೧೯೯೫ನೇ ಜುಲೈ ೨೭ ರಂದು ಯಾಕುಬ್ ಮತ್ತು ಮಮ್ತಾಜ್ ಇವರ ಒಬ್ಬನೇ ಮಗನಾಗಿ ಬೆಳ್ತಂಗಡಿಯ ಒಂದು ಹಳ್ಳಿಯಾದ ಗುರುವಾಯನಕೆರೆಯಲ್ಲಿ ಜನಿಸಿದರು. ತನ್ನ ಪ್ರಾಥಮಿಕ ಶಿಕ್ಷಣವನ್ನು ಬೆಳ್ತಂಗಡಿಯಲ್ಲಿ ಮುಗಿಸಿದ ನಂತರ ಕುಟುಂಬ ಸಮೇತರಾಗಿ ಮಂಗಳೂರಿನಲ್ಲಿ ವಾಸವಾಗಿರುತ್ತಾರೆ. ಪ್ರೌಢಶಿಕ್ಷಣವನ್ನು ಕುಲಶೇಖರದ ಸೆಕ್ರೇಟ್ ಹಾರ್ಟ್ಸ್ ಶಾಲೆಯಲ್ಲಿ ಮುಗಿಸಿದರು. ಪದವಿ ಪೂರ್ವ ಶಿಕ್ಷಣವನ್ನು ಮಂಗಳೂರಿನ ರೊಜಾರಿಯೋ ಪದವಿ ಪೂರ್ವ ಕಾಲೇಜಿನಲ್ಲಿ ಪಡೆದಿರುತ್ತಾರೆ. ಪ್ರಸ್ತುತವಾಗಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದಾರೆ. ಚಿಕ್ಕಂದಿನಿಂದಲೇ ನೃತ್ಯದಲ್ಲಿ ಬಹಳ ಆಸಕ್ತಿಯನ್ನು ಹೊಂದಿದ್ದ ಇವರು ಅನೇಕ ನೃತ್ಯಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಇವರು ೬ನೇ ತರಗತಿ ಜಿಮ್‍ನೆಡೆಗೆ ಬಹಳ ಆಸಕ್ತಿಯನ್ನು ವಹಿಸಿದ್ದರು. ಆದರೆ ಜಿಮ್‍ನ ತರಬೇತುದಾರರು ಸಣ್ಣ ವಯಸ್ಸಿನಲ್ಲಿ ಜಿಮ್‍ಗೆ ಸೇರಿಸಿಕೊಳ್ಳಲಾಗುವುದಿಲ್ಲ ಎಂದಿದ್ದರು. ಆದರು ಆಸಕ್ತಿಯಿಂದ ಜಿಮ್‍ನ ಹೊರಗೆ ನಿಂತು ಎಲ್ಲರೂ ತಾಲೀಮು ಮಾಡುವುದನ್ನು ನೋಡುತ್ತಿದ್ದರು. ಶಾಲೆಯಲ್ಲಿ ನಡೆಯುವ ಎಲ್ಲಾ ಕ್ರೀಡಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಇವರು ತ್ರೋಬಾಲ್‍ನಲ್ಲಿ ಜಿಲ್ಲಾಮಟ್ಟ ಮತ್ತು ರಾಷ್ಟ್ರಮಟ್ಟದ ನೆಟ್‍ಬಾಲ್‍ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.ಇವರು ಜಿಮ್‍ನ‌ಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದರು.ಆದರೆ ಇವರ ವಯಸ್ಸು ಜಿಮ್‍ಗೆ ಸೇರಲು ಸೂಕ್ತವಾಗಿರಲಿಲ್ಲ.ಅನೇಕ ಬಾರಪವರ್ ಲಿ‍ಫ್ಟರ್ಜಿಪವರ್ಗೆ ಹೋಗಿ ಒಪ್ಪಿಗೆ ಕೇಳಿದಾಗ ತರಬೇತುದಾರರು ೧೮ ವರ್ಷ ಆದ ನಂತರ ಬಾ ಎಂದು ಹೇಳಿಕಳಿಸಿದ್ದರು.