ಮೊದಲನೇ ಎಲಿಜ಼ಬೆತ್ ಕ್ವೀನ್ ಯುಗ
ಮೊದಲನೇ ಕ್ವೀನ್ ಎಲಿಜ಼ಬೆತ್ ಇಂಗ್ಲೆಂಡನ ಪ್ರಮುಖ ರಾಣಿ.ಈಕೆ ೧೫೫೮ ರಿಂದ ೧೬೦೩ ತನ್ನ ಮರಣದವರೆಗೆ ಇಂಗ್ಲೆಂಡ್ ಮತ್ತು ಐರ್ಲೆಂಡ್ಗಳ ರಾಣಿಯಾಗಿದವಳು.ಈಕೆಯ ನಲವತೈದು ವರ್ಷಗಳ ದೀಘ ಆಳ್ವಿಕೆಯಲ್ಲಿ ಇಂಗ್ಲೆಂಡನ್ನು ಪ್ರಬಲ ರಾಷ್ಟವನ್ನಾಗಿ ಮಾಡಿದಳು. ಈಕೆಯ ಆಳ್ವಿಕೆಯ ಕಾಲವನ್ನು ಇಂಗ್ಲೆಂಡಿನಲ್ಲಿ ಸುವರ್ಣ ಯುಗ ಎಂದು ಕರೆಯಲಾಗಿದ್ದು ,ಈಕೆ 'ಗ್ಲೊರಿಯಾನ' ಮತ್ತು 'ವರ್ಜಿನ್ ಕ್ವೀನ್ ' ಎಂಬ ಹೆಸರುಗಳಿಂದ ಪಾತ್ರಳಾಗಿದ್ದಾಳೆ.ಎಲಿಜಬೆತ್ ಅಧಿಕಾರಕ್ಕೆ ಬರುವ ಮುನ್ನ ಅನೇಕ ಕೌಟುಂಬಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಎದುರಿಸಿದಳು. ಎಲಿಜಬೆತ್ ಟ್ಯೂಡರ್ ವಂಶದ ಕೊನೆಯ ಚಕ್ರಾಧಿಪತಿ.ಈಕೆ ಸೆಪ್ಟ್ಮ್ಬಬರ್ ೭, ೧೫೩೩ ರಂದು ಎಂಟನೇ ಹೆನ್ರಿ ಹಾಗೂ ಈತನ ಎರಡನೆ ಪತ್ನಿ ಅನ್ನೆ ಬೊಲೆನ್ ರ ಮಗಳಾಗಿ ಹುಟ್ಟಿದಳಾದರು ಇವಳು ೨ ವರ್ಷದವಳಿದಾಗ ಇವಳ ತಾಯಿ ಮರಣದಂಡನೆಗೆ ತುತ್ತಾದಳು.ಎಲಿಜಬೆತ್ ವಿವಾಹೇತರ ಸಂಬಂದದಿಂದ ಹುಟ್ಟಿದವಳೆಂದು ಘೋಷಿಸಿ ಹೆನ್ರಿ ತನ್ನ ಅರಮನೆಯಿಂದ ದೂರ ಇರಿಸಿದನ್ನು ನಂತರ ಎಲಿಜಬೆತ್ ತನ್ನ ಚಿಕ್ಕಮ್ಮ ಹೆನ್ರಿಯ ೬ನೇ ಪತ್ನಿ ಕಾತರಿನ್ ಪರ್ರ್ಲಳ ಆಶ್ರಯದಲ್ಲಿ ಉನ್ನತ ಶಿಕ್ಶ್ನಣ ಪಡೆದಳು.
