ಯು.ಟಿ.ಖಾದರ್
ಯು.ಟಿ.ಖಾದರ್ ಒಬ್ಬ ಭಾರತೀಯ ರಾಜಕಾರಣಿ. ಖಾದರ್ ರವರು ಕರ್ನಾಟಕ ವಿಧಾನಸಭೆಯ ಮಂಗಳೂರು ಕ್ಷೇತ್ರವನ್ನು (ಹಿಂದೆ ಉಳ್ಳಾಲ ಕ್ಷೇತ್ರ ಎಂದು ಕರೆಯಲಾಗುತ್ತಿತ್ತು) ಪ್ರತಿನಿಧಿಸುತ್ತಿದ್ದಾರೆ. ಪ್ರಸ್ತುತ ಅವರು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿದ್ದಾರೆ.[೧] ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸದಸ್ಯರಾಗಿದ್ದು, ೨೦೨೩ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸತೀಶ್ ಕುಂಪಲ ವಿರುದ್ಧ ಗೆದ್ದು, ೫ನೇ ಬಾರಿಗೆ ಶಾಸಕರಾಗಿ ಚುನಾಯಿತರಾದರು.
ಯು. ಟಿ. ಖಾದರ್ | |
---|---|
ಶಾಸಕರು, ಕರ್ನಾಟಕ ವಿಧಾನಸಭೆ
| |
ಮುಖ್ಯಮಂತ್ರಿ | ಸಿದ್ದರಾಮಯ್ಯ |
ಪೂರ್ವಾಧಿಕಾರಿ | ಯು. ಟಿ. ಫರೀದ್ |
ಮತಕ್ಷೇತ್ರ | ಉಳ್ಳಾಲ (ಮಂಗಳೂರು) |
ವೈಯಕ್ತಿಕ ಮಾಹಿತಿ | |
ಜನನ | ಉಳ್ಳಾಲ |
ರಾಷ್ಟ್ರೀಯತೆ | ಭಾರತೀಯ |
ರಾಜಕೀಯ ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
ವೃತ್ತಿ | ರಾಜಕಾರಣಿ |
ಆರಂಭಿಕ ಜೀವನ
ಬದಲಾಯಿಸಿಖಾದರ್ ಹುಟ್ಟಿ ಬೆಳೆದದ್ದು ಮಂಗಳೂರಿನಲ್ಲಿ. ಅವರ ತಾಯಿ ನಸೀಮಾ ಮತ್ತು ಅವರ ತಂದೆ ದಿವಂಗತ ಹಾಜಿ ಯು. ಟಿ. ಫರೀದ್(ಕಾಂಗ್ರೆಸ್ ನ ಮಾಜಿ ಶಾಸಕರು).
ರಾಜಕೀಯ ಜೇವನ
ಬದಲಾಯಿಸಿಯು.ಟಿ.ಖಾದರ್ ರವರು, ಅವರ ತಂದೆ ಹಾಜಿ ಯು ಟಿ ಫರೀದ್ [೨] ಅವರ ನಿಧನದ ನಂತರ ೨೦೦೭ರಲ್ಲಿ ನಡೆದ ಉಪಚುನಾವಣೆಯಲ್ಲಿ ಖಾದರ್ ರವರು ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಅವರ ತಂದೆ ಹಾಜಿ ಯು ಟಿ ಫರೀದ್ ರವರು ೧೯೭೨, ೧೯೭೮, ೧೯೯೯ ಮತ್ತು ೨೦೦೪ರಲ್ಲಿ ಚುನಾವಣೆಗಳಲ್ಲಿ ಜಯಗಳಿಸಿದ್ದರು. ೨೦೧೮ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ನಾಲ್ಕನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ೨೦೧೮ರಲ್ಲಿ ಅವರು ಬಿಜೆಪಿಯ ಸಂತೋಷ್ ಕುಮಾರ್ ರವರನ್ನು ೧೯,೭೩೯ ಮತಗಳ ಅಂತರದಿಂದ ಸೋಲಿಸಿದರು.
ಯು.ಟಿ.ಖಾದರ್ ರವರು ಮಾಜಿ ಸಿಎಂ ಸಿದ್ದರಾಮಯ್ಯರವರ ಸಂಪುಟದದಲ್ಲಿ ಮೇ ೨೦ ೨೦೧೩ ರಿಂದ ಜೂನ್ ೨೦ ೨೦೧೬ರವರೆಗೆ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು. ಪ್ರಸ್ತುತ ಸಿಎಂ ಕುಮಾರಸ್ವಾಮಿಯವರ ಸಂಪುಟದಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.[೩]
ಬಾಹ್ಯ ಸಂಪರ್ಕ
ಬದಲಾಯಿಸಿಉಲ್ಲೇಖ
ಬದಲಾಯಿಸಿ- ↑ https://www.thehindu.com/news/national/karnataka/ut-khader-unanimously-elected-speaker-of-karnataka-legislative-assembly/article66887920.ece
- ↑ https://www.oneindia.com/politicians/u-t-abdul-khadar-ali-fareed-5495.html
- ↑ https://www.thehindu.com/news/cities/Mangalore/ut-khader-makes-it-to-the-state-ministry-again/article24101579.ece