ಕಾಲ:೧೨.೧೦.೧೯೨೬.

ಊರು:ಉಡುಪಿ ಜೆಲ್ಲೆಯ ಹಿರಿಯಡ್ಕ.

ಜೆನ್ನಿಯವರು ಉಡುಪಿ ಜಿಲ್ಲೆಹಿರಿಯಡ್ಕಲ್ಲಿ ಜನಿಸಿದವರು.ಶ್ರಿನಿವಾಸ ಮತ್ತು ರಾಜಮ್ಮ ಎಂಬ ದಂಪತಿಗಳ ಪುತ್ರಿಯಾಗಿದ್ದಾರೆ.ಇವರು ಪ್ರಸಿದ್ದ ಲೇಖಕಿಯಾದ ಇಂದಿರಾ ಹಾಲಂಬಿ ಇವರ ಸಹೋದರಿಯಾಗಿದಾರೆ.

ವೃತ್ತಿ ಬದಲಾಯಿಸಿ

ಇವರು ಶಿಕ್ಷಣ ತರಬೆತಿಯನ್ನು ಮುಗಿಸಿ ಸುಮಾರು ೪೦ ವ‍‍‍‍‍‍‍‍ರ್ಷಗಳ ಕಾಲ ತಮ್ಮ ಜೀವನವನ್ನು ಶಿಕ್ಷಣ ವ್ರುತ್ತಿಯಲ್ಲಿ ಅಳಡಿಸಿಕೊಂದಿದಾರೆ.ಹಾಗು ನಿವೃತ್ತಿ ಹೊಂದಿದ್ದಾರೆ .ಯಶೋದಾ ಜೆನ್ನಿ ತಮ್ಮ ಅನೇಕ ಕಥೆ,ಕಾದಂಬರಿ,ನಾಟಕ ಮತ್ತು ಬಾಲ ಸಾಹಿತ್ಯಗಳನ್ನು"ಸಹನ" ಎಂಒ ಕಾವ್ಯ ನಾಮದಿಂದ ರಚಿಸಿದ್ದಾರೆ.

ಕಾದಂಬರಿಗಳು ಹಾಗು ನಾಟಕ ಬದಲಾಯಿಸಿ

ಇಲ್ಲಿ ಸಲ್ಲದವರು ಭಮಾಲೊಕ ನಿಮ್ಮಲು ಇರುವವರು ಮಾರಿಕೊಂಡವರು ಬಾಳಿನ ಬೆಳ.

ವಿಶೇಷಗಳು ಬದಲಾಯಿಸಿ

ಇವರ"ಇಲ್ಲಿ ಸಲದವರು"ಹಾಗು"ಭಮಲೊಕ"ಕಾದಂಬರಿಗಳಲ್ಲಿ ಕಂಡು ಬರುವ ಅಂಶಗಳೆಂದರೆ ಮನುಷ ಸಂಬಂಧಗಳು ಕೃತಕಥೆ, ಸುಖದ ಸಂಪತ್ತಿನ ಹಿಂದೆ ಹೊಗುವ ಮನುಷ್ಯ ಸಂಬಂಧಗಳನ್ನು ಮಾನವೀಯತೆಯನ್ನು ಮರೆಯವ ಕಥಾವಸ್ತುವೆ "ಭಮಾಲೋಕ" ಕಾದಂಬರಿ. ಈ ಕಾದಂಬರಿ ಜೆನ್ನಿಯವರ ಜೌಹ್ಹವಿ ಎಂಬ ಪಾತ್ರ ಕಥಾನಾಯಕಿಯ ಹೆಸರಿನ ಮೂಲಕ ತಮ್ಮ "ಭಮಾಲೋಕ" ರಚಿಸಿದ್ದಾರೆ. ಇವರ ಇನ್ನೊಂದು ಕಾದಂಬರಿ "ಇಲ್ಲಿ ಸಲ್ಲದವರು" ಈ ಕಾದಂಬರಿಯಲ್ಲಿ ಸುಮ ಎಂಬ ಪಾತ್ರ ಬರುತ್ತದೆ.ಇದರಲ್ಲಿ ಇರುವ ವಿಷಯವೇನೆಂದರೆ ಹೆಣ್ಣಿಗೆ ಮದುವೆ ಅನಿವಾರ್ಯವೆ ಎಂಬುದರ ಬಗ್ಗೆ ಜಿಜ್ಞಾಸೆ ಇದೆ. ಸಂಪ್ರದಾಯವಾದಿ "ಹದಿಹರೆಯದ" ತಮ್ಮ ಬುದುಕನ್ನು ಗಂಡನಿಗಾಗಿ ಮಾರಿಕೂಳ್ಳೊವುದನ್ನು ಈ ಕಥಾ ನಾಯಕಿಯರು ಸಹಿಸುವುದಿಲ್ಲ ಹೆಣ್ಣು ತನ್ನ ವ್ಯಕ್ತಿತ್ವವನ್ನು ತಾನೇ ನಿರ್ಮಿಸಿಕೊಳ್ಳಬೇಕು ಎಂಬ ಸಂದೇಶ ಇಲ್ಲಿ ಕಂಡು ಬರುತ್ತದ್ದೆ.ಜೆನ್ನಿಯವರು ಮಕ್ಕಳ ಮನಸ್ಸುನ್ನು ಅರ್ಥಮಾಡಿಕೂಂಡು ಮಕ್ಕಳಿಗಾಗಿ ಅನೇಕ ಕಿರುಕಥೆಗಳನ್ನು ರಚಿಸಿದ್ದಾರೆ.ಅವುಗಳಲ್ಲಿ ಯಶೋದಾ ಜೆನ್ನಿಯವರು ಮಕ್ಕಳ ಕಲ್ಪನಾ ಜಗತ್ತನ್ನು ವಿಸ್ತರಿಸುವಲ್ಲಿ ಮಹತ್ವದ ಪಾತ್ರ ವಹಿಸಿರುತ್ತಾರೆ.