ಎಲಿಜಬೆತ್ ಳ ಆಳ್ವಿಕೆಯ ಮೊದಲು
ಬದಲಾಯಿಸಿ೮ನೆ ಹೆನ್ರಿಯ ಕಾಲದಲ್ಲಿ ಸ್ಥಿರತೆಯನ್ನೂ ಆಂತರಿಕ ಶಾಂತಿಯನ್ನು ಹೊಂದಿದ ಇಂಗ್ಲೆಂಡ್ ಅವನು ೧೫೪೭ರಲ್ಲಿ ತೀರಿಕೊಂಡ ನಂತರ ಪಟ್ಟಕ್ಕೆ ಬಂದ ೬ನೇ ಈಡ್ವರ್ಡ್ ರೋಗಿಯಾಗಿದ್ದು ಚಿಕ್ಕವಯಸ್ಸಿನಲ್ಲಿಯೇ ತೀರಿಕೊಂಡನು.ನಂತರ ೧೫೫೩ ಹೆನ್ರಿಯ ಹಿರಿಯ ಮಗಳು ಮೇರಿ ರಾಣಿಯಾದಳು.ಇವಳ ಕಾಲದಲ್ಲಿ ಕೆಥೋಲಿಕ್-ಪ್ರಾಟೆಸ್ಟೆಂಟರ ಕಲಹಗಳು ತೀವ್ರವಾದವು.ಮುನ್ನೂರ ಜನ ಪ್ರಾಸ್ಟೆಂತರನ್ನು ಸುಡಲಾಯಿತು.ಫ್ರಾನ್ಸ & ಸ್ಪೈನ್ ಮೊದಲಾದ ದೇಶಗಳು ಇಂಗ್ಲೆಂಡಿನ ಮೇಲೆ ಹಿಡಿತ ಸಾಧಿಸಲು ಹೊಂಚು ಹಾಕಿದವು.ಎಲಿಜ಼ಬೆತ್ ಪ್ರಾಟೆಸ್ಟೇಂಟರಿಗೆ ಸಹಾಯ ಮಾಡುತ್ತಿದ್ದಾಳೆ ಎಂದು ಅನುಮಾನಿಸಿ ಮೇರಿ ತಂಗಿಯನ್ನು ವ್ಹೈಟ್ ಹಾಲ್ನ ಉಡ್ ಸ್ತಕ್ ಎಂಬಲ್ಲಿ ಸೆರೆವಾಸದಲ್ಲಿ ಇರಿಸಿದಳು.೧೫೫೮ರಲ್ಲಿ ಮೇರಿಯ ಕೊಲೆಯಾಯಿತು.ಆಗಲೆ ಸೆರೆವಾಸವನ್ನು ಕಂಡಿದ್ದ ಎಲಿಜಬೆತ್ ರಾಣಿಯಾದಳು.ಆದರೆ ಅಂದಿನ ಪುರುಷ ಪ್ರಧಾನ ಇಂಗ್ಲೆಂಡ್ ಸಮಾಜ ಸ್ತ್ರೀ ಅಲ್ವಿಕೆಯನ್ನು ಧಿಕ್ಕರಿಸಿ ಅನೇಕ ಬರವಣಿಗೆಗಳು ಮುಡಿದವು ಅವುಗಳಲ್ಲಿ ೧೫೫೮ರಲ್ಲಿ ಜಾನ್ ಕ್ನಜ಼್ ಎಂಬ ಕೆಧೋಲಿಕ್ ಬರಹಗಾರ ಸ್ತ್ರೀ ಆಳ್ವಿಕೆಯನ್ನು ವಿರೋಧಿಸಿ ಅದಕ್ಕೆ ಕಾರಣಗಳನ್ನು ನೀಡಿದನು. ೧ನೇ ಕಾರಣ ನೈಸರ್ಗಿಕ ನ್ಯಾಯ, ೨ನೇಯ ಕಾರಣ ನಾಗರಿಕ ನ್ಯಾಯ ೩ನೇಯದು ಪವಿತ್ರ ದೇವರ ನ್ಯಾಯ. ಈತ ದೇವರು & ಪ್ರಕ್ರುತಿ ಸ್ತ್ರಿ ಪುರುಷರ ಮೇಲೆ ಅಧಿಕಾರ ಹೊಂದಿರುವುದನು ಸಹಿಸುವುದಿಲ್ಲ ಎಂದು ಹಾಗೂ ಸ್ತ್ರೀ ಆಳ್ವೆಕೆ ಮಾಡಲು ಅಶ್ಕ್ತಳು ಎಂದು ವಾದಿಸಿದನು.