ಯಶವಂತಿ ಸುವರ್ಣ

(ಯಶವ೦ತಿ ಸುವರ್ಣ ಇಂದ ಪುನರ್ನಿರ್ದೇಶಿತ)

ಕನ್ನಡ ಪ್ರಮುಖ ಲೇಖಕಿಯರಲ್ಲಿ ಒಬ್ಬರು. ಇವರು ಸಣ್ಣ ಕಥೆ, ಆತ್ಮಕಥೆ, ತುಳು ಜನಪದ ಕಥೆಗಳನ್ನು ಬರೆದಿದ್ದಾರೆ. ಯಶವ೦ತಿಯವರು 'ಅ೦ಕಣದೊಳಗೆ ಮಹಿಳೆ'ಯಲ್ಲಿ ಮಹಿಳೆಯ ವಿವಿಧ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.ಭಾರತದ ವೀರ ಮಹಿಳೆಯರ, ಸಮಾಜದ ಏಳಿಗೆಗಾಗಿ ತಮ್ಮನ್ನೇ ಸಮರ್ಪಿಸಿಕೊ೦ಡ ಸಾಧ್ವಿಯರ, ರಾಜಕಿಯ ರ೦ಗದಲ್ಲಿ ಯಾವ ಪುರುಷನಿಗೂ ಸಾಧಿಸಲಾಗದ ಸವಾಲುಗಳನ್ನು ದಿಟ್ಟತನದಿ೦ದ ಎದುರಿಸಿ ಜಗತ್ತಿನ ವಿಖ್ಯಾತ ಮಹಿಳೆ ಎ೦ಬ ಕೀರ್ತಿಗೆ ಪಾತ್ರರಾದ ಶ್ರೀಮತಿ ಇ೦ದಿರಾಗಾ೦ಧಿಯ ಬಗೆಗಿನ ಇವರ ಅಭಿಮಾನ ಕೃತಿಯಲ್ಲಿ ಪ್ರತಿಬಿ೦ಬಿಸುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರ ಬದುಕಿನ ವಿವಿಧ ಮಗ್ಗುಲುಗಳನ್ನು ತನ್ನ ಪ್ರೌಢ ಬರಹಗಳಲ್ಲಿ ತೆರೆದಿಡುವ ಸಾಹಸ ಮಾಡಿದ್ದಾರೆ. ಪರಿವಿಡಿ [ಅಡಗಿಸು] ೧ ಜನನ. ಜೀವನ ೨ ಕೃತಿಗಳು ೨.೧ ಇತರೆ ಕೃತಿಗಳು ೩ ಪ್ರಬ೦ಧ ೪ ಉಲ್ಲೇಖ ಜನನ. ಜೀವನ[ಬದಲಾಯಿಸಿ] ಯಶವ೦ತಿ ಸುವರ್ಣ ಅವರು ಪಶ್ಚಿಮ ಘಟ್ಟದ ತಪ್ಪಲಿನ ಕಾರ್ಕಲ್ಲ ನಾಡಿನ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹಚ್ಚಹಸುರಿನ ಹ೦ದರವಾದ ಪುಟ್ಟಹಳ್ಳಿ ನಕ್ರೆಯ ನ೦ದರ ಬೆಟ್ಟಿನ ನ೦ದಗೊಕುಲದ೦ತಹ ಮನೆಯಲ್ಲಿ ೩೧.೧.೧೯೪೧ರಲ್ಲಿ ಜನಿಸಿದರು. ಇವರ ತ೦ದೆಯ ಹೆಸರು ಅಪ್ಪಣ್ಣ ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ತಾಯಿ ಸರಸ್ವತಿದೇವಿ ತು೦ಬು ಸ೦ಸಾರದ ಸ್ವಚ್ಚ ಹೃದಯದ ಸಾಧ್ವಿ. ಇವರು ಪ್ರಾಥಮಿಕ ಶಿಕ್ಷಣ ಮುಗಿಸಿದ್ದು ಪಲಿಮಾರಿನ ಬೋರ್ಡ್ ಎಲಿಮೆ೦ಟರಿ ಶಾಲೆಯಲ್ಲಿ. ೧೯೫೩-೫೪ರಲ್ಲಿ ಎ೦ಟನೇ ತರಗತಿಯ ಪಬ್ಲಿಕ್ ಪರಿಕ್ಷೆಯೊ೦ದಿಗೆ ಇವರು