ಮೊ. ಆರೀಫ್ ಖಾನ್ (ನಸೀಮ್ ಖಾನ್) ಹಿಮಾಲಯ ಜಾಗರ್ಸ್ ಪಾರ್ಕ್, ಘಾಟ್ಕೊಪರ್
'ಮೊ. ಆರೀಫ್ ಖಾನ್ (ನಸೀಮ್ ಖಾನ್) ಹಿಮಾಲಯ ಜಾಗರ್ಸ್ ಪಾರ್ಕ್,'[೧] ಘಾಟ್ಕೋಪರ್ ಪಶ್ಚಿಮದಲ್ಲಿರುವ, 'ಹಿಮಾಲಯ ಹೌಸಿಂಗ್ ಸೊಸೈಟಿ'ಯಲ್ಲಿದೆ. 'ಗೋವಿಂದ್ ನಗರ ವೆಲ್ಫೇರ್ ಅಸೋಸಿಯೇಷನ್' ನ ವತಿಯಿಂದ ನಿಯೋಜಿಸಲ್ಪಟಿದ್ದ ಈ ಖಾಸಗೀ ಉದ್ಯಾನ,ಹಲವು ಕಾರಣಗಳಿಂದ ನಾಗರಿಕರಿಗೆ ಸುವಿಧತೆ ಕಡಿಮೆಯಾಗಿತ್ತು. ಈ ಪ್ರದೇಶದ ಅಭ್ಯರ್ಥಿ, 'ಆರೀಫ್ ಖಾನ್' ಚುನಾಯಿತರಾಗಿ ಬಂದಮೇಲೆ, ಉದ್ಯಾನದ ತೊಂದರೆಗಳನ್ನು ವಿಚಾರಿಸಿ ತಿಳಿದುಕೊಂಡು ಅದಕ್ಕೆ ತಕ್ಕ ವ್ಯವಸ್ಥೆಯನ್ನು ಮಾಡಿದ್ದಾರೆ.
ಉದ್ಯಾನಕ್ಕೆ ಹೋಗಲು
ಬದಲಾಯಿಸಿ'ಘಾಟ್ಕೋಪರ್ ರೈಲ್ವೆ ಸ್ಟೇಶನ್'(ಪಶ್ಚಿಮ)ದಲ್ಲಿ ೪೨೯ ಬಸ್ ಸಿಗುತ್ತದೆ. ಅದರಲ್ಲಿ ಕುಳಿತು ಕೊನೆಯ ಸ್ಟಾಪ್ ಇಳಿದು, ಸ್ವಲ್ಪ ನಡೆದರೆ ಸುವ್ಯವಸ್ಥಿತವಾಗಿ ನಿರ್ಮಿಸಿರುವ ಈ ಖಾಸಗೀ ಉದ್ಯಾನ ಕಾಣಿಸುತ್ತದೆ. ಇಲ್ಲಿ ಶಾಂತಿ, ಸಮಾಧಾನಗಳು ಸಿಗುತ್ತವೆ. ಸುತ್ತಲೂ ಗಿಡಮರಗಳನ್ನು ನೊಡಲು ಆನಂದವಾಗುತ್ತದೆ. ರಾತ್ರಿಯ ಸಮಯದಲ್ಲಿ 'ಜಾಗಿಂಗ್' ಮಾಡುವವರಿಗಾಗಿ, ೩ ಲೈಟ್ ಕಂಬಗಳನ್ನು ಸ್ಥಾಪಿಸಲಾಗಿಗೆ. ಪ್ರತಿಕಂಬದಲ್ಲೂ ೪ ಟ್ಯೂಬ್ ಲೈಟ್ ಗಳನ್ನು ಅಳವಡಿಸಲಾಗಿದೆ. ಹುಲ್ಲಿನಮೇಲೆ ಅನೇಕ ಜನ, ಮಕ್ಕಳು, ಅವರ ತಂದೆ-ತಾಯಂದಿರು, 'ಶಟಲ್ ಕಾಕ್ ಆಟ'ವನ್ನು ಆಡಲು ಚೆನ್ನಾಗಿ 'ಲೈಟ್ ವ್ಯವಸ್ಥೆ'ಯನ್ನು ಮಾಡಲಾಗಿದೆ.