ಆದರೆ ಇದರಿಂದ ಎಚ್ಚಿತ್ತ ಪ್ರಾಟೆಸ್ಟೆಂಟರು ದೇವರು ಸರ್ವಶಕ್ತನಾಗಿದ್ದು ಎಲ್ಲರಿಗು ಸಮಾನಶಕ್ತಿ ಕೊಟ್ಟಿರುತ್ತಾನೆ ಹಾಗೂ ಸ್ತ್ರೀ ಪುರುಷನಿಗಿಂತ ಸಮರ್ಥವಾಗಿ ಆಳ್ವಿಕೆ ಮಾಡಬಲ್ಲಳು ಎಂದು ಪ್ರಥ್ಯುತ್ಥರಿಸಿತು.ಎಲಿಜಬೆತ್ನ ಆಳ್ವಿಕೆಯು ಒಬ್ಬ ಮಹಿಳೆ ಸಹ ಅಪಾಯಕಾರಿ ಸಂದರ್ಬಗಳನ್ನು ಎದುರಿಸಬಲ್ಲಳು ಎಂದು ಸಾಬಿತು ಪಡಿಸಿತು. ಈಕೆಯ ಪಟ್ಟಬಿಶೇಖದ ನಂತರ ವಿವಾಹದ ಸಮಸ್ಯೆ ತಲೆದೂರಿತು ಆದರೆ ಎಲಿಜಬೆತ್ ತಾನು ವಿವಾಹವಾದರೆ ತನ್ನ ಅಧಿಕಾರವನ್ನು ಪತಿಗೆ ಹಸ್ತಂತರಿಸಬೇಕೆಂದು ತಿಳಿದು ಅವಿವಾಹಿತಳಾಗಿಯೇ ಉಳಿದಳು.'ಇಂಗ್ಲೆಂಡ್ ತನ್ನ ಪತಿಯೆಂದು ಹಾಗೂ ಇಲ್ಲಿಯ 'ಪ್ರಜೆಗಳೆಲ್ಲ ತನ್ನ ಮಕ್ಕಳೆಂದು ಘೋಶಿಸಿದಳು'. ಎಲಿಜಬೆತಳ ತಂದೆ ಕ್ಯಾಧೋಲಿಕ್ ಚರ್ಚ್ ಅನ್ನು ವಿಂಗಡಿಸಿ ಚರ್ಚ್ ಆಫ್ ಇಂಗ್ಲೆಂಡ್ ನು ಸ್ಥಾಪಿಸಿದನು.ಮೇರಿ ಇಂಗ್ಲೆಂಡನ್ನು ಕ್ಯಾಧೋಲಿಕ್ ದೇಶ ಎಂದು ಘೋಷಿಸಿದಳು ಹೀಗಾಗಿ ರೋಮನ್ ಕ್ಯಾಥೋಲಿಕ್ ಚರ್ಚ್ &ಇಂಗ್ಲೆಂಡಿನ ಪ್ರಾಟಿಸ್ಟೆಂಟ್ ಚಚ್ರ್ಗಳ ವಿರುದ್ದ ಧಾರ್ಮಿಕ ಕಲಹಗಳು ಜರುಗಿದ್ದವು.ಆದರೆ ಎಲಿಜಬೆತ್ 'ಸುಪ್ರಮಸಿ ಕಾಯಿದೆ' ಹೊರಡಿಸುವ ಮೂಲಕ ಶಾಂತಿ ಸ್ಥಾಪಿಸಿ ಎರಡೂ ಗುಂಪುಗಳ ನಡುವೆ ಸಾಮರಸ್ಯ ಮೂಡುವಂತೆ ಮಾಡಿದಳು.