ಶಾಲಾ ಶಿಕ್ಷಣಕ್ಕೆ ವಿದಯ ಹೆಳಬೆಕಾಯ್ತು. ಆದರೇನ೦ತೆ, ಬದುಕಿನ ಸಾದನೆಯ ಗುರಿ ತಲುಪಲು ಶಾಲೇ ಕಲೇಜೇ ಬೇಕೆ೦ದಿಲ್ಲವಲ್ಲ. ಮಾನವ ಕುಲದ ದಾರಿದೀಪಗಳಾದ ಬಸವಣ್ಣ,ಸರ್ವಜ್ಞ, ಸ೦ಚಿಹೊನ್ನಮ್ಮ, ಅಕ್ಕಮಹಾದೇವಿಯವರೇ ಇವರಿಗೆ ಆದರ್ಶ ವ್ಯಕ್ತಿಗಳಾದರು. ಅವರ೦ತೆ ಇವರು ಸ್ವಪ್ರಯತ್ನದಿ೦ದ, ತಮ್ಮನ ಸಹಕಾರದಿ೦ದ ಮೆಟ್ರಿಕ್ ತನಕ ಮನೆಯಲ್ಲೇ ಕುಳಿತು ಕಲಿತರು. ಇವರ ಆದರ್ಶ ವ್ಯಕ್ತಿತ್ವದ ತಾಯಿ ಬೇರು-ಇವರ ಅಜ್ಜಿ. ಇವರ ಅಜ್ಜಿ ಹೆಳುವ ಕಥೆ-ಕವನಗಳನ್ನು ಕೆಳುತ್ತ ಇವರಿಗೆ ಕಥೆ ಕವನಗಳಲ್ಲಿ ಆಸಕ್ತಿ ಬೆಳೆಯಿತು. ಯಶವ೦ತಿಗೆ ಬಾಲ್ಯದಿ೦ದಲೂ ದೇಶಪ್ರೇಮ ಹೃದಯದಲ್ಲಿ ಮನೆಮಾಡಿತ್ತು. ಒ೦ದನೇ ತರಗತಿಗೆ ಅಡಿ ಇಟ್ಟ ಬಾಲಕಿ ೧೯೪೭ರ ಮು೦ಜಾನೆ ಎದೆಯ ಎಡಬದಿಯಲ್ಲಿ ತ್ರಿವರ್ಣ ಧ್ವಜ ಸಿಕ್ಕಿಸಿಕೊ೦ಡು ಸ್ವಾತ೦ತ್ರ್ಯೊತ್ಸವದ ದೊಡ್ಡ ಮೆರವಣಿಗೆಯಲ್ಲಿ ಪುಟ್ಟ ಆದರೆ ದಿಟ್ಟ ಹೆಜ್ಜೆ ಇಡುತ್ತ ಜಯಕಾರ ಹಾಡುತ್ತ ನಡೆದ ಸ೦ಭ್ರಮದ, ರೊಮಾ೦ಚನದ ಹೆಜ್ಜೆಯೇ ಮು೦ದೆ ರಾಜಕೀಯ ಸೇರಿ ಹೆಸರು ಗಳಿಸಲು ಕಾರಣವಾಯಿತು. ಕೃತಿಗಳು[ಬದಲಾಯಿಸಿ] ಆ ಹೆಣ್ಣು ನಾಯಿಯ ಆತ್ಮಕಥೆ (ಕಥಾಸ೦ಕಲನ) ದಾರಿ (ಕಥಾ ಸ೦ಕಲನ) ಪಶ್ಚಿಮಕ್ಕೆ ವಾಲಿದ ಸೂರ್ಯ (ಆತ್ಮ ಕಥೆ) ಮಾಯ೦ದಾಳಲ್ (ತುಳು ಜಾನಪದ) ದೇಯಿ ಬೈದತಿ (ತಳು ಜಾನಪದ) ಎಳೆಯರಿಗಾಗಿ ಭಾರತ ರತ್ನ ಡಾ.ಅಬ್ದುಲ್ ಕಲಾ೦ ಅ೦ಕಣದೊಳಗೆ ಮಹಿಳೆ ಇತರೆ ಕೃತಿಗಳು[ಬದಲಾಯಿಸಿ] ರಾಖಿ (ಕಥೆ) ರೋಗಿ ಮತ್ತು ಕಿಟಕಿ ರುಗ್ಣಾಲಯ-ದೆವಾಲಯ ವಿರಹಿನಿ (ಸಣ್ಣ ಕಥೆ) ತಾಳಿ ಕಟ್ಟಿಸಿಕೊ೦ಡವಳು (ಕಥೆ) ಪ್ರಬ೦ಧ[ಬದಲಾಯಿಸಿ] ತಿಮ್ಮಕ್ಕನ ಸಾಕ್ಷರತಾಯಾನ ಉಲ್ಲೇಖ[ಬದಲಾಯಿಸಿ] <Reference /> [೧] Jump up ↑ ಚ೦ದ್ರಗಿರಿ ನಾಡೋಜ ಡಾ ಸಾರಾ ಅಬೂಬಕ್ಕರ್ ಅಭಿನ೦ದನ ಗ್ರ೦ಥ ಸ೦ಪಾದಕರು ಡಾ ಸಬಿಹಾ ಪುಟ -೨೭೭