ಯು.ಎಸ್.ಶ್ರೀಧರ್ ಆರಾಧ್ಯ

ಯು.ಎಸ್.ಶ್ರೀಧರ್ ಆರಾಧ್ಯರವರು ಉತ್ತಮ ವಿಮರ್ಶಕರು ಮತ್ತು ಸಂಶೋಧಕರು. ೨೦೦೯, ಸೋಂವಾರ್ ಪೇಟ್ ತಾಲೂಕಿನಲ್ಲಿ ನಡೆದ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.[೧]

ಜನನ ಬದಲಾಯಿಸಿ

ಯು.ಎಸ್.ಶ‍್ರೀಧರ್ ಆರಾಧ್ಯರು ೧೯.೪.೧೯೫೩ರಲ್ಲಿ ಶಿವಮೊಗ್ಗ ಜಿಲ್ಲೆಯ ಊರಗಡೂರು ಎಂಬಲ್ಲಿ ಜನಿಸಿದರು.

ತಂದೆ ಮತ್ತು ತಾಯಿ ಬದಲಾಯಿಸಿ

ಇವರ ತಂದೆ ಯು.ಸೂರಪ್ಪಾರಾಧ್ಯ ಮತ್ತು ತಾಯಿ ಶ‍್ರೀಮತಿ ಲಕ್ಷ್ಮಿ ದೇವಮ್ಮ.[೨]ಇವರ ತಂದೆಯವರು ಕೊಡಗಿನ ಮಾದಾಪುರದಲ್ಲಿರುವ ಶ್ರೀಮತಿ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.ಇವರ ತಂದೆ ಮತ್ತು ತಾಯಿ ವಿದ್ಯಾರ್ಥಿ ದೆಸೆಯಲ್ಲಿ ಹೊಸ್ಕೆರೆ ಶಿವಸ್ವಾಮಿ ಕೊ.ವಾ.ನಾಗಭೂಷಣ ಮತ್ತು ಹೆಚ.ಎಸ್.ಕೈಲಾಸ ಲಿಂಗಮ್ಮ ಜೊತೆ ಸೇರಿ ಮುಂಗಾರು ಎಂಬ ಹೆಸರಿನ ಸಂಯುಕ್ತ ಕವನ ಸಂಕಲನ ಪ್ರಕಟಿಸಿದ್ದರು.

ಕೃತಿಗಳು ಬದಲಾಯಿಸಿ

  • ಇವರು ಹಲವಾರು ಬಿಡಿ ಕವನಗಳು ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು 'ಸುವರ್ಣ' ಕಾವ್ಯ ಸಂಕಲನ ಬರೆದಿದ್ದಾರೆ.
  • ಗೊಲ್ಗೊಥಾ ಮತ್ತು ವೈಶಾಖಿ -ಒಂದು ವಿಮರ್ಶೆ[೩]
  • ಭವಭಾವ-ಕವನ ಸಂಕಲನ[೪]


ಉಲ್ಲೇಖಗಳು ಬದಲಾಯಿಸಿ