ಬಾಹ್ಯ ರಾಜಕೀಯ ಸಮಸ್ಯೆಗಳು
ಬದಲಾಯಿಸಿ೧) ನೆದರ್ಲ್ಂಡ್ ನೊಂದಿಗಿನಯುದ್ದ-ಆಗಸ್ಟ್ ೧೪,೧೫೮೫ರಲ್ಲಿ ಎಲಿಜಬೆತ್ ನೆದರ್ಲ್ಯಾಂಡನ್ನು ತನ್ನ ಅಧೀನಕ್ಕೆ ತೆಗೆದು ಕೊಂಡಳು ಆಗ ಸ್ಪೈನ್ ನೆದರ್ಲ್ಯಂಡಿನ ಸಹಾಯಕ್ಕೆ ನಿಂತಿತು,ಹೀಗಾಗಿ ಸ್ಪೈನ್ &ಇಂಗ್ಲೆಂಡ್ ಗಳ ನಡುವೆ ಯುದ್ದಕ್ಕೆ ಕಾರಣವಾಯಿತು. ೨)ಸ್ಪೈನ್ನೊಂದಿಗಿನ ಧಾರ್ಮಿಕ &ವೈವಾಹಿಕ ಸಮಸ್ಯೆ-ಸ್ಪೈನ್ ಕ್ಯಾಧೋಲಿಕ್ ದೇಶವಾಗಿದ್ದು ಇಂಗ್ಲೆಂಡ ಪ್ರಾಟೆಸ್ಟೆಂಟ್ ದೇಶವಾಗಿರುವುದನ್ನು ಸಹಿಸುತಿರಲಿಲ್ಲ ಹಾಗೂ ಸ್ಪೈನ್ನ ದೊರೆ ಪಿಲಿಪ್ ಅನ್ನು ಎಲಿಜಬೆತ್ ವಿವಾಹವಾಗಲು ನಿರಕರಿಸಿದ್ದು ಯುದ್ದಕ್ಕೆ ಕಾರಣವಾಯಿತು. ೩) "ಅಜೇಯ ನೌಕದಳದ ಸೋಲು "(ಸ್ಪನಿಶ್ ಅರ್ಮಡದ ಸೋಲು)-ಇದು ಇಂಗ್ಲೆಂಡಿನ ಇತಿಹಾಸದಲ್ಲಿ ಪ್ರಮುಖವಾದ ಗೆಲುವು.ಪಿಲಿಪ್ ೧೫೫೮ರಲ್ಲಿ ಇಂಗ್ಲೆಂಡನ್ನು ಗೆಲ್ಲುವ ಸಲುವಾಗಿ ನೌಕದಳವೊಂದನ್ನು ಕಟ್ಟಿ ಅದಕ್ಕೆ 'ಅಜೇಯ ನೌಕದಳ " ಎಂದು ಹೆಸರಿಸಿದ್ದನು.ಆದರೆ ಇಂಗ್ಲೆಂಡ್ ೩೪ ನೌಕೆಗಳನ್ನು ಬಳಸಿ ಸ್ಪೈನ್ನ್ ೧೩೨ ನೌಕೆಗಳನ್ನು ಸೋಲಿಸಿತು.ಈ ವಿಜಯವು ಇಂಗ್ಲೆಂಡ್ ಪ್ರಪಂಚದಲ್ಲಿ ಪ್ರಮುಖ ಸ್ಥಾನ ಗಳಿಸಲು ದಾರಿ ಮಾಡಿಕೊಟ್ಟಿತು. ಇಂಗ್ಲೆಂಡ್ ವ್ಯಾಪಾರವನ್ನು ಪ್ರಪಂಚದಾದ್ಯಂತ ವಿಸ್ತರಿಸಿತು,ವಸಹತುಗಳನ್ನು ಸ್ಠಾಪಿಸಿತು.