೧೬ನೇ ವಯಸ್ಸಿನವನಾಗಿರುವಾಗ ಗೆಳೆಯನಾದ ಸತ್ಯಪ್ರಸಾದ್‍ನೊಂದಿಗೆ ಜಿಮ್‍ಗೆ ಹೋಗಲು ಪ್ರಾರಂಭಿಸಿದರು.ಆತನು ಕರ್ನಾಟಕದ ಪವರ್ ಲಿಫ್ಟಿಂಗ್ ತಂಡದ ಕೋಚ್ ಆದ ವಿನ್ಸಂಟ್ ಪ್ರಕಾಶ್ ಕಾರ್ಲೊ ಅವರೊಂದಿಗೆ ಮಾತನಾಡಿಸಿ ಜಿಮ್‍ಗೆ ಹೋಗಲು ಅನುಮತಿಯನ್ನು ನೀಡಿಸಿದನು.ಜಿಮ್‍ನಲ್ಲಿ ಮೊದಲೇ ಆಸಕ್ತಿಯನ್ನು ಹೊಂದಿದ್ದ ಇವರು ಅತ್ಯುತ್ತಮವಾಗಿ ಜಿಮ್‍ನಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ರಮೀಝ್‍ರವರ ಜೀವನದ ಮಹತ್ವದ ತಿರುವು ಬದಲಾಯಿಸಿ

ಜಿಮ್‍ನಲ್ಲಿ ಒಂದು ದಿನ ಉತ್ತಮ ಪವರ್ ಲಿ‍ಫ್ಟರ್ ಆದ ದೀಪಕ್ ರಫಶನ್ ಲೋಬೊರವರು ಪವರ್ ಲಿಫ್ಟಿಂಗ್ ಅಭ್ಯಾಸವನ್ನು ಮಾಡುತ್ತಿದ್ದಾಗ, ಜಿಮ್‍ಗೆ ಹೊಸಬನಾದ ರಮೀಝ್‍ನವರು ದೀಪಕ್ ಎತ್ತುತ್ತಿದ್ದ ಭಾರವನ್ನು ಎತ್ತಲು ಹೋಗಿ ವಿಫಲರಾದರು.ಆಗ ಅವರು ಈ ಭಾರವನ್ನು ಎತ್ತಿದರೆ ರೂ.೧೦೦೦ ನೀಡುವುದಾಗಿ ಹೇಳಿದಾಗ ಕೋಚ್ ಹೇಳಿದ ತಂತ್ರವನ್ನು ಬಳಸಿಕೊಂಡು ರಮೀಝ್‍ರವರು ಆ ಭರವನ್ನು ಎತ್ತಿದರು.ಇದನ್ನು ಕಂಡ ದೀಪಕ್ ರೋಶನ್‍ರವರು ಪವರ್ ಲಿಫ್ಟಿಂಗ್‍ಗೆ ಬೇಕಾದ ಎಲ್ಲಾ ಸಹಕಾರ ಸೌಲಭ್ಯಗಳನ್ನು ಮಾಡಿಕೊಡುವುದಾಗಿ ರಮೀಝ್‍ರವರಿಗೆ ಹೇಳಿದರು.ನಂತರ ಕಾಮನ್‍ವೆಲ್ತ್ ಪವರ್ ಲಿ‍ಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ವಿನ್ಸಂಟ್ ಪ್ರಕಾಶ್ ಕಾರ್ಲೋ ಇವರು ರಮೀಝ್‍ನವರಿಗೆ ಉತ್ತಮ ತರಬೇತಿಯನ್ನು ನೀಡಲು ಪ್ರಾರಂಭಿಸಿದರು.ಹಾಗೆಯೇ ಭಾರತದ ಪವರ್ ಲಿಫ್ಟಿಂಗ್ ತಂಡದ ತರಬೇತಿದಾರರಾದಂತಹ ಸತೀಶ್ ಕುಮಾರ್ ಕುದ್ರೋಳಿ ಮತ್ತು ಪ್ರಕಾಶ್ ಕಾರ್ಲೊ ಇವರ ಸಹಕಾರದೊಂದಿಗೆ ಕರ್ನಾಟಕದ ಉತ್ತಮ ಪವರ್ ಲಿಫ್ಟಿಂಗ್ ಜಿಮ್‍ಗಳಲ್ಲಿ ಒಂದಾದ ಬಾಲಾಂಜನೇಯ ಜಿಮ್ನಾಶಿಯಂನಲ್ಲಿ ತಮ್ಮ ಮುಂದಿನ ಉಜ್ವಲ ಭವಿಷ್ಯವನ್ನು ರೂಪಿಸಿದ್ದಾರೆ.

