ಮೋತಿಬಿಂದು
ಮೋತಿಬಿಂದು (ಕಣ್ಣಿನ ಪೊರೆ, ಕ್ಯಾಟರಾಕ್ಟ್) ಎಂದರೆ ಕಣ್ಣಿನ ಮಸೂರದಲ್ಲಿ ಕಾಣಬರುವ ಕಲೆ ಇಲ್ಲವೇ ದಟ್ಟ ಚುಕ್ಕೆ ಎನ್ನುವುದೇ ಸರಿಯಾದರೂ ಸಾಮಾನ್ಯವಾಗಿ ವಯಸ್ಸಾದವರಲ್ಲಿ ಬರುಬರುತ್ತ ನೋಟಕ್ಕೆ ಅಡ್ಡಿಯಾಗುವಂತೆ ಪೊರೆ ಬೆಳೆದಂತೆ ಕಾಣುವುದಕ್ಕೇ ಹೇಳುವುದುಂಟು. ಹಲವು ಕಾರಣಗಳಿಂದ ಮಸೂರಕ್ಕೆ ಪುಷ್ಟಿವಸ್ತುಗಳ ಸರಬರಾಜಿನ ಕೊರತೆಯಾಗಿ ಅದರಲ್ಲಿ ಅಸಹಜ ಊತಕವೇಳುವುದೇ ಮೋತಿಬಿಂದು ಆಗುವ ಕಾರಣ. ಆಹಾರ ವಸ್ತುಗಳಲ್ಲಿ ಬಗೆಬಗೆಯ ಜೀವಾಳದ ಅಂಶಗಳ ಕೊರೆಯಿಂದ ಪ್ರಯೋಗಾಲಯದ ಪ್ರಾಣಿಗಳಲ್ಲಿ ಮೋತಿಬಿಂದು ಆಗಿಸುವುದು ಸಾಧ್ಯವಾಗಿದೆ. ಉಪಗುರಾಣಿಕ (ಪ್ಯಾರತೈರಾಯ್ಡ್), ಮಾಂಸಲಿ (ಪ್ಯಾಂಕ್ರಿಯಾಸ್) ಗ್ರಂಥಿಗಳ ಬೇನೆಗಳಲ್ಲಿ ಮಾನವನ ಮೋತಿಬಿಂದು ಆಗುವುದು. ಆದರೆ ಮುಪ್ಪಿನಲ್ಲಿ ಆಗುವುದೇ ಸಾಮಾನ್ಯ.
ಎಳೆಮಕ್ಕಳಲ್ಲಿ ತಲೆಮಾರುಗಳಲ್ಲೂ ಮೋತಿಬಿಂದು ಆಗಬಹುದು. ಬಸುರಿನ ಮೊದಲ 3 ತಿಂಗಳಲ್ಲಿ ಸೀಮೆ ದಡಾರ (ಜರ್ಮನ್ ಮೀಸಲ್ಸ್) ಎದ್ದಿದ್ದರೂ ಹುಟ್ಟುವ ಕೂಸಿಗೆ ಹೀಗಾಗಬಹುದು. ಮೋತಿಬಿಂದು ಬೆಳೆಯುತ್ತಿರುವಾಗ, ಪಾಪೆಯಲ್ಲಿ ಬೂದು ಚುಕ್ಕೆಗಳಾಗೋ ಇಡೀ ಪಾಪೆ ಮಸಕಾಗೋ ತೋರಬಹುದು. ಕಣ್ಣಿನ ಉಳಿದೆಲ್ಲ ಭಾಗಗಳೂ ಆರೋಗ್ಯವಾಗಿದ್ದಲ್ಲಿ ಇಡೀ ಮಸೂರ ಮಸಕಾದರೂ ಪುರ್ತಿ ಕುರುಡಾಗದು. ಬೆಳಕು, ಬಣ್ಣಗಳನ್ನಾದರೂ ಗುರುತಿಸಬಹುದು. ಬೆಳಕು ಬರುವ ದಿಕ್ಕನ್ನೂ ಕಂಡುಕೊಳ್ಳಬಹುದು. ಬರಬರುತ್ತ ನೋಟ ಕುಂದಿ ಎದುರಿಗೆ ಹಿಡಿದ ಬೆರಳುಗಳನ್ನು ಕೂಡ ಎಣಿಸದಂತಾಗಿ, ಎಂದಿನ ಕೆಲಸಗಳಿಗೆ ತೊಡಕೆನಿಸಿದಾಗ, ಬೆಳೆಯುತ್ತಿರುವ ಮೋತಿ ಬಿಂದುಗಳಿಗೆ ಇಡೀ ಮಸೂರವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕುವುದೊಂದೇ ಪರಿಣಾಮಕಾರ ಉಪಾಯ.
ಮೋತಿಬಿಂದುಗಳು ಬೆಳೆಯುವುದಕ್ಕೆ ಬಿಟ್ಟರೆ ಕಣ್ಣು ಕುರುಡಾಗಬಹುದು. ಶಸ್ತ್ರಚಿಕಿತ್ಸೆಯಲ್ಲಿ ಮಸುಕಾದ ಮಸೂರವನ್ನು ತೆಗೆದು ಕೃತಕ ಮಸೂರವನ್ನು ಹಾಕಲಾಗುತ್ತದೆ. ಇದೇ ಏಕೈಕ ಪರಿಣಾಮಕಾರಿ ಚಿಕಿತ್ಸೆಯಾಗಿದೆ.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- ಮೋತಿಬಿಂದು ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- Pictures of different types of cataracts Archived 2013-03-27 ವೇಬ್ಯಾಕ್ ಮೆಷಿನ್ ನಲ್ಲಿ.
- Video describing history and science of seeing cataracts in your own eye on YouTube