ಸಾಮಾಜಿಕ ವ್ಯವಸ್ತ್ಹೆ
ಬದಲಾಯಿಸಿಇಂಗ್ಲೆಂಡ್ನ ದೈನಂದಿನ ಜೀವನವು ಅಲ್ಲಿನ ವರ್ಗ ವ್ಯವಸ್ಥೆಯನ್ನು ಅವಲಂಬಿಸಿತ್ತು. ಮೊದಲ ಸ್ಥಾನದಲ್ಲಿ ಮೊನರ್ಚ್ ವರ್ಗವಿತ್ತು ನಂತರ ನೊಬೆಲಿಟಿ,ಜೆನ್ಟ್ರೀ,ಮರ್ಚ್ಂಟ್, ಯೆಮನರಿ ಹಾಗೂ ಲೆಬರ್ ವರ್ಗಗಳಿದ್ದವು. ೧) ನೊಬೆಲಿಟಿ -ಈ ವರ್ಗವು ಶ್ರೀಮಂತರಿಂದ ಕೂಡಿತ್ತು,ರಾಣಿಯ ಆಸ್ಥಾನದಲ್ಲಿ ಪ್ರಮುಖ ಸ್ಥಾನ ಪಡೆದಿದ್ದರು.ಹೆಚ್ಚಿನ ಸಂಖ್ಯೆಯ ಹಳೆಯ ಕುಟುಂಬಗಳು ಕ್ಯಾಧೋಲಿಕ್ ವರ್ಗಕ್ಕೆ ಸೇರಿದು ಹೊಸ ಕುಟುಂಬಗಳು ಪ್ರಾಟೆಸ್ಟೆಂಟ್ ವರ್ಗದವಾಗಿದವು. ೨)ಜೆನ್ಟ್ರೆ ವರ್ಗವು ಸರದಾರರು ,ಜಮೀನುದಾರರನ್ನು ಒಳಗೊಂಡಿದು ಹೊಸ ಹೊಸ ಭೂ ಮಾರ್ಗ ಜಲಮಾರ್ಗ ಕಂಡು ಹಿಡಿಯಲು ನೆರವು ನೀಡುವ ಮೂಲಕ ಈ ಯುಗದ ಬೆನ್ನೆಲುಬಿನಂತೆ ಕಾರ್ಯ ನಿರ್ವಹಿಸುತಿತ್ತು. ೩) ಮರ್ಚ್ಂಟ್ ವರ್ಗವು ಶ್ರಿಮಂತಿಕೆ ಯಿಂದ ಕೂಡಿದ್ದು ಈ ವರ್ಗದ ೧೬೩ ಮಂದಿ 'ಅಜೇಯ ದಳದ 'ವಿರುದ್ದ ಎಲಿಜಬೆತ್ಗೆ ನೆರವು ನೀಡಿದರು ಹಾಗೂ ಇಂಗ್ಲೆಂಡ್ನ್ ವ್ಯಾಪರ ವಿದೇಶಗಳಿಗೆ ಹರಡುವಂತೆ ಮಾಡಿದರು . ೪)ಯೆಮನರಿ-ವರ್ಗವು ಕೃಷಿಕರು ಹಾಗೂ ಕುಶಲ ಕರ್ಮಿಗಳನ್ನು ಒಳಗೊಂಡಿತ್ತು ಈ ವರ್ಗದ ಜನತೆ ಧರ್ಮದಲ್ಲಿ ಅತಿಯಾದ ನಂಬಿಕೆ ಹೊಂದಿದರು,ಆರೋಗ್ಯ ಸಮಸ್ಯೆಯಿಂದ ಬಳಲುತಿದ್ದರು. ೫)ಲೆಬರ್ ವರ್ಗ-ಬಡ್ಗಿಗಳು,ಚಮ್ಮರರು ಹಾಗು ಅರ್ತಿಸನ್ಸ್ಗಳನ್ನು ಒಳಗೊಂಡಿದ್ದು ,ಹೆಚ್ಚಿನ ಸಂಖ್ಯೆಯಲ್ಲಿ ಬಡವರಿದರು ಹೀಗಾಗಿ ಎಲಿಜಬೆತ್ ಬಡತನ ನಿರ್ಮೂಲನೆಗಾಗಿ ಅಭಿವೃದ್ದಿ ಯೋಜನೆಗಳನ್ನು ಜಾರಿಗೆ ತಂದಳು ಇದು ಇಡೀ ಪ್ರಪಂಚದಲ್ಲಿ ಜಾರಿಗೆ ಬಂದ ಮೊದಲ ಅಭಿವೃದ್ದಿ ಯೋಜನೆಯಾಗಿದೆ.