'ಪಾರ್ಕ್ ನ ಸ್ಥಾಪನೆ'ಗಾಗಿ, ಶ್ರಮಿಸಿದ ಮಹನೀಯರು
ಬದಲಾಯಿಸಿಕಾರ್ಪೊರೇಟರ್,’ಕಿರೀಟ್ ಸೋಮಯ್ಯ,’ ನವರಿಂದ ಹಿಡಿದು, ಅನೇಕ ಮಹನೀಯರು, ’ಜಾಗರ್ಸ್ ಪಾರ್ಕ್’,ನ ಸ್ಥಾಪನೆಗೆ ಕಾರಣಕರ್ತರಾಗಿದ್ದಾರೆ.'ಹಿಮಾಲಯ ಸೊಸೈಟಿಯ ಆಡಳಿದ ವ್ಯಾಪ್ತಿಯಲ್ಲಿರುವ ಖಾಸಗಿ ಜಾಗರ್ಸ್ ಪಾರ್ಕ್', ಈಗೇನೋ ಸುವ್ಯವಸ್ಥಿತವಾಗಿದೆ. ಆದರೆ, ಇದರ ಹಿಂದೆ ದುಡಿದವರಲ್ಲಿ, ಶ್ರೀ.ಕೃಷ್ಣನ್, ಶ್ರೀ.ಗೋವಿಂದನ್, ಶ್ರೀ.ವಿಕಾಸ್ ಹಳ್ದಂಕರ್'ಡಾ.ಕುಲಕರ್ಣಿ', 'ಶ್ರೀ.ಜಗ್ತಾಪ್', 'ಶ್ರೀ.ಟೋನಿ' ಮುಖ್ಯರು. ಎಲ್ಲಿಯೂ ಖಾಲಿಜಾಗದ ಕೊರತೆಯಿರುವ, ಮುಂಬೈನಲ್ಲಿ ಇಂಥ ಖಾಸಗಿ/ಸಾರ್ವಜನಿಕ ಉದ್ಯಾನಗಳನ್ನು ಸ್ಥಾಪಿಸುವುದು ಮತ್ತು ಅವನ್ನು ಸುಸಜ್ಜಿತವಾಗಿ ವ್ಯವಸ್ಥಿತವಾಗಿ ನೋಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ. 'ಮ್ಯುನಿಸಿಪಲ್ ಉದ್ಯಾನ'ಗಳು ಕೆಲವೆಡೆ ಸಮರ್ಪಕವಾಗಿ ಕೆಲಸಮಾಡುತ್ತಿವೆ. ಆದರೆ ಅಲ್ಲಿನ 'ಆಡಳಿತವ್ಯವಸ್ಥೆ'ಯಲ್ಲಿ ಹಲವು ಕೊರತೆಗಳಿವೆ.
'ನಾಮ್ದಾರ್ ಮೊಹಮ್ಮದ್ ಆರೀಫ್ ಖಾನ್ (ಸಸೀಮ್ ಖಾನ್) ರ ನೇತೃತ್ವದಲ್ಲಿ ಜಾಗರ್ಸ್ ಪಾರ್ಕ್'
ಬದಲಾಯಿಸಿ,
'ನಸೀಮ್ ಖಾನ್,' 'ಮಹಾರಾಷ್ಟ್ರ ರಾಜ್ಯದ ಮಂತ್ರಿ'ಯಾಗಿ ಚುನಾಯಿತರಾಗಿ ಬಂದಮೇಲೆ, 'ಹಿಮಾಲಯ ಜಾಗರ್ಸ್ ಪಾರ್ಕ್' ನ ಪುನರುದ್ಧಾರ ಕಾರ್ಯ ಜರುಗಿ, ಉದ್ಯಾನದ ಸರ್ವತೋಮುಖ ಪ್ರಗತಿಯಾಯಿತು. 'ಯೋಗ ಶಿಕ್ಷಣ ಕೇಂದ್ರ', ಜಾಗಿಂಗ್ ಮಾಡಲು ಕಾಲು ದಾರಿ,ಮತ್ತು ಅನೇಕ ಸೌಲಭ್ಯಗಳು ದೊರಕಲಾರಂಭಿಸಿದವು.
