ಮ್ಲೇಚ್ಛ (ಅಂದರೆ ಅವೈದಿಕ, ಅನಾಗರಿಕ) ಪ್ರಾಚೀನ ಭಾರತದಲ್ಲಿ ವಿದೇಶಿ ಮೂಲದ ಜನರನ್ನು ಸೂಚಿಸುತ್ತಿತ್ತು. ಪ್ರಾಚೀನ ಗ್ರೀಕರು ಬಾರ್ಬೆರೊಸ್ ಪದವನ್ನು ಬಳಸಿದಂತೆ ಮ್ಲೇಚ್ಛ ಪದವು ಪ್ರಾಚೀನ ಭಾರತೀಯರಿಂದ, ಮೂಲತಃ ವಿದೇಶಿಯರ ಒರಟು ಮತ್ತು ಅಗ್ರಾಹ್ಯ ಮಾತನ್ನು ಸೂಚಿಸಲು ಮತ್ತು ನಂತರ ಅವರ ಅಪರಿಚಿತ ವರ್ತನೆಗೆ ವಿಸ್ತರಿಸಿ ಬಳಸಲ್ಪಡುತ್ತಿತ್ತು. ಮಹಾಭಾರತದಲ್ಲಿ ಮೂಲ ಸಂಸ್ಕೃತ ಶಬ್ದ ಬರ್ಬರ್ ನ ಅರ್ಥ ಉಗ್ಗು, ದರಿದ್ರ, ವಿದೇಶಿ, ಪಾಪಿ ಜನರು, ಅಸಂಸ್ಕೃತ ಮತ್ತು ಕ್ರೂರ.

"https://kn.wikipedia.org/w/index.php?title=ಮ್ಲೇಚ್ಛ&oldid=416413" ಇಂದ ಪಡೆಯಲ್ಪಟ್ಟಿದೆ