ಆರೋಗ್ಯ ವ್ಯವಸ್ಥೆ
ಬದಲಾಯಿಸಿಈ ಕಾಲದಲ್ಲಿ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಔಷದಶಾಸ್ತ್ರದಲ್ಲಿ ಅಸ್ಟೊಂದು ಪಂಡಿತ್ಯ ಪಡೆದಿರಲಿಲ್ಲ .ಹೊಸ ಹೊಸ ಭೂ ಅನ್ವೇಷಣೆ,ಜಲಮಾರ್ಗಗಳನ್ನು ಅನ್ವೇಷಿಸುವ ಮೂಲಕ ಹೊಸ ಹೊಸ ಕಾಯಿಲೆಗಳನ್ನು ಇಂಗ್ಲೆಂಡ್ ಗೆ ತರಲಾರಂಭಿಸಿದರು ಉದಾಹರಣೆ ಪ್ಲೇಗ್,ಸಿಡುಬು(ಸ್ಮಲ್ ಫಾಕ್ಸ್) ರೋಗಗಳಿಗೆ ಸುಮಾರು ೩ಲಕ್ಷ ಜನತೆ ಬಲಿಯಾದರು. ಒಟ್ಟಾರೆಯಾಗಿ ಇಲ್ಲಿನ ಜನತೆ ಯಾವುದೆ ಭೇದ ಭಾವವಿಲ್ಲದೆ ಈ ಕಾಲದಲ್ಲಿ ಬಂದ ನಾಟಕಗಳನ್ನು ನೋಡಲು ಭಾಗವಹಿಸುತಿದರು.ಎಲಿಜಬೆತ್ ತನ್ನ ಪ್ರಜೆಗಳ ಯೋಗಕ್ಷೇಮ ವಿಚಾರಿಸಲು ಜನಸಂದರ್ಶನಯಾತ್ರೆ ಮಾಡುತಿದ್ದಳು ಇದನ್ನು 'ಪ್ರೋಗ್ರೇಸಸ್'ಎಂದು ಉಲ್ಲೇಖಿಸಲಾಗಿದೆ.
ಸಾಹಿತ್ಯ
ಬದಲಾಯಿಸಿಎಲಿಜಬೆತ್ ಯುಗದ ನಿತ್ಯ ಜೀವನದಲ್ಲಿ ಸಾಹಿತ್ಯಕ್ಕೆ ಮುಖ್ಯವಾಗಿ ನಾಟಕಕ್ಕೆ ಎಷ್ಟು ಪ್ರಾದಾನ್ಯ ದೊರೆಯಿತೋ ಸಂಗೀತಕ್ಕೂ ಅಷ್ಟೆ ಪ್ರಾಧಾನ್ಯ ದೊರೆಯಿತು.ಕಾರಣ ಎಲಿಜಬೆತ್ ಸಾಹಿತ್ಯ ,ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದಳು. ಹಬ್ಬಗಳು,ವೀನೋದಗಳು,ವಿವಾಹಗಳ ಆಚರಣೆಯಲ್ಲಿ ಸಂಗೀತಕ್ಕೆ ಪ್ರಾಮುಖ್ಯತೆ ಇತ್ತು ಎಂಬುದು ಗಮನರ್ಹ . ೧೫೫೭ರಲ್ಲಿ ಪ್ರಕಟವಾದ 'ಬುಕ್ ಆಫ್ ಸಾಂಗ್ಸ್ ಅಂಡ್ ಸಾನೆಟ್ಶ್' ಎಲಿಜಬೆತ್ ಯುಗದ ಕವಿಗಳಿಗೆ ಒಂದು ಆಧಾರ ಗ್ರಂಥವೇ ಆಯಿತು.ಇದು ಎಷ್ಟು ಜನಪ್ರಿಯವಾಯಿತೆಂದರೆ ಮೂವತ್ತು ವರ್ಷಗಳಲ್ಲಿ ಒಂಬತ್ತು ಆವ್ರೆತ್ತಿಗಳು ಪ್ರಕಟವಾದವು .