ಯೋಗಶಿಕ್ಷಣ ಶಾಲೆ
ಬದಲಾಯಿಸಿ'ಜಾಗರ್ಸ್ ಪಾರ್ಕ್' ನಲ್ಲಿ ಮಹಿಳೆಯರಿಗೆ, ಮತ್ತು ಮಕ್ಕಳಿಗೆ, 'ಯೋಗಾಭ್ಯಾಸದ ಕಮ್ಮಟಗಳು' ಪ್ರಾರಂಭವಾಗಿವೆ. ಪುರುಷರಿಗೆ ಸದ್ಯದಲ್ಲೇ ಪ್ರಾರಂಭವಾಗುವ ಸಿದ್ಧತೆಗಳು ನಡೆದಿವೆ. ಮಕ್ಕಳಿಗೆ 'ಕರಾಟೆ ಶಿಕ್ಷಣ'ವನ್ನೂ ಇಲ್ಲೇ ವಾರದ ಕೆಲವು ದಿನಗಳಲ್ಲಿ ಆಯೋಜಿಸಲಾಗಿದೆ.'ಮಕ್ಕಳಿಗೆ ಮತ್ತು ವಯಸ್ಕರಿಗೆ ಜೋಕಾಲೆಗಳು', 'ಮಕ್ಕಳಿಗೆ ಜಾರೋಬಂಡೆಗಳು', 'ವ್ಯಾಯಾಮಮಾಡಲು ಕಬ್ಬಿಣದ ಬಾರ್' ವ್ಯವಸ್ಥೆಯಾಗಿದೆ. 'ಪಾರ್ಕ್ ನ ಸುತ್ತಲೂ ಗೋಡೆ'ಯನ್ನು ನಿರ್ಮಿಸಿ, 'ಜಾಗಿಂಗ್ ವಲಯದ ರಸ್ತೆಯನ್ನು ಅಗಲ'ಗೊಳಿಸಲಾಗಿದೆ.
,
ಪಾರ್ಕ್ ನಲ್ಲಿ '೩ ಲೈಟ್ ಕಂಬ'ಗಳನ್ನು ನೆಟ್ಟು ಅವುಗಳಮೇಲೆ 'ಟ್ಯೂಬ್ ಲೈಟ್' ಗಳನ್ನು ಹೊಂದಿಸಿದ್ದಾರೆ. ಪಾರ್ಕ್ ನಿಂದ ಹೊರರಸ್ತೆಗೆ ಹೋಗುವ ದಾರಿಯಲ್ಲಿ 'ಎರಡು ಟ್ಯೂಬ್ ಲೈಟ್' ಗಳನ್ನು ಅಳವಡಿಸಿದ್ದಾರೆ. 'ವಾಚ್ ಮನ್' ಕುಳಿತುಕೊಳ್ಳಲು ಅಥವಾ ಸಾಮಾನುಗಳನ್ನು ಇಡಲು ಅನುಕೂಲವಾಗುವಂತೆ 'ಚಿಕ್ಕ ಕೊಠಡಿ'ಯನ್ನು ನಿರ್ಮಾಣಮಾಡಲಾಗಿದೆ. 'ಲೈಟ್ ಸ್ವಿಚ್ ಗಳಿಗಾಗಿಯೇ ಒಂದು 'ಸ್ವಿಚ್ ಹೌಸ್' ನಿರ್ಮಾಣಮಾಡಿದ್ದಾರೆ.
ಪ್ರತಿವರ್ಷವೂ ದೀಪಾವಳಿ ಹಬ್ಬದ ಆಚರಣೆ
ಬದಲಾಯಿಸಿ,
,
'ಪಾರ್ಕ್ ನಲ್ಲಿ ಬೆಳೆಸಿರುವ ಪ್ರಮುಖ ಮರ-ಗಿಡಗಳು'
ಬದಲಾಯಿಸಿ- 'ಅಡಿಕೆ',
- 'ತೆಂಗು',
- 'ಹತ್ತಿಗಿಡ',
- 'ಪಾಮ್ ಗಿಡಗಳು',
- 'ನೀಲಗಿರಿ ಮರ',
- 'ಅಶೋಕ ಗಿಡ',
- 'ಬೇವಿನ ಮರಗಳು',
- 'ತುಲಿಪ್',
- 'ಕ್ರೋಟನ್',
- 'ಎಕ್ಕದ ಗಿಡ',
- 'ಕಣಗಿಲೆ ಹೂವಿನ ಗಿಡ',
- 'ಚನ್ನಕೇಸರಿ ಹೂವಿನ ಮರ',
- 'ರಬ್ಬರ್ ಮರ',
- 'ಸೂರ್ಯಕಾಂತಿ ಹೂವಿನ ಗಿಡಗಳು'
- 'ದಾಳಿಂಬೆಯ ಹಣ್ಣಿನ ಗಿಡ,'
- 'ಕಾಮ್ ಕಸ್ತೂರಿ ಗಿಡ,'