ಸಾಧನೆಗಳು ಬದಲಾಯಿಸಿ

  • ಉಡುಪಿ ಜಿಲ್ಲೆಯ ಕೋಟೇಶ್ವರದಲ್ಲಿ ನಡೆದ ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಚಿನ್ನದ ಪದಕ ಹಾಗೂ ಜೂನಿಯರ್ ವಿಭಾಗದಲ್ಲಿ ಕಂಚಿನ ಪದಕ.
  • ಆಂಧ್ರಪ್ರದೇಶದ ಹೈದರಾಬಾದ್‍ನಲ್ಲಿ ನಡೆದ ಸೌತ್ ಇಂಡಿಯ ಪವರ್ ಲಿಫ್ಟಿಂಗ್ ಚಾಂಪಿಯನ್‍ಶಿಪ್ನಲ್ಲಿ ಕಂಚಿನ ಪದಕ.
  • ಜಾರ್ಖಂಡ್‍ನಲ್ಲಿ ನಡೆದಂತಹ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಕಂಚಿನ ಪದಕ.
  • ಮಂಗಳೂರಿನಲ್ಲಿ ನಡೆದಂತಹ ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಬೆಳ್ಳಿಯ ಪದಕ.
  • ಕೇರಳದ ಕಲ್ಲಿಕೋಟೆಯಲ್ಲಿ ನಡೆದಂತಹ ಸೌತ್ ಇಂಡಿಯಾ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಸಬ್ ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಕಂಚಿನ ಪದಕ,ಜೂನಿಯರ್ ವಿಭಾಗದಲ್ಲಿ ಬೆಳಿಯ ಪದಕ.
  • ಕಿನ್ನಿಗೋಳಿಯಲ್ಲಿ ನಡೆದಂತಹ ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಚಿನ್ನದ ಪದಕ.
  • ೫೩ ಕೆ,ಜಿ ಜೂನಿಯರ್ ವಿಭಾಗದಲ್ಲಿ ಚಾಂಪಿಯನ್ ಆಗಿರುತ್ತಾರೆ.
  • ಅಂತರಾಷ್ಟ್ರೀಯ ಮಟ್ಟದ ಆಯ್ಕೆಯ ಪ್ರಕ್ರಿಯೆಯಲ್ಲಿ ಆಯ್ಕೆಗೊಂಡು ದಿನಾಂಕ ೧೬ ರಿಂದ ೨೧ ಡಿಸೆಂಬರ್ ೨೦೧೪ರವರೆಗೆ ಜಾರ್ಖಂಡಿನ ಜಂಶೆಡದಪುರ್‍ನಲ್ಲಿ ನಡೆದಂತಹ ಅಂತರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಎರಡು ಚಿನ್ನದ ಪದಕವನ್ನು ಪಡೆದಿರುತ್ತಾರೆ.
  • ಹಾಂಕ್‍ಕಾಂಗ್‍ನಲ್ಲಿ ನಡೆಯುವ ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.