ಪ್ರತಿ ಆವ್ರುತ್ತಿಯಲಿಯು ಹೊಸ ಕವನಗಳು ಸೇರಿದವು.ಇಲ್ಲಿಂದ ನಲವತೈದು ವರ್ಷಗಳ ಕಾಲ ಸತತವಾಗಿ ಕವನಗಳ & ಗೀತೆಗಳನ್ನು ಬರೆಯುತ್ತಿದರು,ಆದರೆ ಅವು ತಮ್ಮದೆಂದು ಬಹಿರಂಗವಾಗಿ ಒಪ್ಪಿಕೊಳ್ಳುತ್ತಿರಲಿಲ್ಲ. ಸ್ನೇಹಿತರ &ಪರಿಚಿತರ ವಲಯಗಳಲ್ಲಿ ಈ ರಚನೆಗಳು ಸುತ್ತುತ್ತಿದ್ದವು.ಇಂತಹ ಹಲವು ಕ್ರುತಿಗಳು 'ಟಾಟೆಲ್ಸ್ ಮಿಸೆಲಿನಿ'ಯಲ್ಲಿ ಬೆಳಕು ಕಂಡವು. ಎಲಿಜಬೆತ್ ಕವಿಗಳು ತಮ್ಮ ಕಲೆಯನ್ನು ಬಹುಮಟ್ಟಿಗೆ ಅಧ್ಯಯನ ಮಾಡಿದ್ದು ಇಂತಹ ಸಂಕಲನಗಳಲ್ಲಿ.೧೫೬೩ರಲ್ಲಿ ಥಾಮಸ್ ಸ್ಟಾಕ್ ವಿಲ್ ಪ್ರಕಟಿಸಿದ 'ಇಂಡಕ್ಷನ್' ಕ್ರುತಿಯು ಕವಿಗಳು ತಮ್ಮ ತಂತ್ರ &ಭಾಷೆಯನ್ನು ,ಛಂದಸನ್ನು ಕುರಿತು ಚರ್ಚಿಸಲು ಅನುವು ನೀಡಿತು.ಈ ಕ್ರುತಿ ಎಲಿಜಬೆಥ್ ಕಾಲದಲ್ಲಿ ಆಸಕ್ತಿ & ಇತಿಹಾಸವನ್ನು ಓದುವ ರೀತಿ ಎರಡನ್ನು ಸ್ರುಷ್ಟಿಸಿತು.ಇದು ಜನರಿಗೆ ಇತಿಹಾಸನವನ್ನು ತೋರಿಸುವ ದರ್ಪಣವಾಗಿ ಕಂಡಿತು.ಸರ್ ವಾಲ್ಟರ್ ರಾಯ್ಲಿ ಪ್ರಕಟಿಸಿದ 'ಹಿಸ್ಟರಿ ಆಫ್ ದಿ ವರ್ಲ್ಡ್' ಕ್ರುತಿಯು ರಾಜಕೀಯದಲ್ಲಿ ಉನ್ನತ ಸ್ಥಾನ ಗಳಿಸಿ ಕೆಳಕ್ಕುರುಳಿದವರ ಜೀವನವನ್ನು ವಿಷ್ಲೇಶಿಸಿತು,ಹೀಗೀಕಾಯಿತು ಎಂದು ಮೌಲ್ಯಗಳ ನೆಲಗಟ್ಟನ್ನು ನಿರ್ಧರಿಸುವ ಪ್ರಯತ್ನ ಮಾಡಿತು.ನವೋದಯದ ಒಂದ ಪರಿಣಾಮವೊಂದರೆ ರಾಷ್ಟೀಯತೆಗೆ ಶಕ್ತಿ ನೀಡಿದ್ದು,ದೇಶಭಾಷೆಯಲ್ಲಿ ಹೆಮ್ಮೆಯನ್ನು ಬೆಳೆಸಿತು.ಇಂಗ್ಲಿಶನ್ನು ಕಾವ್ಯಭಾಷೆಯಾಗಿ ಪ್ರಾಚೀನ ಗ್ರೀಕ್ ಮತ್ತು ಲ್ಯಾತಿನ್ & ಆಧುನಿಕ ಫ್ರೆಂಚ್ ,ಇಟಾಲಿಯನ್ಗಳಿಗೆ ಸರಿಸಮನಾಗಿ ಮಾಡುವ ಬಯಕೆಯನ್ನು ಕಾಲದ ಕವಿಗಳಲ್ಲಿ ಕಾಣಬಹುದು .