ನಾಟಕಗಳು ಬದಲಾಯಿಸಿ

ಜೆನ್ನಿಯವರ ನಾಟಕಗಳಾದ "ನಿಮ್ಮಲು ಇರುವವರು" ಮತ್ತು "ಮಾರಿಕೊಳ್ಳುವವರು" ಮುಖ್ಯವಾಗಿ ವರದಕ್ಷಿಣೆಯ ಬಗ್ಗೆ ತಿಳಿಸುತ್ತಾರೆ.

ಲಕ್ಷಣಗಳು ಬದಲಾಯಿಸಿ

ಯಶೋದಾ ಜೆನ್ನಿಯವರ ಎಲ್ಲಾ ಬರವಣಿಗೆಯಲ್ಲಿಯೂ ಕಂಡು ಬರುವ ಮುಖ್ಯಲಕ್ಣಣವೆಂದರೆ ಸಮಾಜವನ್ನು ತಿದ್ದುವ ಶಿಯ ಸುಧಾರಣವಾದಿ ಮನಸ್ಸು, ಸಾಮಾಜಿಕ ರೋಗಗಳಿಗೆ ಚಿಕಿತ್ತ್ಸೆ ಮಾಡುವ ವೈದ್ಯರ ಕನಸು, ಸಾಮಾಜಿಕ ಪಿಡುಗುಗಳಿಗೆ ಗುದ್ದುವ, ಸಿಡಿಮದ್ದಾಗುವ ಕ್ರಾಂತಿಕಾರಿ ಗುಣ, ಪುರುಷಪ್ರಾದನ ವ್ಯವಸ್ತೆಯಲ್ಲಿರುವ ಲೋಪದೋಷಗಳನ್ನು ಸಮರ್ಥವಾಗಿ, ಕಲಾತ್ಮಾವಾಗಿ ಮತ್ತು ಪರಿಣಾಮಕಾರಿಯಾಗಿ ತಮ್ಮ ಕೃತಿಗಳಲ್ಲಿ ಜೆನ್ನಿಯವರು ನಿರೂಪಿಸಿದ್ದಾರೆ.[೧]

ಉಲ್ಲೇಖ ಬದಲಾಯಿಸಿ

  1. ಚಂದ್ರಗಿರಿ ನಾಡೋಜ ಡಾ ಸಾರಾ ಅಬೂಬ್ಬಕರ್ ಅಬೂಬ್ಬಕರ್ ಅಭಿನಂದನಾ ಗ್ರಂಥ ಸಂಪಾದಕರು ಡಾ ಸಬಿರಾ ಸಿರಿವನ ಪ್ರಕಾಶನ ಬೆಂಗಳೂರು ಮೂದಲ ಮುದ್ರಣ-೨೦೦೯ ಪುಟ ಸಂಖೈ-೨೬೬