ಮೊಸರು ವಡೆ
ಮೊಸರು ವಡೆ ಭಾರತೀಯ ಉಪಖಂಡದಲ್ಲಿ ಹುಟ್ಟಿಕೊಂಡ ಒಂದು ಬಗೆಯ ಖಾದ್ಯ ಮತ್ತು ದಕ್ಷಿಣ ಏಷ್ಯಾದಾದ್ಯಂತ ಜನಪ್ರಿಯವಾಗಿದೆ.[೧] ಉತ್ತರ ಭಾರತದಲ್ಲಿ ಇದನ್ನು ಒಂದು ಬಗೆಯ ಚಾಟ್ ಆಗಿ ತಿನ್ನಲಾಗುತ್ತದೆ. ವಡೆಗಳನ್ನು ಗಟ್ಟಿಯಾದ ಮೊಸರಿನಲ್ಲಿ ನೆನೆಸಿ ಇದನ್ನು ತಯಾರಿಸಲಾಗುತ್ತದೆ.[೨]
ಹಿಂದಿ ಮತ್ತು ಮರಾಠಿಯಲ್ಲಿ ಇದನ್ನು "ದಹಿ ವಡಾ", ಪಂಜಾಬಿಯಲ್ಲಿ "ದಹಿ ಭಲ್ಲಾ", ತಮಿಳಿನಲ್ಲಿ ತಯಿರ್ ವಡೈ, ಮಲಯಾಳಂನಲ್ಲಿ ತೈರು ವಡಾ, ತೆಲುಗಿನಲ್ಲಿ ಪೆರುಗು ವಡಾ, ಬಂಗಾಳಿಯಲ್ಲಿ ದೊಯಿ ಬೊರಾ ಎಂದು ಕರೆಯಲಾಗುತ್ತದೆ.
ತಯಾರಿಕೆ
ಬದಲಾಯಿಸಿತೊಳೆದ ಉದ್ದಿನ ಬೇಳೆಯನ್ನು ರಾತ್ರಿ ನೆನೆಸಿ ಬೆಳಿಗ್ಗೆ ಅದನ್ನು ಹಿಟ್ಟಾಗಿ ರುಬ್ಬಲಾಗುತ್ತದೆ. ನಂತರ ಎಣ್ಣೆಯಲ್ಲಿ ವಡೆಗಳಾಗಿ ಕರಿಯಲಾಗುತ್ತದೆ. ಬಿಸಿಯಾಗಿ ಕರಿದ ವಡೆಗಳನ್ನು ಮೊದಲು ನೀರಿನಲ್ಲಿ ಹಾಕಿ ನಂತರ ಗಟ್ಟಿಯಾದ ಕಡೆದ ಮೊಸರಿಗೆ ವರ್ಗಾಯಿಸಲಾಗುತ್ತದೆ. ವಡೆಗಳನ್ನು ಸ್ವಲ್ಪ ಸಮಯ ನೆನೆಸಿ ಆಮೇಲೆ ಬಡಿಸಲಾಗುತ್ತದೆ. ಹಿಟ್ಟಿಗೆ ಒಣದ್ರಾಕ್ಷಿಗಳನ್ನೂ ನೆನೆಸಬಹುದು. ವಡೆಗಳ ಮೇಲೆ ಕೊತ್ತುಂಬರಿ ಅಥವಾ ಪುದೀನ, ಕಾರದ ಪುಡಿ, ಕರಿಮೆಣಸಿನ ಪುಡಿ, ಚಾಟ್ ಮಸಾಲಾ, ಜೀರಿಗೆ ಪುಡಿ, ತೆಂಗಿನಕಾಯಿ ತುರಿ, ಹಸಿರು ಮೆಣಸಿನಕಾಯಿ ಚೂರುಗಳು, ಬೂಂದಿ, ಸಣ್ಣದಾಗಿ ಹೆಚ್ಚಿದ ತಾಜಾ ಶುಂಠಿ ಅಥವಾ ದಾಳಿಂಬೆಯನ್ನು ಉದುರಿಸಬಹುದು. ಮೇಲೆ ಅಲಂಕಾರಕ್ಕಾಗಿ ಹುಣಿಸ ಚಟ್ನಿ ಮತ್ತು ಕೊತ್ತಂಬರಿ ಚಟ್ನಿಯನ್ನು ಕೂಡ ಹಾಕಬಹುದು. ಕಡಲೆ ಹಿಟ್ಟಿನಿಂದಲೂ ಇದನ್ನು ತಯಾರಿಸಬಹುದು.[೩][೪]
ಉಲ್ಲೇಖಗಳು
ಬದಲಾಯಿಸಿ- ↑ "Soft, crisp vadas!".
- ↑ Madhulika, Nisha (11 March 2015). "Express Recipes: How to make the perfect Dahi Vada". The Indian Express. Retrieved 3 May 2019.
- ↑ "Dahi Vada Recipe: How to Make Dahi Vada". recipes.timesofindia.com (in ಇಂಗ್ಲಿಷ್). Retrieved 2020-04-27.
- ↑ "The story of Dahi Bhalla and how to make it at home". The Times of India (in ಇಂಗ್ಲಿಷ್). 2020-03-09. Retrieved 2020-04-27.