ಎಲಿಜಬೆತ್ ಕಾಲದ /ನವೋದಯ ಲೇಖಕರು
ಬದಲಾಯಿಸಿ- ಎಡ್ಮಂಡ್ ಸ್ಪೆನ್ಸರ್-ಪ್ರಮುಖ ಕ್ರುತಿಗಳು-'ದಿ ಶೆಪರ್ಡ್ ಕ್ಯಾಲೆಂಡರ್ '(೧೫೭೯),'ದಿ ಫೇರಿ ಕ್ವೀನ್ '
- ಫಿಲಿಪ್ ಸಿಡ್ನಿ-'ಅಸ್ಟ್ರೆಪೆಲ್ ಅಂಡ್ ಸ್ಟೆಲ', ಆರ್ಕಿಡ್
- ವಿಲಿಯಂ ಷೇಕ್ಸ್ಪಿಯರ್ -ಒಥೆಲೊ,ಮರ್ಚೆಂಟ್ ಅಫ್ ವೆನಿಸ್.ದಿ ಕಾಮಿಡಿ ಆಫ್ ಎರರ್ಸ್.ರೋಮೀಯೋ ಜೂಲಿಯಟ್,ಮೆಷರ್ ಫರ್ ಮೆಷರ್,ಆಸ್ಯ್ ಯು ಲೈಕ್ ಇಟ್.
- ಕ್ರಿಸ್ಟೊಫರ್ ಮಾರ್ಲೋ
- ಥಾಮಸ್ ಕಾಂಪೈನ್
- ಬೆನ್ ಜಾನ್ಸನ್ (ಸಾಹಿತಿ)'ದಿ ಅಲ್ ಕೆಮಿಸ್ಟ್','ದಿ ಡೆವಿಲ್ ಈಸ್ ಎನ್ ಆಯ್ಸ್',
- ಫ್ರಾನ್ಸಿಸ್ ಬೇಕನ್
ಅನೇಕ ಘಟನೆಗಳು ಈ ಕಾಲದಲ್ಲಿ ಇಂಗ್ಲೆಂಡ್ ಶಕ್ತಿಯುತ ರಾಷ್ತ್ರವಾಗುವಂತೆ ಮಾಡಿದವು .ಅವುಗಳೆಂದರೆ ಭೂ ಅನ್ವೇಷಣೆ & ಜಲಮಾರ್ಗಗಳನ್ನು ಕಂಡು ಹಿಡಿದರು.ಫ್ರಾನ್ ಸಿಸ್ ಡ್ರೆಕ್ ೧೫೭೭-೧೫೮೦ರ ಅವಧಿಯಲ್ಲಿ ಭೂ ಪ್ರದಕ್ಷಿಣೆ ಮಾಡಿದನು.೧೫೮೮ರ ಅಜೇಯ ದಳವನ್ನು ಸೋಲಿಸಿದ್ದು ಇಂಗ್ಲೆಂಡ್ನ್ ಗೌರವ ಹೆಚ್ಚಿಸಿ ವಸಹತುಗಳ ಸ್ಥಾಪನೆಗೆ ಸ್ಪೂರ್ತಿ ನೀಡಿತು.ಆಕ್ಸ್ ವರ್ಡ್ & ಕೇಂಬ್ರೆಡ್ಜ್ ವಿಶ್ವ ವಿದ್ಯಾಲಯಗಳು ಇ ಕಾಲದ ಸಾಹಿತ್ಯ ದ ಉಗಮಕ್ಕೆ ಬೆಂಬಲ ನೀಡಿದವು. ಮುದ್ರಣ ಯಂತ್ರೆದ ಸಹಾಯದಿಂದ ಸಾಹಿತ್ಯ ಕ್ರುತಿಗಳು ಜನಸಾಮನ್ಯರಿಗೆ ದೊರೆಯುವಂತಯಿತು. ಎಲಿಜಬೆತ್ ಯುಗವನ್ನು 'ಸುವರ್ಣಯುಗ ' ಎಂದು ಕರೆಯಲಾಗಿದ್ದು ಇಂಗ್ಲೆಂಡ್ ನಲ್ಲಿದ ಧಾರ್ಮಿಕ ಕಲಹಗಳು ಶಾಂತಿಯತ್ತ ಸಾಗಿದವು.ಇಂಗ್ಲೆಂಡ್ ಸುವ್ಯವಸ್ಥಿತ ಆಡಳಿತ ವ್ಯವಸ್ಠೆ ಯನ್ನು ಹೊಂದಿತು.ಸಾಹಿತ್ಯಕವಾಗಿ ಇಡಿ ವಿಶ್ವಕ್ಕೆ ಅಪಾರ ಕೊಡುಗೆಯನ್ನು ನೀಡಿತು.