿಟೇಜ್ ಫೋಟೋಗ್ರಫಿ ಕ್ಲಬ್

ಬದಲಾಯಿಸಿ

ಹೆರಿಟೇಜ್ ಫೌಂಡೇಶನ್ನಿನ ಅತೀ ದೊಡ್ಡ ಅಂಗಸಂಸ್ಥೆ ಹೆರಿಟೇಜ್ ಫೋಟೋಗ್ರಫಿ ಕ್ಲಬ್ ಆಗಿದೆ. [] ಭಾರತದಲ್ಲಿನ ಹಲವಾರು ಪಾರಂಪರಿಕ ತಾಣಗಳಲ್ಲಿ ಪಾರಂಪರಿಕ ಫೋಟೋಗ್ರಫಿ ನಡಿಗೆಗಳನ್ನು ಇದು ಆಯೋಜಿಸುತ್ತದೆ. ಹೆಚ್ಚು ಪ್ರಖ್ಯಾತವಾಗಿಲ್ಲದ ಈ ಪಾರಂಪರಿಕ ತಾಣಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು , ಆ ತಾಣಗಳ ವಾಸ್ತುಶಿಲ್ಪ, ಇತಿಹಾಸ ಮುಂತಾದ ವಿಷಯಗಳ ಬಗ್ಗೆ ತಿಳಿಸುವುದು ಈ ಸಂಸ್ಥೆಯ ಚಟುವಟಿಕೆಗಳ ಮುಖ್ಯ ಉದ್ದೇಶ .[]

ಪಾರಂಪರಿಕ ದರ್ಬಾರ್ ಗಳು

ಬದಲಾಯಿಸಿ

ಯೂತ್ ಫಾರ್ ಹೆರಿಟೇಜ್ ಫೌಂಡೇಶನ್ ಅವರು ಸಾಂಸ್ಕೃತಿಕ ಉಪನ್ಯಾಸ ಸರಣಿಗಳನ್ನು ೨೦೧೩ರಲ್ಲಿ ಪ್ರಾರಂಭಿಸಿತು. ಈ ಸರಣಿಯ ಮೊದಲನೆಯ ಕಾರ್ಯಕ್ರಮ ಮೆಹ್ರೂಲಿಯಲ್ಲಿನ ಜಫರ್ ಮಹಲ್ ನಲ್ಲಿ ನಡೆಯಿತು. ಇದರಲ್ಲಿ ಸೂಫಿಸಂ ಬಗ್ಗೆ ಮಾತನಾಡಲಾಯಿತು. ೨೦೧೪ರ ನಂತರ ಈ ಉಪನ್ಯಾಸ ಸರಣಿಗಳನ್ನು ಇಂಡಿಯಾ ಹ್ಯಾಬಿಟಾಟ್ ಸೆಂಟರಿನ ಕಾಸುರಿನ ಮತ್ತು ಗುಲ್ಮೊಹರ್ ಹಾಲಿನಲ್ಲಿ ನಡೆಸಲಾಗುತ್ತಿದೆ. ಪ್ರತೀ ತಿಂಗಳು ಒಬ್ಬ ಹೊಸ ಉಪನ್ಯಾಸಕ ಮತ್ತು ವಿಷಯಗಳನ್ನು ಆರಿಸಲಾಗುತ್ತದೆ. ಪುಷ್ಪೇಷ್ ಪಂತ್, ಕೆ.ಕೆ ಮೊಹಮ್ಮದ್, ರಾಜಾ ರುಮಿ, ಫೈಸಲ್ ಅಲ್ಕಾಲಿ, ಸೊಹಾಲ್ ಹಷ್ಮಿ, ಆರ್.ವಿ.ಸ್ಮಿತ್, ಡಾ| ಷರೀಪ್ ಹುಸೇನ್ ಕುಸೇಮಿ, ಡಾ| ಎನ್.ಚೌಧರಿ ಮುಂತಾದ ಮಹನೀಯರು ಇಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. []

ಉಲ್ಲೇಖಗಳು

ಬದಲಾಯಿಸಿ
  1. "Delhiites take to walks in a big way ಪಾರಂಪರಿಕ ತಾಣಗಳಲ್ಲಿನ ಓಡಾಟಕ್ಕೆ ದೆಹಲಿಗರ ಬೃಹತ್ ಚಾಲನೆ". ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಲೇಖನ.
  2. ರಾಶಿ ವದೇರ ಅವರ ಲೇಖನ. "A Hobby Run - 8 Hobby Clubs in Delhi". ಲಿಟಲ್ ಬ್ಲಾಕ್ ಬುಕ್ ನವದೆಹಲಿ.[ಶಾಶ್ವತವಾಗಿ ಮಡಿದ ಕೊಂಡಿ]
  3. "10 Guided Tours To Explore Delhi". What's Hot! ಎಂಬ ಶೀರ್ಷಿಕೆಯಲ್ಲಿ ಟೈಮ್ಸ್ ಸಿಟಿ ತಾಣದಲ್ಲಿನ ಲೇಖನ.
  4. ಆರ್.ವಿ. ಸ್ಮಿತ್ ಅವರ ಲೇಖನ. "Clio on a sunny afternoon". ದಿ ಹಿಂದೂ ದಿನಪತ್ರಿಕೆ.